ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
xxi

ಮಾತುಮಾತಿಗೊಮ್ಮೆ "ಎಮ್ಮವರು ಬಡವರು | ಇನ್ನೇನು ಕೊಡುವರು" ಎಂದು ವಿನಯದಲ್ಲಿ ಜಂಬ ಮೆರೆಸುತಾಳೆ. "ನಿನ್ನವರು ನಿನಗೆ ಇಷ್ಟೆಲ್ಲ ಕೂಡಮಾಡಿದರು ಆದರೆ ನನಗೇನು ಕೊಟ್ಟರು" ಎಂದು ಶಿವನು ಕೇಳಿದರೆ-ಇಷ್ಟೆಲ್ಲ ನನಗೆ ಕೊಟ್ಟು ನನ್ನನ್ನೇ ನಿಮಗೆ ಕೊಡಮಾಡಿದರು ಎಂದು ನುಡಿದು, ಒಂದೇಟಿಗೆ ಸಂಭ್ರಮವು ಸೂಸುವಂತೆ ಮಾಡಿಡ್ದುಂಟು

ಜನಪದ ಕಥೆಗಳನ್ನು ಸೃಷ್ಟಿಸಿದರು ಬುದ್ದಿಶಾಲಿಗಳಲ್ಲ, ಭಾವನಾಶೀಲರು, ಅವರಿಗೆ ಬುದ್ದಿಯೇ ಇರಲಿಲ್ಲವೆಂದಲ್ಲ ಭಾವನಾಶೀಲತೆಗೆ ಇಜ್ಜೋಡು ಆಗದಷ್ಟು ಬುದ್ದಿವಂತಿಕೆ ಅರಳಿತ್ತು. ಮಾನಕ್ಕೆ, ಅಭಿಮಾನಕ್ಕೆ ಕಲಂಕ ಹತ್ತುವ ಪ್ರಸಂಗ ಬಂದರೆ ತನ್ನಾಸ್ತಿ ದೊಡ್ದಸಿಕ್ಕೆ ಮೊದಲಾದ ಸರ‍್ವಸ್ವವನ್ನೇ ಸೂರೆಮಾಡಿ, ಜೀವ ಸಹ ತೆತ್ತು ಶುಭ್ರ ಕೀತಿ೯ಯನ್ನು ಕಾಪಾಡಿಕೊಳ್ಳುತ್ತಿದ್ದ ಆದಶ೯ವು ಅವರ ಕಥೆಗಳಲ್ಲಿ ಸೂರೆಗೊಂಡಿವೆ. ನೈಸಗಿ೯ಕ ಕಟ್ಟಳೆಯನ್ನು ತಲೆಯಿಂದ ಪರಿಪಾಲಿಸುತ್ತ, ಪ್ರಸಂಗ ಬಂದರೆ ದೇವನನ್ನು ಸಹ ಸೋಲಿಸುತ್ತಿದ್ದರು. "ಜಗಕೆ ಬಲ್ಲಿನ ನೀನು, ನಿನಗೆ ಬಲ್ಲಿದ ನಾನು" ಎಂದು ಸೆಣಸಿದೆ, "ಜಗವ ಸುತ್ತಿಪ್ಪುದು ನಿನ್ನ ಮಾಯೆ, ನಿನ್ನ ಸುತ್ತಿಪ್ಪುದು ಎನ್ನ ಮನ" ಎಂದು ಗುಣಿಸದೆ ಬುದ್ದಿಯ ಸೋಂಕಿಲ್ಲದೆ ಮರುಳನಂತೆ ಬಾಳುತ್ತಿರುವ ಕುರುಬನಂಥವನು ಶ್ರದ್ಡೆಯ ಬಲದಿಂದ ಶಿವಪಾವ೯ತಿಯರನ್ನು ಸೋಲಿಸಿದ ಕಥೆಯಿದೆ.

ಜಗತ್ತೆಂದರೆ ಮನುಷ್ಯನೊಡನೆ ದೇವನು ಹೂಡಿದ ಪಗಡೆಯಾಟ. ಆಟದಲ್ಲಿ ಯುಕ್ತಿಸಂಗತವಾಗಿ ಪಗಡಿಗಳನ್ನು ಸರಿಸಾಡುವದಿದ್ದರು ಡಾಳು ಬಗೆಯದೆ ಪಗಡಿಗೆ ಕ್ಯೆಹಚ್ಚುವಂತಿಲ್ಲ. ಆಟದಲ್ಲಿ ನಿಪುಣನಾದ ದೇವನು ಗೆಲ್ಲುವುದು ಅಚ್ಚರಿಯಲ್ಲ. ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಜೀವನದು. ಜೀವನು ಗೆಲುವಡೆಯದಿದ್ದರೆ ಬಿಡಲಿ, ಆತನು ಗೆಲುವೆನೆಂದು ಹೇಳಿಕೊಳ್ಳುವುದು ದೊಡ್ಡದು. ಅದು ಶ್ರದ್ದೆಯಿಂದ ದೊರಕೊಳ್ಳುವ ಬಲ. ಜನಪದ ಕಥೆಗಳಲ್ಲಿ ಅಂಥ ಜೀವಿಗಳು ಸುಳಿದು ಬರುತ್ತಾರೆ.

ಅನ್ನವನು ನೀಡುವುದು ಮನುಷ್ಯಧರ್ಮ. ಆ ಧಮ೯ಕ್ಕೆ ಚ್ಯುತಿಬಂದರೆ ಆ ಅನ್ನ ಅಲ್ಲೇಕೆ ಉಳಿದೀತು? ಅದೇ "ಎಲ್ಲಮ್ಮನ ಶಾಪ". ಎಂಜಲುಗ್ಯೆಯಿಂದ ಕಾಗೆ ಹೊಡೆಯದ ಜೀನಹಂಕನು, ಜೋಗಿತಿಯ ವೇಷದಲ್ಲಿ ಬಂದ ಎಲ್ಲಮ್ಮನನ್ನು ಛಲಿಸಿದ್ದರಿಂದ ಆಕೆಯ ಬೆವರು-ನಿಟ್ಟುಸಿರುಗಳೊಡನೆ ಕಣ್ಣಕಾಡಿಗೆ, ಹಣೆಯ ಕುಂಕುಮ, ಗಲ್ಲಭಂಡಾರ, ಮುಂಗ್ಯೆ ಗಂಧಗಳೆಲ್ಲ ತುಂಬಿ ನಿಂತ ಅತನ ಹೊಲದ ಬೆಳೆಯಲ್ಲಿ ಸೂರಾಡಿ ತೂರಾಡಿದ್ದರಿಂದ ಬೆಳೆಗಳೆಲ್ಲಿ ಹುಸಿಯಾದವು. ಕಾಳಿನ ಮೇಲೆ ಅದನ್ನು ತಿನ್ನುವವನ ಹೆಸರು ಬರೆದಿರುವದೆಂಬ ಮಾತಿನಲ್ಲಿ ಜನಪದಕ್ಕೆ ತುಂಬ ಭರವಸೆಯಿದೆ. ತನ್ನ ಚಿಂತೆಯಲ್ಲಿ ಮುಳುಗಿದವನ ಸಲುವಾಗಿ ದೇವನೇ ಚಿಂತಿಸುತ್ತಾನೆಂಬ ನಂಬಿಕೆ