ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪
ಸತೀಹಿತೈಷಿಣಿ

ಸಿದ್ಧಾನ್ತಿ - "ಅದೀಗ ತಕ್ಕನುಡಿ!" ಎಂದು ಪಂಚಾಂಗವನ್ನು ತಿರುಹಿ
ಹಾಕುತ್ತೆ ಕುಳಿತನು. ವಿನೋದನೂ ಅದಾವುದೋ ವಿಷಯಗ
ಳನ್ನು ಕುರಿತು ಮನದಲ್ಲಿಯೇ ವಿಚಾರಮಾಡುತ್ತೆ ಕುಳಿತನು.
ಹಿಂದೆ ಹೇಳಿರುವಂತೆ ಊಟದ ಮನೆಯ ಕಡೆಯಲ್ಲಿ ಗಿರಿಯಮ್ಮನ
ಜತೆಗಾರ್ತಿಯರೊಡನೆ ಮಹಿಳೆಯರ ಕೂಟವು ಸೇರಿತ್ತು. ಈ ದಿನದ ಸಭೆಗೆ ಗಿರಿಯಮ್ಮನೇ ಅಗ್ರಸ್ಥಾನವನ್ನು ಅ೦೦ಕರಿಸಿದ್ದಳು. ಮೊದಲು ಸಭಿಕರ ಅಡುಗೆ ಊಟ, ಉಪಚಾರಾದಿಗಳ ವಿಚಾರವು ಸ್ವಲ್ಪಮಟ್ಟಿಗೆ ನಡೆಯಿಸಲ್ಪಟ್ಟಿತು. ಅಂದು ಸಭೆಗೆ ಬಾರದಿದ್ದವರ ವಿಚಾರಣೆಯೂ ಸ್ವಲ್ಪ ಮಟ್ಟಿಗೆ ಅತ್ಯಾದರದಿಂದ ನಡೆದು, ಅವರ ಆಗಮನಕ್ಕೆ ಅಭ್ಯಂತರವು ಅಲ್ಲಿದ್ದವರಿಂದೇ ತೀರ್ಮಾನಿಸಲ್ಪಟ್ಟುವು. ಆ ಬಳಿಕ ಎಷ್ಟೋ ವಿಚಾರಗಳು ನಡೆದುವು. ತಿಮ್ಮಕ್ಕನ ಗಂಡನ ಸಂಬಳ - ರಾಮಕ್ಕನ ಬಾವನ ವರಮಾನ ಸೀತಮ್ಮನ ಗಂಡನ ವಿತರಣೆಯಿಲ್ಲದ ಖರ್ಚು - ರುಕ್ಮಿಣಿಯಮ್ಮನ ಮನೆಯ ಅಡುಗೆ - ಅಲಮೇಲಮ್ಮನ ಮನೆಯ ಸಮಾರಾಧನೆಯ ಆದರ - ತಿಮ್ಮಣ್ಣಭಟ್ಟರ ಅಲೆದಾಟ - ಹದಿನಾಲ್ಕು ವರ್ಷವಾದರೂ ಅವಿವಾಹಿತೆಯಾಗಿರುವ ಗೌರಮ್ಮನ ಮಗಳ ವಿಚಾರ - ಕೃಷ್ಣರಾಯರ ಮಗನು ಹನ್ನೊಂದು ವರ್ಷವಾದರೂ ಉಪನಯನಕರ್ಮಹೀನನಾಗಿರುವ ವಿಷಯ - ವಿಧವಾ ವಿವಾಹ - ಸ್ತ್ರೀ ವಿದ್ಯಾಭ್ಯಾಸ -ಇನ್ನೂ ಎಷ್ಟೆಷ್ಟೋ ವಿಷಯಗಳು ಚರ್ಚಿಸಲ್ಪಟ್ಟುವು. ಅವೆಲ್ಲವನ್ನೂ ಹೇಳಬೇಕೆ?

ವಾಚಕರೆ! ಇಷ್ಟಕ್ಕೇ ನೀವು ಬೇಸರಪಟ್ಟಿರಬೇಕಲ್ಲವೆ? ನಾವು ಎಲ್ಲಾ ವಿಷಯಗಳನ್ನೂ, ಅವುಗಳ ತೀರ್ಮಾನಗಳನ್ನೂ ಬರೆವುದಿಲ್ಲ. ಎಷ್ಟೋ ವಿಚಾರಗಳು ನಡೆದುದರಲ್ಲಿ ಸುಶೀಲೆಯ ವೃತ್ತಾಂತವೂ ಹೊರ ಹೊರಟುದು. ಆ ವಿಷಯವು ಮತ್ರ ನಮಗೆ ಬೇಕಾದುದರಿಂದ ಅದನ್ನು ಇಲ್ಲಿ ಉಲ್ಲೇಖಿಸುವುದು. ಆಗ್ರಹವಿಲ್ಲದೆ, ಬೇಸರಗೊಳ್ಳದೆ, ಓದಿದರೆ ಫಲವುಂಟು.