XV ಹೊಂದಲು ದೀರ್ಘಕಾಲ ಹಿಡಿಯುತ್ತದೆ. ಮೊದಮೊದಲ ಹಂತದಲ್ಲಿ ಮಾನಸಿಕ ಬೇನೆಗಳನ್ನು ಗುರುತಿಸಿ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆಯನ್ನು ನಡೆಸಿದರೆ, ರೋಗವು ಗುಣವಾಗುವುದೂ ಸುಲಭ ; ನಿಶೇಶವಾಗಿ ಗುಣವಾಗುವುದೂ ಸಾಧ್ಯ. ಆದಕಾರಣ ಮಾನಸಿಕ ಬೇನೆಗಳನ್ನು ಆದಷ್ಟು ಬೇಗ ಮೊದಮೊದಲ ಹಂತದಲ್ಲೇ ಪತ್ತೆ ಹಚ್ಚಬೇಕು. ಎಲ್ಲಾ ರೋಗಗಳಿಗೂ ಈ ನಿಯಮವು ಅನ್ವಯಿಸುತ್ತದೆ; ಆದರೆ ಮಾನಸಿಕ ಬೇನೆಗಳಲ್ಲಿ ಅತ್ಯಗತ್ಯವಾದುದು. ಈ ವಿಷಯದಲ್ಲೇ ತಾಪತ್ರಯವು ಶುರುವಾಗುವುದು. ಮಾನಸಿಕ ಬೇನೆಗಳ ಮೊದಮೊದಲ ಹಂತದಲ್ಲಿ ರೋಗಿಯ ನಡವಳಿಕೆಯು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿರುತ್ತದೆ. ಆದರೆ ಎಷ್ಟೋ ಜನರ ಸ್ವಾಭಾವಿಕ ನಡವಳಿಕೆಯೂ ತುಸು ವಿಚಿತ್ರವಾಗಿರುತ್ತದೆ. ಯಾವುದು ಸ್ವಾಭಾವಿಕ ನಡವಳಿಕೆ, ಯಾವುದು ಬೇನೆಯ ಮೊದಲ ಸೂಚನೆ ಎಂದು ನಿರ್ಧರಿಸುವುದು ಕಷ್ಟ ಸ್ವಾಭಾವಿಕವಾದ ತುಸು ವಿಚಿತ್ರವಾದ ನಡವಳಿಕೆಯು ಒಂದೇ ಪ್ರಮಾಣದಲ್ಲಿ ಮುಂದುವರೆಯುತ್ತದೆ. ಆದರೆ ಬೇನೆಯ ಚಿಹ್ನೆಯಾಗಿದ್ದರೆ, ನಡವಳಿಕೆಯು ಹೆಚ್ಚು ಹೆಚ್ಚು ವಿಚಿತ್ರವಾಗುತ್ತದೆ. ಅಲ್ಲದೆ ಇತರ ಮನಸಿಕ ಬೇನೆಗಳೂ ಅಸಾಮಾನ್ಯ ವರ್ತನೆಗಳೂ ಕಾಣಬರುತ್ತವೆ. ಇವುಗಳನ್ನು ಮೊದಲು ಕಾಣುವವರು ಮನೆಯವರು. ಈ ವಿಷಯಗಳನ್ನು ಮನೆಯವರು ಸಾಕಷ್ಟು ತಿಳಿದಿದ್ದರೆ, ಆಗ ಇವನ್ನು ಗಮನಿಸುವುದು ಸುಲಭ ಸಾಧ್ಯ ಆದಕಾರಣ ಜನ ಸಾಮಾನ್ಯರಲ್ಲಿ ಈ ವಿಷಯದ ಪ್ರಚಾರವನ್ನು ಅಗತ್ಯವಾಗಿ ಮಾಡಬೇಕು. ಅವರಿಗೆ ಅರ್ಥವಾಗುವಂತೆ ಸರಳವಾಗಿ ಹಾಗೂ ಸುಲಭವಾಗಿ ಬರೆಯಬೇಕು. ವಿಷಯವನ್ನು ಸ್ಪಷ್ಟವಾಗಿ ವಿವರಿಸುವಾಗ, ಭಾಷೆಯೂ ನಿಖರವಾಗಿರಬೇಕು. ಆಗ ಸರಳ ಭಾಷೆಯು ನೆರವಾಗುವುದಿಲ್ಲ. ವಿರುದ್ಧವಾದ ಈ ಎರಡೂ ಧೈಯಗಳನ್ನು ಸಮನ್ವಯಗೊಳಿಸಲು ಶ್ರಮವಹಿಸಿದ್ದೇನೆ, ತಕ್ಕಮಟ್ಟಿಗೆ ಕಷ್ಟವನ್ನೂ ಪಟ್ಟಿದ್ದೇನೆ. ಆಸಕ್ತಿಯಿಂದ ಓದ ಬಯಸುವ ಕೆಲವರಿಗೂ ಕಷ್ಟವಾಗಬಹುದು ಎನ್ನುವುದು ನನಗೆ ತಿಳಿದಿದೆ. ಕಷ್ಟಪಟ್ಟರೆ ಸುಖವುಂಟು. ಸ್ವಲ್ಪ ಶ್ರಮ ತೆಗೆದುಕೊಂಡರೆ ಹೆಚ್ಚು ನೆಮ್ಮದಿ ದೊರಕಿತು. ಈ ವಿಶ್ವಾಸದಿಂದ ಕನ್ನಡ ಜನತೆಯ ಮುಂದೆ ಈ ಹೊತ್ತಗೆಯನ್ನು ಕಾಣಿಕೆಯಾಗಿ ನೀಡುತ್ತಿದ್ದೇನೆ. ಎಂ. ಶಿವರಾಂ
ಪುಟ:ಮನಮಂಥನ.pdf/೧೫
ಗೋಚರ