ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
99
ಶರಸೇತು ಬಂಧನ


ಎರಡನೆಯದಕ್ಕೆ ಸ್ವಲ್ಪ ಹೆಚ್ಚು ಶ್ರಮ : 'ಹನುಮನದ|ಕೂರ್ಗಿಸಿ ಮುರಿದನು ಭೋರ್ಗರೆಯುತಲಿ'.
ಕೊನೆಯದನ್ನು ಮುರಿದುದು ಸುಲಭವಾಗಿ ಅಲ್ಲ-
ಹತ್ತಿ ಹನುಮನದ ನೆತ್ತಾಯದಿ ಮುರಿದೆತ್ತಣ'...
ಇದು ಅರ್ಜುನನ ಕೌಶಲಕ್ಕೆ ಕವಿ ಕನ್ನಡಿ ಹಿಡಿಯುವ ರೀತಿ ಕೂಡ. ಮಾತ್ರವಲ್ಲ ಮುಂದೆ ಕತೆಯಲ್ಲಿ ಬರುವಂತೆ, ನಾಲ್ಕನೆಯದು ಅಭೇದ್ಯವಾಗುವು ದರ ಸೂಚನೆ ಕೂಡ ಧ್ವನಿತವಾಗುವಂತಿದೆ. ಅಸಾಮಾನ್ಯ ಯೋಗ್ಯತೆಯ ಕವಿಗೆ ಮಾತ್ರ ಸಿದ್ಧಿಸುವ ಸಂಗತಿಗಳಿವು.
ಭಾಗವತರ ಹಾಡುಗಾರಿಕೆಯ ಸೊಗಸಿಗೂ ತುಂಬ ಚೆನ್ನಾಗಿ ಒದಗುವ ಪ್ರಸಂಗವಿದು. ಭಾಷೆಯ ಹದ ಅಚ್ಚುಕಟ್ಟಾಗಿದೆ. ಕೆಲವು ಉದಾ ಹರಣೆಗಳು :
"ಗಂಧವಾದಾತ್ಮಜನಂದದ ಕಾಣುತಾಲೊಂದು ಕ್ಷಣದಿ ಮುರಿದಂದ ಗೆಡಿಸಿದ”
“ಸನ್ಮಾರ್ಗಿ ಹನುಮನದ ಕೂರ್ಗಿಗೆ ಮುರಿದ”.,..ತನ್ನ ನಿಲುವುಸನ್ಮಾ ರ್ಗವೆನಿಸಿದ್ದ ಹನುವಂತನಿಗೆ ಅರ್ಜುನನ ಬಾಣದ ಸೇತುವೆ (ಮಾರ್ಗ) ಆದುದುರ್ಮಾರ್ಗ !
“ಇಹುದು ನಿನ್ನಿಂದ ಮುಂದಕೆ ಕಾರ್ಯವೀತಗೆ ಬಹು ಮಾತಿನಿಂದಲೇನು"
ಈ ಪ್ರಸಂಗದಲ್ಲಿ, ಅರ್ಜುನ ಹನುಮಂತರ ಸಂವಾದದಲ್ಲಿ, ವೀರಾಲಾಪ, ಮೂದಲಿಕೆ, ಪರಾಭವ, ಖೇದಗಳೂ ಉಪಾಯಗಾರನಾಗಿ ಬರುವ ವೃದ್ದ ವಿಪ್ರನ ಚಾತುರ್ಯದ ಸಂದರ್ಭವೂ, ಕೊನೆಗೆ ರಾಮ-ಆಂಜನೇಯರ ಸಂಭಾಷಣೆ ಯಲ್ಲೂ ಇರುವ ಭಾವಗಳ ವಿನ್ಯಾಸದಿಂದಾಗಿ ವೀರ, ರೌದ್ರ, ಹಾಸ್ಯ, ಕರುಣ,