ವಿಮೋಚನೆ/ಬುಧವಾರ

ವಿಕಿಸೋರ್ಸ್ದಿಂದ
....ಬುಧವಾರ

ಹೇಮಾವತಿ ತುಂಬಿ ಹರಿಯುತ್ತಿತ್ತು. ನನ್ನ ತಂದೆಯ ಕೊರಳಿನ
ಸುತ್ತಲೂ ಕಾಲು ಹಾಕಿ, ಭುಜದಮೇಲೆ ಕುಳಿತು ಆತನ ತಲೆಯನ್ನು
ನನ್ನ ಪುಟ್ಟ ಕೈಗಳಿಂದ ಬಿಗಿಹಿಡಿದಿದ್ದೆ. ತಾಯಿ, ಚಿಂದಿ ಸೀರೆ ಬಟ್ಟೆ
ಬರೆಗಳ, ದೇವರ, ಗಂಟು ಹೊತ್ತು ನಮ್ಮ ಹಿಂದೆಯೆ ನಿಂತಿದ್ದಳು.
ನದಿ ದಾಟಿ ನಗರಕ್ಕೆಂದು ನಾವು ಸಾಗಿ ಬರಬೇಕು. ಬಹಳ ದಿನಗಳ
ಮೇಲೆ ತಂದೆ ತೀರಿಕೊಂಡಾಗ "ರಾಮ ರಾಮ" ಎನ್ನುತ್ತಾ ಆ ವಿಷ
ಘಳಿಗೆಯನ್ನೇ ಸ್ಮರಿಸುತ್ತಾ ಆ ಬಗ್ಗೆ ನನಗೆ ಹೇಳುತ್ತಿದ್ದರು; "ಚಂದ್ರು
ನಿಂಗೆ ನೆಪ್ಪಯ್‌ತಾ? ನಿಮ್ಮಮ್ಮ ---ನೆಪ್ಪಯ್‌ತೇನೋ."

ನನಗೆ ನೆನಪಿತ್ತು. ನನಗೆ ಚೆನ್ನಾಗಿ ನೆನಪಿತ್ತು. ಎಲ್ಲವೂ
ಕಳೆದುಹೋದಾಗ, ಕೈಬಿಟ್ಟ ಹೊಲದೊಡನೆ ಮೂಲೆಯಲ್ಲಿದ್ದ ನಮ್ಮ
ಗುಡಿಸಲು ಹೊರಟುಹೋದಾಗ, ಆ ಬಡಹಳ್ಳಿಯಲ್ಲಿ ಪಾಠ ಹೇಳಿ
ಕೊಡುವ ಕೆಲಸವನ್ನು ನಮ್ಮ ತಂದೆ ಕಳೆದುಕೊಂಡಾಗ, ನಾವು
ಅಲ್ಲಿಂದ ಹೊರಟೆವು. ದುಡಿದು ಬದುಕುವ ಆಸೆಯಿಂದ ಹೊರಟೆವು.
ನಗರದಲ್ಲಿ ಇದ್ದ ಯಾರೋ ಪರಿಚಿತರ ನೆರವನ್ನು ಪಡೆದು ಕೆಲಸ
ಹುಡುಕಬೇಕೆಂಬುದು ತಂದೆಯ ತೀರ್ಮಾನವಾಗಿತ್ತು. ಅದಕ್ಕಾಗಿಯೇ
ತಂದೆ, ತಾಯಿ, ನಾನು, ಹಳ್ಳಿ ಬಿಟ್ಟು ಬಂದೆವು. ಹಳ್ಳಿಯನ್ನು ಹಿಂದೆ
ಬಿಟ್ಟು, ನದಿಯ ದಂಡೆಯಮೇಲೆ ನಿಂತೆವು.

ಆ ಮೊದಲ ನೆನಪು -----

ತಂದೆ, ತಾಯಿಯನ್ನು ಕೇಳಿದ: " ಏನ್ಮಾಡೋಣಾಂತೀಯಾ ರುಕ್ಕೂ?"

೨೪

ವಿಮೋಚನೆ

೨೫

ಪ್ರಾಯಶಃ ಅದು ಅವನ ಪ್ರೀತಿಯ ಪ್ರಶ್ನೆಯಾಗಿತ್ತೆ೦ದು ತೋರುತ್ದೆತ:" ಏನ್ಮಾಡೋಣಾ೦ತೀಯಾ ರುಕ್ಕೂ?"

