ವಿಷಯಕ್ಕೆ ಹೋಗು

ಪುಟ:Abhaya.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

" ಕೊಠಡಿ ಪೂರ್ತಿಯಾಗಿ ಖಾಲಿಯಾಗ್ತಿದೆ ನನ್ನ ತುಂಗಕ್ಕನಿಗೂ ಇರದೇ ಇದ್ದ ಸಂಭ್ರಮ ಈಕೆಗೆ ! ಶ್ರೀಮಂತಳೇ ಇರಬೇಕು ಹಾಗಾದರೆ. ಭಾರಿ ಶ್ರೀಮಂತಳಿದ್ದರೂ ಇರಬಹುದು. ಆಕೆ ಬರಲಿ ನೋಡಿಹೇಳ್ತೀನಿ ಎಷ್ಟು ದಿವಸ ಇಲ್ಲಿ ಇರ್ತಾಳೇಂತ. ಅವಳ ಶ್ರೀಮಂತಿಕೇನೂ ಎಷ್ಟಿದೆ ಅಂತ ಸ್ವಲ್ಪ ನೋಡೇ ಬಿಡ್ರೀನಿ”

"ಹಾಗೆಲ್ಲ ಆನ್ಬಾರ್ದು ಜಲಜ"

" ಹೋಗಕ್ಕ, ನಿನಗೊಂದೂ ಗೊತ್ತಾಗೋಲ್ಲ"


ಅಷ್ಟು ಹೇಳಿ ಮಾತು ನಿಲ್ಲಿಸಿ ಬಿಟ್ಟಳು ಜಲಜಾ 

ತುಂಗಮ್ಮ, ಮನಸಿನ ನೆಮ್ಮದಿ ಇಲ್ಲದೆ ಹೊತ್ತು ಕಳೆದಳು ಕತ್ತಲಾದಮೇಲೆ, ಬರಬೇಕಾಗಿದ್ದವರ ಆಗಮನವನ್ನೂ ಸರಸಮ್ಮನೂ ಇದಿರುನೋಡಿದರು.

ಎಂಟುಗಂಟೆಯ ಹೊತ್ತಿಗೆ ದೆವ್ವದಂತಹ ಸುಭದ್ರವಾದೊ೦ದು ಕಾರು ಅಭಯಧಾಮದೆದುರು ಬಂದು ನಿಂತಿತು ಮೊದಲು ಕಾರ್ಯದರ್ಶಿನಿ ಇಳಿದರು.

"ಭದ್ರ! ಮೆತ್ತಗೆ ಇಳೀರಿ” — ಎನ್ನುತ್ತ ಗರ್ಭಿಣಿಯಾಗಿದ್ದ ಹುಡುಗಿಯನ್ನು ಕೈಕೊಟ್ಟು ಅವರು ಕೆಳಕ್ಕೆ ಇಳಿಸಿದರು.

ಆವಳ ಹಿಂದೆ ವಯಸಾದ ಒಬ್ಬರು ಶ್ತ್ರೀ. ಎದುರು ಸೀಟಿನಿಂದ, ಬಣ್ಣದ ಚಿತ್ರಗಳಿದ್ದ ಬುಷ್ ಕೊಟು ಧರಿಸಿದ್ದ ಎತ್ತರದ ನಿಲುವಿನ ಒಬ್ಬ ಯುವಕ ಇಳಿದ..ಅವರೆಲ್ಲರೂ ಅಭಯಧಾಮದ ಒಳಕ್ಕೆ ಬಂದರು ಡ್ರೈವರ್, ಹೊಸಹುಸಿಗೆಯನ್ನೂ ದೊಡ್ಡ ಸಟ್ ಕೇಸನ್ನೂ ಹೊತ್ತುಕೊಂಡು ಬಂದ.

ఆ ಹೆಂಗಸು,ಹುಡುಗಿಯ ತಾಯಿಯೆಂಬುದು ಸ್ವಷ್ಟವಾಗಿತ್ತು. ಆ ಯುವಕ ಆಕೆಯ ಅಣ್ಣನಾಗಿದ್ದ ಮುಟ್ಟಿದರೆ ಎಲ್ಲಿ ಮುದುಡುವುದೊ ಎಂಬಂತೆ ಕೆಂಪು ಕೆಂಪಗಾಗಿದ್ದ ಮೈ ಹೊವಿನ ಸುಪ್ಪತ್ತಿಗೆಯಲ್ಲೆ ಬೆಳೆದ ಸುಕೋಮಲ ದೇಹ .. ಅತ್ಯಂತ ಗುಪ್ತವಾದುದೇನನ್ನೋ ಅವಸರ ಅವಸರವಾಗಿ ಮಾಡುವವ ರಂತೆ ಅವರೆಲ್ಲ ವರ್ತಿಸಿದರು.