ಕಲ್ಲರಳಿ ಹೂವಾಗಿ - ಕಲ್ಲರಳಿ ಹೂವಾಗಿ
ಚಿತ್ರ: ಕಲ್ಲರಳಿ ಹೂವಾಗಿ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಹೇಮಂತ್ ಕುಮಾರ್ ಮತ್ತು ಸಂಗಡಿಗರು
ಕಲ್ಲರಳಿ.. ಹೂವಾಗಿ
ಹೂವರಳಿ.. ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ
ಘಲ್ ಎಂದಳು ಎದೆಯಲಿ ಪದವಾಗೀ!
ಕಲ್ಲರಳಿ.. ಹೂವಾಗಿ
ಹೂವರಳಿ.. ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ
ಝುಂ ಎಂದಳು ಎದೆಯಲಿ ಪದವಾಗೀ!
ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗೀ!
ಈ.. ಕಾಡಿಗೆ ಕಣ್ಣೊಳ ಕಿರುಗೆಜ್ಜೆ ದನಿಯ
ಬೆನ್ಹತ್ತಿದೆ ನನ್ನ ಪಂಚ್ಚೇರು ಜೀವ
ಪಂಚ್ಚೇರು ರಾಗಿ.. ಆಮೇಲೆ?
ಪಂಚ್ಚೇರು ಅಕ್ಕಿ... ಹಾ!
ಓ.. ಆ ದಿಬ್ಬ ಈ ದಿಬ್ಬ ಸುತ್ತೋಳ ಸಂಘ
ಜೀ ಕಾಡಿದೆ ನನ್ನ ಅರೆ ಪಾವು ಗುಂಡಿಗೆ
ನಿನಗೊಂದು ಕೋಟೆ.. ಕಟ್ಟುವೆನು ನಾನು
ರಾಣಿಯಾಗಿ ನನ್ನ.. ಪಾಲಿಸುವೆ ಏನು?
ನಿನಗೆ ನನ್ ಎದೆಗೆ ಅಂತಃಪುರ
ಕಲ್ಲರಳಿ.. ಹೂವಾಗಿ
ಹೂವರಳಿ.. ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕಾಗಿ
ಅಚ್ಚಾದಳು ಎದೆಯಲಿ ಪದವಾಗೀ!
ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗೀ!
ಓ.. ಹೊಂದೇರ ಮೇಲೇರಿ ದುರ್ಗಾದ ಸೂರ್ಯ
ಮುಚ್ಚಿಟ್ಟ ರತ್ನನ ತೋರಿತ್ತ ನನಗೆ
ಈ.. ರತ್ನಕ್ಕೆ ಚಿನ್ನದ ಕುಂದಣವಾಗೆ
ತರಾಸು ತಟ್ಟೇಲಿ ನನ್ನಿಟ್ಟ ಕೊನೆಗೆ
ನಿನ್ನ ನೆನೆದೆನಗೆ.. ಬಿಸಿಲಲು ಕನಸೆ
ನೀನು ಬಳುಕಾಡಿ.. ತೂಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆ ನಾ!
ಕಲ್ಲರಳಿ.. ಹೂವಾಗಿ
ಹೂವರಳಿ.. ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಮಾನಸದೇಸಿ ವಧುವಾಗಿ
ಒಂದಾದಳು ಎದೆಯಲಿ ಪದವಾಗೀ!
ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗೀ!
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