ನಾನು ಹಿ೦ದಕ್ಕೆ ತಿರುಗಿ ತಾಯಿಯ ಮುಖ ನೋಡಿದೆ.
ತಂದೆಯೂ ತಿರುಗಿ ತಾಯಿಯ ಮುಖ ನೋಡಿದ. ಆಕೆ ನಮ್ಮಿಬ್ಬರ
ಮುಖವನ್ನು ನೋಡಿದಳು. ಮಾತನಾಡದೆ ಮೌನವಾಗಿ ನೋಡಿದಳು.
ಎ೦ದಿನ೦ತೆಯೇ, ತ೦ದೆಯೇ ನಿರ್ಧಾರ ಮಾಡಿರಬೇಕು. ಆಳ ಕಡಿಮೆ
ಇದ್ದ ಭಾಗದಲ್ಲಿ ನಾವು ನೀರಿಗಿಳಿದೆವು. ಸೊ೦ಟವನ್ನು ಮೀರಿ ನೀರು
ಮೇಲಕ್ಕೆ ಬರಲಿಲ್ಲ. ನಡುಹೊಳೆಯಲ್ಲಿ ನಾವು ಕ್ಷಣಕಾಲ ನಿ೦ತೆವು.
ತ೦ದೆ ನದಿಯ ಮೇಲಕ್ಕೂ ಕೆಳಕ್ಕೂ ದೃಷ್ಟಿಹಾಯಿಸಿದ. ತಾಯಿ
ವೆ೦ಕಟರಮಣನಿಗೆ ಹಣ್ಣು ಕಾಯಿಯ ಹರಕೆ ಹೊತ್ತಳು. ದೇವರು
ಒಳ್ಳೆಯವನು, ಅಲ್ಲವೆ? ಹಳ್ಳಿಯ ಮನುಷ್ಯರು ನನ್ನ ತ೦ದೆ ಮತ್ತು
ತಾಯಿಗೆ ನೆರವಾಗಿರಲಿಲ್ಲ. ಆದರೆ, ದೇವರು ಕೈಬಿಡುವುದು೦ಟೆ?
ದೇವರು ದಡಹಾಯಿಸದೆ ಇರುವುದುಂಟೆ? ನಾವು ಮು೦ದಕ್ಕೆ
ಸರಿದೆವು. ತ೦ದೆ ಹೆಜ್ಜೆಯಮೇಲೆ ಹೆಜ್ಜೆ ಇಟ್ಟು ಮೆಲ್ಲಮೆಲ್ಲನೆ ಮು೦ದು
ವರಿಯುತ್ತಿದ್ದ. ತಾಯಿ ದೇವರ-ಬಟ್ಟೆಯ ಮೂಟೆಯೊಡನೆ ಹಿ೦ಬಾ
ಲಿಸಿ ಬರುತ್ತಿದ್ದಳು. ನಾವು ದಡವನ್ನು ಸಮೀಪಿಸುತ್ತಿದ್ದೆವು." ಇನ್ನೇನು
ಆಗೋಯ್ತು ದಡ, ಬ೦ದ್ಬುಡ್ತು" ಎನ್ನುತ್ತಿದ್ದ ತ೦ದೆ. ನಾನು ತಿರುಗಿ
ಹಿ೦ದಕ್ಕೆ ನೋಡಿದೆ. ತಾಯಿ-

ಆಕೆಯ ಕೊರಳಿನವರೆಗೂ ನೀರು ಬ೦ದಿತ್ತು. ಬಹಳ ದಿನಗಳ
ಮೇಲೆ ಅದನ್ನು ವಿವರಿಸುತ್ತಿದ್ದ ತ೦ದೆ ನನಗೆ ಹೇಳಿದ್ದ: ಸೆರಗು
ಬಡಿದು ಹಿ೦ದಿನಿ೦ದಲೇ ಬರುವುದರ ಬದಲು ಅವಳು ಎಲ್ಲೋ ಸ್ವಲ್ಪ
ಬಲಕ್ಕೆ ಹೊರಳಿರಬೇಕು, ಅಲ್ಲಿಯೇ-

