ವಿಷಯಕ್ಕೆ ಹೋಗು

ಪುಟ:Kannada-Saahitya.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯುಚ್ಚೋರನೆಂಬ ಋಷಿಯ ಕಥೆ ೫

 ಹೀಗೆ ಅವರಿಬ್ಬರೂ ಒಬ್ಬರಿಗೊಬ್ಬರು ಆಡಿಕೊಳ್ಳುತ್ತಿದ್ದ ಮಾತುಗಳನ್ನು ಕಾಲಿನವರೂ ಊರಜನರೂ ಕೇಳಿ ಚೋದ್ಯಪಟ್ಟು  ಬೆರಗಾಗಿದ್ದರು.
  ವಿದ್ಯುಚ್ಚೋರನು ಕಾಪಿನವರಿಗೆ ಹೀಗೆ ಹೇಳಿದನು:"ನನ್ನನ್ನೂ ಈತನ್ನನ್ನೂ ಅರಸನಲ್ಲಿಗೆ ಕರೆದುಕೊಂಡು ಹೋಗಿ.ಅರಸನ ಮುಂದೆ ನನಗೂ ಇವನಿಗೂ ಮಾತುಂಟು.ಅಲ್ಲಿ ಆ ಮಾತಾಡಿದ ಬಳಿಕ ಅರಸನು ಈತನನ್ನು ತನ್ನ ಮನಬಂದಂತೆ ಮಾಡಲಿ.'ಎಂತಾದರೂ,ಕೊಲ್ಲ ಹೇಳಿದರೂ ಮೂರು ಸಲ ಬೆಸಗೊಂಡಲ್ಲದೆ ಕೊಲ್ಲಲಾಗದು'ಎಂದು ನೀತಿಶಾಸ್ತ್ರಗಳಲ್ಲಿ ಹೇಳಿದೆ.ಅದರಿಂದ ನಮ್ಮಿಬ್ಬರನ್ನು ಅರಮನೆಗೆ ಕರೆದುಕೊಂಡು ಹೋಗಿ ಅರಸನಿಗೆ ತೋರಿಸಿ"ಎನ್ನಲಾಗಿ,ಇ ಕಾಪಿನವರು ಇಬ್ಬರನ್ನೂ ಅರಸನ ಬಳಿಗೆ ಕರೆದುಕೊಂಡು ಹೋದರು.ಹೋಗಿ,"ದೇವಾ,ಈತನು ಯಮದಂಡನನ್ನು ಕೊಲ್ಲಬಿಡದೆ ತಡೆದನು"ಎಂದು ಅರಸನು ಕೇಳಲು,ವಿದ್ಯುಚ್ಚೋರನು ಹೇಳತೊಡಗಿದ.
   "ಯಮದಂಡನದೇನೂ ದೋಷವಿಲ್ಲ. ದೇವತಾ ರಕ್ಷಿತವಾದ ಸರ್ವರುಜಾಪಹಾರನೆಂಬ ನಿಮ್ಮ ಹಾರ ಮೊದಲಾಗಿ ಪಟ್ಟಣದ ಒಡವೆಗಳನ್ನೆಲ್ಲ ರಾತ್ರಿಹೊತ್ತು ಈ ರೂಪಿನಲ್ಲಿ ಕದ್ದು,ಹಗಲೆಲ್ಲ ತೊನ್ನವನಾಗಿ ಹಾಳು ದೇಗುಲಲ್ಲಿ ಇರುತ್ತಿದ್ದೆ. ಆದ್ದರಿಂದ ನನ್ನನ್ನು ಕೊಲ್ಲಿ.ಈತನಿಗೇನೂ ದೋಷವಿಲ್ಲ."ಹೀಗೆನ್ನಲು ಅರಸನು,"ಆ ಕದ್ದ ಒಡವೆಯನ್ನೆಲ್ಲ ಏನು ಮಾಡಿದೆ?"ಎಂದು ಕೇಳಿದನು."ಅಷ್ಟೂ ಇದೆ.ಐದಾರು ಸಾವಿರ ದೀನರ ವೆಚ್ಚವಾಗಿದೆ.ಉಳಿದದ್ದೆಲ್ಲ ಅಚ್ಚಳಿಯದೆ ಇದೆ"ಎಂದನು.ದೊರೆ,"ಹಾಗಾದರೆ,ಹಾರವನ್ನು ತೆಗೆದುಕೊಂಡು ಬಾ.ಪಟ್ಟಣದವರಿಗೂ ಅವರವರ ಒಡವೆಗಳನ್ನಿಟ್ಟಿರುವ ಸ್ಥಳವನ್ನು ತೋರಿಸಿ"ಎಂದು ಅಪ್ಪಣೆ ಮಾಡಿ ಪಟ್ಟಣದ ಜನಗಳನ್ನೂ ಅವನೊಡನೆ ಕಳಿಸಿದನು.
     ಅವರೆಲ್ಲ ಕಾಪಿನೊಡನೆ ಹೊರಟರು.ವಿದ್ಯುಚ್ಚೋರನು ಅವರೊಡನೆ ಹೋಗಿ ಗುಹೆಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಶಿಲೆಯನ್ನು ತೆಗೆದುಹಾಕಿ ಹೊಳಹೊಕ್ಕು ಹಾರವನ್ನು ತೆಗೆದುಕೊಂಡು ಪಟ್ಟಣದ ಜನಕ್ಕೆಲ್ಲ,"ನಿಮ್ಮ ನಿಮ್ಮ ಒಡವೆಗಳನ್ನು ಹುಡುಕಿ ತೆಗೆದುಕೊಳ್ಳಿ.ಒಬ್ಬರದೊಬ್ಬರಿಗೆ ಪಲ್ಲಟಿಸ