ವಿಷಯಕ್ಕೆ ಹೋಗು

ಪುಟ:ಅಜಿತ ಕುಮಾರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ,

ದಕ್ಕೂ ಕಿವಿಗೊಡದೆ ತನಗೊಂದು ಮಹತ್ಕಾರ್ಯವಿರುವುದೆಂದೂ ಯವನ ದೇಶಕ್ಕೆ ಹೋಗಬೇಕಾಗಿದೆಯೆಂದೂ ಹೇಳಿದನು,

ಅದಕ್ಕೆ ಕುರುಬರು ಬೆರಗಾಗಿ, “ನೀನೊಬ್ಬನೆ ಹೋಗುವೆಯಾ ? ಆ ಕಡೆ ಈಗೀಗ ಯಾರೂ ಶಸ್ತ್ರ ಪ್ರಾಣಿಗಳ ಜೊತೆಯಲ್ಲಿ ಹೊರತು ಒಬ್ಬೊಬ್ಬರಾಗಿ ಸುಳಿಯುವುದಿಲ್ಲ !” ಎಂದು ಹೇಳಿದರು.

ಅದಕ್ಕೆ ಅಜಿತನು-"ಆಯುಧಗಳೊ ? ನನ್ನಲ್ಲಿ ಬೇಕಷ್ಟು ಇವೆ. ಇನ್ನು ಜನಗಳು ನನಗೆ ಆವಶ್ಯಕವಿಲ್ಲ. ಸತ್ಪುರುಷನು ತನಗೆ ತಾನೆ ಸಂಗಾತಿಯಲ್ಲವೆ? ನಾನೊಬ್ಬನೇ ಏತಕ್ಕಾಗಿ ಯವನದೇಶಕ್ಕೆ ಹೋಗ ಕೂಡದು?' ಎಂದು ಕೇಳಿದನು.

ಮೊದಲನೆಯ ಕುರುಬನು, “ಒಂದುವೇಳೆ ಹಾಗೆ ಹೋಗುವೆಯಾದರೆ, ಆ ಬೆಟ್ಟಗಳ ಕಿಬ್ಬಿಯಲ್ಲಿ ಮಾತ್ರ ಜಾಗರೂಕರಾಗಿರಬೇಕು. ಅಲ್ಲಿ ದಾರಕನೆಂಬ ಚೋರನಿದ್ದಾನೆ. ಆತನು ಆ ಹಾದಿಯಾಗಿ ಹೋಗುವವರೆಲ್ಲರನ್ನೂ ಹಿಡಿದು, ಎರಡು ಎಳೆಯ ದೇವದಾರು ಮರಗಳನ್ನು ಸೆಳೆದು, ಅವನ್ನು ಬಗ್ಗಿಸಿ ಹತ್ತಿರ ತಂದು, ದಾರಿಗರ ಎಡ ಕೈ ಕಾಲುಗಳನ್ನು ಒಂದು ಮರಕ್ಕೂ, ಬಲ ಕೈ ಕಾಲುಗಳನ್ನು ಇನ್ನೊಂದು ಮರಕ್ಕೂ ಕಟ್ಟಿ, ಆ ಮರಗಳನ್ನು ಬಿಟ್ಟುಬಿಡುವನು. ಆ ಮರಗಳೊಳಗೆ ಸಿಕ್ಕುಬಿದ್ದ ಬಡ ಪಾಯಿಯಾದ ಮನುಷ್ಯನ ಮೈ ಸಿಳ್ಳನೆ ಸೀಳಾಗಿ ಹೋಗುವುದು,” ಎಂದನು.

ಎರಡನೆಯ ಕುರುಬನು, “ಅಯ್ಯಾ, ಆ ಮೇಲೆ ಸಮುದ್ರ ತೀರವನ್ನು ಬಿಟ್ಟು ಒಳದೇಶಕ್ಕೆ ಹೋಗಬೇಕು. ಇಲ್ಲದಿದ್ದರೆ ಕ್ಷಾಲಕನ ಬಾಯಿಗೆ ಬೀಳುವೆ. ಒಂದು ಕಡೆ ಎತ್ತರವಾದ ಗಿರಿಶಿಖರಗಳು; ಮತ್ತೊಂದು ಕಡೆ ಅಗಾಧವಾದ ಸಮುದ್ರ ! ಇವುಗಳ ನಡುವೆ ಅಗಲಕಿರಿದಾದ ಒಂದೇ ಒಂದು ದಾರಿಯಲ್ಲದೆ ಬೇರೆ ಹಾದಿಯಿಲ್ಲ. ಈ ಮಾರ್ಗವಾಗಿ ಹೋದರೆ ಕ್ಷಾಲಕನು ಸಿಕ್ಕಿಯೇ ಸಿಕ್ಕುವನು. ಬಂದಬಂದವರನ್ನೆಲ್ಲ ಆತನು ಹಿಡಿದು ತನ್ನ ಕಾಲುಗಳನ್ನು ತೊಳೆಸುತ್ತ, ಒದೆದು ಕಡಲಿಗೆ ತಳ್ಳಿ ಬಿಡುವನು.