ಅಲ್ಲಿಯೇ ಆಕೆ ಮೌನವಾಗಿ ನಿ೦ತುಬಿಟ್ಟಿದ್ದಳು. ಮಿಸುಕಲು
ಭೀತಿ ಅವಳಿಗೆ. ತಾಯಿಯನ್ನು ಹಾಗೆ ನೋಡುತ್ತಾ ನಾನು ಚೀತ್ಕರಿ
ಸಿದೆ. ತ೦ದೆ ತಿರುಗಿ ನೋಡಿದ. ಅವನ ಹೃದಯದ ಬಡಿತ ಕ್ಷಣಕಾಲ
ನಿ೦ತುಹೋಯಿತೇನೋ. ಆದರೂ ಸ೦ಕಟಬ೦ದಾಗ ಅಧೀರನಾಗದೆ
ಇರುವ ಒಳ್ಳೆಯ ಗುಣ ಅವನಲ್ಲಿತ್ತು. ಆತ ತಾಯಿಗೆ ಧೈರ್ಯ ಹುಟ್ಟಿ

೨೬

ವಿಮೋಚನೆ

ಸುವ ಮಾತನ್ನಾಡಿದ: "ರುಕ್ಕೂ ಅಂಗೇ ನಿಂತಿರು. ಚಂದ್ರೂನ
ಬಿಟ್ಬಿಟ್ಟು ಬರ್ರ್ತೀನಿ".

"ತಂದೆ ಮುಂದಕ್ಕೆ ನಡೆದ. ನಾನು "ಅಮ್ಮಾ ಅಮ್ಮಾ" ಎನ್ನುತ್ತಾ
ಕೂಗುತ್ತಲಿದ್ದೆ. ನನ್ನ ತಾಯಿ ಮುಗುಳುನಗುತ್ತಿದ್ದ ಹಾಗೆ ಜ್ಞಾಪಕ.
ಆಕೆಯ ಕಣ್ಣುಗಳಿಂದ ನೀರಹೊಳೆಗಳು ಎರಡು ಹರಿಯುತ್ತಿದ್ದುವು.
ಅದು ನದಿಯ ಕೊಳಕು ನೀರಲ್ಲ, ನಾನು ಬಲ್ಲೆ. ಅದು ನಿರ್ಮಲವಾದ
ಕಣ್ಣನೀರು. ತಾಯಿ ಮಗನಿಗಾಗಿ ಸುರಿಸುವ ಕಣ್ಣೀರು.....ತಂದೆ
ದಡ ತಲುಪಿ ನನ್ನನು ಆಲ್ಲೇ ಬಿಟ್ಟು ಮರುಕ್ಷಣದಲ್ಲೇ ನದಿಗೆ ಇಳಿದ.
ಆಗ---

ಈ ಘಟನೆಯ ಬಗ್ಗೆ ಹೇಗೆ ಬರೆಯಬೇಕೊ ನನಗೆ ತಿಳಿಯದು.
ನನ್ನ ಜೀವನದ ಮೊದಲ ಕಹಿ ಹೊಡೆತ ಆಗ,ನಾನು ಆರು ವರ್ಷದವ
ನಿದ್ದಾಗ, ನನ್ನ ಮೇಲೆ ಬಿತ್ತು. ನಾನು "ಅಮ್ಮ,ಅಪ್ಪ" ಎಂದು
ಕೂಗುತ್ತಲೇ ಇದ್ದೆ. ತಂದೆ ತಾಯಿಯ ಕಡೆಗೆ ವೇಗವೇಗವಾಗಿ
ಹೋಗುತ್ತಿದ್ದ. ಆತ ಆಕೆಯ ಕೈ ಹಿಡಿದುದನ್ನೂ ನಾನು ಕಂಡೆ.
ಮತ್ತೆ ನೀರು ದೇಹದ ನಡುವಿನ ತನಕ ಇಳಿದುದನ್ನೂ ಕಂಡೆ. ಅಂದರೆ
ತಾಯಿ ಮತ್ತು ತಂದೆ ಸುರಕ‍್ಷಿತವಾಗಿ ದಡ ಸೇರುವರೆಂದಾಯಿತು.
"ಅಲ್ಲೇ ನಿಂತ್ಕೋ" ಎಂದು ತಂದೆ ನನಗೆ ಹೇಳುತಿದ್ದ. ನಾನು ಅಲ್ಲೇ
ನಿಂತಿದ್ದೆ. ಅವರು ಮೆಲ್ಲಮೆಲ್ಲನೆ ಬರತೊಡಗಿದರು.

