"ಶೀಲಾ ದೇಸಾಯಿ",
"ಪ್ರೆಜೆಂಟ್ ಮ್ಯಾಡಂ",
"ಶಾಂತಾ ಪಾಟೀಲ",
"ಪ್ರೆಜೆಂಟ್ ಮ್ಯಾಡಂ",
"ಸರೋಜಿನಿ ದೇಶಪಾಂಡೆ",
"........"
"ಸರೋಜಿನಿ ದೇಶಪಾಂಡೆ",
"........"
-ಹಾಜರಿ ಪುಸ್ತಕದಿಂದ ತಲೆಯೆತ್ತಿ ಒಮ್ಮೆ ಸುತ್ತಲೂ ದ್ರುಷ್ಟಿ ಹಾಯಿಸಿದಳು
ಪ್ರೊ. ಲೀಲಾವತಿ. ಸರೋಜಿನಿ ಕಾಣಲಿಲ್ಲ. ಯಕೋ ಅವಳಿಗೆ ಒಮ್ಮೆಲೇ ಎಲ್ಲಾ
ಹುಡುಗಿಯರ ಮೇಲೂ ವಿಪರೀತ ಸಿಟ್ಟು ಬಂದಿತ್ತು. ಟೇಬಲ್ ಮೇಲೆ ವಿನಾಕಾರಣ
ಕೈ ನೋಯುವ ಹಾಗೆ ಒಮ್ಮೆ ಗುದ್ದಿ ಗರ್ಜಿಸಿದಳು. "Where is she? ಆಕೀಗೇನ
ಯಾರೂ ಹೇಳವ್ರು-ಕೇಳವ್ರು ಇದ್ಧಾಂಗ ಕಾಣ್ಸೂದಿಲ್ಲ. ನಿನ್ನೇನೂ ತಡಾ ಮಾಡೇ
ಬಂದಳು. ಅಟೆಂಡನ್ಸ್ ಹೊತ್ತಿಗೆ ಇಲ್ಲೆ ಇರಬೇಕೆನ್ನೂದು ಗೊತ್ತದನೊ ಇಲ್ಲೋ?
ಹಾಸ್ಟೆಲಿನ್ಯಾಗ ಇದ್ದಮ್ಯಾಲ ರೂಲ್ಸು ಅಂದರ ರೂಲ್ಸು. ರಾತ್ರಿ ಎಂಟ ಘಂಟೇದ ತನಕಾ
ತಿರಗ್ಯಾಡೂದು ಅಂದ್ರೇನು? ನೀವೇನಿಲ್ಲೆ ಕಲೀಲಿಕ್ಕೆ ಬಂದೀರೋ ಏನ ಮಜಾ
ಮಾಡಲಿಕ್ಕೊ? ಅಂಥಾ ಅವಶ್ಯ ಕೆಲಸ ಇದ್ದರನಾ ದೆವ್ವನ್ಹಾಂಗ ಸೂಪರಿಂಟೆಂಡೆಂಟ
ಜೀವಂತ ಇದ್ದೀನಿ. ನನಗ ಹೇಳಿ ಹೋಗಲಿಕ್ಕೆ ಏನಾಗತದ ನಿಮಗ?"
ಉತ್ತರ ಬರಲಿಲ್ಲ. ದರಿದ್ರ ಹುಡುಗಿಯರು ಒಬ್ಬರನ್ನೊಬ್ಬರು ನೋಡಿ ಕಣ್ಣು
ಮಿಟುಕಿಸುತ್ತಿದ್ದಾರೆ. ತಾನು ಎದುರಿಗೆ ನಿಂತಿರಲಿಕ್ಕೇ ಎಷ್ಟು ಧೈರ್ಯ ಇವರಿಗೆ! ಇಷ್ಟು
ಬೈದರೂ ನಾಚಿಕೆಯಿಲ್ಲವಲ್ಲ! ಆದರೆ ಈ ಸರೋಜಿನಿ ಎಲ್ಲಿಗೆ ಹೋದಳು? ಮತ್ತೆ
ಆ ತನ್ನ ಎತ್ತರ ಬಾಯ್ ಫ್ರೆಂಡ್ ಜೊತೆ ತಿರುಗಾಡಲು ಹೋಗಿರಬಹುದೇ? ಛೇ,
ಅವಳ ಉದ್ಧಟತನ ಮಿತಿಮೀರುತ್ತಿದೆ. ತಾನಿಷ್ಟು ಬೈದರೂ ಲಕ್ಶ್ಯವಿಲ್ಲವಲ್ಲ ಅವಳಿಗೆ!
ಈ ಹುಡುಗಿಯರೇ ಇಷ್ಟು; ಯಾರಾದರೂ ಗಂಡುಹುಡುಗರು ನಾಯಿಯ ಹಾಗೆ ಬಾಲ
ಪುಟ:ನಡೆದದ್ದೇ ದಾರಿ.pdf/೨೮
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಆತಿಥಿ
೨೧