ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಧ್ಯಕ್ಷ ಭಾಷಣ / ೧೬೩

ವಸುದೇವನು ಆಡಿದ ಮಾತಿಗೆ ತಪ್ಪೆನೆಂದು ಬೇಕಾದ ನಂಬುಗೆಯನ್ನು ಕೊಟ್ಟ ಮೇಲೆ ಕಡೆಗೆ ತಂಗಿಯನ್ನು ಕೊಲ್ಲದೆ ಬಿಟ್ಟು ಮನೆಗೆ ಬಂದ ಕಂಸನ ಮನೋಭಾವವನ್ನು ಸುಬ್ಬನು ಹೀಗೆ ವರ್ಣಿಸುತ್ತಾನೆ : ದುಷ್ಟಭಾವವದೊಂದು, ಅನುಜೆಯಕ್ಕರವೊಂದು | ಕೃಷ್ಣಜನನ ಸ್ಥಿತಿಯ ಮರಣಭಯ ಮತ್ತೊಂದು | ಅಷ್ಟಮದಮಾನಹಂಕಾರವೊಂದನಿತರಿಂ ಭ್ರಷ್ಟಮನ ಕರಗುತಿರ್ದ | ಅನಂತರ ಹುಟ್ಟಿದ ಆರು ಮಕ್ಕಳನ್ನೂ ಕೊಟ್ಟ ಮಾತಿಗೆ ತಪ್ಪದೆ ವಸುದೇವನು ಕಣ್ಣೀರ ಧಾರೆಯಿಂದ 'ಮದಕಂಸ'ನಿಗೆ ಬಲಿಯೊಪ್ಪಿಸಿದರೆ, ಕಂಸನು : ಆರು ಮಕ್ಕಳನೊರಸಿ ಶಿಲೆಯಲಿ | ಸೇರಿಸಿದ ದಂಪತಿಗಳಿರ್ವರ | ಕಾರಗರದೊಳು ಕಾಲೆ ಸಂಕಲೆ ಸೇರಿಸಿದನು || ಮತ್ತೆ ಕಾರಾಗೃಹದಲ್ಲಿ ದೇವಕಿಯು ಗರ್ಭವತಿಯಾಗುತ್ತಾಳೆ. ಬಸಿರಲ್ಲಿ ಬೆಳೆಯುವ ಕಂಸನ ಏಳನೆಯ ಪಿಂಡಕ್ಕೆ ಬೇಯುತ್ತಾಳೆ. ದೇವಕಿಯ ಬಿಸಿಯುಸಿರು ಸತ್ಯಲೋಕಕ್ಕೆ ಸೆಕೆಯಾಯಿತು. ಬ್ರಹ್ಮನ ಮನಸ್ಸು ಕರಗಿತು. ಒಡನೆಯ ದೇವಕಿಯನ್ನು ಸಂತೈಸು ವುದಕ್ಕಾಗಿ 'ಆ ಸೃಷ್ಟಿಯರಸನು'- ಅರಸಕೇಳಾ ಹರಿಯ ಜನನದ | ಹರುಷ ದೇವಕಿಗೊರೆಯಲೋಸುಗ ತ್ರಿವುಡೆ : ಸರಸಿಜೋದ್ಭವನಂದು ಮಾಯದ ಕೊರವಿಯಾದ ಉತ್ತಮರ ಭಯತಾಪಶರಧಿಯ ನುತ್ತರಿಪ ಮಂತ್ರವನುಸುರ್ವಡೆ | ಬಿತ್ತರಿಸಿ ಕೊರವಂಜಿ ವೇಷವ ಹೊತ್ತನಜನು || ಹೀಗೆ ಬ್ರಹ್ಮನ 'ಭಾಮಿನೀರನ್ನೆ'ಯಾದ ಕೊರವಂಜಿಯು ಶೃಂಗಾರವಾಗಿ ಬಣ್ಣ ಗೋಲನ್ನು ಧರಿಸಿ ಕಮಂಡಲನ್ನು ಮುದ್ದು ಬಾಲನನ್ನಾಗಿ ಮಾಡಿ 'ಮಗ್ಗುಲೊಳಗಿರಿಸಿ, ಕನಕವಸ್ತ್ರವನು ಮುಸುಕಿಕ್ಕಿ' ಭೂಲೋಕಕ್ಕಿಳಿಯುವ ಸುಬ್ಬನ ಕವಿತಾ ಕಾಮಿನಿಯ ಸೊಬಗನ್ನು ಪ್ರತ್ಯಕ್ಷ ಈ ಪದ್ಯದಲ್ಲಿ ನೋಡಿರಿ. . (ಸೊಬಗಿನ ಸೋನೆ) ಅಷ್ಟತಾಳ : ಮುಕುರಕಪೋಲೆ ಮಂದಸ್ಮಿತ ಮೃದುಹಸ್ತ | ಮಕರಧ್ವಜನ ಚಿನ್ನದ ಬೊಂಬೆ || ಸಕಲಕಲಾನ್ವಿತ ನಳಿತೋಳ ಳಬಲೆ ಕಂ] ಚುಕವನಿಟ್ಟಳು ಮುದ್ದು ಲಲಿತಾಂಗಿ || ಮುತ್ತಿನ ಓಲೆ ಮೂಗುತಿ ಕೊಪ್ಪಿನೆಸಳುಗ | ಳುತ್ತಮ ಚೌಲಿ ರಾಕಟೆ ಬಂದಿ | ರತ್ನದ ಕಾಲಹಿಂಬಳೆ ಚೌಕಿಗಳಿಂದ | ಮತ್ತೇಭಗಮನೆ ರಾಜಿಸಿದಳು ||