ದೀಪಾವಳಿ ಏಳು ಸುತ್ತಿನ ಕೋಟೆ ಒಳಗೆ ಬಾ ತಂಗಿ ಯಾವಾಗ ಬಂದೆ ಬಾರೆ ದೀಪಾವಳಿ! (ಖಾಲಿ ಜೇಬಿರುವ ಹೊತ್ತಿನೊಳೆ ನನಗೆ ಅತಿಥಿಗಳ ಹಾವಳಿ!) ಢಮಢಮನೆ ನಾಣ್ಯ ಸರಸರನೆ ನೋಟು ಉರಿದವೋ ಬೆಂಕಿ ತಾಕಿ, ಅದೂ ಕುದುರೆ ಆನೆ ಇಗೊ ಹಾವು ಚೇಳು ಮನೆಯೆ ಮೃಗಶಾಲೆ ಜೋಕೆ! ಎದೆಯೊಳಗೆ ಸರಪಟಾಕಿ. ನಕ್ಷತ್ರಕಡ್ಡಿ ಉರಿಬತ್ತಿ ಬಾಣ ಬಾಂಬು ರಾಕೆಟ್ ಮತಾಪು. ವ್ಯರ್ಥ ತಿರುಗುತಿರೆ ವಿಷ್ಣು ಚಕ್ರ ಚಿನಕುರುಳಿಯದು ಎಂಥ ರೋಫು! ದಂಗೆ ಚಳವಳಿ ಖನಿ ಕಗ್ಗೋಲೆ! ಎಲ್ಲಿ ಪೋಲೀಸಿನವನು? ಮನೆಯೊಳಗೆ ಉಳಿದನೇನು? ಢಮಡಬ್ಬದೊಡನೆ ಬೊಬ್ಬೆನಗುಮಗುವು ಬೆಳಕ ಬೆನ್ನೇರಿ ಹೊರಟಿತೋ ಗುರಿ ಚಿಕ್ಕೆ ಮಿನುಗು; ನಗು ದೂರ ದೂರ. ಅದರ ಪಂಥ ನೇರ ತಾಯ ಹರಕೆವೊಲು ಮರುಕ ಮಮತೆಯೊಳು ಮೇಲಿಂದ ಬಂದ ಬೆಳ್ಳಿ ಢಿಕ್ಕಿ ಹೊಡೆಯೆ ನಡು ರಸ್ತೆಯಲ್ಲಿ ನಗು ಏಳು ಹೋಳಾಯಿತಲ್ಲಿ! ದೇವ ಕನ್ನಿಕೆಯರೇಳು ಮಂದಿ ಬಂದಾರ ಮೀಯಲೆಂದು ಉಡಿಸಿದರು ಏಳು ಮಗಳಿದರು ಏಳು ಸೀರೆಗಳ ತಾಯಿಗಂದು! و ಒಲವು ತುಂಬಿದ ಸಂಜೆಮಲ್ಲಿಗೆಯ ಮೃದುಲ ದಳ ದಣಿದ ದುಂಬಿಯ ಮೈಗೆ ಸುಪ್ಪತ್ತಿಗೆ ಗಂಟಲೊಣಗಿದ ಗಂಟೆ ಹೂವಾಯ್ತು; ರಾಜಬಕ ಗೆಲಲು ನಗುತಿದೆ ಮತ್ತ ಮಧುಪರ್ಣಿಕೆ. ಹೆಣ್ಣಿನಾಗಸಗಣ್ಣು ಕೈಯ ಕನ್ನೈದಿಲೆಯ
ಪುಟ:Elu Suthina Kote.pdf/೬೦
ಗೋಚರ