ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ಮರೀಚಿಕೆ ಹೆಚ್ಚುಸುಂದರವಾಗುತ್ತದಲ್ಲ ತನ್ನ ಕತೆ... ಹೌದು,ಅದೇ ಸರಿ,ನಾಲ್ಕು ಗಂಟೆಯಾಗುತ್ತಿರುವಂತೆಯೇ....

   ಆಕೆ ಅಸಹಾಯ ಕಣ್ಣುಗಳಿಂದ ಗೋಡೆಯ ಮೇಲಿನ ಗಡಿಯಾರದ ಕಡೆ ನೋಡಿದಳು. ನಾಲ್ಕಕ್ಕೆ ಹತ್ತು ನಿಮಿಷ. ಎಂಥದೋ ಸಂಕಟ. ಹೊಟ್ಟೆಯಲ್ಲಿನ ಕರುಳೆಲ್ಲ ಹೊರಗೆ ಬರುತ್ತಿರುವಂತೆ ಅನಿಸಿಕೆ. ಕೈಕಾಲು ಅಲುಗಾಡಿಸಲಿಕ್ಕೆ ಶಕ್ತಿಯೇ ಇಲ್ಲ. ಆಕೆಯ ಕಣ್ಣುಗಳು ಭಾರವಾಗಿ ಮುಚ್ಚಿಕೊಂಡವು.                                                                               
            ...ಟ್ರಣ್ ಟ್ರಣ್-                                                                  
      ಆಕೆ ಬೆಚ್ಚಿ ಕಣ್ಣು ಬಿಟ್ಟಳು. ಇದೇನು, ಇಂಥ crisis ನಲ್ಲೂ ತನಗೆ ನಿದ್ರೆ ಹತ್ತಬೇಕೆ ಅಂತ ಧಡಾರನೆ ಎದ್ದುಕೂತಳು. ಹೊರಗಿನ ರೂಮಿನಿಂದ ಟೆಲಿಫೋನ್ ಕೂಗುತ್ತಿತ್ತು. ಆಕೆ ಹಾಸಿಗೆಗೆ ಅಂಟಿಕೊಂಡಂತಾಗಿ ಗಡಿಯಾರ ನೋಡಿದಳು-ನಾಲ್ಕು ಗಂಟೆ. ಇನ್ನು ಮುಗಿಯಿತು ಈ ಜಗದ ಬಂಧ, ಎಲ್ಲಕ್ಕೂ-ಎಲ್ಲರಿಗೂ ಗುಡ್ ಬಾಯ್-                                                            
      ಹೊರಗಿನಿಂದ ಕೇಳಿಬರುತ್ತಿದ್ದ ಪ್ರಕಾಶನ ಧ್ವನಿಗೆ ಆಕೆ ನಿರ್ಜಿವಳಂತೆ ಕಿವಿಗೊಟ್ಟಳು: 'ಹಲೋ, ಡಾ. ಮಿಶ್ರಾ? ನಮಸ್ಕಾರ. ಏನು ಸಂಜೆಯ ಪಾರ್ಟಿಗೇ? sorry. ಇವತ್ತ ನನ್ನ ಮಿಸೆಸ್  ಮೈಯಾಗ ಆರಾಮಿಲ್ಲ. ಹ್ಜ್ನಾ,ಹ್ಜ್ನಾ, ನೆನಪದ ಮುಂದಿನ ವಾರ-           
      ಮಿನಿ ಹಾಯಾಗಿ ಉಸಿರು ಬಿಟ್ಟಳು. ಅದರೆ ಮರುಕ್ಷಣ ಹಾಸಿಗೆಯಿಂದ ಕೆಳಗಿಳಿದಳು. ಇನ್ನೇನು ಐದಾರು ಮಿನಿಟಿನ ಅವಧಿ. ಅಷ್ಟರಲ್ಲೇ ಬರುವುದು ಆ ಅಪರಿಚಿತನ ಫೋನ್. ಆತ ಬ್ಲ್ಯಾಕ್ ಮೇಲರ್ ಆಗಿದ್ದು, ದುಷ್ಟ ಆಗಿದ್ದರೆ... ಒಂದೋ ತಾನು ಗಂಡ, ಮಕ್ಕಳನ್ನು ತೊರೆಯಬೇಕು. ಇಲ್ಲವೆ ಯಾವನೋ ಲಘಂಗನ ಜೊತೆ-                                                      
      ಛಿ. ಮುಂದೆ ವಿಚಾರಿಸಲಾಗದೆ ಆಕೆ ಎರಡೂ ಕೈ ಗಳಿಂದ ತಲೆ ಗಟ್ಟಿಯಾಗಿ ಹಿಡಿದುಕೊಂಡಳು.                      
      "ಮಿನಿ,"ಹೊರಗಿನಿಂದ ಕೂಗಿದ ಪ್ರಕಾಶ, "ನಿನ್ನ ಕಡೆ ಯಾರೋ ಬಂದಾರ ನೋಡು."                           
     ಏನು?  ಬಂದೇಬಿಟ್ಟನೇ ? ಮಿನಿಯ  ಕಾಲಲ್ಲಿಯ ಶಕ್ತಿ ಉಡುಗುತ್ತಿರುವಂತೆನಿಸಿತು; ಆದರೆ ಮರುಕ್ಷಣ ಅವಳು ಹುಚ್ಚು ಧೈರ್ಯದಿಂದ ಧಡಧಡ ಹೊರಗೆ ಬಂದಳು - ಬಂದದ್ದು ಬರಲಿ, ತಾನು ಎಲ್ಲ ಎದುರಿಸಬಲ್ಲೆ, ತಾನೇನು ಹೇಡಿಯೇ ?                          
     ಬಾಗಿಲಲ್ಲಿ ನಿಂತಿದ್ದವ ಬಿಳಿಯ ಸಮವಸ್ತ್ರ ಧರಿಸಿದ್ದ ಒಬ್ಬ ಸೇವಕ. ಬಹಳ