೧೪೨ ರುಳು ರಾಜಸಿಂಹ v 1 • 1 vvv [ಪ್ರಕರಣ vvvv ತೆರವು ಮಾಡಿಕೊಟ್ಟಂತಾಗುತ್ತಿತ್ತು. ಸೇನಾ ಮುಖವನ್ನು ತಿರುಗಿಸಿ ಮಗ್ಗಲಿಗಿರುವ ಶತ್ರುಗಳೊಡನೆ ಕಾದುವದು ಅಸಂಭವವಾಗಿತ್ತು, ಇಷ್ಟು ದೊಡ್ಡ ಸೇನೆಯ ಮುಖವನ್ನು ವ್ಯವಸ್ಥೆಗೊಳಿಸುವದಕ್ಕೆ ಆ ಖಿಂಡಿಯಲ್ಲಿ ಅಷ್ಟು ವಿಸ್ತಾರವಾದ ಸ್ಥಳವಿದ್ದಿಲ್ಲ ಅವರ ಮುಖವನ್ನು ಹೊರಳಿಸುವದ ರೊಳಗಾಗಿ ರಾಜಸಿಂಹನು ಪರ್ವತದಿಂದ ಇಳಿದುಬಂದು ಮೊಗಲರ ಮೇಲೆ ಹಲ್ಲಾ ಮಾಡಿ ಅವರನ್ನು ಸಹಜವಾಗಿ ಇಬ್ಬಾಗಿಸುತ್ತಿದ್ದನು ಮತ್ತು ಒಂದು ಭಾಗವನ್ನು ಸಹಜವಾಗಿ ಸೋಲಿಸಿ ಅವರ ಸಾಮಾನು ಗಳನ್ನು ಅಪಹರಿಸುತ್ತಿದ್ದನು, ಮೊಗಲರ ಸೇನೆಯ ಸ್ಥಿತಿಯು ಈ ರೀತಿ ಭಯಂಕರವಾಯಿತು ಮುಂದೆ ಕುಮಾರ ಜಯಸಿಂಹನು ಹಿಂದೆ ರಾಣಾ ರಾಜಸಿಂಹನು ಇವರಿಬ್ಬರ ಕತ್ತರಿಯಲ್ಲಿ ಮೊಗಲರ ಸೇನೆಯು ಒಂದು ಕ್ಷಣದಲ್ಲಿ ಸಿಕ್ಕು ಬಿತ್ತು ಬಾದಶಹನಿಗೆ ಹಿಂದಕ್ಕೆ ಹೋಗುವ ಮಾರ್ಗವು ಮಾತ್ರ ತೆರವಿತ್ತು. ಸ್ವಲ್ಪ ಹೊತ್ತು ವಿಚಾರಮಾಡಿದ ಮೇಲೆ ಅದೂ ಅಸಂಭವವಾಗಿ ಕಂಡು ಬಂತು, ಉದೇಪುರಕ್ಕೆ ಹೋಗುವ ಎರಡನೇ ಮಾರ್ಗವನ್ನು ಹುಡುಕುವ ದಕ್ಕೆ ತೊಡಗಿದನು ಸುತ್ತಲು ಕುದುರೆ ಸವಾರರನ್ನು ಕಳಿಸಿದನು. ಸ್ವಲ್ಪ ಹೊತ್ತಿನಲ್ಲಿ ಅಂಧಾದೊಂದು ಮಾರ್ಗವನ್ನು ತೋರಿಸುವದಕ್ಕೆ ಮೊಗಲನೌಕರನೊಬ್ಬನು ಒಪ್ಪಿದಂತೆ ಒಬ್ಬ ಮನಸಬದಾರನು ಹೇಳ ಹತ್ತಿದನು, ಆ ಮನಸಬದಾರನೂ ಆ ಮಾರ್ಗವನ್ನು ನೋಡಿ ಬಂದಿ ದ್ದನು, ಆ ಮಾರ್ಗವು ಎರಡು ಪರ್ವತಗಳ ನಡುವೆ ಆಕುಂಚಿತ ಖಿಂಡಿಯಂತಿದ್ದು ಬೇಗನೆ ಮುಂದಿನ ಮಾರ್ಗಕ್ಕೆ ಮುಟ್ಟಬಹುದಾ ದಂತೆ ಇತ್ತು, ಆ ಸ್ಥಳದಲ್ಲಿ ರಜಪೂತರಾರು ಕಾಣಿಸುತ್ತಿರಲಿಲ್ಲ. ಔರಂಗಜೇಬನು ಸ್ವಲ್ಪ ಹೊತ್ತು ವಿಚಾರಿಸಿ ದಂಡು ಕಾಣಿಸು ತಿರಲಿಕ್ಕಿಲ್ಲ. ಆದರೆ ಅಡಗಿ ಕುಳಿತಿದ್ದರೆ ? ಬಖತ್ಕಾರಖಾನನೆಂಬ ಮನಸಬದಾರನು ಆ ದಾರಿಯನ್ನ ನೋಡಿ ಬಂದಿದ್ದನು. ಆತನು--“ ನನಗೆ ದಾರಿ ತೋರಿಸಿದ್ದ ಮೊಗಲರವನನ್ನು
ಪುಟ:ರಾಣಾ ರಾಜಾಸಿಂಹ.djvu/೧೫೬
ಗೋಚರ