Kole R.E.) ಇವರು ಕ್ಯುರೇಟರ್ ಆಫ್ ಏನ್ಸೆಂಟ ಮಾನ್ಯುಮೆಂಟ್ಸ್ (Curator of ancient monuments) ಎಂಬ ಹುದ್ದೆಯ ಮೇಲೆ ಮೂರು ವರ್ಷಗಳ ಮಟ್ಟಿಗೆ ನೇಮಕವಾದರು. ಅವರು ತಮ್ಮ ಕೆಲಸವನ್ನು ಮೂರು ಪುಸ್ತಕಗಳ ರೂಪದಿಂದ ಪ್ರಕಟಿಸಿದರು. ಅವಕ್ಕೆ ಮೇಜರ್ ಕೋಲ್ ಇವರ ಮೂರು ವಾಲ್ಯೂಮಗಳು (Major Kole's three volumes) ಎಂದೆನ್ನುತ್ತಾರೆ. ಇದಲ್ಲದೆ, ಪ್ರಿಝರ್ವೇಶನ್ ಆಫ್ ನ್ಯಾಶನಲ್ ಮೊನ್ಯುಮೆಂಟ್ಸ್ ಇನ್ ಇಂಡಿಯಾ (Preservation of National monuments in India) ಎಂಬ ರಿಪೋರ್ಟುಗಳನ್ನು ಬರೆದರು. ಈ ರಿಪೋರ್ಟುಗಳು ಬಹಳ ಮಹತ್ವವುಳ್ಳವುಗಳಾಗಿವೆ.
೧೮೯೫ ನೆಯ ಇಸವಿಯಲ್ಲಿ ಜನರಲ್ ಕನಿಂಗಹ್ಯಾಮ್ (General Cunningham) ಇವರು ಕೆಲಸದಿಂದ ನಿವೃತ್ತರಾದರು. ಆಗ ಡಾ. ಬರ್ಗೆಸ್ (Dr. Burgess) ಇವರು ಆ ಸ್ಥಳಕ್ಕೆ ನೇಮಿಸಲ್ಪಟ್ಟರು. ಆಗ ಒಟ್ಟು ಐದು ಸರ್ವೆ ಕ್ಷೇತ್ರಗಳು ಮಾಡಲ್ಪಟ್ಟುವು, (೧) ಮದ್ರಾಸ, (೨) ಮುಂಬಯಿ, (೩) ಪಂಜಾಬ (ಸಿಂಧ ಮತ್ತು ರಜಪುತಸ್ಥಾನ ಸಹಿತ), (೪) ವಾಯುವ್ಯ ಪ್ರಾಂತ (ಮಧ್ಯ ಪ್ರಾಂತ ಸಹಿತ), (೫) ಬಂಗಾಲ (ಅಸಾಮಸಹಿತ).
ಇಷ್ಟಾದರೂ ಈ ಖಾತೆಯನ್ನು ಕಾಯಂ ಮಾಡುವ ವಿಚಾರವು ಸ್ಥಿರವಾಗಿರಲಿಲ್ಲ. ಡಾ. ಹೂಲ್ಝ(Dr. Hultzch) ಎಂಬವರು ೧೮೮೫ ನೆಯ ಇಸವಿಯಲ್ಲಿ ಎಪಿಗ್ರಾಫಿಸ್ಟ (Epigraphist) ಅಂದರೆ ಶಿಲಾಲಿಪಿಗಳ ಶೋಧನ ಕೆಲಸಕ್ಕೆ ನೇಮಿಸಲ್ಪಟ್ಟಿದ್ದರು. ಆದರೆ ೧೮೮೯ನೆಯ ಇಸವಿಯಲ್ಲಿ ಅವರು ಕೆಲಸದಿಂದ ನಿವೃತ್ತರಾದೊಡನೆಯೇ ಈ ಖಾತೆಯಲ್ಲಿ ಅವ್ಯವಸ್ಥೆಯಾಯಿತು. ಏಕೆಂದರೆ, ಅದೇ ಕಾಲಕ್ಕೆ ಸರಕಾರದವರು ಖರ್ಚು ಕಡಿಮೆ ಮಾಡುವ ಧೋರಣವನ್ನು ಸ್ವೀಕರಿಸಿದ್ದರು. ಆದ್ದರಿಂದ ಡಾಯರೆಕ್ಟರ್ ಜನರಲ್ ಆಫ್ ಆರ್ಕಿಆಲಾಜಿ (Director General of archaeology)ಯ ಹುದ್ದೆಗೆ ಯಾರನ್ನೂ ನೇಮಿಸಲೇ ಇಲ್ಲ. ಆದ್ದರಿಂದ ೧೮೯೦ರಿಂದ ೯೫ರ ವರೆಗೆ ಈ ಖಾತೆಯಲ್ಲಿ ವಿಶೇಷ ಕೆಲಸವೇನೂ ಆಗಲಿಲ್ಲ.
ಪುಟ:ಕರ್ನಾಟಕ ಗತವೈಭವ.djvu/೧೬೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧ನೆಯ ಪೂರಕ ಪ್ರಕರಣ - ಕರ್ನಾಟಕ-ಇತಿಹಾಸ-ಸಂಶೋಧನ
೧೩೫