ನುಷ್ಯರಲ್ಲಿ ಮನುಷ್ಯರೂಪದಿಂದ ಪ್ರಕಟವಾದ ದೇವರಿದ್ದೀರಿ. ಆದ್ದರಿಂದ ನಾನು ನಿಮ್ಮ ಪಾದವನ್ನು ಬಿಡುವದಿಲ್ಲ.” ಎಂದು ನುಡಿಯಲು ದೇವರು ಇವನ ಚಾತುರ್ಯಕ್ಕೆ ಮೆಚ್ಚಿ ಪ್ರಕಟವಾಗಿ ಈ ದಿವಸದಿಂದ ನಿನ್ನ ಬುದ್ದಿಸಾಮರ್ಧ್ಯವು ಹೆಚ್ಚಾಗಲಿ ಎಂದು ವರವನ್ನು ಕೊಟ್ಟು ಅಂತರ್ಧಾನನಾದನು. ಆ ದಿವಸದಿಂದ ಬೀರಬಲನ ಕೀರ್ತಿಯು ಜಗತ್ತಿನಲ್ಲಿ ಪಸರಿಸ ಹತ್ತಿತು ಆಚಿ ತ್ರಪಟದಲ್ಲಿ ಒಂದಿಲ್ಲ ಒಂದು ನ್ಯೂನತೆಯನ್ನು ಮೇಲಿಂದ ಮೇಲೆ ತೋರಿಸ ಹತ್ತಿದ್ದರಿಂದ ಬೀರಬಲನು ತನ್ನ ಬುದ್ಧಿ ಚಾತುರ್ಯದಿಂದ ಇವನು ಸಾಮಾ ನ್ಯ ಮನುಷ್ಯನಲ್ಲ ದೇವರೇ ಈ ರೂಪದಿಂದ ಅವತರಿಸಿದ್ದಾನೆಂದು ನಿಶ್ಚಯಿ ಸಿಕೊಂಡು ಅವನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡನು ಆ ದಿವಸ ದಿಂದ ಈ ಬುದ್ಧಿಚಾತುರ್ಯದಿಂದ ದೇವರನ್ನು ಕಂಡು ಹಿಡಿದನು ಎಂದು ಬಿ ರಬಲನ ಖ್ಯಾತಿಯು ಜಗತ್ತಿನಲ್ಲೆಲ್ಲ ಪಸರಿಸಿತು.
೨ ಗೋಮಹಿಮೆ.
ಒಂದು ದಿವಸ ಬಾದಶಹನ ದರಚಾರದಲ್ಲಿ ಗೋಪ್ರಶಂಸೆಯ ಮಾತು
ಹೊರಟಿತು ಆಗ ಒಬ್ಬ ಮುಸಲ್ಮಾನನು ಎದ್ದು ನಿಂತು “ ನಮ್ಮ ಮತ ಗ್ರಂ
ಥಗಳಲ್ಲಿ ಗೋಕ್ಷೀರವು ಸ್ವಾಸ್ಥ್ಯವನ್ನುಂಟು ಮಾಡುವದೆಂತಲೂ ಮಾಂಸ
ವು ದೇಹದಲ್ಲಿ ಅಸ್ವಾಸ್ಥ್ಯತೆಯನ್ನು ಹೆಚ್ಚಿಸುವದೆಂತಲೂ ಹೇಳಿರುವರು
ಎಂದನು ಆಗ ಬೀರಬಲನು ತಕ್ಷಣಕ್ಕೆ ನುಡಿದದ್ದೇನಂದರೆ ನಿಮ್ಮ ಹೇ
ಆಕೆಯಂತೆ ಗೋರವು ಪ್ರಶಂಸಾರ್ಹವಾದದ್ದರಿಂದಲೇ ನಿಮ್ಮ ಕುರಾನ
ಗ್ರಂಥದ ಆರಂಭದಲ್ಲಿ, ಬಕರ ಪ್ರಾಣಿಯ ಚಿತ್ರವನ್ನು ಬರೆದಿದ್ದಾರೆ” ಎಂ
ದು ಹೇಳಿದನು ಈಮಾತನ್ನು ಕೇಳಿ ಬಾದಶಹನಿಗೆ ನಗೆಯುಬಂತು.
ಪಾರಸಿಭಾಷೆಯಲ್ಲಿ ಗೋವಿಗೆ ಬಕರ” ವೆಂದು ಅನ್ನುತ್ತಾರೆ.
೩ ಎರಡುತಿಂಗಳು ಕೂಡಿಸಿ ಒಂದೇ ತಿಂಗಳು.
ಒಂದು ದಿವಸ ಬಾದಶಹನು ಬೀರಬಲನನ್ನು ಕುರಿತು “ ನಾನು ಈದಿ ವಸದಿಂದ ಎರಡುತಿಂಗಳು ಕೂಡಿಸಿ ಒಂದೇ ತಿಂಗಳನ್ನು ಮಾಡಬೇಕೆಂದು ನಿಶ್ಚಯಿಸಿದ್ದೇನೆ” ಎಂದು ಹೇಳಿದನು ಆಗ ಬೀರಬಲನು ಖಾವಿಂದ ಹಾಗೆ ಮಾಡಿದರೆ ಬಹಳೇ ನೆಟ್ಟಗಾಗುವದು; ಯಾಕಂದರೆ ಸಂಪೂರ್ಣ ಒಂ ದುತಿಂಗಳಮಟ್ಟಿಗೆ ಬೆಳದಿಂಗಳು ಇರುವಂತಾಯಿತು” ಈ ಮಾತನ್ನು ಕೇಳಿ ಬಾದಶಹನು ಲಜ್ಜಿತನಾದನು,
೪ ಇದಾದರೂ ನಮ್ಮದೇ ಅದೆ.
ಒಂದುದಿವಸ ಬೀರಬಲನು ಭೋಜನಾನಂತರ ಹೊಟ್ಟೆಯಮೇಲೆ ಕೆ