ಉಳಿದಿದ್ದು ಬರಿ ಕತ್ತಲು...
'ಇಲ್ಲ' ಎಂದು ದೇಸಾಯಿಗೆ ಹೇಳಬೇಕೇನು?
"ತಿರುಗಿ ಹೊಗಲಿಕ್ಕೆ ಕತ್ತಲಾಗತದ...."
"ಅದಕ್ಯಾಕ ಚಿಂತಿ? ನಾ ಕಳಿಸಲಿಕ್ಕೆ ಬರ್ತಿನಿ."
ವಾಹ್, ದೇಸಾಯಿ ಎಷ್ಟು ಫಾರ್ ವರ್ಡ್ ಆಗಿರುವನಲ್ಲ, ಎಂದು ಅವಳಿಗೆ
ನಗೆ ಬಂದಿತು.
ಸಂಜೆಯ ತನಕವವೂ ಅವಳು ವಿಚಾರ ಮಾಡುತ್ತಲೇ ಇದ್ದಳು. ಫಿಲ್ಮ ಶೋದಲ್ಲಿ
ಎಂದಿಲ್ಲದೇ ಇಂದೇಕೆ ಆಸಕ್ತಿ ಬಂದಿತು ತನಗೆ? ಯಾಕೆ ಮತ್ತೆ
ಸಣ್ಣ ಹುಡುಗಿಯಾಗಬೇಕು ಅನೆಸುತ್ತದೆ. ತನ್ನನ್ನು ದೇಸಾಯಿಯ ಜೊತೆ ರಾತ್ರಿ
ನೋಡಿದ ಯಾರಾದರೂ ವಿದ್ಯಾರ್ಥಿಗಳು ನಾಳೆ ಕಾಲೇಜಿನಲ್ಲಿ ಸುಮ್ಮನೆ ಗದ್ದಲ
ಮಾಡಬೇಕು.... ಛೆ, ಇಂಥದರಲ್ಲಿ ಆನಂದಿಸುವ ದಿನಗಳು ಇನ್ನೂ
ಕಳೆದುಹೋಗಿಲ್ಲವೆ? ಈಗ ಈ ಎಲ್ಲದರಿಂದ ದೂರವಾಗುವ ಪ್ರಬಲ
( ಪ್ರಾಮಾಣಿಕ?) ಇಚ್ಛೆಯುಂಟಾಗಿದೆ. ಕಂಡ ಕಂಡ ಮುಠ್ಠಾಳರ ಕಣ್ಣುಗಳಲ್ಲಿನ
ಮುಳ್ಳುಗಳಿಂದ ಚ್ಚುಚ್ಚಿಸಿಕೊಂಡು-ಚ್ಚುಚ್ಚಿಸಿಕೊಂಡು ಹೇಸಿಹೋಗಿದೆ. ಸಾಧ್ಯವಾದಷ್ಟು
ಬೇಗ ಇದರಿಂದ ಮುಕ್ತವಾಗಬೇಕು..... ಹೌದು....
ಹಾಗಾದರೆ ದೇಸಾಯಿ' ಹ್ಞೂ' ಅಂದದ್ದೇಕೆ?
ಥೂ, ಇಂಥ ಉಪಯೋಗವಿಲ್ಲದ ವಿಚಾರಗಳಿಂದಲೇ ನನ್ನ ತಲೆ ಅರ್ಧ
ಬೆಳ್ಳಗಾದದ್ದು. ಇದನ್ನಿನ್ನು ಬಿಟ್ಟುಬಿಡಬೇಕು.
"ಎಕ್ಸಕ್ಯೂಜ್ ಮಿ ಮಿಸ್ ಶಾಂತಿ, ಬ್ಯಾಡ್ಮಿಂಟನ್ ಆಡಲಿಕ್ಕೆ ಬರ್ತೀರೇನು?"
-ಹೊಸದಾಗಿ ಲೆಕ್ಚರರ್ ಆಗಿ ಸೇರಿದ, ಪುಣೆಯಿಂದ ಬಂದಿದ್ದ ಹುಡುಗ,
ವಡಗಾಂವಕರ. ಇನ್ನೂ ಸಣ್ಣವನಿದ್ದಾನೆ. ಇರಲಿ, ಇಂಥವರ ಗೆಳತನ ಕುತ್ತಿಗೆಗೆ
ಬರುವುದಿಲ್ಲ.
ಪಟ್-ಪಟ್ ಎಂದು ಒಂದರಮೇಲೊಂದರಂತೆ ಶಾಂತಿ ಶಾಟ್ ಹೊಡೆದಾಗ
ಆಟ ನಿಲ್ಲಿಸಿ ಹೇಳಿದ ವಡಗಾಂವಕರ, "ನಿಮ್ಮ ಆಟ ಎಕ್ಸಲೆಂಟ್! ನಾಳಿನ
ಟೂರ್ನಾಮೆಂಟಿನ್ಯಾಗ ನನ್ನ ಪಾರ್ಟನರ್ ಆಗ್ತೀರೇನು, ಪ್ಲೀಜ್?
"
-ಟೂರ್ನಾಮೆಂಟ್ಸಿನಲ್ಲಿ ಪಾರ್ಟನರ್ ಆಗಬೇಕಂತೆ. ಟೂರ್ನಾಮೆಂಟ್ಸು
ಮುಗಿದ ನಂತರ? ಅವನ್ಯಾರೋ ತ್ಯಾನ್ಯಾರೋ?
-ಟೂರ್ನಾಮೆಂಟ್ಸಿನ್ಯಾಗss?" ಎಂದಳು ಶಾಂತಿ.
ಪೆಚ್ಚು ಪೆಚ್ಚಾಗಿ ಮುಖ ನೋಡಿದ ಆತ, "ಹ್ಞೂ, ಯಾಕ? ನೀವು ಈಗಾಗಲೇ
ಪುಟ:ನಡೆದದ್ದೇ ದಾರಿ.pdf/೨೩
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೧೬
ನಡೆದದ್ದೇ ದಾರಿ