ಕರ್‍ರಗಿನ ಮುಖ ಮತ್ತಷ್ಟು ಕಪ್ಪಿಟ್ಟಿತು ಅವನ ಪ್ರತಾಪದ ನಿಲುವು ಕುಗ್ಗಿ ಹೋಯಿತು. ಆತ ಗೊಣಗಿದ. ಆದರೆ ಅದೇನೆಂದು ಯಾರಿಗೂ ಅರ್ಥವಾಗಲಿಲ್ಲ. ಸರಸಮ್ಮ ಹೇಳಿದಂತೆಯೆ ಬರೆದು ಆತ ಸಹಿಹಾಕಿದ
ಪೋಲಿಸರೊಡನೆ ಮಾತನಾಡಿದ ಸ್ವರದ ಬದಲು, ಪರಿಚಯದ ದೊಡ್ಡಮ್ಮನ ಮೃದುಸ್ವರವೇ ಕೇಳಿಸಿತು:
"ಜಲಜ, ಒಳಗಿನ ಕೊಠಡೀಲಿ ಎರಡು ಚಾಪೆಹಾಕಿ ಇವರಿಬ್ಬರ್‍ನ ಅಲ್ಲಿ ಬಿಟ್ಟುಡಮ್ಮ."
"ಹೂಂ ದೊಡ್ಡಮ್ಮ."
"ನೀವೆಲ್ಲಿ ಮಲಕೊಂಡಿದೀರಾ ?"
-ಎಂದರು ಸರಸಮ್ಮ, ತುಂಗಮ್ಮನನ್ನೂ ನೋಡುತ್ತ
"ಅಲ್ಲೇ, ಆ ಕೊಠಡಿ ಬಾಗಿಲಲ್ಲೇ ದೊಡ್ಡಮ್ಮ."
"ಸರಿ ಹಾಗಾದರೆ."
ಆ ಪೋಲೀಸರವನು ಮತ್ತೊಮ್ಮೆ ತುಂಗಮ್ಮ ಜಲಜೆಯರನ್ನು ನೋಡಿ, ತಾನು ತಂದು ಬಿಟ್ಟಿದ್ದ ಬೇಟೆಗಳನ್ನು ನೋಡಿ, ತನ್ನ ಹಳೆಯ ಸಹೋದ್ಯೋಗಿಯೊಡನೆ ಹೊರಟುನಿಂತ. ಸರಸಮ್ಮ ಅವರಿಬ್ಬರನ್ನೂ ಬಾಗಿಲು ದಾಟಿಸಿ ತಗಲಿಸಿದರು.
ಆಮೇಲೆ ಅವರ ಕೊಠಡಿಯ ದೀಪ ಆರಲು ಹೆಚ್ಚುಹೋತ್ತು ಹಿಡಿಯಲಿಲ್ಲ.
ಹುಡುಗಿಯರನ್ನು ಒಳಕ್ಕೆ ಬಿಟ್ಟು ಜಲಜ ಆ ಕೊಠಡಿಯ ಬಾಗಿಲೆಳೆದುಕೊಂಡಳು....ಆ ಮಾತುಕತೆ- ಸದ್ದಿಗೆ ಹಲವು ಹುಡುಗಿಯರು ಎಚ್ಚರಗೊಂಡರೂ ಮತ್ತೆ ನಿದ್ದೆ ಹೋದರು.
ಜಲಜ - ತುಂಗಮ್ಮರಿಗೆ ಮಾತ್ರ ನಿದ್ದೆ ಬರಲಿಲ್ಲ. ಪಿಸುಮಾತಿನಲ್ಲೆ ಜಲಜ ಪೋಲೀಸರ ಸಾಹಸದ ಕತೆಗಳನ್ನು ಹೇಳಿದಳು.
"ಡಿ ಎಸ್. ಪಿ . ಗೀಯಸ್ಪಿ ಅಂತ ಗದರಿಸ್ಲಿಲ್ವೆ ದೊಡ್ದಮ್ಮ ? ಅದೇನು ಗೊತ್ತಾಯ್ತೆ ನಿಂಗೆ?"
"ಇಲ್ಲ, ಏನು ಹೇಳು ?"
"ಅಯ್ಯೋ! ಒಂದೆರಡ್ಸಲ ಏನಾಯ್ತೂಂತ....."
ಪುಟ:Abhaya.pdf/೨೦೬
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಭಯ
೨೦೧