ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
42
ಮಾರುಮಾಲೆ

ಒಂದು ಪ್ರಯೋಗ, ಚೆಂಡೆಯ ಬದಲು ಘಟವಾದ್ಯವನ್ನು ಬಳಸುವುದು. ಆಟದ ರಂಗದಲ್ಲಿ ಚೆಂಡೆಯ ಸ್ಥಾನವನ್ನು ಘಟವು ತುಂಬಲಾರದಾದರೂ, ತಾಳಮದ್ದಲೆಯಲ್ಲಿ, ವಿಶೇಷತಃ ಇಳಿಶ್ರುತಿಯ ಭಾಗವತಿಕೆಗೆ ಸಾಥಿಯಾಗಿ, ಮದ್ದಲೆ ಮತ್ತು ಘಟಗಳ ಹಿಮ್ಮೇಳವು ಒಳ್ಳೆಯ ಪರಿಣಾಮ ಬೀರಬಲ್ಲುದು.
ತಾಳಮದ್ದಲೆಯ ಹಿಮ್ಮೇಳವೆಂಬುದು ಒಂದು ಪ್ರಕ್ರಿಯೆಯ ಕೇಂದ್ರ ಸ್ಥಾನ, ಪುರಾಣ-ಅಥವಾ ಒಂದು ಕಥೆಯು ಗೀತರೂಪದಲ್ಲಿ ರಚಿತವಾಗಿರು ವುದು, ಗೇಯವಾಗಿ, ಹೊರಹೊಮ್ಮುವುದು ಹಿಮ್ಮೇಳದ ಗಾನವಾಗಿ, ಮೂಲಕ –

ಅದು ಅರ್ಥಧಾರಿಯ ಕಲ್ಪನೆ, ಅಧ್ಯಯನ, ಲೋಕಾನಂಭವಗಳ ನೆಲೆ ಯಲ್ಲಿ ನಾಟಕವಾಗಿ ಅರಳುತ್ತದೆ. ಹೀಗಾಗಿ, ಹಿಮ್ಮೇಳದ ತಾಂತ್ರಿಕ ಕ್ಷವಂತೆ ಮತ್ತು ಗುಣಮಟ್ಟಗಳು ತಾಳಮದ್ದಲೆಯ ಒಟ್ಟು ಸ್ವರೂಪದ ನಿರ್ಮಾಣದಲ್ಲಿ ನಿಯಂತ್ರಿತ, ನಿರ್ವಾಹಕ ರೂಪದಲ್ಲಿ ಪಾಲುಗೊಳ್ಳುತ್ತವೆ. . ಲಿಖಿತ ಪ್ರಸಂಗದ ಸರಳ ಸಾಹಿತ್ಯಕ ನೆಲೆಯಿಂದ, ಗಾನದ ಮಟ್ಟಕ್ಕೆ ಹೆಚ್ಚು ಆಯಾಮ ಪಡೆದು, ಅಲ್ಲಿಂದ ವಂತೆ ಗದ್ಯವಾಗಿ, ಅಂದರೆ ಮಾತುಗಾರಿಕೆ ಎಲ್ಲ ಆಯಾವಗಳೊಂದಿಗೆ ಸೃಷ್ಟಿಗೊಳ್ಳುತ್ತ ಹೋಗುವ ಹಂತಗಳ ಪ್ರಕ್ರಿಯೆ ವ್ಯಾಮಿಶ್ರವಾದದ್ದು.