ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೭೯



ಗ ತಾವು ನನ್ನ ಸರ್ವಾಂಗವನ್ನೂ ನೋಡಿರುವಿರಿ, ಆದರೆ ಎದೆಯ ಮೇಲಿ ಸ್ತನಗಳನ್ನು ನೋಡಿದ್ದಿಲ್ಲ, ಅದರಿಂದ ಸ್ತನಗಳನ್ನು ಮುಚ್ಚಿಕೊಂಡು ತಮ್ಮ ಎದುರಿಗೆ ಬಂದೆನು ಎಂದು ಹೇಳಿದಳು ಬಾದಶಹನು ಸುಮ್ಮನಾದ ನು.

- (೨೩೨. ಹಿಂದೂಗಳಲ್ಲಿ ಯಾವ ಜಾತಿಯವರು ಚತುರರು?)-

ಬಾದಶಹ -ಹಿಂದುಗಳಲ್ಲಿ ಯಾವಜಾತಿಯವರು ಚತುರರು ?
ತೋಡರವಲ್ಲ- ಬ್ರಾಹ್ಮಣರು,
ಬೀರಬಲ-ಅಲ್ಲ, "ಲಾಲಾ ” ಜಾತಿಯವರು ಚತುರರು,
ಬಾದಶಹ- ಇದನ್ನು ಪರೀಕ್ಷಿಸಿ ನೋಡಬೇಕು ?
ಮರುದಿವಸ ಬೀರಬಲನೂ ಬಾದಶಹನೂ ಕೂಡಿಕೊಂಡು ನಗರವೆಲ್ಲ ರಾತ್ರಿ ಸಮಯದಲ್ಲಿ ಸಂಚಾರಕ್ಕೆ ಹೊರಟರು ಒಂದು ಬೀದಿಯಲ್ಲಿ ಒಬ್ಬ ಲಾಲನ ಮನೆಯು ಹತ್ತಿತು ಆ ಲಾಲಾಜಿಯ ಹೆಂಡತಿಯು ತನ್ನ ಪತಿಗೆ ಇನ್ನು ಉಪ ಜೀವನವು ಹ್ಯಾಗೆ ನಡೆಯಬೇಕು ಮಕ್ಕಳು ಮರಿಗಳೆಲ್ಲ ಉಪ ಮಣದಿಂದ ಮರುಗಹತ್ತಿವೆ ಎಂದಳು ಆಗ ಲಾಲಾಜಿಯು ಹೆದರಬೇಡ ನನಗೆ ಚಾಕರಿಯು ಹತ್ತಿದದಿವಸವೇ ಮನೆಯನ್ನೆಲ್ಲ ದ್ರವ್ಯದಿಂದ ತುಂಬಿಬಿಡುತ್ತೇನೆ ಎಂದು ಹೇಳಿದನು ಈ ಮಾತುಗಳು ಕಿವಿಗೆಬಿದ್ದ ಕೂಡಲೆ ಅವರಿಬ್ಬರೂ ಅಲ್ಲಿಂದಲೇ ಹಿಂದಿರುಗಿ ತಮ್ಮ ತಮ್ಮ ಸ್ಥಾನಗಳಿಗೆ ಬಂದರು ಮತ್ತು ಆಲಾಲಾಜಿಗೆ ನಮ್ಮ ಅರಮನೆಯಲ್ಲಿ ಒಂದು ಕೆಲಸವನ್ನು ಕೊಡು ಆದರೆ ವೇತನ ವನ್ನು ತೀರಕಡಿಮೆಕೊಡು ಎಂದು ಹೇಳಿ ಬಾದಶಹನು ತನ್ನ ಸ್ಥಾನಕ್ಕೆ ತೆರ ಳಿದನು ಮರುದಿವಸ ಬೀರಬಲನು ಅವನನ್ನು ಕರೆಯಿಸಿ ಈ ಹೊತ್ತಿನಿಂದ ನಿನಗೆ ಮಾಸ ಒಂದಕ್ಕೆ ಹತ್ತು ರೂಪಾಯಿ ವೇತನದ ಮೇಲೆ ಆಶ್ವಶಾಲೆಯ ಕಟ್ಟೆಯಮೇಲೆ ಕುಳಿತುಕೊಳ್ಳುವ ಕೆಲಸದ ಮೇಲೆ ನಿಯಮಿಸಿದ್ದೇನೆ ಎಂದು ಹೇಳಿದನು ಆಗ ಲಾಲಾಜಿಯು ಅಶ್ವಶಾಲೆಗೆ ಬಂದು ಕಟ್ಟಿಯ ಮೇಲೆ ಕುಳಿತು ಕೊಂಡನು ಮರುದಿವಸ ಪ್ರಾತಃಕಾಲದಲ್ಲಿ ಎದ್ದು ಬಂದು ಪ್ರತಿಯೊಂದು ಕುದುರೆಯ ಲದ್ದಿಯನ್ನು ತೂಕ ಮಾಡಿ ನೋಡಹತ್ತಿದನು. ಆಗ ಪ್ರತಿಯೊಬ್ಬ ತುರಗರಕ್ಷಕನು ಬಂದು ನೀವು ಲದ್ದಿಯನ್ನು ಯಾಕೆ ತುಲನೆ ಮಾಡುತ್ತಿ... ರುವಿರಿ ! ಎಂದು ಕೇಳಹತ್ತಿದನು ಆಗ ಲಾಲಾಜಿಯು ಏನೂ ಇಲ್ಲ ಬಾದಶ ಹನು ನನ್ನನ್ನು ಇದೇ ಕಾರ್ಯಕ್ಕೆ ನಿಯಮಿಸಿದ್ದಾನೆ ಪ್ರತಿಯೊಂದು ಅಶ್ವಕ್ಕೆ ಪ್ರತಿದಿವಸದಲ್ಲಿ ಎಷ್ಟು ಆಹಾರ ಕೊಡಲ್ಪಡುತ್ತದೆ ಮತ್ತು ಆ ಮಾನದಿಂ ದ ಕುದುರೆಯು ಎಷ್ಟು ಲಡ್ಡಿಯನ್ನು ಹಾಕುತ್ತಿರುವದು ಎಂಬದನ್ನು ಪರೀ