ಮೋಸದ ಹಾಸು,
ಬೀಳಲಿಲ್ಲ. ಒಂದು ನದಿಯು ಪಾತಾಳ ಲೋಕಕ್ಕೆ ದುಮುಕುವುದೋ
ಎಂಬಂತೆ ಹರಿಯುವ ಶಬ್ದವು ಮಾತ್ರ ಕೇಳಿಸುತಿತ್ತು. ಮಂಜುಗಡ್ಡೆ
ಮುಚ್ಚಿದ ಬೆಟ್ಟ ತಪ್ಪಲುಗಳಿಂದ ಬೀಸುತಿದ್ದ ಗಾಳಿ ತಂಪಾಗಿತ್ತು. ಅಜಿತ
ನಿಗೆ ಇಂಥ ನಿರ್ಜನವಾದ ಪ್ರದೇಶವನ್ನು ಕಂಡು ಮನಸ್ಸು ಕದಲಿ, ತಮ್ಮ
ಅರಮನೆ ಇರುವ ಸ್ಥಳವು ಅಷ್ಟೊಂದು ಉತ್ತಮವಲ್ಲ ವೆಂದು ಕಾಣುತ್ತಿದೆ,
ಅಲ್ಲವೆ? ” ಎಂದು ಕೇಳಿದನು.
“ಹಾಗೇನೂ ಇಲ್ಲ. ಅಲ್ಲಿಗೆ ಹೋದೆವೆಂದರೆ ಎಲ್ಲವೂ ಸರಿಯಾಗು
ವುದು. ಆದರೆ, ಅವರು ಯಾರು ಬರುತ್ತಿರುವವರು ? ಎಂದು ಹೇಳುತ್ತ
ಆ ಅಪರಿಚಿತ ವ್ಯಕ್ತಿಯು ಹಿಂತಿರುಗಿ ನೋಡಿದನು. ದೂರದಲ್ಲಿ ಕೆಲವರು
ಸಾಹುಕಾರರು ಕತ್ತೆಗಳ ಮೇಲೆ ಹೇರು ಹೇರಿಸಿಕೊಂಡು ಬರುತ್ತಿದ್ದರು.
“ಅಯ್ಯೋ, ಪಾಪ! ನಾನು ಹಿಂದಕ್ಕೆ ನೋಡಿದ್ದು ಒಳ್ಳೆಯದಾಯಿತು,
ಈ ಬಂಡೆಗಳ ನಡುವೆ ಅವರೇನು ತಾನೆ ಮಾಡಿಯಾರು ? ನನಗೂ ಅನೇ
ಕರು ಅತಿಥಿಗಳು ಸಿಕ್ಕಿದಂತಾಯಿತು. ಇಂದು ಎಲ್ಲರೂ ಒಟ್ಟಿಗೆ ಕುಳಿತು
ಕೊಂಡು, ಭೋಜನಮಾಡಿ ಸಂತೋಷವಾಗಿರೋಣ. ಇಲ್ಲಿ ಕೊಂಚ
ಇರಿ, ಅವರನ್ನು ಕರೆದುಕೊಂಡು ಬರುತ್ತೇನೆ. ಇಂದು ನನ್ನ ದೆಸೆಯು
ಬೆಳಗುತ್ತಿದೆ. ಒಂದೇ ಸಲ ಎಷ್ಟು ಮಂದಿ ? ಧನ್ಯನೇ ಸರಿ !” ಎಂದು
ಹೇಳಿ, ಆ ಸಾಹುಕಾರರಿಗೆ ಅಲ್ಲಿಯೇ ನಿಲ್ಲುವಂತೆ ಸನ್ನೆ ಮಾಡುತ್ತ ಬೆಟ್ಟದ
ಕೆಳಗಿಳಿದು, ಹೋದನು. ಅಜಿತನು ಮೆಲ್ಲ ಮೆಲ್ಲಗೆ ಮುಂದುವರಿದನು.
ಸ್ವಲ್ಪ ದೂರದಲ್ಲಿ ಒಬ್ಬ ಮುದುಕನು ಮಾರ್ಗದ ಬಳಿ ಇದ್ದ ಒಂದು
ಕಟ್ಟಿಗೆಯ ಹೊರೆಯನ್ನು ಎತ್ತಿ, ತಲೆಯ ಮೇಲಿಟ್ಟು ಕೊಳ್ಳುವುದಕ್ಕೆ ಯತ್ನಿ
ಸುತ್ತಿದ್ದನು. ಅವನು ಅಜಿತನನ್ನು ಕಂಡು, “ಅಯ್ಯಾ, ಯುವಕನೆ, ನನಗೆ
ವಯಸ್ಸು ಮೀರಿಹೋಗಿದೆ. ಕೈಕಾಲುಗಳಲ್ಲಿ ತ್ರಾಣವಿಲ್ಲ. ದಯವಿಟ್ಟು
ಕೊಂಚ ಕೈಕೊಡುವೆಯಾ ?” ಎಂದು ಕೇಳಿದನು.
ಕೂಡಲೇ ಅಜಿತನು ಹೊರೆಯನ್ನು ಅವನ ತಲೆಗೆತ್ತಿದನು. ಮುದು