ಈ ಪುಟವನ್ನು ಪರಿಶೀಲಿಸಲಾಗಿದೆ
ಮುಳ್ಳುಗಳು / ನೀನೇ ತಂತಿ ೬೫
ರಾತ್ರಿಗಳಲ್ಲಿ ನಾವಿಬ್ಬರೂ ಕೂಡುತ್ತಿದ್ದ ಆ ಮಾವಿನ ಮರದ ಕೆಳಗಿನ ಹೂಲ್ಲುಹಾಸಿಗೆ- ಎಂದೆಲ್ಲ ವಿಚಾರ ಬರುವುದು.ಆದರೆ ಆಷ್ಟರಲ್ಲೇ- -ಆಷ್ಟರಲ್ಲೇ ಕೇಳಿಸುವದು, 'ಹರಿ ಹರಿ',ಹರೀಶನ ಗಿಳಿಯ ಹಳೇ ಹಾಡು. ಆದರೊಂದಿಗೆ ಹಳೆಯ ತಂತಿ ಕಡಿದು ಬೀಳುತ್ತದೆ.ಮತ್ತೆ ತನ್ನ ಸುತ್ತಲಿನ ಎತ್ತರ ಗೋಡೆಗಳ, ಮುಚ್ಚಿದ ಬಾಗಿಲಿನ ಆರಿವಾಗುತ್ತದೆ. 'ಎಚ್ಚರ'ವಾಗುತ್ತದೆ. ಆಂದಮೇಲೆ ತನ್ನದು ಪ್ಲೇಟೋನಿಕ್ ಪ್ರೇಮ ಆಲ್ಲವೆಂದಾಯಿತು.ಇದು ಪ್ರೀತಿ-ಪ್ರೀತಿ ಆನ್ನುತ್ತಾರಲ್ಲ, ಆಂಥ ಭಾವನೆ; ನೇರವಾದ, ಮತ್ತ್ಯಾರಾದರೂ ಕೇಳಿದರೆ ನೈತಿಕ ಆಘಾತವಾಗುವಂತಹ, ಸೀದಾ-ಸರಳ ಭಾವನೆ. ತಾನಿದನ್ನು ನೀಡುವೆನೆಂದರೆ ಸಾಕು, ನೂರು ಕೈಚಾಚಿ ಆದನ್ನು ಬಳಿದುಕೊಂಡು ಎದೆಯಲ್ಲಿ ಬಚ್ಚಿಡುವ ಆಸೆ ಆವನಿಗೆ. ತನೆಗೆ ತಿಳಿಯದು ಎಂದುಕೊಂಡಿದ್ದಾನೇನೊ ! ಆದರೆ ಆವನದು ಬರಿಯ ಆಸೆ, ನಿಃಶಬ್ದವಾದ ಆಸೆ, ಮಳೆ ಹನಿಯಂತೆ ಬಿದ್ದಲ್ಲೇ ಸದ್ದಿಲ್ಲದೆ ಇಂಗಿ ಹೋಗುವ ಆಸೆ. ಆವನದನ್ನು ಎಂದಿಗೂ ಕೃತಿಯಲ್ಲಿಳಿಸಲಾರ. ಯಾಕೆ ? ಮತ್ತೆ ಈ ' ಸರಿ ' - ' ತಪ್ಪು' ಗಳ ಪ್ರಶ್ನೆ. ಆವನ ಸುತ್ತ ಆವನೇ- ಬೇಕಾಗಿಯೋ ಬೇಡವಾಗಿಯೇ ನಿರ್ವಾಹವಿಲ್ಲದೆಯೋ- ನಿರ್ಮಿಸಿಕೊಂಡ ಕಲ್ಲಿನ ಕೋಟೆಯಲ್ಲಿ ಆವನು ಬಂದಿ.ಅವನದರು ಆಧಿಪತಿಯಾದರೂ ಅವನಲ್ಲಿ ಬಂದಿ. ಈ ಕೋಟೆಯ ಬಲಿಷ್ಠವಾದ, ಎತ್ತರವಾದ ಗೋಡೆಯ ಮೇಲೆ ನಿಂತು ತನ್ನ ಕಡೆ ಒಂದು ಥರಾ ದೃಷ್ಟಿಯಿಂದ ಆತ ನೋಡುತ್ತಿದ್ದ. ಆಗ ಎಷ್ಟೋ ಸಲ ತನಗನಿಸುತ್ತಿತ್ತು- ಆಲ್ಲಿಂದ ಕೆಳಗೆ ಧುಮುಕುವುದು, ಪಾರಾಗುವುದು ಸಾಧ್ಯವಿದೆಯೋ ಇಲಾವೋ ಎಂದು ಆವನು ವಿಚಾರಿಸುತ್ತಿರಬಹುದೇ ಎಂದು. ಹಾಗೆ ಧುಮುಕಿದರೆ ಒಳಗಿನ ಆವನ ಪ್ರಜೆಗಳ ಗತಿ ಏನಾಗಬೇಡ ! ಆಷ್ಟಲ್ಲದೆ ಬಿದ್ದು ಅವನೇ ಕಾಲು ಮುರಿದುಕೊಂಡರೆ ಅವನೆ ಗತಿ ? ಅವನನ್ನೆಬ್ಬಿಸಿ ತಾನು ನಡೆಸುವೆನೋ ಇಲ್ಲವೋ ಆದೂ ಸಂಶಯ ಅವನಿಗೆ.ಅಂಥ ಸಂದಿಗ್ಧ ಸಂದರ್ಭದಲ್ಲಿ ಇಲ್ಲದ ಹುಚ್ಚುತನ ಮಾಡಿ ದುಡುಕುವ ಬುದ್ಧಿ ಅವನದಲ್ಲ. ಆಗೊಮ್ಮೆ - ಈಗೊಮ್ಮೆ ಕೋಟೆಯ ಹೆಬ್ಬಾಗಿಲು ತೆರೆದು, ಒಳಗೇ ನಿಂತು, ಹೊರಗೆ ಹಣಿಕಿ ಹಾಕಿ ತನ್ನ ಕ್ಷೇಮ ಸಮಾಚಾರ ವಿಚಾರಿಸುವಷ್ಟರಲ್ಲೇ ತೃಪ್ತಿ ಅವನಿಗೆ. ಈ ಬಾಗಿಲಾದರೂ ಎಷ್ಟು ಹಳೆಯದೋ ! ತೆರೆದರೆ ಕಿರ್ರ್ ಎಂದು ಹೃದಯ ಸೀಳುವ ಸಪ್ಪಳ ಮಾಡುತ್ತಿತ್ತು.ಎಲ್ಲಿ ಉಳಿದವರೆಲ್ಲರ ಲಕ್ಷ ಇತ್ತ ಕಡೆ ಹರಿಯುವುದೋ ಎಂದು ಗಾಬರಿಯಾಗಿ. ತುಂಬಿದ ಸಂತೆಯ ಮಧ್ಯೆ ತೊಟ್ಟ ಬಟ್ಟೆ ಕಳಚಿ ಬಿದ್ದಂತೆ ಪೆಚ್ಚುಪೆಚ್ಚಾಗಿ, ಯಾವಾಗ ಈ ಬಾಗಿಲನ್ನು ಮುಚ್ಚಿ ಮತ್ತೆ ಒಳಗಿನ ಉಸಿರುಗಟ್ಟಿಸುವ