ವಿಷಯಕ್ಕೆ ಹೋಗು

ಪುಟ:Elu Suthina Kote.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಏಳು ಸುತ್ತಿನ ಕೋಟೆ ಹಸಿರುಸಿರು ಬಸಿರು ಹೆಬ್ಬಯಕೆಯೆಸಳು ಎಳೆಮಗುವ ನಗುವು ಧ್ವಂಸ ಏಳು ಹೋಳಾದ ನೆಲದೆದೆಯು ಮತ್ತೆ ಬಯಕೆ ಬೆನ್ನೇರಿ ಹೊರಟಿತೋ ಚಿಕ್ಕೆ ನಗುವ ಕಡೆಗೆ. ಸೆರಗ ಹಿಡಿದೇಳು ಮಕ್ಕಳೂ ತಾಯ ಬೇಡಿದವು: ಬೆಳಕು ಬೆಳಕು ಕೊಡಬೇಕು, ಬೇಕು! ಬೆಳಕ ಮೂಲದೆಡೆಗೆ, ಸ್ವಚ್ಚ ಮೇಲೆ ಕೈ ನಿಶ್ಚಯಕೆ ಬಂತು ಮರುಗು ದನಿ ನುಡಿಯಲಿಂತು: Let there be light! ಏಳು ಕುದುರೆಗಳ ರಥವು ಹೊರಡಲಿಳೆ ಮಿನುಗಿತೋ ಬೆಳ್ಳಿ ಬೆಳಕು! ಜಗದುದ್ದ ಬೆಳಕ ಚಳುಕುತ್ತಿ