ಮಾತ್ರವೇ ಸಂಕುಚಿತ ಮನೋಭಾವದ ಮುರುಟು ಬಂಧನದಿಂದ ಮನುಷ್ಯ
ನನ್ನು ಬಿಡುಗಡೆ ಮಾಡಬಲ್ಲುದು......"
_ಎಂದು ನುಡಿದನು.
ಈ ಬಗೆಯ ಉದಾತ್ತ ವಿಚಾರ ಸರಣಿಯೂ ಆಚರಣೆಯೂ ಈ
ದೇಶದಲ್ಲಿದ್ದುವು. ಇದು, ಭಾರತೀಯ ಜನಕೋಟಿಯನ್ನು ಒಂದಾಗಿ ಬಿಗಿಯ
ಬಯಸಿದ ಸೂತ್ರ.
ಇಂತಹ ಭವ್ಯತೆಯಿದ್ದೂ ಈ ದೇಶ ಪಾರತಂತ್ರ್ಯದ ಸಂಕೋಲೆಗಳಿಂದ
ಬಂಧಿತವಾದುದು ಒಂದು ದುರಂತ. ದಾಸ್ಯದ ದುರ್ಭರ ಜೀವನವನ್ನು
ನಡಸಿದ ಬಳಿಕ ಭಾರತ ಈ ಶತಮಾನದಲ್ಲಿ ಮತ್ತೊಮ್ಮೆ ಸ್ವತಂತ್ರವಾಗ
ಲೆಳಸಿತು. ಮಹಾತ್ಮನೊಬ್ಬ ಆ ಸಾತಂತ್ರ ಸಮರದ ನಾಯಕನಾದ.
ಅತ್ಯಂತ ಪ್ರಾಚೀನವಾದ ಸತ್ಯ ಅಹಿಂಸೆಗಳ ಬೋಧನೆಯ ಕುಲಿಮೆಯಲ್ಲಿ
ತೀರಾ ಹೊಸದೆನಿಸಿದ ಆಯುಧವೊಂದನ್ನು-ಸತ್ಯಾಗ್ರಹ-ಆತ ಸಿದ್ಧಗೊಳಿಸಿದ.
ಸುಮಾರು ಮೂರು ದಶಕಗಳ ಹೋರಾಟದ ಬಳಿಕ ಭಾರತ
ಸ್ವತಂತ್ರವಾಯಿತು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ತನ್ನ ಹಿರಿಯ
ಬದುಕನ್ನು ಮತ್ತೊಮ್ಮೆ ಬಾಳಲು ಅದು ಅಣಿಯಾಯಿತು.
ಈ ಶತಮಾನದ ಮಹಾ ಸಂಭವಗಳಲ್ಲೊಂದು, ಸ್ವತಂತ್ರ ಭಾರತದ
ಉದಯ.
೧೯೪೭ ರ ಆಗಸ್ಟ್ ೧೪ ರ ರಾತ್ರೆ ನಡುವಿರುಳು ಸಮಿಾಪಿಸುತ್ತಲಿ
ದ್ದಂತೆ, ನವದೆಹಲಿಯಲ್ಲಿ ಲೋಕಸಭಾ ಭವನದಲ್ಲಿ ರಾಷ್ಟ್ರನಾಯಕ ಜವ
ಹರಲಾಲ ನೆಹರೂ ಆಡಿದ ನುಡಿ ಇದು :