ವಿಷಯಕ್ಕೆ ಹೋಗು

ಪುಟ:Abhaya.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
'
'ಅಭಯ
೨೭೧

ಆ ಕಾಫಿಯ ಪ್ರಸ್ತಾಪ, ಕನಕಲಕ್ಷಮ್ಮ ತಂದುಕೊಟ್ಟಿದ್ದ ಕಾಫಿಯ ನೆನಪು ಅವನಿಗೆ ಮರುಕಳಿಸಲು ಕಾರಣವಾಯಿತು. ಅಂತಹ ನೆನಪು ಆಸಹನೀಯವೇ ಆಗಿದ್ದ ಸಂಕಟ....

ಹಾಗೆ ಸ್ವಲ್ಪ ಹೊತ್ತು ಕುಳಿತಿದ್ದು, ಮಹಾಬಲ ಹೊರಟುನಿಂತ. ಸರಸಮ್ಮ ಅವನನ್ನು ಬೀಳ್ಕೋಡಲೆಂದು ಬಾಗಿಲವರೆಗೂ ಬಂದರು.

ಅಲ್ಲಿ ಒಮ್ಮೆಲೆ ಆತ ಅವರ ವಾದಗಳನ್ನು ಹಿಡಿದುಕೊಂಡ.

"ಛೆ! ಛೆ! ಏಳಿ--ಏಳಿ!"

"ಅಮ್ಮಾ....ನಾನು ಹಾಳಾಗಿ ಹೋದೆ. ನನ್ನನ್ನು ಉದ್ಧಾರಮಾಡಿ."

"ಏನವ್ವಾ, ಏನುಬೇಕು ?"

"ಅಮ್ಮಾ....ನನಗೆ ಇನ್ನೊಂದು ಹೆಣ್ಣು ಕೊಡ್ಸಿ...."

"ಆ!"

ಸರಸಮ್ಮನ ತೆರೆದಬಾಯಿ ಮುಚ್ಚಿಕೊಳ್ಳಲ್ಲಿಲ್ಲ ಸ್ವಲ್ಪ ಹೊತ್ತು! ದಂಗು ಬಡೆದಹಾಗಾಯಿತು ಅವರಿಗೆ.

ತುಂಗಮ್ಮ ಮಹಾಬಲನ ಮಾತುಕೇಳಿ ಬೆರಗಾಗಿ ಬೆರಳುಗಳಿಂದ ಮೂಗನ್ನು ಒರೆಸಿಕೊಂಡಳು.

"ಏಳು, ಹೇಳ್ತೀನಿ"

--ಎಂದರು ಸರಸಮ್ಮ. ಬಹುವಚನದ ಸಂಬೋಧನೆ ಇನ್ನು ಅನಗತ್ಯವಾಗಿ ಅವರಿಗೆ ತೋರಿತು.

ಆತ ಎದ್ದುನಿಂತ. ಸರಸಮ್ಮನೂ ಆವನೊಡನೆ ಆಂಗಳಕ್ಕಿಳಿದಳು. ಅಲ್ಲಿ ಗಂಭೀರಧ್ವನಿಯಲ್ಲಿ ಒಂದೊಂದೇ ಪದವನ್ನು ಸ್ಪರ್ಷವಾಗಿ ಆಡುತ್ತ ಅವರೆಂದರು:

"ನಾನು ಹೇಳೋದು ಕೇಳು ಮಹಾಬಲ ಈ ಅಭಯಧಾಮದ ಹುಡುಗೀರು ಒಳ್ಳೆಯೋರಲ್ಲ....ಇವರ ಯೊಚ್ನೆಬಿಟ್ಟಿಡು. ನಿಮ್ಮ ಹಳ್ಳಿಗೆ ಹೋಗಿಒಳ್ಳೆ ಹುಡುಗಿ ನೋಡ್ಕೊಂಡು ಬಂದು ಮದುವೆಯಾಗು."

ಅಂತೂ ನಿರಾಶನಾಗಿ ಮಹಾಬಲ ಹೊರಟುಹೋದ.

"ನೋಡಿ ಅವನ ಧೈರ್ಯ! ಇನ್ನೊಂದು ಹೆಣ್ಣು ಬೇಕಂತೆ!"