ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳು ಯಕ್ಷಗಾನ: ನಿನ್ನೆ-ಇಂದು-ನಾಳೆ
65

ಸಮನ್ವಯದ ಯತ್ನ ನಡೆಯಲಿಲ್ಲವೆಂದಲ್ಲ. ವಸ್ತುವಿನ ಮಟ್ಟದಲ್ಲಿ ನಡೆಯಿತು. ತುಳು ಪ್ರಸಂಗದ ಆರಂಭಕ್ಕೆ ಶಿವ ಪಾರ್ವತಿಯರ, ಲಕ್ಷ್ಮಿ ನಾರಾಯಣರ ಒಡ್ಡೋಲಗ ಮಾಡಿ, ಕತೆಯನ್ನು ಅಲ್ಲಿಂದ ತುಳುನಾಡಿಗೆ ತರುವ ಸಂಯೋಜನೆ ಕೆಲವು ಪ್ರದರ್ಶನಗಳಲ್ಲಿ ಇದ್ದಿತು. ಇಂತಹ ಸಂದರ್ಭ ಗಳಲ್ಲಿ ದೇವಪಾತ್ರಗಳಿಗೆ ಕನ್ನಡ ಭಾಷೆ ಇತ್ತು ! (ಸಂಸ್ಕೃತ ನಾಟಕಗಳ ಸಂಸ್ಕೃತ-ಪ್ರಾಕೃತ ಸಂಯೋಜನೆಯಂತೆ) ಈ ಒಂದು ವಿದ್ಯಮಾನವೇ ಆಗಿನ ಒಟ್ಟು ಧೋರಣೆಯನ್ನು ಬಹಳ ಚೆನ್ನಾಗಿ ಚಿತ್ರಿಸುತ್ತದೆ.ಔತ್ತರೇಯ ಪುರಾಣಗಳೊಂದಿಗೆ, ಸ್ಥಳೀಯ ಪುರಾಣಗಳ ಹೊಂದಿಕೆ, ಪಾಡ್ಡನೆ ಮುಂತಾದ ಜಾನಪದದಲ್ಲೂ ಕಾಣುತ್ತದೆ. ಕಥೆಯ ಮಟ್ಟದಲ್ಲಿ ಇದು ಸುಲಭ (ಅದರ ಸರಿತಪ್ಪುಗಳೇನೇ ಇರಲಿ.) ಕಲೆಯ ಮಟ್ಟದಲ್ಲಿ ಅದು ಸಾಧಿತವಾಗಲಿಲ್ಲ. ಇತಿ ಹಾಸದ ಗತಿ ವಕ್ರವಲ್ಲವೆ ?

ತುಳು ಯಕ್ಷಗಾನ ರಂಗದ ಕೆಲವು ವಿರೋಧಾಭಾಸಗಳನ್ನು ಇಲ್ಲಿ ಕುತೂ ಹಲಕ್ಕಾಗಿ ಪರಿಶೀಲಿಸಬಹುದು.
ಒಂದು : ಸ್ತ್ರೀ ಪಾತ್ರಗಳ ವೇಷ ವ್ಯವಸ್ಥೆ, ತೆಂಕುತಿಟ್ಟಿನಲ್ಲಿ ಸಾಂಪ್ರ ದಾಯಿಕ ಪ್ರಸಂಗಗಳ ಸ್ತ್ರೀಪಾತ್ರಗಳ ಹಳೆತರದ ವೇಷ ವಿಧಾನ ಮಾಯವಾಗಿ ದಶಕಗಳು ಸಂದಿವೆ. ಪುರುಷ ಪಾತ್ರಗಳ ಪ್ರಾಚೀನ ಕಾಲದ ರೂಪಕಗಳು ಆಧುನಿಕ ಸಾಮಾಜಿಕ ಸ್ತ್ರೀಯದೇ ಪ್ರತಿ ರೂಪ ಹೀಗಿತ್ತು. ಸ್ತ್ರೀಪಾತ್ರಗಳು ತುಳು ಪ್ರಸಂಗಗಳು ವ್ಯಾಪಕ ಭಾರತೀಯ ಪೌರಾಣಿ ಕತೆಯಿಂದ ಪ್ರಾದೇಶಿಕತೆ ಬಂದಾಗ ಈ ಸ್ಥಿತಿ ಮುಂದುವರಿದಿದ್ದರೆ ಆಶ್ಚರ್ಯ ವಿರಲಿಲ್ಲ. ಆದರೆ ವಿಚಿತ್ರವೆಂಬಂತೆ, ಪುರುಷ ಪಾತ್ರಗಳು ಅವಾಸ್ತವ ರಮ್ಯಾ ಮೃತರೂಪ ಶೈಲಿಯನ್ನು ಬಿಟ್ಟು ವಾಸ್ತವಿಕದತ್ತ, ನಾಟಕ ಶೈಲಿಗೆ ಹೊರಳಿ ದಾಗ, ಸ್ತ್ರೀ ಪಾತ್ರಗಳು 'ಹಿಂದೆ' ಹೋದವು. ಬಡಗುತಿಟ್ಟಿನಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿದ್ದ ಪಗಡಿಯಂತಹ ಶಿರೋಭೂಷಣ, ಸೊಂಟದ ಡಾಬುಗಳಿಂದ ಅಲಂಕೃತವಾದ ಸ್ತ್ರೀ ವೇಷಗಳು ರಂಗಕ್ಕೆ ಬಂದವು. ಇದು ಮೊದಲಿದ್ದ ವಿರೋಧಾಭಾಸದ, ಇನ್ನೊಂದು ರೂಪ!