ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೬೮ ನಡೆದದ್ದೇ ದಾರಿ ಅಡ್ಡ ಬರತಾನೋ ನೋಡ್ತೀವಿ'. -ಬಿಸಿಲು ಏರಿದಂತೆ ವೀರಭದ್ರಗೌಡನ ಧ್ವನಿ ಏರುತಿತ್ತು.
'ಅದ್ಹ್ಯಾಂಗ ಒಡೀತೀರಿ? ಶಾಸ್ತ್ರ ಸಮ್ಮತ ಆಗೋದಿಲ್ಲ ಅದು. ಪ್ರಾಣದೇವರು ಒಪ್ಪೊದಿಲ್ಲ ಅದನ್ನ'ಕೇಶವಾಚಾರಿಯ ವಾದ. 'ಆಹಾಹಾ ಆಚಾರೀ, ರಾಮನವಮೀ ದಿನಾ ಊರ ಪ್ರಸ್ಥ ಆದಾಗ ಹಿತ್ತ್ಲ ಬಾಗಿಲಿಂದ ಮಾರಾ ತುಂಬಾ ಉಂಡೀ ಕಳವು ಮಾಡಿಕೊಂಡ ಹೋಗತೀಯಲ್ಲ. ಒಪ್ಪತಾನೇನು ದೇವರು ಅದನ್ನ?' 'ನನ್ನ ತಪ್ಪು ಥಗೀತೀಯಾ ಅಯೋಗ್ಯ? ನಿನ್ಹಅಂಗಾ ಎಲ್ಲಾರ ಹೊಲಾ ಒತೀ ಇಟಗೊಂಡ, ಎರಡು ದುಡ್ಡ ಸಾಲಕ್ಕ ನಾಕು ದುಡ್ಡು ಬಡ್ಡೀ ಹಾಕೀ ಮಂದೀ ರಕ್ತ ಹೀರೂದಿಲ್ಲ ನಾನು.' 'ಬಿಡಬಿಡಲೇ, ಗೊತೈತ ನೀವು ಆಚರೆಪ್ಪಾಗೋಳು ಮಾಡೀಯಿಂದ ತೀರಥಾ ತಗೊಂಡು ಬಂದು ಹೊತ್ಹ್ಹಮುಳುಗಿದ ಮ್ಯಾಲೆ ಹುಸೇನಿಸಾಬೀ ಹಟ್ಟಿಗೆ ಹೋಗಿ ಕಂಟ್ರೀ ಡೀಪೋ ಕುಡಿಯೂದು.' 'ಮಗನs, ನೀವೆಲ್ಲಾ ಶಿವಪೂಜಾ ಮಾಡಿ ಬಂದು ಅದೇ ಹಟ್ಟ್ಯಾಗ ಕೋಳೀ ಹೊಡೀತೀರಲ್ಲ,ಕಂಡಿಲ್ಲೇನು ನಾವು?' ಸುಮ್ಮನಿರುವುದು ಇನ್ನು ಸಾಕು ಎನಿಸಿತು ಶಂಕರಶೆಟ್ಟರಿಗೆ: "ತಮ್ಮಗೋಳ್ಯಾ, ಇದು ರೀತಿ ಅಲ್ರೆಪಾ. ನಾವು ಇದಕ್ಕೆ ಇಲ್ಲಿ ಕೂಡೇವಿ ಅದನ್ನ ಮದ್ಲ ನಿಶ್ಚೇ ಮಾಡೂಣು. ಏಟೋತಾತು. ತೇರು ಹೊಂಡಬೇಕು ಇನಾ. 'ಗೋಪಾಲಾಚಾರ್ಯರೂ ದನಿಗೂಡಿಸಿದರು: 'ಹೌದು, ರಥ್ಹೋತ್ಸವದ ವ್ಯಾಳ್ಯಾ ಮೀರಬಾರದು. ಹೀಂಗ ನೀವು ಬಡಿದಾಡೂದು ಬಿಟ್ಟು ಹೀರೆರಿಗೆ ಬಿಡ್ರಿ ಎಲ್ಲಾ, ಪಂಚರು ಹೇಳಿಧಾಂಗ ನಡಕೋಳ್ರಿ. ಕಲ್ಯಾಣ ಆಗತದ. ಹಾಂಗ ನೋಡಿದ್ರ ಪ್ರಾಣದೇವರಿಗೇ ಕೇಳಬೇಕಿತು ಈ ಪ್ರಶ್ನೆ. ನೀವು ಹಟಾ ಹಿಡಿದೀರಂತ ಪಂಚರು ಕೂಡ್ಯಾರ.' ವೀರಭದ್ರಗೌಡ, ಕೇಶವಾಚಾರಿ ಸುಮ್ಮನಾದರೂ ಗುಂಪಿನಲ್ಲಿ ಗದ್ದಲ ನಡೆದೇ ಇತು. ಪಂಚರು ಸಮಾಲೋಚನೆಗೆ ಕೂತಾಗ ಅವರ ಮಾತು ಕೇಳಿಸದಷ್ಟು ಗದ್ದಲ. ತಮ್ಮ ತಮ್ಮ ಪಕ್ಷಗಳಿಗೆ ಜಯ ದೊರಕಿಸಲು ಎರಡು ಗುಂಪುಗಳವರಿಗೂ ಪೈಪೋಟಿ. ಪರಸ್ಪರರ ಮೇಲಿನ ಆರೋಪಗಳಿಗಂತೂ ಕೊನೆಯೇ ಇಲ್ಲ. ಅರ್ಧ ತಾಸಿನ ನಂತರ, ಇನ್ನು ನಂತರ ಉತ್ಸವ ಮೂರ್ತಿಯ ಎದುರಿಗೆ ಒಂದು ಕಡೆ ಗೋಪಾಲಾಚಾರ್ಯರ ಕಡೆಯವರೂ ಇನ್ನೊಂದು ಕಡೆ ರಾಮಗೌಡರ ಕಡೆಯವರೂ ಕೂಡಿಯೇ ಏಕೆ ಕಾಲಕ್ಕೆ ಕಾಯಿ ಒಡೆಯಬೇಕೆಂದು ಪಂಚರು ತೀರ್ಪಿತ್ಹ್ಹಗ