X
ಹಿನ್ನೆಲೆಯಲ್ಲಿ ಬಹಳ ಮಹತ್ವದ್ದು. ಜನಪದ ಕತೆಗಳನ್ನು ಹೇಳುವ ಸಂದರ್ಭ
ಗಳನ್ನು ಕೂಡ ಒಂದು ಪ್ರದರ್ಶನ ಎಂದು ಅಧ್ಯಯನ ನಡೆಸುತ್ತಿರುವ ಇಂದಿನ
ಸಂದರ್ಭದಲ್ಲಿ ಈ ಲೇಖನ ತನ್ನ ವ್ಯಾಪಕ ಸಾಮಗ್ರಿಗಳ ಮತ್ತು ವೈಜ್ಞಾನಿಕ
ವಿಶ್ಲೇಷಣೆಯ ಕಾರಣಕ್ಕಾಗಿ ಪ್ರದರ್ಶನ ಸಿದ್ಧಾಂತಕ್ಕೆ ಹೊಸ ಆಯಾಮವನ್ನು
ಸೇರಿಸಲು ಸಮರ್ಥವಾಗಿದೆ. ಪುಟ 31, 32ರಲ್ಲಿ 'ಕರ್ಣಾರ್ಜುನ ಪ್ರಸಂಗದ
ನಿದರ್ಶನದ ಮೂಲಕ ರೇಖಾಚಿತ್ರಗಳ ನೆರವಿನಿಂದ ವಿವರಿಸಿದ ವಿಧಾನವು
ಜಾನಪದದಂತಹ ಕ್ಷೇತ್ರಗಳಲ್ಲೂ ಆನ್ವಯಿಸಬಹುದಾದ ಒಂದು ಹೊಸ
ಶೋಧವಾಗಿದೆ.
ತುಳು ಯಕ್ಷಗಾನದ ವಿಮರ್ಶೆಯು ಯಕ್ಷಗಾನ ಮತ್ತು ತುಳು ಎರಡೂ ಕ್ಷೇತ್ರಗಳಲ್ಲೂ ಒಂದು ವಿವಾದದ ವಿಷಯ. ಈ ಚರ್ಚೆಯಲ್ಲಿ ಸಾಮಾನ್ಯವಾಗಿ ಕಾಣಿಸುವುದು ಎರಡು ಅತಿರೇಕಗಳ ತುದಿಗಳು ಮಾತ್ರ. ಒಂದು, ಯಕ್ಷಗಾನ ಪರಂಪರೆಗೆ ತುಳುವು ವಿರೋಧಿ ಅನ್ನುವುದು, ಇನ್ನೊಂದು ತುಳು ಅಭಿಮಾನದ ಪ್ರಕಟನೆ, ಈ ಎರಡೂ ಭಾವುಕತೆಗಳನ್ನು ಕಳಚಿಕೊಂಡು, ತುಳು ಯಕ್ಷಗಾನ ವನ್ನು ಸಮೀಕ್ಷಿಸುವ ವಿಮರ್ಶಿಸುವ ಮತ್ತು ಹೆಚ್ಚು ವ್ಯಾಪಕ ಅಧ್ಯಯನದ ಮೂಲಕ ಪುನಾರಚಿಸುವ ಆಲೋಚನೆಗಳು ಇಲ್ಲಿನ ಲೇಖನದಲ್ಲಿವೆ. ಜೋಶಿ ಯವರು ಈ ಲೇಖನದಲ್ಲಿ ಯಾರನ್ನೂ ಮೆಚ್ಚಿಸುವ ಅಥವಾ ತೆಗಳುವ ಕೆಲಸ ಮಾಡುವುದಿಲ್ಲ. ಆರಂಭದಲ್ಲಿ ಸೂಚಿಸಿದಂತೆ ಪರಂಪರೆ-ಪ್ರಯೋಗಗಳ ನಿರಂತರ ಪ್ರಕ್ರಿಯೆಯಲ್ಲಿ ಇವರು ಆಸಕ್ತರಾಗಿರುವುದರಿಂದ, ಯಕ್ಷಗಾನ ಮತ್ತು ತುಳು ಇವು ಒಂದು ರಂಗಭೂಮಿಯ ಆಕೃತಿಯಲ್ಲಿ ಮೈದಾಳುವಾಗ ಕಾಣಿಸುವ ವೈರುಧ್ಯಗಳನ್ನು ಗ್ರಹಿಸುವ ಮತ್ತು ನಿವಾರಿಸುವ ಪ್ರಯತ್ನಗಳನ್ನು ಇಲ್ಲಿ ಮಾಡಿದ್ದಾರೆ. ತುಳು ಯಕ್ಷಗಾನ ನಿನ್ನೆ-ಇಂದುಗಳು ಇರುವ ರೀತಿಯಲ್ಲಿ “ನಾಳೆ” ಇರಬಾರದು ಎನ್ನುವುದು ಈ ಲೇಖನಕ್ಕೆ ಆನ್ವಯಿಕ ಆಯಾಮವನ್ನು ತಂದಿದೆ. ಅಂತಹ ಮೂರುದಾರಿಗಳನ್ನು (ಪುಟ 68, 69) ತೆರೆದು ತೋರಿಸಿ ಅವುಗಳಲ್ಲಿ ತಮ್ಮ ಆಯ್ಕೆಗಳನ್ನು ಸಕಾರಣವಾಗಿ ಜೋಶಿಯವರು ಮುಂದಿಟ್ಟಿದ್ದಾರೆ. ಯಕ್ಷಗಾನದ ಬೇರೆ ಬೇರೆ ಅವಯವಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿ ಯಾವ ಯಾವ ಪ್ರಮಾಣದಲ್ಲಿ ಅಳವಡಬಹುದು ಎನ್ನುವುದನ್ನು ನಿದರ್ಶನ