೪೭೦ ನಡೆದದ್ದೇ ದಾರಿ
"ಏಳ್ರೀ, ಬೆಳಗಾಗಿ ತಾಸಾತು. ಇನ್ನೂ ಕನಸು ಕಾಣತೀರೇನು?" ಕನಸು ? ಇವಳಿಗೇನಾದರೂ ತನ್ನ ಕನಸಿನ ಪತ್ತೆ ಹತ್ತಿದರೆ... ಛೆ, ಇವಳನ್ನು
ಮಳ್ಳ ಮಾಡುವುದೆಷ್ಟೊತ್ತು ? ಆಪ್ಪಿ ಮುದ್ದಿಸಿ ಚಿನ್ನಾ ಅಂದರೆ ಸಾಕು, ತನ್ನ ಗಂಡ ಶ್ರೀರಾಮನೆಂದು ನಂಬುವ ಗರತಿ ಅವಳು. ಹೆಂಡತಿಯಾದವಳಿಗೆ ಅಷ್ಟೂ ಉದಾರತೆಯಿರದಿದ್ದರೆ ಹೇಗೆ?
"ಹ್ಞೂ, ನೀ ಬಂದಿದ್ದಿ ಕನಸಿನ್ಯಾಗ." ನಾಚಿ ತನ್ನೆದೆಯ ಮೇಲೊರಗಿದ ಅವಳನ್ನು ಎರಡು ನಿಮಿಷ ಹಾಗೇ
ಇರಗೊಟ್ಟು ನಂತರ ಹೇಳಿದ ಅವನು, "ಇನ್ನೊಂದು ಹತ್ತು ಮಿನಿಟು ಬಿಟ್ಟು ಏಳತೀನಿ, ನೀ ಚಹಾ ಮಾಡು ಹೋಗು."
ತಾನು ಹೋಗೆಂದಿದ್ದಕ್ಕಾಗಿ ಅವಳು ತಪ್ಪು ತಿಳಿಯದಿರಲೆಂದು ಮೃದುವಾಗಿ
ಅವಳ ಕೈ ಅದುಮಿದ. ಹೊರಗಡೆ ಅಳತೊಡಗಿದ ಕಿರಿಯ ಮಗನನ್ನು ರಮಿಸಲೆಂದು ಆಕೆ ಎದ್ದು ಹೋದಾಗ ನಿಟ್ಟುಸಿರಿಟ್ಟು ಮುಸುಗೆಳೆದ ಆತ. ಕನಸಿನಲ್ಲಿ ತನಗೆ ಆತು ಕೂತವಳನ್ನು ಮತ್ತೊಮ್ಮೆ ನೆನೆಯಲೆತ್ನಿಸಿದ. ...ಅವಳ ಮುಖ ಹೇಗಿತ್ತು ? ಚೆಲುವಾಗಿಯೇ ಇದ್ದಿರಬೇಕು. ಇಲ್ಲವಾದರೆ ತನ್ನ ಸ್ಕೂಟರ್ ಹತ್ತಲುತಾನೆಂದಾದರೂ ಅವಳಿಗೆ ಅವಕಾಶ ಕೊಡುತ್ತಿದ್ದೆನೆ? ಎಷ್ಷು ಛೆಂದ ಕನಸು... ತಮ್ಮ ನಾಟಕ ಸಂಘದ ಅಧ್ಯಕ್ಷರ ಮಗಳು ಸುಮನಾ ಮದುವೆಯಾಗಿ ಹೋದಾಗಿನಿಂದ ತಾನು ಯಾರೊಂದಿಗೂ ಸ್ಕೂಟರ್ ಮೇಲೆ ಹಾಗೆ ವೇಗವಾಗಿ ವಿಹಾರ ಹೋದದ್ದೇ ಇಲ್ಲ... ಸುಮನಾ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿ. ತನ್ನ ನಾಟಕಗಳ ಬಗ್ಗೆ ಬಹಳ ಉತ್ಸಾಹ ಅವಳಿಗೆ. ದೊಡ್ಡ ಮನಸ್ಸಿನವಳು. ಯಾತಕ್ಕೂ ಒಲ್ಲೆ ಅಂದವಳಲ್ಲ. ಒಮ್ಮೆಯಂತೂ ಕತ್ತಲಲ್ಲಿ ಕೆರೆಯ ಏರಿಯ ಮೇಲೆ ಮಾತಾಡುತ್ತ ಕೂತಾಗ ತನ್ನ ಕೈಹಿಡಿದು,'ಅಯ್ಯೋ, ನಿಮ್ಮ ಮದುವೆಯಾಗಿರದಿದ್ದರೆ ಎಷ್ಟು ಚೆನ್ನಾಗಿತ್ತು !' ಎಂದು ಅತ್ತುಬಿಟ್ಟಳು ಪಾಪ. ಕಣ್ಣು ತುಂಬಿ ಬಂದಿದ್ದ ಅವಳಿಗೆ ತನ್ನ ಕಣ್ಣಂಚಿನಲ್ಲಿಯನಗು, ತನ್ನ ಆ ವೀರ ಸ್ಥಿತಪ್ರಜ್ಞ ಸಿನಿಕ್ ನಗು, ಕಾಣಿಸದೆ-'ಮುಂದಿನ ಜನ್ಮದಲ್ಲಾದರೂ ಆ ಭಾಗ್ಯ ನನ್ನದಾಗಲಿ' ಎಂದು ಕಣ್ಣೊರೆಸಿಕೊಂದಡಿದ್ದಳು...ಇಂಥ ಹೊತ್ತಿನಲ್ಲೇ ಹೆಂಗಸರು ಉದಾರಿಗಳಾಗುವುದು... ತಾನು ಅವಳಾಗಿ ಬಯಸಿ ಕೊಟ್ಟದ್ದನ್ನು ಸ್ವೀಕರಿಸಿದ್ದೆನಪ್ಪೆ. ಇಲ್ಲವಾದರೆ ಅವಳಿಗೆ ಸುಮ್ಮನೆ ಅವಮರ್ಯಾದೆಯಲ್ಲವೆ ?
ಸುಮನಾ ಒಳ್ಳೆಯ ಹುಡುಗಿ. ಸ್ಕೂಟರ್ ಮೇಲೆ ಹಿಂದಿನ ಸೀತಟಿನಲ್ಲಿ ತನ್ನ
ಮೈಗೆ ಒತ್ತಿ ಕುಳಿತು ಕತ್ತಲಲ್ಲಿ ಊರಹೊರಗೆ ವೇಗವಾಗಿ ವಿಹಾರ ಹೋಗುವುದು ಅವಳಿಗೆ ಬಹಳ ಇಷ್ಟ. ದೇವರು ಅವಳಿಗೆ ಒಳ್ಳೆಯದು ಮಾಡಿದ; ಅವಳ್ ಗಂಡನಿಗೆ