ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅದರ ಮೇಲೆ ಬಲವಾಗಿ ಎಳೆದು ಮುಚ್ಚಿದ್ದ ಈ ಕಬ್ಬಿಣದ ಪರದೆ ಇತ್ತೀಚೆ ಸ್ವಲ್ಪ-
ಸ್ವಲ್ಪವಾಗಿ ಕರಗಿ ಹೋಗುತ್ತಿರುವುದೇಕೆ ? ಈಗೇಕೆ ತನಗೆ
ಹೃದಯವಿಲ್ಲವೆಂಬುದೊಂದು ಹೆಚ್ಚಳವಾಗಿ ತೋರಲೊಲ್ಲದು?
"ಎಕ್ಸ್‌ಕ್ಯೂಜ್ ಮಿ ಮ್ಯಾಡಂ. ಒಳಗೆ ಬರ್ಲೇನು?" ಬಾಗಿಲ ಹೊರಗಿನಿಂದ
ಮೃದುವಾಗಿ ಧ್ವನಿ. ಇದೇ ವರ್ಷ ಎಮ್.ಎಸ್‌ ಸಿ. ಮುಗಿಸಿ ಕೆಮಿಸ್ಟ್ರಿ
ಡಿಪಾರ್ಟಮೆಂಟಿನಲ್ಲಿ ರಿಸಚ್೯ ಅಸಿಸ್ಟಂಟ್ ಆಗಿ ಸೇರಿರುವ ಮರಾಠಿ ಹುಡುಗಿ
ಊರ್ಮಿಲಾ ಕೇಳಕರ.
ತಲೆಯನ್ನು ಕೊಡಹಿ. ಲೂಸಿ-ಜಯಲಕ್ಶ್ಮಿ-ಸ್ಕೂಲ್ ಕಮೀಟಿ ಚೇರಮನ್
ಎಲ್ಲರನ್ನೂ, ಹಾಳು ಸದಾನಂದನನ್ನೂ ಸಹ ದೂರ ಕಳಿಸಲು ಪ್ರಯತ್ನಿಸುತ್ತ ಪ್ರೊ.
ಲೀಲಾವತಿ ಹಾಸಿಗೆಯ ಮೇಲೆಯೇ ಎದ್ದು ಕುಳಿತಳು. "ಓ ಹಲೋ. ಊರ್ಮಿಲಾ
ಏನು ? ಬರ್ರಿ ಬರ್ರಿ,ಕೊಡ ಬರ್ರಿ."
ಕುಣಿಯುತ್ತಲೇ ಒಳಬಂದಳು ಊಮಿ೯ಲಾ. ಬಹುಶಃ ಹುಟ್ಟುತ್ತಲೇ
ಕುಣಿಯಲು ಸುರುಮಾಡಿದಳೇನೋ ಎನ್ನಿಸುವಂಥ ಹುಡುಗಿ. ಎತ್ತರವಾಗಿ. ಬೆಳ್ಳಗೆ
ಚಂದ ಇದ್ದಾಳೆ. ಇವಳು ಬಂದಾಗಿನಿಂದ ಕೆಮಿಸ್ಟ್ರಿ ಡಿಪಾರ್ಟಮೆಂಟಿನ ಎಲ್ಲ
ಜ್ಯೂನಿಯರ್ ಲೆಕ್ಚರರುಗಳು. ಡೆಮಾನ್‌ಸ್ಟೇಟರುಗಳು, ಕೆಲವರು ವಿದ್ಯಾರ್ಥಿಗಳು ಸಹ
- ಇವಳಿಗಾಗಿ ಹುಚ್ಚಾಗಿದ್ದಾರೆ. ಅವಳು ತಮ್ಮೊಡನೆ ಕ್ಯಾಂಟೀನಿಗೆ ಬಂದರೆ ತಮ್ಮ
ಅಹೋಭಾಗ್ಯ ಎಂದುಕೊಳ್ಳುತ್ತಾರೆ. ನಕ್ಕು ತಮ್ಮನ್ನು ಮಾತಾಡಿಸಿದರೆ ತಾವು ಧನ್ಯ
ಎಂದುಕೊಳ್ಳುತ್ತಾರೆ. ಗಂಡಸರ ಜಾತಿಯೇ ನಾಯಿಜಾತಿ. ಎಲ್ಲಾ ಮೂಸಿ ನೋಡಬೇಕು
ಎನ್ನುವ ಚಪಲ ಅವರಿಗೆ. ಥೂ....
"ಮತ್ತೇನಿಲ್ಲ ಮ್ಯಾಡಂ. ನಿಮ್ಮ ಕಡೆ ಆ ಪ್ಲ್ಯಾಸ್ಟಿಕ್ ಟ್ರ್ಯಾವೆಲ್ಹಿಂಗ್ ಬ್ಯಾಗು
ಅದs ಅಲ್ಲಾ, ಅದು ಸ್ವಲ್ಪ ಬೇಕಾಗಿತ್ತು."
-ನಿ೦ತೇ ಹೇಳಿದಳು ಊರ್ಮಿಲಾ.
"ಕೊಡತೀನೆಂತ ಕೂಡ್ರಿ. ಯಾಕ, ನಾಳೆ ರವಿವಾರ ಏನರೆ ಸ್ಪೆಶಲ್ ಪ್ರೋಗ್ರ್ಯಾಮು
ಅದs ಏನು ? ಎಲ್ಲಿಗೆ ಸವಾರಿ ?"
"ಇಲ್ಲೇ ಆ ಡ್ಯಾಮ್‌ಸೈಟಿಗೆ ಪಿಕ್‌ನಿಕ್ ಅಂತ ಹೋಗವರಿದ್ದಾರ ನಮ್ಮ
ಡಿಪಾರ್ಟಮೆಂಟಿನವರು. ಸಂಜೀನ್ಯಾಗ ತಿರಿಗಿ ಬರ್ತೀವಿ."
-ನಾಳಿನ ತಯಾರಿ. ಅದರ ಪೂರ್ವಗನಸು ಇವುಗಳ ಸಂಭ್ರಮದಲ್ಲಿ ಅವಳಿಗೆ
ಈಗ ಕೂಡುವ ಮನಸ್ಸಿದ್ದಂತೆ ತೋರಲಿಲ್ಲ. ಆದರೆ ಯಾಕೋ ಈಗ
ಊರ್ಮಿಲಾನನ್ನು ಕಳಿಸಿಬಿಟ್ಟು ತಾನು ಒಂಟಿಯಾಗಿದ್ದರೆ ಮತ್ತೆಲ್ಲಿ ಇಲ್ಲದ