ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

26 ಕಾದಂಬರೀ ಸಂಗ್ರಹ

  • \ \ \ \# VVV vvvvvvv 1 VVyVVVV 1 1 1

vvvvy \ # V/VVYWN/ JVVVVVy\ N # V \ \ - \ / \ \ # VVV VVV + + \ V/VV \ ಇಂತಹ ಅಂಣಂದಿರು ಎಷ್ಟೋ ವಿಧದಲ್ಲಿ ನೀತಿ ಹೇಳಿದಾಗ್ಯೂ ನಮ್ಮ ಯಜಮಾನರು ತಮ್ಮ ಹಟವನ್ನು ಬಿಡಲೇ ಇಲ್ಲ. ಇಷ್ಟಾದಮೇಲೆ ಭಾವನವರು ಅವರವರು ಮನಸ್ಸು ಬಂದಂತೆ ಅವರವರು ಇದ್ದು ಕೊಳ್ಳಲಿ; ಎಂದು ಹೇಳಿ ಸುಮ್ಮನಾಗಿಬಿಟ್ಟರು. ಅಕ್ಕನವರು ಶ್ರೀ ನಗರಕ್ಕೆ ಬಂದಮೇಲೆ ಒಳ್ಳೊಳ್ಳೆಯ ಬಟ್ಟೆಗಳನ್ನು ಮಕ್ಕ ಳಿಗೆ ತೆಗೆಯುತ್ತಲೂ ತಾವುಒಳ್ಳೆಯ ಸೀರೆಗಳನ್ನು ಟ್ಟು ಕೊಳ್ಳುತ್ತಲೂ ಇದ್ದುದನ್ನು ನೋಡಿ ನಾನು ಅದರಂತೆ--ಅದಕ್ಕಿಂತಲೂ ಹೆಚ್ಚಾಗಿರಬೇಕೆಂದು ಯೋಚಿಸಿ ನಮ್ಮ ಯಜಮಾನರನ್ನು ಕೇಳಿಕೊಂಡೆನು. ನಾನು ಹೇಳಿದ ವೆಚ್ಚವು ನೂರು ರೂಪಾಯಿಗಳು ಮೀರಿದ ವ್ಯಯವಾಗಿದ್ದುದರಿಂದ ಅವರು ಅದನ್ನು ಮೊದಲು ಲಕ್ಷಿಸಲಿಲ್ಲ. ನಾನಾದರೂ ಅಷ್ಟಕ್ಕೆ ಸುಮ್ಮನಾಗದೆ, ನಮ್ಮ ಯಜಮಾನರನ್ನು ವಿಶೇಷವಾಗಿ ತೊಂದರೆ ಪಡಿಸು ವುದು ಸರಿಯಲ್ಲವೆಂಬ ಧರ್ಮವನ್ನೂ ಗಣನೆಗೆ ತಾರದೆ ಮತ್ತು ಮತ್ತು ಮನಸ್ಸಿಗೆ ಬೇಸರವಾಗುವಂತೆ ಎರಡು ಮೂರು ಬಾರಿ ಯಜಮಾನರನ್ನು ಕೇಳಿ ಬಿಟ್ಟೆನು. ಈ ನನ್ನ ವರ್ತನದಿಂದ ಯಜಮಾನರಿಗೆ ಕೋಪಬಂದಿರಬಹುದು. ಆದರೆ ಅವರ ಸ್ವಭಾವವು ನನಗೆ ತಿಳಿಯಲಿಲ್ಲ. ಆದರೂ ಬಹು ಸಹನೆಯಿಂದ ಸುಮ್ಮನೆ ಇರುತ್ತಿದ್ದರು. ಅಂತೂ ನನ್ನ ಅಭಿಲಾಷೆಯು ನೆರವೇರಲಿಲ್ಲ. ನನಗೆ ದಿನೇದಿನೇ ಕಂಡಕಂಡ ಶ್ರೀಮಂತರ ಮನೆ ಹೆಂಗಸರನ್ನು ನೋಡಿದಾಗಲೆಲ್ಲಾ ಅವರ ಉಡುಪು, ಆಭರಣಗಳ ವಿಚಾರದಲ್ಲಿ ಹುರುಡು ಹತ್ತಿ ಅದಕ್ಕಿಂತಲೂ ಹೆಚ್ಚಾಗಿದ್ದು ಬಿಡಬೇಕೆಂಬ ಹುಚ್ಚು ಹೆಚ್ಚಾಗಿ ಹೋಯಿತು. ನನ್ನ ಮನಸ್ಸಮಾಧಾನ ಮಾಡಬೇಕಾಗಿದ್ದರೆ ಸುಮಾರು ಎರಡು ಸಾವಿರ ರೂಪಾಯಿ ಗಳನ್ನು ನಮ್ಮ ಯಜಮಾನರು ವೆಚ್ಚ ಮಾಡಬೇಕಾಗಿತ್ತು. ನನ್ನ ಮನಸ್ಸಿನಲ್ಲಾದರೋ, ಈ ಕೆಲಸವು ನಮ್ಮ ಯಜಮಾನರಿಂದ ಆಗುವುದೇ, ಇಲ್ಲವೇ ಎಂಬ ಭಾವನೆಯು ಸಕೃದಾವರ್ತಿಯಾದರೂ ಸ್ಪುರಿಸದೆ ಹೋದುದು. ನಮ್ಮ ಯಜಮಾನರು ನಾನು ಹುರುಡಿನಸೀರೆ, ಒಡವೆಗಳ ಪ್ರಸ್ತಾಪವನ್ನೆತ್ತಿದಾಗಲೆಲ್ಲಾ ಎಷ್ಟೊ ವಿಧವಾಗಿ ನೀತಿ ಯನ್ನು ಹೇಳುತ್ತಿದ್ದರು. ಈ ಸೀರೆ, ಒಡವೆ ಮುಂತಾದ ಪದಾರ್ಥಗಳೆಲ್ಲವೂ ಮನ ಸ್ಸನ್ನು ಹಾಳುಮಾಡುತಕ್ಕುದಾಗಿಯೂ ಬುದ್ದಿಯನ್ನು ಕೆಡಿಸೀತಕ್ಕುದಾಗಿಯೂ, ನಾಶವಾಗತಕ್ಕೆ ಸ್ವಭಾವವುಳ್ಳುದಾಗಿಯೂ ಇರುವುದು. ಆದುದರಿಂದ ಸುಶೀಲೆಯಾದ ಹೆಂಗಸು ತುಚ್ಛವಾದ ಈ ಒಡವೆಗಳಿಗೆ ಆಶಿಸದೆ, ತನಗೆ ಅಮೂಲ್ಯಾಭರಣದಂತಿರುವ ಪತಿದೇವನ ಪ್ರಸಾದವನ್ನು ನಿರೀಕ್ಷಿಸುವುದೇ ಅವಳಿಗೆ ದೊಡ್ಡ ಒಡವೆಯೆಂದು ಎಷ್ಟೋ ನೀತಿಯನ್ನು ಹೇಳಿದರು. ನನಗೆ ಆಗ ಯಾವದೈವವು ಹಿಡಿದಿತ್ತೋ ತಿಳಿಯದು. ನಮ್ಮ ಯಜಮಾನರು ಹೇಳಿದ ನೀತಿಯೊಂದೂ ನನ್ನ ಮನಸ್ಸಿಗೆ ಹಿಡಿಯಲೇ ಇಲ್ಲ. ಹೇಳಿ