ಇಲ್ಲ, ಅವರಿಬ್ಬರು ದಡಸೇರಲಿಲ್ಲ. ಹೊಸ ನೀರಿನ ಪ್ರವಾಹ
ಹೇಗೆ ಬಂತೋ ನನಗೆ ತಿಳಿಯದು. ಕಣ್ಣು ಮುಚ್ಚಿ ತೆರೆಯುವುದ
ರೊಳಗೆ ತಂದೆ ತಾಯಿ ಇಬ್ಬರೂ ಕೆಳಕ್ಕೆ ತೇಲಿಹೋಗುತ್ತಿದ್ದರು.
ನಾನು ದಂಡೆಯುದ್ದಕ್ಕೂ ತೇಲುತ್ತಿದ್ದವರನ್ನು ನೋಡುತ್ತಾ ಓಡಿದೆ.
ಬಲು ದೂರ ಓಡಿದೆ, ಅಲ್ಲಿ ಮರ ಪೊದೆ ಪೊದರುಗಳು ದಟ್ಟವಾಗಿ
ಬೆಳೆದು ದಂಡೆಯ ಹಾದಿಯನ್ನು ಮರೆಮಾಡಿದ್ದವು. ನಾನು ಸುತ್ತು
ಬಳಸಿ ಓಡಿದೆ.ಮಳೆಸುರಿಯ ತೊಡಗಿತು. ನಾನು ಗಟ್ಟಿಯಾಗಿ
ಅತ್ತೆ. ಅದರೆ ಯಾರು ಉತ್ತರ ಕೊಡಲಿಲ್ಲ. ಬಲು ಹೊತ್ತಿನ
ಮೇಲೆ ಮತ್ತೆ ದಂಡೆ ಕಾಣಿಸಿದಾಗ, ಒಂದು ಬಂಡೆಯ ಮೇಲೆ ನನ್ನ
ತಂದೆ, ಕೂದಲನ್ನು ಹಿಡಿಹಿಡಿಯಾಗಿ ಹಿಡಿದೆಳೆಯುತ್ತಾ ರೋದಿಸುತ್ತಿದ್ದುದನ್ನು ಕಂಡೆ -"ರುಕ್ಕೂ-ರುಕ್ಕೂ-"

ನನ್ನ ತಾಯಿ ತೇಲಿ ಹೋಗಿದ್ದಳು. ಹೇಮಾವತಿ ನದಿ ಎಲ್ಲಿಗೋ ಅವಳನ್ನು ಒಯ್ದಿತ್ತು. ನಾನು,"ಅಪ್ಪಾ ಅಪ್ಪಾ" ಎಂದೆ ತಂದೆ ಮೆಲ್ಲ ಮೆಲ್ಲೆನೆ ಬಂಡೆಯನ್ನಿಳಿದು ದಡವನ್ನೇರಿ ನನ್ನ ಬಳಿಗೆ ಬಂದರು.ನನ್ನನ್ನು ತಬ್ಬಿಕೊಂಡರು. ಮಳೆ ಸುರಿಯುತ್ತಿತ್ತು, ನಮ್ಮ ಕಣ್ಣುಗಳಲ್ಲೂ ಕೂಡಾ. ಆದರೆ ಕಣ್ಣೀರು ಇಂಥದೇ ಎಂದು ನಾನು ಬಲ್ಲೆ. ತಣ್ಣಗಿನ ಮಳೆಯ ನೀರಲ್ಲೂ ನಮ್ಮ ಕಣ್ಣಹನಿ ಬಿಸಿಯಾಗಿರುತ್ತಿತ್ತು.

ತಂದೆ ಮತ್ತು ನಾನು ಬಲು ದೂರ ದಂಡೆಯ ಉದ್ದಕ್ಕೆ ಹೋದೆವು. ಮಳೆ ಬರುತ್ತಿದ್ದಾಗಲೂ-ಮಳೆ ನಿಂತ ಮೇಲೂ. ನನ್ನ ತಾಯಿ ಸಿಗಲಿಲ್ಲ. ಸಿಗಲೇ ಇಲ್ಲ.

