ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ನ್ನ ಪಾಲನೆ ಪೋಷಣೆಯನ್ನು ಮಾಡಿದವಳು ” ಎಂದು ಉತ್ತರ ಕೊಟ್ಟಳು ಆ ಮೇಲೆ ಬೀರಬಲನು, " ಈ ಹುಡುಗಿಯ ಹೆಸರೇನು ? ?"ಎಂದು ಆ ವಾರಾಂಗನೆಗೆ ಕೇಳಿದನು. ಆಗ ಅವಳು. - ಇವಳ ಹೆಸರು ' ಕಾಶಿ " ಎಂದು ಹೇಳಿದಳು. ಆಮೇಲೆ ನೀವಿಬ್ಬರೂ ನಾಳೆಯದಿನ ಇಲ್ಲಿಗೆ ಬರಬೇಕೆಂದು ಆಜ್ಞಾಪಿಸಿ ಅಪ್ಪಣೆ ಕೊಟ್ಟು ಕಳುಹಿಸಿದನು.
ಮರುದಿವಸ ಆ ಬಾಲಿಕೆಯ ಪಿತನನ್ನು ಮೊದಲೇಕರಿಸಿಕೊಂಡು “ನಿನ್ನ ಮಗಳ ನಾಮಧೇಯವೇನು ? ” ಎಂದು ಕೇಳಿದ್ದಕ್ಕೆ ಅವನು “ ನಾನು ಇವಳಿಗೆ " ಲಕ್ಷ್ಮಿ ” ಎಂದು ಹೆಸರಿಟ್ಟಿದ್ದೆನು ಈ ಸಂಗತಿಯು ನನ್ನ ಮನೆಯ ನೆರೆ ಹೊಯಲ್ಲಿದ್ದವರಿಗೆಲ್ಲ ಗೊತ್ತು ಅದೆ ” ಎಂದು ಉತ್ತರಕೊಟ್ಟನು, ಬೀರಲನಿಗೆ ನೆರೆಹೊರೆಯವರನ್ನು ಕರಿಸಿ ಕೇಳಿಕೊಳ್ಳುವ ಅವಶ್ಯಕತೆಯೇ ಇದ್ದಿಲ್ಲ ಅವರಲ್ಲಿ ಆ ವಾರಾಂಗನೆಯು ಆ ಬಾಲಿಕೆಯನ್ನೊಡಗೊಂಡು ಬೀರಬಲನ ಒಲಗಕ್ಕೆ ಬಂದಳು ಈ ವ್ಯಾಜ್ಯದ ನಿರ್ಣಯವು ಏನಾಗುತ್ತದೆಂಬದನ್ನು ಅರಿತುಕೊಳ್ಳುವದಕ್ಕೆ ಎಷ್ಟೋ ಜನರು ಕೂಡಿದ್ದರು, ಆಗ ಬೀರಬಲನು ಒಬ್ಬ ಸಿಪಾಯಿಯನ್ನು ಕರೆದು, - ನೀನು ಈ ಜನಸಮೂಹದಲ್ಲಿ ಹೋಗಿ ಲಕ್ಷ್ಮಿ, ಲಕ್ಷ್ಮಿ ” ಎಂದು ಕೂಗು, ಈ ಧ್ವನಿಯನ್ನು ಕೇಳಿ ಯಾರು ಮುಂದೆ ಬರುವರೋ, ಅವರನ್ನು ನನ್ನೆಡೆಗೆ ಕರೆದುಕೊಂಡು ಬಾ ” ಎಂದು ಅಪ್ಪಣೆ ಮಾಡಿದನು ಸಿವಾಯಿಯು ಕೂಗಿದ ಕೂಡಲೆ ಒಬ್ಬ ಹುಡುಗಿಯು ಮುಂದೆ ಬಂದಳು ಅವನು ಅವಳನ್ನು ಕರೆದುಕೊಂಡು ಬೀರಬಲನ ಹತ್ತಿರ ಬಂದನು ಆ ವಾರಾಂಗನೆಯೂ ಆ ಬಾಲಿಕೆಯ ಬೆನ್ನ ಮೇಲೆಯೇ ಬಂದಳು ಆ ಬಾಲಿಕೆಯನ್ನು ನೋಡಿ ಬೀರಬಲನು ಅನ್ನುತ್ತಾನೆ:- " ನಿನ್ನ ಹೆಸರು " ಕಾಶಿ ” ಎಂದು ಹೇಳಿದ್ದಿಲ್ಲವೇ ? ಹೀಗಿದ್ದು “ ಲಕ್ಷ್ಮಿ ” ಎಂದು ಕೂಗಿದರೆ, ನೀನು ಯಾಕೆ ಬಂದಿ ? ” ಅದಕ್ಕೆ ಆ ಬಾಲಿಕೆಯು ಗಾಬರಿಯಾಗಿ,- ನನ್ನ ತಂದೆಯು ನನಗೆ ಲಕ್ಷ್ಮಿ ಎಂದು ಕರೆಯುತ್ತಿದ್ದನು. ಆಮೊದಲಿನ ಹೆಸರು ಕಿವಿಗೆ ಬಿದ್ದರಿಂದ, ದಿಗ್ಬ್ರಮೆಯುಳ್ಳವಳಾಗಿ ಮುಂದೆ ಬಂದು ಬಿಟ್ಟೆನು ” ಎಂದು ಹೇಳಿದಳು. ಆಮೇಲೆ ಬೀರಬಲನು. ನಿನ್ನೆ ನೀನು " ನನಗೆ ಮಾತಾ ಪಿತೃಗಳ ಪರಿಚಯವಿಲ್ಲವೆಂದು ಹೇಳಿದವಳು ” ಈ ಹೊತ್ತು ಹೀಗೆ ವಿಪರೀತವಾಗಿ ಯಾಕೆ ಹೇಳುತ್ತೀ ? ” ಎಂದು ಪ್ರಶ್ನೆ ಮಾಡಿದನು. ಆಬಾಲಿಕೆಗೆ ಏನೂ ಉತ್ತರ ಕೊಡುವದಕ್ಕೆ ತಿಳಿಯದೆ ಹೋಯಿತು. ಸುಮ್ಮನೆನಿಂತು ಕೊಂಡು ಬಿಟ್ಟಳು. ಅಗ ಆ ವಾರಾಂಗನೆಯು ಮುಂದೆಬಂದು ಮಾತನಾಡ ಹತ್ತಿದಳು. ಆಗ ಅವಳಿಗೆ ಮಾತನಾಡಗೊಡದೆ ಬೀರಬಲನು ಅನ್ನುತ್ತಾನೆ;-