ಪುಟ:ಸುಶೀಲೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ಶ : * ನಿಮ್ಮ ಮ್ಮನು ನನಗೆ ಸಂಗಾತಿಯಾರುರರಿಂದಲೂ, ನೀನು ಅಧಿ ವೃದ್ಧಿಗೆ ಬರಬೇಕೆಂಬ ಕುತೂಹಲದಿಂದಲೂ, ನಿನಗೆ ಹಿತವನ್ನು ಒಯಸಿ, ಬುದ್ಧಿ ಹೇಳಿದುದಕ್ಕೆ, ತಕ್ಕ ಪುರಸ್ಕರವನ್ನು ಮಾ ಡಿದೆಯ ನಾಣ್ಣೆಟ್ಟವಳೆ ! ನೀನು ಹೇಳುವ ಮಾತುಗಳಿಂದ ನಾನೇನು ಹೆದರುವೆನೆಂದು ತಿಳಿದೆಯೋ ? ನಿನ್ನನ್ನು ಆ ನಿಮ್ಮ ಮೈ.........ಈ ನತದೃಷ್ಯನಿಗೆ ಕೊಟ್ಟು ಹಾಳುಮೂಡಿದಳು| ಪಾಪ ! ನಿನ್ನ ಬಾವ, ಎಷ್ಟೋಬಗೆಯಿಂದ ನಿನ್ನನ್ನು ತನಗೆ ಮ ದುವೆಮಾಡಿಕೊಡೆಂದು ನಿಮ್ಮವನಲ್ಲಿ ಪ್ರಾರ್ಥಿಸಿದರು ; ಕೂಡ ಲಿಲ್ಲ. ಕೊಟ್ಟಿದ್ದರೆ, ಅವನಷ್ಟು ಸುಖ. .... ....... ಸುಶೀಲೆ, ಮುಂದೆ ಕೋಪವನ್ನು ತಡೆಯಲಾರದೆ ಎದ್ದು ನಿಂತು, ದರ್ಪಿತಸ್ವರದಿಂದ ಹೇಳಿದಳು, “ಗಿರಿಯಮ್ಮ ! ಇನ್ನು ನಿಲ್ಲಬೇಡಿರಿ; ಮನೆಗೆ ನಡೆಯಿರಿ ! ಈ ಮಾತುಗಳನ್ನು ನಾನು ಕೇಳಲಾರೆನು ! ಇನ್ನು ಕ್ಷಣವಾದರೂ ನನಗೆ ಇಲ್ಲಿರಲಾಗದು, ನಿಮ್ಮ ದುರ್ಭಾಷೆಗಳು ನನ್ನ ಹೃದಯ ಭೇದಕಗಳ«ದ ಕರನಾರಾಚಗಳಾಗಿವೆ ! ದೇವರು ನಿಮಗೆ ಇಂತಹ ಬುದ್ಧಿಯನ್ನೇಕೆ ಕೊಟ್ಟನೋ ? ನಿಮಗಿಷ್ಟು ವಯಸ್ಸಾ ದುದೆ ವ್ಯರ್ಥ !! " ಎಂದು ಹೇಳಿ ನಿಲ್ಲದೆ ನೆಲೆಸಳಕ್ಕೆ ಹೊರಟುಹೋದಳು. ಗಿರಿಯಮ್ಮನು, ಮನದಾಗ್ರಹವ್ಯಗ್ರಳಾಗಿ ಬಿರಬಿರನೆ ನೋಡುತ್ತೆ, 'ಎಲೆಲೆ ಕಟವಾಣಿ ! ನಿನ್ನೀ ಅಹಂಕಾರಕ್ಕೆ ತಕ್ಕ ಪ್ರಾಯಶ್ಚಿತ್ರವನ್ನು ನಾನು ಇನ್ನು ಒಂದು ವಾರದೊಳಗಾಗಿಯೇಮಾಕದಿದ್ದರೆ ನನ್ನ ಹೆಸರು ಗಿರಿಯಮ್ಮನಲ್ಲ ! ಚೆನ್ನಾಗಿ ತಿಳಿದಿರು,' ಹೀಗೆ ಹೇಳಿ ಅಲ್ಲದೆ ಸಲ್ಲದ ರೋಷಾರೋಪದಿಂದ ವಿಷಬೀಜವನ್ನು ನೆಟ್ಟು, ಸ್ವಗೃಹಾಭಿಮುಖಿಯಾಗಿ ಕೊರಟುಕೊರಳು, (ಇಂತಹ ವಿಷಬೀಜವನ್ನು ಬಿತ್ತಿ ಬೆಳೆಯಿಸತಕ್ಕ ಗಿರಿಯಮ್ಮನವರು ಈಗಲೂ, ಅಲ್ಲಲ್ಲಿ ಕಾಣುತ್ತಿರುವರಲ್ಲವೆ ? ಇರಲಿ.)