ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಪಂಚತಂತ್ರ ಕಥೆಗಳು. ನಕನು-ಸ್ವಾಮಿಾ, ಮುಂಚೆ ನೀವು ಕೇಳಿದ ಶಬ್ದವನ್ನು ಚನ್ನಾಗಿ ವಿಚಾ ರಿಸಿ ತಿಳಿದುಕೊಂಡು ನಿಮ್ಮ ಸನ್ನಿಧಾನಕ್ಕೆ ಬಂದೆನು. ಆ ಧ್ವನಿ ಮಾಡಿದ ವನು ನಿಮ್ಮ ಅನುಗ್ರಹಕ್ಕೆ ತಕ್ಕವನೇ ಹೊರತು ಕೋಪಕ್ಕೆ ಪಾತ್ರನಲ್ಲ. ನಿಮ್ಮ ಪರಾಕ್ರಮವನ್ನು ಕೇಳಿದಾಗಲೇ ಬಹಳ ಭಯಪಟ್ಟನು. ವಾಯು ವು ದೊಡ್ಡ ವೃಹಗಳನ್ನು ಮುರಿದು ಕೆಡಹುತ್ತದೆಯೇ ಹೊರತು ಅಲ್ಪ ವಾಗಿ ಬಗ್ಗಿದ ತೃಣಗಳನ್ನು ಮುರಿಯದು ; ಹಾಗೆಯೇ ದೊಡ್ಡವರು ದೊಡ್ಡವರಲ್ಲಿ ತಮ್ಮ ಪರಾಕ್ರಮವನ್ನು ತೋರಿಸುವರೇ ಹೊರತು ಅಲ್ಪ ರಲ್ಲಿ ತೋರಿಸರು. ನಿಮ್ಮ ಗುಣಗಳನ್ನು ಹೊಗಳುವುದಕ್ಕೆ ಯಾರಿಗೆ ಶಕ್ಯವು ! ಆ ಜಂತುವನ್ನು ನಿಮ್ಮ ಪಾದದ ಬಳಿಗೆ ಕರೆದುಕೊಂಡು ಬರುತ್ತೇನೆ. ಆಗ ನಿಮಗೆ ಕೇಳಿಸಿದ ಧ್ವನಿಯನ್ನು ಮಾಡಿದ ಜಂತು ಸಂಜೀವಕನೆಂಬ ಹೆಸರುಳ್ಳ ವೃಷಭರಾಜನು. ಅವನು ದೊಡ್ಡವನು, ಒಳ್ಳೆಯ ಬುದ್ದಿಯುಳ್ಳವನು, ನಿಮಗೆ ಮಂತ್ರಿಯಾಗಿರತಕ್ಕವನು, ನಾನು ಅವನನ್ನು ನಿಮ್ಮ ಬಳಿಗೆ ಕರೆತರಲೊ ?-ಎನಲು; ಮೃಗರಾಜನು ತುಂಬ ಸಂತೋಷದಿಂದ ಸಮ್ಮತಿಸಿದನು. Damanaka introduces Sanjivaka to Pingalaka. - ಆಮೇಲೆ ದಮನಕನು ತಿರುಗಿ ಸಂಜೀವಕನ ಬಳಿಗೆ ಹೋಗಿ ಅವ ನನ್ನು ಕರೆದುಕೊಂಡು ಬಂದು ನಿಂಹದ ಹತ್ತಿರ ನಿಲ್ಲಿಸಿದನು. ಪಿಂಗಳ ಕನು ತನಗೆ ನಮಸ್ಕರಿಸಿ ನಿಂತ ಸಂಜೀವಕನನ್ನು ನೋಡಿ ಅವನ ತಲೆ ಯಮೇಲೆ ಕೈಯಿಟ್ಟು-ನೀನೇ ನಾನು, ನಾನೇ ನೀನು, ನಮಗೆ ಭೇದ ವಿಲ್ಲ ನೀನು ನನಗೆ ಮಂತ್ರಿಯಾಗಿರು. ನಿನ್ನ ಮನಸ್ಸು ಬಂದಹಾಗೆ ಈ ವನದಲ್ಲಿ ಸಂಚರಿಸು-ಎಂದು ನುಡಿದು ಸಂಜೀವಕನಿಗೆ ಅಭಯಪ್ಪ ದಾನ ಮಾಡಿದನು. ಅನಂತರ ಸಂಜೇವಕನು ಮರಳಿ ಮೃಗರಾಜನಿಗೆ ನಮಸ್ಕರಿಸಿ ಕೈಮುಗಿದುಕೊಂಡು, ಸ್ವಾಮಿ, ನೀವು ಹೇಳಿದ ಹಾಗೆ ಕೇಳಿ ನಿಮ್ಮ ಪಾದದ ಬಳಿಯಲ್ಲಿ ಕಾದುಕೊಂಡಿರುವೆನು.' ನನ್ನನ್ನು ಕಟಾಕ್ಷಿಸಬೇಕು ಎಂದು ನುಡಿದನು. ಅದುಮೊದಲು ಪಿಂಗಳಕ ಸಂಜೀವಕರು ಇಬ್ಬರೂ ಬಹಳ ಸ್ನೇಹವಾಗಿದ್ದರು. ಹೀಗೆ ಕೆಲವು ಕಾಲ