೩೬೬ ನಡೆದದ್ದೇ ದಾರಿ
೪
ಒಂದು ಸಂಜೆ ಶಾಮ್ತಿ ತನ್ನ ಮನೆಯಲ್ಲಿ ಸುಮ್ಮನೇ ಒಬ್ಬಳೇ ಕೂತಿದ್ದಾಗ ಲೂಸಿ
ಫರ್ನಾಂಡಿಸ್ ಬಮ್ದಳು. ಶಾಂತಿಗೆ ಆಶ್ಚರ್ಯ. ಲೂಸಿಯ ಜೊತೆ ಕೆಲಸ ಮಾಡುತ್ತಿದ್ದಾಗಲೇ ಅವಳೆಂದೂ 'ಹಲೋ ಹಲೋ' ಬಿಟ್ಟು ಹೆಚ್ಚಿಗೆ ಮಾತಾಡಿರಲಿಲ್ಲ. ಈಗಂತೂ ಆಕೆ ಶಾ ಚಂದರ ಫರ್ಮಿನ ಕೆಲಸ ಬಿಟ್ಟೇ ಆರು ತಿಂಗಳಾಗಿತ್ತು. ಈಗೇಕೆ ತನ್ನನ್ನು ಕಾಣಲು ಲೂಸಿ ಬಂದಿರಬಹುದು ಆಕೆಗೆ ತಿಳಿಯಲಿಲ್ಲ.
"ಹಲೋ ಶಾಂತಿ, ಆಶ್ಚರ್ಯ ಆತಲ್ಲವೇ ಈ ದೆವ್ವ ಎಲ್ಲಿಂದ ಬಂತು ಅಂತ?
ನಿನ್ನ ಮನೆಯ ಮೇಲಿನ ಫ್ಲೋರಿನಲ್ಲಿ ನನ್ನ ಕಜಿನ್ ಇದ್ದಾನೆ. ಅವನನ್ನು ನೋಡಲು ಬಂದೆದ್ದೆ. ತಿರುಗಿ ಹೋಗುವಾಗ ನಿನ್ನ ನೇಮ್ಪ್ಲೇಟ್ ನೋಡಿ ಒಳಗೆ ನುಗ್ಗಿದೆ. ಬೇಸರವಿಲ್ಲ ತಾನೇ?" -ಲೂಸಿ ಸ್ವಚ್ಛ ಇಂಗ್ಲಿಶ್ನನಲ್ಲಿ ಕೇಳಿದಳು.
"ಛೇ,ಛೇ, ಬೇಸರ ಏಕೆ? ನೀನು ಬಂದದ್ದು ಸಂತೋಷ" ಅಂದಲು ಶಾಂತಿ. ಮುಂದೆ ಹತ್ತು ನಿಮಿಷಗಳಲ್ಲಿ ಅವಳಿಗೆ ಲೂಸಿಯ ಬಗ್ಗೆ ಒಂದು ಬಗೆಯ
ಪ್ರೀತಿ ಉಂಟಾಯಿತು. ಚೆಲ್ಲೆಂದು, ಸೊಕ್ಕಿನಲಳೆಮ್ದು, ವಿಪರೀತ ಫ್ಯಾಶನ್ನಿನವಳೆಂದು. ಬಣ್ಣದ ಚಿಟ್ಟೆಯೆಂದು ತಾನು ಜುಗುಪ್ಸೆಗೊಂಡಿದ್ದ ಈ ಕ್ರಿಶ್ಚಿಯನ್ ಹುಡುಗಿಯ ಮನಸ್ಸು ಎಷ್ಟು ಸರಳವಾಗಿದೆ. ಮೊದಲೇ ತನಗಿದು ತಿಳಿದಿದ್ದರೆ ಈ ಹೊತ್ತಿಗೆ ವಿಶಾಲ ಮುಂಬೈಯಲ್ಲಿ ಏಕಾಕಿಯಾಗಿರುವಾಗ ತನಗೊಬ್ಬಳು ಗೆಳತಿಯೆಮ್ದಾದರೂ ಆಗುತ್ತಿದ್ದಳಲ್ಲ. ಅನಿಸಿತು. ಚಹಾ ಕುಡಿಯುತ್ತ ಲೂಸಿ ಕೇಳಿದಳು. "ಬೇರೆ ಕೆಲಸಕ್ಕೆ ಪ್ರಯತ್ನಿಸುತ್ತಿದ್ದೀಯಾ?"
"ಹೌದು, ಇದ್ದ ಹಣ ಖರ್ಚಾದುದಲ್ಲದೆ ಒಂದೆರಡು ಒಡವೆಗಳೂ ಕೈಬಿಟ್ಟು
ಹೋದವು. ಏನಾದರೂ ಮಾಡಲಿಕ್ಕೇ ಬೇಕು, ಏನು ಮಾಡಲಿ? ಕೆಲಸ ಸಿಗುವುದು ಎಷ್ಟು ಕಠಿಣ ಗೊತ್ತಿದೆ."
ಒಂದು ಕ್ಷಣ ವಿಚಾರಿಸಿ ಲೂಸಿ ಹೇಳಿದಳು. "ಹಾಗಿದ್ದರೆ ನನ್ನ ಕೂಡ ನಮ್ಮ
ಪಾರ್ಟಿ ಆಫೀಸಿಗೆ ಬಾ. ನಮ್ಮ ಲೀಡರ್ ನಿನಗೆ ಹೆಲ್ಪ್ ಮಾಡಬಹುದು."
"ಯಾವ ಪಾರ್ಟಿ ? ಆಫೀಸೆಂಟಥದು? ಲೀಡರ್ ಯಾರು" -ಶಾಂತಿಗೆ ಈ
ಶಬ್ದಗಳು ತುಂಬ್ ಕ್ರಾಂತಿಕಾರಿ ಅನಿಸಿದವು.