ನಿಮ್ಮ ಮ್ಮನು ನನಗೆ ಸಂಗಾತಿಯಾದುದರಿಂದಲೂ, ನೀನು ಅಭಿ
ವೃದ್ಧಿಗೆ ಬರಬೇಕೆಂಬ ಕುತೂಹಲದಿಂದಲೂ, ನಿನಗೆ ಹಿತವನ್ನು
ಬಯಸಿ, ಬುದ್ಧಿ ಹೇಳಿದುದಕ್ಕೆ, ತಕ್ಕ ಪುರಸ್ಕಾರವನ್ನು ಮಾ
ಡಿದೆಯ ನಾಣ್ಗೆಟವಳೆ ! ನೀನು ಹೇಳುವ ಮಾತುಗಳಿಂದ
ನಾನೇನು ಹೆದರುವೆನೆಂದು ತಿಳಿದೆಯೋ ? ನಿನ್ನನ್ನು ಆ
ನಿಮ್ಮ ಮೈ.........ಈ ನತದೃಷ್ಯನಿಗೆ ಕೊಟ್ಟು ಹಾಳುಮಾಡಿದಳು|
ಪಾಪ ! ನಿನ್ನ ಬಾವ, ಎಷ್ಟೋಬಗೆಯಿಂದ ನಿನ್ನನ್ನು ತನಗೆ
ಮದುವೆಮಾಡಿಕೊಡೆಂದು ನಿಮ್ಮಮನಲ್ಲಿ ಪ್ರಾರ್ಥಿಸಿದರು ; ಕೂಡ
ಲಿಲ್ಲ. ಕೊಟ್ಟಿದ್ದರೆ, ಅವನಷ್ಟು ಸುಖ. .... .......
ಸುಶೀಲೆ, ಮುಂದೆ ಕೋಪವನ್ನು ತಡೆಯಲಾರದೆ ಎದ್ದು ನಿಂತು, ದರ್ಪಿತಸ್ವರದಿಂದ ಹೇಳಿದಳು, “ಗಿರಿಯಮ್ಮ ! ಇನ್ನು ನಿಲ್ಲಬೇಡಿರಿ; ಮನೆಗೆ ನಡೆಯಿರಿ ! ಈ ಮಾತುಗಳನ್ನು ನಾನು ಕೇಳಲಾರೆನು ! ಇನ್ನು ಕ್ಷಣವಾದರೂ ನನಗೆ ಇಲ್ಲಿರಲಾಗದು, ನಿಮ್ಮ ದುರ್ಭಾಷೆಗಳು ನನ್ನ ಹೃದಯ ಭೇದಕಗಳ ಕ್ರೂರನಾರಾಚಗಳಾಗಿವೆ! ದೇವರು ನಿಮಗೆ ಇಂತಹ ಬುದ್ಧಿಯನ್ನೇಕೆ ಕೊಟ್ಟನೊ ? ನಿಮಗಿಷ್ಟು ವಯಸ್ಸಾಗಿದರು ವ್ಯರ್ಥ !! " ಎಂದು ಹೇಳಿ ನಿಲ್ಲದೆ ಮನೆಯೊಳಕ್ಕೆ ಹೊರಟುಹೋದಳು, ಗಿರಿಯಮ್ಮನು, ಮನದಾಗ್ರಹವ್ಯಗ್ರಳಾಗಿ ಬಿರಬಿರನೆ ನೋಡುತ್ತೆ, 'ಎಲೆಲೆ ಕಟವಾಣಿ ! ನಿನ್ನೀ ಅಹಂಕಾರಕ್ಕೆ ತಕ್ಕ ಪ್ರಾಯಶ್ಚಿತ್ತವನು
ನಾನು ಇನ್ನು ಒಂದು ವಾರದೊಳಗಾಗಿಯೇಮಡದಿದ್ದರೆ ನನ್ನ ಹೆಸರು ಗಿರಿಯಮ್ಮನಲ್ಲ ! ಚೆನ್ನಾಗಿ ತಿಳಿದಿರು,' ಹೀಗೆ ಹೇಳಿ ಅಲ್ಲದೆ ಸಲ್ಲದ ದೋಷಾರೋಪದಿಂದ ವಿಷಬೀಜವನ್ನು ನೆಟ್ಟು, ಸ್ವಗೃಹಾಭಿಮುಖಿಯಾಗಿ ಕೊರಟುಕೊರಳು, (ಇಂತಹ ವಿಷಬೀಜವನ್ನು ಬಿತ್ತಿ ಬೆಳೆಯಿಸತಕ್ಕ ಗಿರಿಯಮ್ಮನವರು ಈಗಲೂ, ಅಲ್ಲಲ್ಲಿ ಕಾಣುತ್ತಿರುವರಲ್ಲವೆ ? ಇರಲಿ.)
ಪುಟ:ಸುಶೀಲೆ.djvu/೨೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
2]
ಸುಶೀಲೆ
೯