ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಕಾತುರವಾದ ವಿನೋದ ಕಥೆಗಳು
೪೩

ಬೀರಬಲ--ಇನ್ನು ಹಾಗೆ ಮಾಡಲಿಕ್ಕೆ ಬರುವದಿಲ್ಲ; ರಾಜಾಜ್ಞೆಯ ಮೇರೆಗೆ ಐದುನೂರು ರೂಪಾಯಿಗಳನ್ನು ಕೊಡಲಿಕ್ಕೇಬೇಕು. ಈ ಮಾತಿನ ವಿಷಯವಾಗಿ ನೀನು ಮೊದಲೇ ಎಚ್ಚರಗೊಳ್ಳಬೇಕಾಗಿತ್ತು, ದಂಡದ ಹಣವನ್ನು ಬೇಗನೇ ಕಳುಹಿಸಿಕೊಡು. ಎಂದು ಅಪ್ಪಣೆಮಾಡಿ ಆ ಎತ್ತನ್ನು ಸರಕಾರದಿಂದ ಇಡಲ್ಪಟ್ಟ "ಪಶುರಕ್ಷಣ ಗೃಹ"ಕ್ಕೆ ಕಳುಹಿಸಿಕೊಟ್ಟನು. ಆಮೇಲೆ ಇಬ್ಬರು ಕರ್ಮಚಾರಿಗಳನ್ನು ಕರೆದು "ಈ ಸೆಟ್ಟಿಯ ಕಡೆಯಿಂದ ಐದುನೂರು ರೂಪಾಯಿಗಳನ್ನು ವಸೂಲ ಮಾಡಿರಿ, ಒಂದುವೇಳೆ ಇವನು ಹಣವನ್ನು ಕೊಡದಿದ್ದರೆ ಆರು ತಿಂಗಳ ಮಟ್ಟಿಗೆ ಕಠಿಣವಾದ ಕಾರಾಗೃಹದಲ್ಲಿ ಹಾಕಿಬಿಡಿರಿ” ಎಂದು ಅಪ್ಪಣೆ ಮಾಡಿದನು.

ಕಾರಾಗೃಹವಾಸದಿಂದ ತನ್ನ ಪ್ರತಿಷ್ಠೆಯು ಕಡಿಮೆಯಾಗುವದೆಂದು ತಿಳಿದು ರಾಜಾಜ್ಞೆಯ ಮೇರೆಗೆ ಐದುನೂರು ರೂಪಾಯಿಗಳನ್ನು ಕೊಡಲೊಪ್ಪಿಕೊಂಡನು. ಬೀರಬಲನ ನ್ಯಾಯನಿಮರ್ಶೆಯನ್ನು ಕಂಡು ಬಾದಶಹನಿಗೆ ಅತ್ಯಾನಂದವಾಯಿತು.

--( ೧೩. ಸ್ವಪ್ನದ ಅರ್ಥ. )--

ಒಂದುಸಾರ ಸ್ವಪ್ನದಲ್ಲಿ ಬಾದಶಹನ ಎಲ್ಲಾ ಹಲ್ಲುಗಳು ಬಿದ್ದಂತಾಗಿ ಒಂದೇ ಹಲ್ಲು ಉಳಿದಂತೆ ಕಂಡುಬಂತು, ಮರುದಿವಸ ಬಾದಶಹನು ರಮಲಕಾಸ್ತ್ರವನ್ನು ಬಲ್ಲಂಥ ಒಬ್ಬ ಮನುಷ್ಯನನ್ನು ಕರೆಯಿಸಿ, ಸ್ವಪ್ನ ಫಲವೇನೆಂದು ಕೇಳಿದನು. ಅದಕ್ಕೆ ಅವನು “ರಾಜಾಧಿರಾಜ ನಿಮ್ಮ ಸಂಬಂಧಿಗಳೆಲ್ಲರೂ ನಿಮ್ಮಕ್ಕಿಂತಲೂ ಮೊದಲೇ ಮರಣಹೊಂದುವರು” ಎಂದು ಹೇಳಿದನು. ಈತರದ ಅಪ್ರಿಯವಾದ ವಚನಗಳನ್ನಾಲಿಸಿ ಚಾದಶಹನು ಕ್ರುದ್ಧನಾಗಿ, ಆ ರಮಲಕಾಸ್ತ್ರಜ್ಞನನ್ನು ಹೊರಗೆ ದೂಡಿಸಿ ಬಿಟ್ಟನು.

ಮುಂದೆ ಸ್ವಲ್ಪ ಹೊತ್ತಿನಲ್ಲಿ ಬೀರಬಲನು ಬಂದನು; ಆಗ ಬಾದಶಹನು ಅವನಿಗೆ ಅದೇ ಪ್ರಶ್ನೆಯನ್ನು ಮಾಡಿದನು, ಕೂಡಲೆ ಬೀರಬಲನು ಉತ್ತರ ಕೊಟ್ಟದ್ದೇನಂದರೆ; ಮಹಾರಾಜ, ಇದರ ಸುಪರಿಣಾಮವು ಸ್ಪಷ್ಟವಾಗಿ ಕಂಡುಬರುತ್ತದೆ, ತಾವು ತಮ್ಮ ಎಲ್ಲ ಆಪ್ತ ಇಷ್ಟರಕಿಂತಲೂ ಹೆಚ್ಚು ಕಾಲ ಈ ಭೂಮಿಯಲ್ಲಿ ಬಾಳುವಿರಿ ಆದರೆ ಒಬ್ಬನು ಮಾತ್ರ ನಿಮ್ಮಕಿಂತಲು ಹೆಚ್ಚು ಆಯುಷ್ಯವಂತನಾಗಿ ಬಾಳುವನು.”

ಬೀರಬಲನ ನಮ್ರತೆಯಿಂದ ಯುಕ್ತವಾದ ಮತ್ತು ವಿದ್ವತ್ತು ಪ್ರಚು