ಹೂಮಳೆ - ಹೂಮಳೆ ಹೂಮಳೆ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಇಳಯರಾಜ
ಗಾಯನ: ಡಾ||ರಾಜ್ ಕುಮಾರ್
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ
ಹೂಮಳೆ ಓಲವಿನ ಹೊಸ ಮಳೆ
ಮೇಘ ಮಿಂಚುಗಳ ಮಾಲೆಯೋ
ಸಪ್ತವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ
ಮಾಘ ಫಾಲ್ಗುಣ ಚೈತ್ರ ವೈಶಾಖ ಮಾಸ
ಸಿಹಿ ವಸಂತ ಬಾರೊ ಶೃಂಗಾರ ತಾರೊ
ತಾಯಿ ಭೂರಮೆ ನಿನಗೆ ನೂರಾರು ರೂಪ
ನಾವು ಮನುಜರಮ್ಮ ಬೇಕೊಂದು ದೀಪ
ಮಾಗಿ ಕಾಲದಲ್ಲಿ ಮೂಕವಾದೆ ಮೌನಿ ಕೋಗಿಲೇ
ಮಾಗಿ ಕಾಲದಲ್ಲಿ ಮೂಕವಾದೆ ಮೌನಿ ಕೋಗಿಲೆ
ಈಗ ಏಕೆ ಹಾಡಿದೆ.. ಏನ್ ಆಶ್ಚರ್ಯವ ನೋಡಿದೆ..
ಒಹೊಹೊ... ಒಹೊ... ಒಹೊ... ಹೊ... ಹೊ...
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ
ಮೇಘ ಮಿಂಚುಗಳ ಮಾಲೆಯೋ
ಸಪ್ತವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಬಾಳು ಎಂದರೇನು ನಾಳೆಗಳ ಧ್ಯಾನ
ನಾಳೆ ಎಂದರೇನು ನಿನ್ನೆಗಳ ಮೌನ
ಆಸೆ ದೋಣಿಯಲ್ಲಿ ಸಾಗರದ ಯಾನ
ಜೋಡಿ ಸೇರಿದಾಗ ಸುಲಭ ಪ್ರಯಾಣ
ನಾಳೆಗಾಗಿ ಬಾಳ ಬೇಕು ಕೇಳು ನೊಂದ ಜೀವವೇ
ನಾಳೆಗಾಗಿ ಬಾಳ ಬೇಕು ಕೇಳು ನೊಂದ ಜೀವವೆ
ರಾತ್ರಿ ಜಾರಿ ಹೋಗಲಿ ಶುಭ ಸೂರ್ಯೋದಯವಾಗಲಿ
ಒಹೊಹೊ... ಒಹೊ... ಒಹೊ... ಹೊ...
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ
ಮೇಘ ಮಿಂಚುಗಳ ಮಾಲೆಯೋ
ಸಪ್ತವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