ಇವೆ. (ಉದಾ: 'ಯಕ್ಷಗಾನ ರಂಗಭೂಮಿಯ ಸಮಸ್ಯೆಗಳು). “ಮತೀಯ ಆಶ ಯವು ಕಾಲಕಲ್ಪಿತ”, “ಎಲ್ಲ ಕೃತಿಗಳಿಗೂ ಅದರ ನಿನ್ನೆ ಇಂದು ನಾಳೆಗಳಿವೆ”, “ಅಭಿ ವ್ಯಕ್ತಿಯಾಗಲಿ, ಪ್ರಾಯೋಗಿಕ (experimental) ರಚನೆಯಾಗಲಿ ಸಾರ್ಥಕವಾಗು ವುದು ಅದರ ಹಿಂದೆ ಕಲಾಸ್ವರೂಪದ ಸಮಗ್ರವಾದ ಗ್ರಹಿಕೆ ಮತ್ತು ಪರಿಕಲ್ಪನಾತ್ಮಕ ವಾದ ಖಚಿತತೆ ಇದ್ದಾಗ” – ಇಂಥ ಅರ್ಥ ಸಾಂದ್ರತೆಯುಳ್ಳ ಸಂಕ್ಷಿಪ್ತ ನೇರ ಮಾತು ಗಳು ಹೆಚ್ಚಿನ ಪ್ರಬಂಧಗಳಲ್ಲಿ ದಟ್ಟವಾಗಿವೆ.
ಆಧುನಿಕ academic approachನಿಂದ ಅಂದರೆ ನವ್ಯ ವಿಮರ್ಶೆಯ ಶಾಸ್ತ್ರೀಯ ಪಾಂಡಿತ್ಯದ ಪ್ರೌಢಮಾರ್ಗದಲ್ಲಿ ತನ್ನ ವಿಮರ್ಶಾ ಬುದ್ದಿಯನ್ನು ಹರಿಯ ಬಿಡುವ ಜೋಶಿಯವರ ಕೆಲವು ಪ್ರಬಂಧಗಳು - ಸಾಂಪ್ರದಾಯಿಕ ಕಲೆ- ಪ್ರಸ್ತುತತೆಯ ಪ್ರಶ್ನೆ', 'ಕಲಾಸ್ವರೂಪ ಮತ್ತು ಅಭಿವ್ಯಕ್ತಿ ವಿಧಾನ', 'ಯಕ್ಷಗಾನ ರಂಗಭೂಮಿಯ ಸಮಸ್ಯೆಗಳು' - ಅರ್ಥ ದೃಷ್ಟಿಯಲ್ಲಿ ಅಮೂಲ್ಯ ವಾದವುಗಳು. ಆದರೆ ಅವುಗಳನ್ನು ಅರ್ಥಮಾಡಿಕೊಳ್ಳಲು ನಮ್ಮ ಸಾಮಾನ್ಯ ಯಕ್ಷ ಗಾನ ಕಲಾವಿದ ಹಾಗೂ ಪ್ರೇಕ್ಷಕ ಒಂದಕ್ಕಿಂತ ಹೆಚ್ಚು ಬಾರಿ ಅವುಗಳನ್ನು ಓದ ಬೇಕಾದೀತು ಮತ್ತು ಈ ರೀತಿಯ ವಿಮರ್ಶಾ ಮಾರ್ಗದ ಪರಿಚಯವನ್ನು ಸ್ವಲ್ಪ ಮಾಡಿಕೊಳ್ಳಬೇಕಾಗುತ್ತದೆ. ವಾಣಿಜ್ಯ ಪ್ರಾಧ್ಯಾಪಕರಾದ ಜೋಶಿಯವರು ಯಕ್ಷ ಗಾನದ ವಾಣಿಜ್ಯಕರಣವನ್ನು ವಾಣಿಜ್ಯಶಾಸ್ತ್ರದ ತತ್ವಗಳ ಆಧಾರದಲ್ಲಿ ವಿವೇಚಿಸು ವುದು ಸಾಮಾನ್ಯ ಓದುಗನಿಗೆ ಮೊದಲ ಹಂತದ ಅರ್ಥಗ್ರಹಣದಲ್ಲಿ ತೊಡಕನ್ನುಂಟು ಮಾಡಬಹುದು. ಅಂದರೆ ಕಲೆಯ ಬಗ್ಗೆ ಗಾಢವಾದ ಕಾಳಜಿ ಇಲ್ಲದ ನಮ್ಮ ಸಾಮಾನ್ಯ ಕಲಾವಿದ ಮತ್ತು ಪ್ರೇಕ್ಷಕರನ್ನು ಸುಲಭದಲ್ಲಿ ಆಕರ್ಷಿಸುವ ಬರಹಗಳು ಜೋಶಿಯವರದಲ್ಲ. (ಇವರ ವಿಮರ್ಶೆಗಳು ಅಪೇಕ್ಷಿಸುವ ಓದುಗ-ಪ್ರಜ್ಞೆ' ಎಲ್ಲ ಉತ್ತಮ ಸಾಹಿತ್ಯಕ್ಕೂ ಅನ್ವಯಿಸಬಹುದಾದ ಸತ್ಯ). ಆದರೆ ಅವು ಈ ವರ್ಗದವ ರನ್ನು ತಲುಪಿ ಅವರ ಸಂವೇದನೆಯನ್ನು ಶುದ್ಧ ಹಾಗೂ ತೀಕ್ಷ್ಯಗೊಳಿಸಿದಾಗ ಯಕ್ಷ ಗಾನಕ್ಕೆ ನಿಜವಾದ ಲಾಭವಾಗಿ ಅವು ಸಾರ್ಥಕವಾಗುತ್ತವೆ. ನಮ್ಮ ಯಕ್ಷಗಾನಾಸ ಕರು ಈ ಬೌದ್ಧಿಕ ಮಟ್ಟಕ್ಕೆ ಏರಲಿ ಎಂದು ನಾನು ಆಶಿಸುತ್ತೇನೆ.
ಜೋಶಿಯವರ ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ನಾನು ಒಪ್ಪಿದುದು ಅವರಿಗಿಂತ ನಾನು ಹೆಚ್ಚು ತಿಳಿದವನು ಹಾಗೂ ಸಮರ್ಥನು ಎಂಬ ಅಹಂಕಾರದ ನಂಬಿಕೆಯಿಂದಲ್ಲ; ಅಥವಾ ಒಬ್ಬ ಆತ್ಮೀಯ ಮಿತ್ರನನ್ನು ಹೊಗಳುವುದಕ್ಕೆ ಅವಕಾಶ ಸಿಕ್ಕಿತು ಎಂಬ ಕಾರಣಕ್ಕೂ ಅಲ್ಲ. ಅವರ ಯಕ್ಷಗಾನದ ಕುರಿತಾದ ಅಧ್ಯಯನ ಮತ್ತು ಕಾಳಜಿಯನ್ನು ಮನಸಾರೆ ಮೆಚ್ಚಿದ ನಾನು ಅವರನ್ನು ಪ್ರೋತ್ಸಾಹಿಸಬೇಕಾದುದು ಮಿತ್ರಧರ್ಮವೆಂದು ಬಗೆದಿದ್ದೇನೆ. ಅದಕ್ಕೊಂದು ಅವಕಾಶ ಹೀಗೆ ನನಗೆ ಸಿಕ್ಕಿದೆ. ಮಾತ್ರವಲ್ಲ, ಅವರ ಪುಸ್ತಕಕ್ಕೆ ಮುನ್ನುಡಿ ಬರೆಯುವುದು ನನಗೆ ಹೆಮ್ಮೆಯ ವಿಷಯ.