ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು

' 22 ಕಾದಂಬರಿ ಸಂಗ್ರಹ

ಳುಳ್ಳ ಅಂತಃಪುರಗಳಿಂದಲೂ, ಕಿರುಮನೆಗಳಿಂದಲೂ ಕೂಡಿದ ವಿಲಾಸ ಭವನಗಳೂ, ಶಿಲ್ಪಿಯ ಕಲಾನೈಪುಣ್ಯವನ್ನು ಚೆನ್ನಾಗಿ ವ್ಯಕ್ತಪಡಿಸುತ್ತಿದ್ದುವು. ಅರಮನೆಯ ಮುಂಗಡೆ ವಿವಿಧ ಫಲ ಪೂಷ್ಪದ್ರುಮಗಳಿಂ ಕಂಗೊಳಿಸುವ ಉದ್ಯಾನವನವೊಂದುಂಟು. ಇಂತಹ ಅರಮನೆಯ ಸುತ್ತಲೂ ದುರ್ಭೇದ್ಯವಾದ ಕೋಟೆಯಿರುವುದು. ಕೋಟೆಯ ಸುತ್ತಲೂ ಇರುವ ಪ್ರಾಂತಗಳಲ್ಲಿ ಲ್ಲಾ ಅಂಗಡಿಬೀದಿಗಳು, ಬ್ರಾಹ್ಮಣರ ಅಗ್ರಹಾರಗಳೂ, ಅಗ್ರಹಾರಗಳಿಗೆ ದೂರವಾಗಿ ಇತರ ಜಾತಿಯವರ ಬೀದಿಗಳೂ ಇರುವುವು. ಅಲ್ಲದೆ ಧನಿಕರನೇಕರ ವಿಲಾಸ ಭವನಗಳೂ ಮಹೋನ್ನತ ಹರ್ಮ್ಯಗಳಿಂ ವಿರಾಜಿತವಾದ ಮಂದಿರಗಳೂ ಈ ಪಟ್ಟಣದಲ್ಲಿ ಅಸಂಖ್ಯಾಕವಾಗಿ ರಾರಾಜಿಸುತ್ತಿರುವುವು.

      ಇಂತಹ ನಗರದಲ್ಲಿ ವಾಸಮಾಡಲು ಆರಿಗೆ ತಾನೆ ಇಷ್ಟವಿರದು? ಯಾರು ತಾನೇ ಈ ನಗರದ ಸೌಂದರ್ಯಕ್ಕೆ ಬೆರಗಾಗದಿದ್ದಾರು? ಯಾರಿಗೆತಾನೇ ವಿಲಾಸಗಳಲ್ಲಿ ಅಭಿಲಾಷೆಯಿಲ್ಲ? ಸರ್ವಸಂಗಪರಿತ್ಯಾಗ ಮಾಡಿದ ವಿರಾಗಿಯೇ ಈ ವಿಧವಾದ ವಿಲಾಸಗಳಿಗೆ ಸೋತುಬಿಡುವನೆಂದ ಮೇಲೆ ಅಜಿತೇಂದ್ರಿಯರಾದವರ ಪಾಡು ಹೇಗಿರಬಹುದು?  ಏಕೆವಾಸಃ ಸತ್ಯನೇವಾ ವನೇವಾ. ”
         ನಮ್ಮ ತಂದೆ ತಾಯಿಗಳು ನಮ್ಮೂರಿನಲ್ಲಿ (ಹರಪುರದಲ್ಲಿ) ಒಂದೆರಡು ತಿಂಗಳಿದ್ದು ರಂಗಪುರಕ್ಕೆ ಪ್ರಯಾಣ ಮಾಡಿದರು. ಅವರು ಹರಪುರದಲ್ಲಿದ್ದಾಗಲೇ ನಮ್ಮ ಮನೆಯಲ್ಲಿ ಕೊಂಚ ಕೊಂಚ ಗೃಹ ಕಲಹಗಳಿಗೆ ಅಂಕುರವಾಗಿದ್ದಿತು. ನನ್ನ ತಂದೆ ತಾಯಿಗಳು ಪ್ರಯಾಣ ಮಾಡಿದಮೇಲೆ ಆ ಅಂಕುರವು ಸಣ್ಣ ಸಸಿಯಾಗಿ ಪರಿಣಮಿಸಿತು. (ನನ್ನ ಓರಗಿತ್ತಿಯನ್ನು ಇನ್ನು ಮೇಲೆ ಅಕ್ಕನೆಂದು ಸಂಬೋಧಿಸುತ್ತಾ ಬರುವೆನು.) ನನ್ನ ಅಕ್ಕನಿಗೆ ಎರಡು ಗಂಡುಮಕ್ಕಳುಗಳಿವೆ. ನನ್ನ ಮಗುವಿಗೂ ಈಗ ಹತ್ತು ತಿಂಗಳಾಗಿದೆ ಯೆಂಬುದು ನಮ್ಮ ಸೋದರಿಯರಿಗೆ ತಿಳಿದೇ ಇದೆ. ನಮ್ಮ ಅತ್ತಮ್ಮನವರು ನಮ್ಮ ತಾತನವರ ಸಹಾಯಕ್ಕಾಗಿ ಅವರ ಜತೆಯಲ್ಲೇ ಯಾವಾಗಲೂ ಇರಬೇಕಾಗಿದ್ದುದರಿಂದಲೂ, ತಾತನವರು ನಿಯತವಾಗಿ ಶ್ರೀ ನಗರದಲ್ಲೇ ವಾಸಮಾಡಬೇಕಾಗಿದ್ದುದರಿಂದಲೂ, ಇದುವರಿಗೆ ನಮ್ಮ ಅಕ್ಕನು ಒಬ್ಬಂಟಿಗರಾಗಿದ್ದುದರಿಂದಲೂ, ನಮ್ಮ ಅತ್ತಮ್ಮನವರು ಶ್ರೀನಗರದಲ್ಲೂ ನಮ್ಮ ಅಕ್ಕನು ಹರಪುರದಲ್ಲೂ, ವಸಿಸುತ್ತಾ ಅಗಿಂದಾಗ್ಗೆ ಇಬ್ಬರೂ ಒಂದೊಂದು ಕಾಲದಲ್ಲಿ ಒಂದೇ ಕಡೆಯಲ್ಲೇ ಇರುತ್ತಲೂ ಇದ್ದರು. ನಮ್ಮ ತಾತನವರು ಆಗಿಂದಾಗ್ಗೆ ಶ್ರೀ ನಗರದಿಂದ ಹರಪುರಕ್ಕೆ ಬರಬೇಕಾಗುತ್ತಿದ್ದುದರಿಂದ ಸಂಸಾರ ಸ್ಥಿತಿಯು ಹೀಗೆಯೇ ಇತ್ತು.