ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು /ಶೋಷಣೆ, ಬಂಡಾಯ ಇತ್ಯಾದಿ... ೪೪೧

ಧ್ವನಿಯಲ್ಲಿ ದಲಿತರ ಉದ್ಧಾರಕ್ಕಾಗಿ ಹೋರಾಡುವ ಧುರೀಣೆಯ ಕಾವು ಒಮ್ಮೆಲೆ ಏರಿತು: "ಛೀ,ಇದೇನು ಸಾಧಿಸಿದ ಹಾಗಾಯಿತು? ಗಂಡ ಇನ್ನೊಬ್ಬಳ ಕೂಡ ಮಜಾ ಮಾಡುವಾಗ ಸುಮ್ಮನೆ ಕೂತು ಹ್ಯಾಗೆ ನೋಡುತ್ತಾಳೋ, ಹ್ಯಾಗೆ ತಾಳಿಕೊಳ್ಳುತ್ತಾಳೋ ಈ ಪೆದ್ದಿ ರೋಶನ್! ಬಿಟ್ಟು ಹೋದವಳು ನಾಚಿಕೆ ಬಿಟ್ಟು ಹೀಗೆ ತಿರುಗಿ ಬಂದಳ್ಳಾಕೆ? ನಾಲ್ಕು ಜನರನ್ನು ಮಧ್ಯಸ್ಥಿಕೆಗೆ ಕೂಡಿಸಿದವಳು ಎಲ್ಲರ ಎದುರಿಗೆ ಆತ ತಿಂಗಳಾ ತನ್ನ ಪಗಾರ ಇವಳಿಗೇ ತಂದು ಕೊಡಬೇಕೆಂದಾದರೂ ಹಟ್ಟ ಹಿಡಿಯಬಾರದೆ? ಡಾಕ್ಟರ್, ಇದಕ್ಕೇ ನೋಡ್ರಿ ನನ್ನ ಮೈ ಉರಿಯುವುದು. ನಮ್ಮ ಬಹುಪಾಲು ಹೆಣ್ಣುಮಕ್ಕಳಿಗೆ ತಮ್ಮ ರೈಟ್ಸ್ ಬಗ್ಗೆ ಅರಿವೇ ಇಲ್ಲ. ತಮ್ಮ ಮೇಲೆ ಸದಾ ನಡೆದಿರುವ ಶೋಷಣೆಯ ಬಗ್ಗೆ ತಿಳುವಳಿಕೆಯೇ ಇಲ್ಲ. ಇನ್ನು ಇವರ ವಿರುದ್ಧ ಬಂಡೇಳುವ ಮಾತಂತೂ ದೂರವೇ ಉಳೀತು."

   ಮಾಲಿನಿಬಾಯಿಯ ಲೆಕ್ಚರಿನ ಅಲ್ಪಸ್ವಲ್ಪ ಅರ್ಥವಾಗಿದ್ದ ರೋಶನ್ ಬಿ

ಅಂದಳು. "ನಿಮ್ಹಾಂಗ ಸಾಲೀಕಲ್ತಿದ್ರು ನಾವೂ ಎದುರು ಬೀಳತಿದ್ದಿವ್ರಿ ಗಂಡಗ. ಹೇಳಿ ಕೇಳಿ ಮಂದೀ ಮನಿ ಮುಸುರೀ ತಿಕ್ಕಿ ಹೊಟ್ಟೀ ಹೊರಕೊಳ್ಳವ್ರು ನಾವು. ಗಂಡನ್ನ ಬಿಟ್ಟು ಹೋದ್ರ ಮಂದಿ ಛೀ ಅಂತಾರು. ನನ್ನ ಆರು ಮಂದಿ ಹೆಣ್ಣುಮಕ್ಕಳ ಮದಿವೀ ಯಾರು ಮಾಡವ್ರು? ಗಂಡ್ಸು ಏನಾಡಿದ್ರೂ ನಡೀತೈತಿ ಬಾಯೀ, ಹೆಂಗಸು ಎಚ್ಚರದಿಂದ ಹೆಜ್ಜೆ ಹಾಕ್ಬೇಕು ನೋಡ್ರಿ."

   ರೋಶನ್ಬೀಯನ್ನು ಬಿಟ್ಟು ಶಶಿಯ ಕಡೆ ತಿರುಗಿ ಲೆಕ್ಚೆರು ಮುಂದುವರಿಸಿದಳು ಮಾಲಿನಿಬಾಯಿ."ನೋಡಿದ್ರಾ ಡಾಕ್ಟರ್? ನಮ್ಮ ದೇಶದಾಗ ಗಂಡಸ್ರಿಗೆ ಒಂದು ಬ್ಯಾರೇನ ಕೋಡ್ ಆಫ್ ಕಾಂಡಕ್ಟ್, ಹೆಂಗಸ್ರಿಗೆ ಒಂದು ಬ್ಯಾರೇನ್ಸ.ಸ್ವತಃ ಹೆಂಗಸ್ರೇ ಇದನ್ನ ಒಪ್ಪಿಕೊಂಡು ಬಿಟ್ಟಾರ.ಅದಕ್ಕೇ ಗಂಡಸ್ರಿಗೆ ಅನ್ಯಾಯ, ಆತ್ಯಾಚಾರದ ಮಾರ್ಗ ಮೋಕಳೀಕ ಆಗ್ಯಾವ. ಇದರ ವಿರುದ್ಧ ಹೋರಾಡಬೇಕಂತೀನಿ ನಾನು. ನಮ್ಮ ಹೆಂಗಸ್ರಿಗೆ ತಾವು ಕಳಕೊಂಡಿರೋ ಹಕ್ಕುಗಳ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ತಿಳುವಳಿಕಿ ತಂದುಕೊಡಬೇಕಂತೀನಿ.ಈ ರೋಶನ್ಳಂಥಾ ಹೆಂಗಸ್ರಿಂದೇ ನಮ್ಮ ದೇಶದಾಗಿನ ಗಂಡಸ್ರು ಅಟ್ಟಾ ಏರಿ ಕೂತು ಹೆಂಗಸ್ರನ್ನ ಕಾಲಕಸಾ ಆಗಿ ಕಾಣತಿರೋದು...."
     -ಶಶಿ ಯೋಚಿಸುತ್ತಿದ್ದಳು- ಈ ಮಾಳಿನಿಬಾಯಿಯ ಗಂಡನ ಕಾಲು ಕುಂಟಾಗಿರದೇ. ಆತ ಹೃದಯರೋಗಿಯಾಗಿರದೇ, ಆತ ಹಾಸಿಗೆ ಹಿಡಿಯದೇ ಹೋಗಿದ್ದರೆ, ಆತ ಗಟ್ಟಿಮುಟ್ಟಾಗಿ ಓಡಾಡಿಕೊಂಡು ಮೆಹಬೂಬನ ಹಾಗೆ ಹೊರಗೊಬ್ಬ ಗಿಂಡತಿಯನ್ನು ಇಟ್ಟುಕೊಂಡಿದ್ದರೆ, ನೀನೇನು ಊರು-ಹೊಲಗೇರಿ ಒಂದು ಮಾಡಿದರೂ ನಾನು ಅವಳನ್ನು ಬಿಡುವುದಿಲ್ಲ ಅನ್ನುವಂತಿದ್ದರೆ.... ಆಗಲೂ