ಪುಟ:ರಾಣಾ ರಾಜಾಸಿಂಹ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣಾ ರಾಜಸಿಂಹ ೩೦ • • [ಪ್ರಕರಣ • • ಹೇಳಿದಕೆಲಸವನ್ನು ಮಾಡುವದಕ್ಕೆ ಸಿದ್ದರಾಗಿ ಕೈಜೋಡಿಸಿಕೊಂಡು ನಿಂತ ನಮ್ಮ ಸ್ಥಿತಿಯತ್ತ ಇಂಧ ಉತ್ತಮಕಲಸವನ್ನು ಬಿಟ್ಟು..... ಮುಂದೆ ಹೇಳಗೊಡದೆ ರಾಣಾನು ನಡುವ ಜಾಯಿಹಾಕಿ, ಖಾನಸಾಹೇ ಬರೆ, ವಿನಾಕಾರಣ ಇಷ್ಟು ಛೇಡಿಸುವದಕ್ಕಿಂತ ತಮ್ಮ ಕಾರ್ಯವೇನಂಬ ದನ್ನು ಹೇಳಿಬಿಡಿರಿ, ವ್ಯರ್ಥವಾಗಿ ಕಾಲವಿಳಂಬ ಮಾಡುವದರಿಂದ ಮಾ ತಿನ ಮಹತ್ವವು ಕಡಿಮೆಯಾಗುವದಿಲ್ಲವೆ ? ?” ಇದಕ್ಕೆ ಖಾನಸಾಹೇಬರು ಗಂಭೀರಮುದ್ರೆಯಿಂದ • ರಾಣಾಜಿ, ಅಧೀರರಾಗಬೇಡಿರಿ ತಡಮಾಡದ ತಮಗೆ ಮೊದಲು ಬಾಯಿಂದ ಹೇಳುತ್ತೇನೆ ಆಮೇಲೆ ಅದರಂತೆ ಪತ್ರ ವನ್ನೂ ಕೊಡುತ್ತೇನೆ ನಿಮ್ಮ ದೈವವೇ ದೊಡ್ಡದು ಇದರಲ್ಲಿ ಸಂಶಯ ಎಲ್ಲ ಬಾದಶಹನ ರಾಣಿವಾಸದಲ್ಲಿ ಜೋಧಪುರದ ಬೇಗಮ್ಮ, ಉದೇ ಪುರದ ಬೇಗಮ್ಮ ಮೊದಲಾದ ಜಗತ್ಸುಂದರಿಯರಿದ್ದಾಗ ತಮ್ಮ ಕನ್ನೆ ಯ ರೂಪಲಾವಣ್ಯಗಳನ್ನು ಕರ್ಣೆಪಕರ್ಣದಿಂದ ಕೇಳಿ ಆಕೆಯನ್ನು ಲಗ್ನ ವಾಗಬೇಕೆಂದು ಬಾದಶಹರು ಒಯಸಿರುವರು ಅದರಂತೆ ತಮ್ಮನ್ನು ಕೇಳುವದಕ್ಕೆ ನನ್ನನ್ನು ಕಳಿಸಿರುತ್ತಾರೆ. ” ಇದನ್ನು ಕೇಳಿದಕೂಡಲೆ ರಾಣಾನಿಗೆ ಕಡುತರವಾಗಿ ಕಾಯ್ದ ಎಣ್ಣೆಯನ್ನು ಕಿವಿಯಲ್ಲಿ ಸುರಿದಂ ತಾಯಿತು ಖಾನನಮಾತು ಮುಗಿಯುವದರೊಳಗಾಗಿ, ವಿಕ್ರಮಸಿಂ ಹನು, ಘಟ್ಟಿಸಿ ಒಳ್ಳೆ ದೊಡ್ಡ ಧ್ವನಿಯಿಂದ "'ಏನು ? ಈ ಸಾಬೀವಂಶದ ರಜಪೂತ ಶರೀರ ಸಂಬಂಧವು ಪರಧರ್ಮೀಯರಾದ ಮೊಗಲರೊಡನೆಯೆ? ಇಲ್ಲ, ನಾನು ಈ ಶಬ್ದವನ್ನು ಸಹಕೇಳುವುದಿಲ್ಲ ಸಿಂಹದ ಮರಿಯ ಸಂಬಂ ಧವು ಜಂಬುಕದೊಡನುಂಟಾಗುವದೆ? ಖಾನಸಾಹೇಬ, ಅಲಂಗೀರನಿಗೆ ಹೇಳು, ನಾನಂತೂ ಈಮಾತಿಗೆ ಎಂದೂ ಒಪ್ಪಲಾರೆ ” ಇದನ್ನು ಕೇಳಿ ಖಾನನು ಅಂಗಿಯ ತೋಳನ್ನು ಮುಂದಕ್ಕೆ ಏರಿಸುತ್ತ, ಒಳ್ಳೆ ಕೋಪಾ ವೇಶದಿಂದ « ರಾಣಾಜೆ, ಈ ಕಾರ್ಯವು ಸರಳ ಮಾರ್ಗದಿಂದ ಪೂರ್ಣ ವಾದರಾಯಿತು, ಇಲ್ಲದಿದ್ದರೆ ಆಯುಧಬಲದಿಂದ ಪೂರ್ಣಮಾಡಿಕೊಳು ವೆವೆಂದು ನಿಶ್ಚಯದಿಂದ ನಂಬು, ಇದು ಬಾದಶಹನು ಬಾಯಿಂದ ಹೇಳ್ಳಿ