ಹೆಚ್.ಟು.ಓ - ಹೂವೆ ಹೂವೆ
- ಚಿತ್ರ: ಹೆಚ್.ಟು.ಓ
- ಸಂಗೀತ: ಸಾಧು ಕೋಕಿಲ
- ಸಾಹಿತ್ಯ: ಉಪೇಂದ್ರ
- ಗಾಯನ: ಕವಿತಾ ಸುಬ್ರಹ್ಮಣ್ಯಂ
ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ
ಹೂವೇ
ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ.. {ಪಲ್ಲವಿ}
||ಹೂವೇ ಹೂವೇ||
ಆಭರಣದ ಅಂಗಡಿಗೇ ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೇ ಮೂಗುತಿ ಹಾಕುವೇ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೇ
ಸಿಂಗಾರ ಮಾಡಲೂ ನಿನ್ನಂತೇ ನನ್ನನೂ
ಮುಗಿಲೇ ಓ ಮುಗಿಲೇ
ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ ನಲ್ಲ ಬರುವನೇನೇ...
ಗಾಳಿ ಈ ತಂಪನೂ
ಕದ್ದೊಯ್ದೇ ಎಲ್ಲಿಗೇ ಕದ್ದೊಯ್ದೇ ಎಲ್ಲಿಗೇ
||ಹೂವೇ ಹೂವೇ||
ಎರವಲು ಕೊಡಿ ರೆಕ್ಕೆಗಳಾ
ಓ ನನ್ನ ಹಕ್ಕಿಗಳೇ
ನಾನೊಮ್ಮೇ ಬಾನಿಗೆ ಹಾರಾಡಬೇಕಿದೇ
ಓಹೋ...ಗಡಿಬಿಡಿಯಾ ಇರುವೆಗಳೇ
ಸಾಲಾಗಿ ಬನ್ನಿರೀ
ಒಬ್ಬಬ್ಬರಾಗಿಯೇ ಹೆಸರು ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ
ನಿನ್ನ ಮೈಯಮೇಲೇ ಚುಕ್ಕಿ ಇಟ್ಟ ರಂಗೋಲೇ...
ಬೆಳದಿಂಗಳೂಟವಾ
ಬಡಿಸೋನೇ ಚಂದ್ರಮಾ...ಬಡಿಸು ಬಾ ಚಂದ್ರಮ
||ಹೂವೇ ಹೂವೇ||
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