ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚತಂತ್ರ ಕಥೆಗಳು, Speculations of Vardhanàna. ಧನವಿಲ್ಲದಿದ್ದರೆ ಆರ್ಜಿಸಬೇಕು. ಆರ್ಜಿಸಿದ ಧನವನ್ನು ರಕ್ಷಿಸ ಬೇಕು. ರಕ್ಷಿಸಿದ ಧನವನ್ನು ವೃದ್ಧಿಮಾಡಬೇಕು. ವೃದ್ಧಿಮಾಡಿದ ಧನ ವನ್ನು ಸದ್ವಿನಿಯೋಗ ಪಡಿಸಬೇಕು. ಹೀಗೆ ಮಾಡಲರಿಯದವನ ಮನೆಯಲ್ಲಿ ದ್ರವ್ಯವು ಹೆಗೆ ನಿಂತೀತು ? ಮೂಢರಾದವರು ಈ ಅಭ್ಯವನ್ನು ತಿಳಿದುಕೊ Yಲಾರರು. ಸಂರಕ್ಷಣೆ ಮಾಡದ ದ್ರವು ಆಗಲೇ ನಶಿಸುವುದು, ವೃದ್ಧಿ ಪಡಿಸದ ಧನವನ್ನು ಸ್ವಲ್ಪ ಸ್ವಲ್ಪವಾಗಿ ವೆಚ್ಚ ಮಾಡಿದರೂ ಕಾಡಿಗೆಯಾಗೆ ಸವೆದುಹೋಗುವುದು ಅನುಭವಕ್ಕೆ ಬಾರದ ಒಡವೆ ಇದ್ದರೂ ಇಲ್ಲದಹಾ ಗೆಯೇ ಸುಖಕರವಾಗದು. ಒಬ್ಬರಿಗೆ ಕೊಡುವುದು, ತಾನನುಭವಿಸುವುದು, ಯಾರಾದರೂ ಎತ್ತಿಕೊಂಡು ಹೋಗುವುದು, ಈಮೂರು ಧನಹೋಗುವು ದಕ್ಕೆ ದಾರಿಗಳು. ಆದುದರಿಂದ ಯಾವನು ತನ್ನ ಧನವನ್ನು ಒಬ್ಬರಿಗೆ ಕೊಡದೆ ತಾನೂ ಅನುಭವಿಸನೋ, ಅವನ ಧನವನ್ನು ಯಾರಾದರೂ ಎತ್ತಿ ಕೊಂಡು ಹೋಗುವರು. ತುಂಬಿದ ಕೆರೆಗಳಿಗೆ ಕೊಡಿಗಳನ್ನೂ ತೂಬು ಗಳನ್ನೂ ತೆಗೆದು ಪೈರಿಗೆ ನೀರು ಬಿಟ್ಟಂತೆ ಸಂಪಾದಿಸಿದ ಧನವನ್ನು ಮಾತ್ರ ವರಿತು ವೆಚ್ಚ ಮಾಡುವುದು ರಕ್ಷಿಸುವುದೇಸರಿ ಎಂದು ಆಲೋಚಿಸಿದನು. The trade of Vardhamània and his _Bullock Sanjivaka, ಬಳಕ ವರಮಾನನು ತನ್ನ ಮನೆಯಲ್ಲಿದ್ದ ಕುಂಕುಮದ ಹೂ ಗೋರೋಚನ ಕಸ್ತೂರಿ ಮುತ್ತುಗಳು ಹವಳಗಳು ವಜಗಳು ಕೆಂಪು ಗಳು ಪಬ್ ಗಳು ವೈಡರಗಳು ಗೋಮೇಧಿಕಗಳು ಪುಷ್ಯರಾಗಗಳು ಅಪರಂಜಿಗಳು ಬೆಳ್ಳಿ ಪಟ್ಟೆಸೀರೆಗಳು ಸರಿಗೆದುಪ್ಪಟಗಳು ನಾನಾವಿಧ ವಾದ ಕಾಲುವೆಗಳು 'ಇವೇ ಮೊದಲಾದ ಬಹಳ ಬೆಲೆಯುಳ್ಳ ವಸ್ತುಗ ೪ನ್ನು ಒಂದು ಬಂಡಿಗೆ ಏರಿಸಿ, ಅದಕ್ಕೆ ಸಂಜೀವಕ ನಂದಕಗಳಂಬ ಹೆಸ ರುಳ್ಳ ಎರಡು ಎತ್ತುಗಳ ಕಟ್ಟಿಸಿ, ಬಂಡಿಯನ್ನು ಸಾಗಿಸಿಕೊಂಡು ಬೇಕಾದ ಪರಿವಾರದೊಂದಿಗೆ ವ್ಯಾಪಾರಮಾಡುವುದಕ್ಕಾಗಿ ಪರದೇಶಕ್ಕೆ ಹೊರಟು ಹೋದನು. ಆಗ ಬಂಡಿ ಬಹಳ ಭಾರವಾಗಿದ್ದುದರಿಂದ ಮಾರ್ಗದಲ್ಲಿ