ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇನ್ನಷ್ಟು ಕತೆಗಳು / ದೆವ್ವ ೪೭೩

  ತಮ್ಮೆಡೆ ದಿಟ್ಟಿಸಿ ನೋಡುವ ಹುಡುಗಿಯರ ಕಣ್ಣಲ್ಲಿನ ಒತ್ತಿ ಹಿಡಿದ ಅಸೂಯೆ ಕಂಡು ಆನಂದಿಸಬಹುದು ....
   "ವ್ಹಾ,ಅಗದಿ ಛೆ೦ದ ಕಾಣಸ್ತೀ ಇವತ್ತ.ಪ್ರಸಿದ್ಧ ನಾಟಕಕಾರನ ಹೆಂಡತಿ ಅಂದರ 
ಹೇಂಗಿರಬೇಕು" -ಎಂದು ನಾಟಕೀಯವಾಗಿ ಬರಸೆಳೆದು ಮುತ್ತಿಟ್ಟು ದೂರ ಸರಿಸಿದ ಆತ.
    ಅವಳ ತಲೆಯ ಖೊಬ್ಬರಿ ಎಣ್ಣೆಯ ವಾಸನೆ ಗಂಮೆಂದು ಮೂಗಿಗೆ ಬಡಿಯಿತು.
ಅವಳು ದೂರವಾದಾಗ ಅದು ಮೂಗಿನಿಂದ ಮೇಲೆ-ಮೇಲೆ ಸರಿಯುತ್ತ ತಲೆಯೊಳಗೆ ಬಂದಿತು.ಮೆದುಳಿನ ಒಳಗೆ -ತೀರ ಒಳಗೆ ಎಲ್ಲೋ ಹುದುಗಿಕೊಂಡಿದ್ದ ಈವ್ಹನಿಂಗ್ -ಇನ್ -ಪ್ಯಾರಿಸ್ ನ ವಾಸನೆಯನ್ನು ಬಡಿದೆಬ್ಬಿಸಿತು.
    ಈವ್ಹನಿಂಗ್ -ಇನ್ -ಪ್ಯಾರಿಸ್..ಮತ್ತು ಬರಿಸುವ, ಸೂಕ್ಷ್ಮವಾದ ಎಂಥದೋ ಚಡಪಡಿಕೆಯುಂಟು ಮಾಡುವ ಪರಿಮಳ ....
     "ಈ ಸೆಂಟ್ ನನಗೆ ಬಹಳ ಇಷ್ಟ"ವೆಂದು ಹೇಳುತ್ತ ತಾನು ಸಮೀಪ ಸರಿದಾಗ,
"ಹೀಗೇನು?" ಎಂದು ನಗುತ್ತ ದೂರ ಸರಿದಿದ್ಧಳು ಆ ಬಡಿವಾರದ ಹುಡುಗಿ, ಸ್ವಪ್ನ ದೇಶಪಾಂಡೆ.
   ತನಗೆ ಅಪಮಾನವಾದರೂ ತನ್ನ ಗಮನಕ್ಕೆ ಅದು ಬಂದಿಲ್ಲವೆಂದು ನಟಿಸುತ್ತ ಅಂದಿದ್ಧ  ಆತ, "ನಿಮ್ಮ ಕೂಡ ಇದ್ದಾಗ ಏನೋ ಕನಸಿನೊಳಗಿದ್ದಂತೆ ಅನಿಸುವುದು." ಇಷ್ಟಕ್ಕೆಲ್ಲ  ಜಗ್ಗುವ-ಬಗ್ಗುವ  ಹುಡುಗಿಯಾಗಿರಲಿಲ್ಲ  ಆಕೆ : "ನೀವು  ಸಾಹಿತಿಗಳು, ಕನಸಿನಲ್ಲಿ ಕಂಡದ್ದನ್ನ ಎಚ್ಚರವಾದಾಗ  ಮರೆತು ಬಿಡುತ್ತೀರಿ  " ಎಂದು ಹಾಸ್ಸ್ಯ ಮಾಡಿದ್ದಳು. ಕೈ ಕುಲುಕಲೆಂದು ತಾನು ಕೈ ಚಾಚಿದಾಗ, 'ನಮಸ್ತೆ' ಎಂದು  ಕೈ ಜೋಡಿಸಿ ಮತ್ತೆ ನಕ್ಕು ಮಾಯವಾಗಿದ್ದಳು ...  
     'ಭಲೆ ಹುಡುಗಿ' ಎಂದುಕೊಂಡಿದ್ದ ತಾನು. ಸಿಟ್ಟು ಬಂದರೂ ಅವಳ ಬಿಗುವಿಗಾಗಿ-ಸೊಕ್ಕಿಗಾಗಿ ಮೆಚ್ಚಿಗೆಯಾಗಿತ್ತು. ಇಂಥ ಹುಡುಗಿಯನ್ನು ಒಲಿಸಿಕೊಂಡು ಇವಳು ತನಗಾಗಿ ಒದ್ದಾಡುವಂತೆ ಮಾಡಿದರಲ್ಲವೆ ಜೀವನ ಸಾರ್ಥಕ, ಅನ್ನಿಸಿತ್ತು. ಅನಿಸಿದ ತಕ್ಷಣ ಕಾರ್ಯೋನ್ಮುಖನಾಗಿದ್ದ ಆತ....
     "ಹೋಗೋಣಾನ್ರೀ ? ನೀವೇನೂ ತಯಾರಾಗೇ ಇಲ್ಲಲ್ಲ?" -ಅಡಿಗೆಮನೆಯಿಂದ ಕೂಗಿ ಕೇಳಿದಳು ಹೆಂಡತಿ.
      ಈ ಹೆಂಡತಿ ಪೆದ್ದಿಯೆನಿಸಿದರೂ  ತನ್ನ ಕಲ್ಪನೆಯಲ್ಲಿ ತನಗೇನಾದರೂ ಅವಮಾನಕರ ಪ್ರಸಂಗ ಬಂದಾಗ ಒಮ್ಮೆಲೆ ಏನಾದರೂ ಮಾತಾಡಿ ತನ್ನನ್ನು ವಾಸ್ತವ ಜಗತ್ತಿಗೆಳೆತರುತ್ತಾಳೆ ; ಅವಮಾನದ ಪ್ರಸಂಗ ತಪ್ಪಿಸುತ್ತಾಳೆ. ಅವಳಿಗೆ ಅದರ ಅರಿವೂ