ವಿಷಯಕ್ಕೆ ಹೋಗು

ಸ್ಕೂಲ್ ಮಾಸ್ಟರ್ - ಬನ್ನಿರೈ ಬನ್ನಿರೈ ಬನ್ನಿರೈ

ವಿಕಿಸೋರ್ಸ್ದಿಂದ


ಬನ್ನಿರೈ ಬನ್ನಿರೈ ಬನ್ನಿರೈ
ಗುರುಸೇವೆಯೇ ನಮ್ಮ ಸರ್ವೋದಯ ||೨||
ಗುರುಮನೆಯೇ ನಮ್ಮೂರ ದೇವಾಲಯ ||೨||
ಬನ್ನಿರೈ ಬನ್ನಿರೈ ಬನ್ನಿರೈ

ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ
ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ
ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ
ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ

ಬನ್ನಿರೈ ಬನ್ನಿರೈ ಬನ್ನಿರೈ

ಜಾತಿ ಭೇದದ ವ್ಯಾಧಿ ಊರಿನಿಂದ ತೊಲಗಿಸಿ ||೨||
ನೀತಿಯ ಪ್ರೀತಿಯ ಜ್ಯೋತಿಯನ್ನು ಬೆಳಗುವಾ ||೨||
ನುಡಿದಂತೆ ನಡೆಯುವ ಗಂಡುತನ ಕಲಿಸುವಾ ||೨||
ನಾಡ ಕಟ್ಟೊ ಶಕ್ತಿಯಾ ತಾನೊಲಿದು ನೀಡುವ
ಬನ್ನಿರೈ ಬನ್ನಿರೈ ಬನ್ನಿರೈ

ಶಾಲೆಯೊಂದೆ ತನ್ನ ಬಾಳ್ವೆ ಭಾಗ್ಯವೆನ್ನುವಾ ||೨||
ಬಾಲರೆಲ್ಲ ತನ್ನ ಮನೆಯ ಮಕ್ಕಳೆನ್ನುವಾ ||೨||
ತಾಳ್ಮೆಯಿಂದ ನಮ್ಮ ಮತಿಗೆ ಬೆಳಕ ತೋರುವಾ ||೨||
ಗುರುಬ್ರಹ್ಮ ಗುರುವಿಷ್ಣು ಗುರುವೇ ಶಿವಾ ||೨||

ಬನ್ನಿರೈ ಬನ್ನಿರೈ ಬನ್ನಿರೈ

ಗುರುಸೇವೆಯೇ ನಮ್ಮ ಸರ್ವೋದಯ ||೨||
ಗುರುಮನೆಯೇ ನಮ್ಮೂರ ದೇವಾಲಯ ||೨||
ಬನ್ನಿರೈ ಬನ್ನಿರೈ ಬನ್ನಿರೈ


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