ಆ ಪ್ರಶ್ನೆಯನ್ನು ಕೇಳಬಾರದಾಗಿತ್ತೇನೋ ಅನಿಸಿತು ತುಂಗಮ್ಮನಿಗೆ.ಆದರೆ ವಾಸ್ತವವಾಗಿ ದೊಡ್ಡಮ್ಮನಿಗೇ ಅದು ತಿಳಿದಿರಲಿಲ್ಲ. "ನಂಗೊತ್ತಿಲ್ಲ ಕಣೆ. ಅವರಾಗಿ ಹೇಳ್ಲಿಲ್ಲ. ನಾನು ಕೇಳ್ಲಿಲ್ಲ " "ಕೊಠಡಿ ಖಾಲಿ ಮಾಡಿಸ್ಲಾ?" "ಹೌದು; ಆಲ್ಲಿಂದ ಆ ತಂಬೂರಿ - ತಬಲ ಬೇರೇನೇನು ಸಾಮಾನು ಇದೆಯೊ ಅದನ್ನೆಲ್ಲಾ ಇಲ್ಲಿಗೆ ತಂದ್ಬಿಡಿ " "ಆಗಲಿ ದೊಡ್ಡಮ್ಮ .ಹೆರಿಗೆ ಇಲ್ಲೇ ಆಗುತ್ತೋ?" "ಹೌದುಮತ್ತೆ !ಆಸ್ಪತ್ರೆಗೆ ಕಳುಹಿಸೋಹಾಗೆ ಇಲ್ಲ ತುಂಗ " "ಹಾಸಿಗೆ -" ಆಮೇಲೆ ನೋಡೋಣ ಬಹಳಮಾಡಿ ಅದನ್ನೆಲ್ಲಾ ತಂದೆತರ್ತಾರೆ." ತುಂಗಮ್ಮನ ಕುತೂಹಲ ಹಚ್ಚಿತು ತನ್ನ ಹಾಗೆಯೇ ದುರದೃಷ್ಟಶಾಲಿಯಾದ-ಆದರೆ ಶ್ರೀಮಂತಳಾದ -ಹಿಡುಗಿಯನ್ನು ನೋಡಲು ಅವಳು ತವಕ ಗೊಂಡಳು ಕೊಠಡಿ ಸಿದ್ದನಾಗುತಿದ್ದುದನ್ನು ಕಂಡು ಜಲಜ ಕೇಳದಿರಲಿಲ್ಲ.
"ಏನಕ್ಕ ? ಏನ್ಸಮಾಚಾರ ?"
"ಆದರೇನು ಇರೋಕೆ ಬರ್ತಾರೊ ಆದ್ವಾ-"
ಜಜೆಯಧ್ವನಿಯಲ್ಲಿ ಸೂಕ್ಷ್ಮವಾಗಿ ತಿಳಿದುಕೊಳ್ಳುವ ಸಾಮರ್ಥ್ಯವಿತ್ತು.
"ಅದೇನೊ ನಂಗೊತ್ತಿಲ್ಲಮ್ಮ."
ತುಂಗಮ್ಮನ ಆ ಉತ್ತರವನ್ನು ನಿಜವೆಂದು ಭಾವಿಸಲು ಜಲಜೆಯ ಮನಸ್ಸು ಒಪ್ಪಲಿಲ್ಲ ಆದರೆ.ತುಂಗಮ್ಮ ತನ್ನಿಂದ ಏನನ್ನಾದರೂ ಮರೆಮಾಚುತ್ತಿರಬಹುದೆಂದು ಭಾವಿಸುದಕಕ್ಕಂತೂ ಅವಳು ಸಿದ್ದಳಿರಲ್ಲೇ ಇಲ್ಲ.
"ನಂಗೊತ್ತಕ್ಕಾ.ಹೇಳ್ತೀನಿ ಕೇಳು."
ತುಂಗಮ್ಮನಿಗೆ ಆಶ್ಚರ್ಯವಾಯ್ತು
"ಏನು?"