ಬೆರಳಾಡಿಸುತ್ತ, ಸ್ವಲ್ಪ ಭಾರವಾದ ಧ್ವನಿಯಲ್ಲಿ ಆತ ಹೇಳುತ್ತಿದಾಗ ಆಕೆಗೆ ತ್ಯಾಗ-ಋಣ-ಸಹನೆ-ಬಡ್ಡಿ ಎಲ್ಲ ಮರೆತೇ ಹೋಗಿರುತ್ತಿತ್ತು. -'ನನಗ ಗೊತ್ತಾಗತದ ಮಿನಿ.. ಎಲ್ಲಾ ಹೆಣ್ಮಕ್ಕಳ ಹಾಂಗ ಗಂಡಾ-ಮಕ್ಕಳ್ನ ಕಟಿಗೊಂಡು ಯಾರ ಹೆದರಿಕೀನೂ ಇಲ್ಲದ ಆರಾಮಾಗಿರಬೇಕು ಅಂತ ನಿನಗೂ ಆಶಾ ಅದ. ನಂದೂ-ನಿಂದೂ ಪ್ರೀತಿ ಖರೇ ಇದ್ದರ ಇದೂ ಸಾಧ್ಯ ಆಗೋ ದಿನಾ ಬಂದs ಬರ್ತದಂತ ನನಗ ನಂಬಿಕಿ ಅದ. ನೀ ಅಂತೂ ಆ ನಂಬಿಕೀ ಮ್ಯಾಲs ಬದುಕೀ. ಆ ನಂಬಿಕಿ ಖರೇ ಆದೀತು ಒಂದಿನಾ. ಯಾರ ಕಂಡಾರ ಭವಿಷ್ಯ?' -'Sorry ಮಿನಿ. ಈ ಸರೆ ಎರಡ ತಿಂಗಳತನಕಾ ನಿನ್ನ ಕಡೇ ಬಡ್ತಿಕಾಗ್ಲಿಲ್ಲ - ನೀ ಹಾದೀ ಕಾಯಿರತೀ ಅಂತ ಗೊತ್ತಿದ್ದೂ ರಾಜೂನ್ನ ಕಾಲೇಜಿಗೆ ಹೆಸರ ಹಚ್ಚಿಸೋ ಗಡಿಬಿಡಿ ; ಶಾ೦ತಾಗ ಬ್ಯಾರೆ ಇತ್ತಿತ್ಲಾಗ ಬ್ಲಡ್ ಪ್ರಶರ್ ದ ತ್ರಾಸು ಸುರುವಾಗೇದ; ಮನೀ ಕಟ್ಟಿಸೋ ಕೆಲಸ ನಡದsದ. ಇಷ್ಟೆಲಾ ಇದ್ರೂ ಏನೇನೋ ನೆವಾ ಹೇಳಿ ಹಾಂಗ ತಪ್ಪಿಸಿಕೊಂಡ ಬಂದೀನಿ ನೋಡು. ನನಗ ಗೊತ್ತಿತ್ತು ನೀ ಕಣ್ಣಾಗ ಜೀವಾ ಇಟಗೊಂಡು ಕಾಯ್ತಿರತೀ ಆಂತ. ಆದಕ್ಕs ಓಡಿ ಬಂದೆ. ನನಗ ಯಾತರದೂ ಅಂಜಿಕಿಲ್ಲ ನಿನ್ನ ಕಡೆ ಬರಲಿಕ್ಕೆ.... I am a brave man." -'ಮಿನಿ, ನೀ ಸಿಟ್ಟಾಗದಿದ್ರೆ ಒಂದ ಮಾತ ಹೇಳ್ತೀನಿ. ನಾಳಿನ ರವಿವಾರ ನಮ್ಮ ಮಹಾಬಳೇಶ್ವರದ ಪ್ರೋಗ್ರಾಂ ಇತ್ರಲ್ಲ, ಅದನ್ನ postpone ಮಾಡೂಣು. ಶಾಂತಾ ಏನೋ ನಮ್ಮ ಕುಲದೇವರಿಗೆ ಹರಕೀ ಹೊತ್ತಾಳಂತ ನನ್ನ ಪ್ರಮೋಶನ್ ಸಲುವಾಗಿ. ಅದನ್ನ ಮುಟ್ಟಸಬೇಕಾಗೇದ. ನೀ ಸಿಟ್ಟಾಗೂದಿಲ್ಲಲ್ಲ? ನನಗ ಗೊತ್ತದ - ನಿನಗ ಭಾಳ understanding ಅದ. ಇಷ್ಟ understanding, ಇಷ್ಟ co-operation ನಾ ಶಾಂತಾನಿಂದ expect ಮಾಡ್ಲಿಕ್ಕೇ ಶಕ್ಯ ಇಲ್ಲ....ಯಾಕ, ಕೆಟ್ಟನಿಸಿತೇನು ? ನಿನಗ ಮಹಾಬಳೇಶ್ವರದ ಬಗ್ಗೆ ಭಾಳ ಉತ್ಸಾಹ ಇತ್ತಲ್ಲS? ಭಾಳ ತಯಾರೀನೂ ಮಾಡೀದಿ. ನಿನಗ ಕೆಟ್ಟನಸೋದು ನನಗ ಗೊತ್ತಾಗತದ. ಮಿನಿ, ನಾ ಕಲ್ಲು ಅಲ್ಲ ನೊಡು..." - ಆತನಿಗೆ ಖರೇ ಸಹಾನುಭೂತಿ ಇತ್ತು ಅನುಕಂಪ ಇತ್ತು; ಆತ ಕಲ್ಲೆಂದು ಆಕೆಗೆ ಒಮ್ಮೆಯೂ ಅನಿಸಲಿಲ್ಲ. ಆಕೆಗೆ ನಡುಮಧಾಹ್ನದಲ್ಲೇ ಕಣ್ಣು ಮುಚ್ಚತೊಡಗಿದವು. ಕಣ್ಣು ಭಾರ ತಲೆಭಾರ ಮೈಭಾರ. ಎದುರಿಗೆಲ್ಲ ಕತ್ತಲು.... ಯಾವ ಯಾವುವೋ ಆಕೃತಿಗಳು ಮಿಂಚಿಮಾಯವಾಗುತ್ತಿವೆ -ವಿಧ ವಿಧದ ಜನರು. ತಾನು ಒಬ್ಬಳೇ ಹೋಗುವಾಗ ದಾರಿಯಲ್ಲಿ ತನ್ನನ್ನು ಕಂಡು ನಕ್ಕವರು: ಆತನ ಜೊತೆ ಹೋಗುವಾಗ ಮರೆಯಲ್ಲಿ
ಪುಟ:ನಡೆದದ್ದೇ ದಾರಿ.pdf/೧೫೮
ಗೋಚರ