ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೭೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ಶಹನ ಪರಿಚಯವನ್ನು ಹಿಡಿದು ಅಮಾತ್ಯ ಅಮೀರ ಮೊದಲಾದವರಿಗೆ ತಿಳಿಸಿದರು, ಆಗ ಅವರು ಬಂದು ಬಾದಶಹನನ್ನು ಕುರಿತು. ಜಂಹಾವನಾಹ! ತಮಗೆ ಭ್ರಾಂತಿಹಿಡಿದಿದೆಯೋ! ಎಲ್ಲಿಗೆ ಹೋಗುತ್ತೀರಿ? ಯಾವ ಪ್ರಾಣಿಯನ್ನು ಆರೋಹಣ ಮಾಡಿರುವಿರಿ! ಎಂದು ಪ್ರಶ್ನೆಗಳನ್ನು ಮಾಡ ಹತ್ತಿದರು ಆದರೆ ಅವು ಪಿಶಾಚಿಗಳೆಂದು ತಿಳಿದು ಉತ್ತರ ಕೊಟ್ಟರೆ ಬೀಳುವೆನೆಂಬ ಭಯದಿಂದ ಒಂದು ತುಟಿಯನ್ನು ಎರಡು ಮಾಡಲಿಲ್ಲ ಅದನ್ನು ಕಂಡು ಒಬ್ಬ ವಜೀರನು ಆ ಕತ್ತೆಯನ್ನು ಹಿಡಿದು ನಿಲ್ಲಿಸಿ ಬಾದಶಹನ ಕಣ್ಣಿನಕಟ್ಟನ್ನು ಸಡಲಿಸಿದನು ಆಗ ತನಗುಂಟಾದ ವಿದ್ರೂಪತೆಯನ್ನು ಕಂಡು ಲಜ್ಜಿತನಾಗಿ ಅರಮನೆಯನ್ನು ಹೊಕ್ಕನು ಮರುದಿವಸ ಬೀರಬಲವನ್ನು ಹಿಡತರಿಸಿ ಇದು ಏನು ಮಾಡಿದಿ! ನಿನಗೆ ಜೀವವು ಬೇಡಾಗಿದಯೆಂಬಂತೆ ಕಾಣುತ್ತದೆ! ಎಂದು ಕೇಳಿದನು ಆಗ ಬೀರಬಲನು ಸರಕಾರ ಪುಣ್ಯವಂತರಾದ ಮೃತ ಮನುಷ್ಯರಿಗೆ ವೈಕುಂಠ ದರ್ಶನವು ದೊರೆಯುವದು ದುರ್ಲಭವಾಗಿರಲು ನಿಮ್ಮಂಥವರಿಗೆ ವೈಕುಂಠ ದರ್ಶನವು ಹ್ಯಾಗೆ ಲಭಿಸುವದು! ಎಂದು ಕೇಳಿದನು. ಬಾದಶಹನು ನಿರುತ್ತರನಾದನು.

--( ೨೨೭. ಹಂಚಿಕೆಯ ಇಡಿಗಂಟು. ) --

ಒಬ್ಬ ಮುಸಲ್ಮಾನನು ಅಲ್ಪಸ್ವಲ್ಪ ವೈದ್ಯಕಿಯನ್ನು ಮಾಡಿ, ಹೊಟ್ಟೆ ಹೊರಕೊಳ್ಳುತ್ತಿದ್ದನು ಅವನಿಗೂ ಬೀರಬಲನಿಗೂ ವೈರವಿತ್ತು ಅದರಿಂದ ಅವನು ಯಾವಾಗಲೂ ಬೀರಬಲನನ್ನು ಅವಮಾನಗೊಳಿಸಬೇಕೆಂಬ ಹಂಚಿಕೆಯ ಶೋಧದಲ್ಲಿಯೇ ಇದ್ದನು. ಒಂದು ದಿವಸ ಬಾದಶಹನು ಬೀರಬಲನನ್ನು ಕುರಿಡು ಬೀರಬಲ ಈ ವೈದ್ಯನು ನಿನ್ನನ್ನು ಅವಮಾನ ಗೊಳಿಸಬೇಕೆಂಬ ಹಂಚಿಕೆಯಲ್ಲಿಯೇ ಇದ್ದಾನೆ; ಅದರಿಂದ ನೀನೇ ಇವನಿಗೆ ಅವಮಾನವಾಗುವಂತೆ ಮಾಡುಎಂದು ಹೇಳಿದನು ಆಗ ಬೀರಬಲನು ಒಳ್ಳೇದು; ನಾನು ಪರದೆಯೊಳಗೆ ಕೂಡುತ್ತೇನೆ ನೀವು ಅವನು ಬಂದಕೂಡಲೆ ನನ್ನ ಮಗಳ ಮೈಯಲ್ಲಿ ಕಿಂಚಿತ್ತು ಜಾಡ್ಯವುಂಟಾಗಿದೆ, ಅದರಿಂದ ನಾಡಿಯನ್ನು ನೋಡಿ ಔಷಧ ಕೊಡಬೇಕು ಎಂದು ಹೇಳಿರಿ ಎಂದು ಅಂದನು ಅಷ್ಟರಲ್ಲಿ ಆ ವೈದ್ಯನು ಸಭಾಸ್ಥಾನಕ್ಕೆ ಬಂದನು ಬೀರಬಲನು ಅವನು ಬರುವದರೊಳಗಾಗಿ ಪರದೆಯೊಳಗೆ ಹೋಗಿ, ಕುಳಿತುಕೊಂಡನು ವೈದ್ಯನು ಬಂದಕೂಡಲೆ ಬಾದಶಹನು ವೈದ್ಯರೇ! ನನ್ನ ಮಗಳ ಪ್ರಕೃತಿಯಲ್ಲಿ ಕಿಂಚಿತ್ ಜಾಡ್ಯವ್ಯತ್ಪನ್ನವಾಗಿದೆ ಅವಳ ನಾಡಿಯನ್ನು ಪರೀಕ್ಷಿಸಿ ಚಿಕಿತ್ಸಾ ಪ್ರಬಂಧವನ್ನು ಮಾಡಿರಿ' ಎಂದು ಹೇಳಿದನು ಆಗ ವೈದ್ಯನು ಪರದೆಯೊಳಗೆ ಕೈಚಾಚಿದನು ಬೀರಬಲನು ತ