ಆಕೆಯೊಡನೆ ನಮ್ಮ ಸರ್ವಸ್ವವಾಗಿದ್ದ ಅರಿವೆ ಅಂಚಡಿಯ ಗಂಟೂ ಹೊರಟು ಹೋಗಿತ್ತು. ಗಂಟಿನಲ್ಲಿದ್ದ ದೇವರೂ ತೇಲಿಹೋಗಿದ್ದರು. ಹಸುರು ಹೊಲ ಮನೆ ಮಠಗಳಿರುವ ಸಹಸ್ರ ಸಹಸ್ರ ಜನ ನಗುತ್ತ ವಾಸಿಸುತ್ತಿರುವ ಈ ಪ್ರಪಂಚದಲ್ಲಿ ನಾವು ನಿರ್ಗತಿಕರಾಗಿದ್ದೆವು.

ಕಾಡಿನಲ್ಲೇ ಸಾಯಲು ಸುಮ್ಮ ಸುಮ್ಮನೆ ಯಾರು ಇಷ್ಟ ಪಡುತ್ತಾರೆ? ನಾವು ಮತ್ತೆ ಮನುಷ್ಯರ ಮುಖ ನೋಡಿದೆವು.ಬದುಕಬೇಕೆಂಬ ಬಯಕೆ, ನಮಗೆ ತಿಳಿಯದೆಯೇ ನಮ್ಮನ್ನು ಮುಂದು ಮುಂದಕ್ಕೆ ತಳ್ಳುತ್ತಿತ್ತು.

ಈಗ ಸರಿಯಾಗಿ ತಿಳಿದುಕೊಳ್ಳಬಲ್ಲೆ. ಆರು ವರ್ಷದವನಾಗಿದ್ದ ನನ್ನನ್ನು ದೊಡ್ಡವನಾಗಿ ಬೆಳೆಸಿ, ವಿದ್ಯೆ ಕಲಿಸಿ, ಸಂಪಾದಿಸಬಲ್ಲ ಸಮರ್ಥನಾಗಿ ಮಾಡುವುದೇ ತಂದೆಯ ಏಕ ಮಾತ್ರ ಗುರಿಯಾಗಿತ್ತು.ಹಾಗೆ ಮಾಡಿ ತನ್ನದಾದ ಇನ್ನೊಂದು ದೀಪವನ್ನು ಹಚ್ಚಿಟ್ಟು, ನಿಶ್ಚಿಂತೆಯಿಂದ ಪ್ರಾಣ ನೀಗಲು ಅವನು ಅಪೇಕ್ಷೆ ಪಟ್ಟಿದ್ದ. ಆದರೆ ಆ ಅಪೇಕ್ಷೆ!

ಹಾದಿಯಲ್ಲಿ ನಾವು ಬೇಡಬೇಕಾಗಿ ಬಂತು. "ನಾವು ಭಿಕ್ಷೆ ಯವರಲ್ಲ" ಎಂದುಪ್ರತಿಯೊಬ್ಬರಿಗೂ ತಂದೆ ವಿವರಣೆ ಕೊಡುತ್ತಿದ್ದ. ನಗರಕ್ಕೆ ಹೋಗುವ ಹಾದಿ ಖರ್ಚುಕೊಟ್ಟು ಪುಣ್ಯ ಕಟ್ಟಿಕೊಳ್ಳಲು ಯಾರಿಗೂ ಇಷ್ಠವಿರಲಿಲ್ಲವೇನೋ. ಅವರೆಲ್ಲ ತುತ್ತು ಅನ್ನವನ್ನಷ್ಟೇ ಕೊಟ್ಟು, ಆ ಪುಣ್ಯವೇ ಸಾಕೆಂದರು. ನಡೆದು ನಡೆದು ನಾವು ನಗರ ಸೇರಿದೆವು.

ಆಗ ಮುಚ್ಚಂಜೆಯಾಗಿತ್ತು. ನಗರವನ್ನು ಸಮಪಿಸುತ್ತಿದ್ದಂತೆ ತಂದೆ ಹೇಳಿದ.

"ಚಂದ್ರೂ, ಊರು ಬಂತ್ಕಣಪ್ಪ. ಚಂದ್ರೂ ಆಂತೂ ಬಂದ್ವಿ ಕಣಪ್ಪಾ"

ಅಂತೂ ನಾವು ಬಂದೆವು. ದೂರ ದೂರವಿದ್ದ ಮನೆಗಳ ಬದಲು
ಹೆಚ್ಚು ದಟ್ಟನೆಯ ಹಲವು ಕಟ್ಟಡಗಳನ್ನು ಕಂಡೆ. ಅವೂ ಎಷ್ಟೊಂದು
ಎತ್ತರವಾಗಿದ್ದವು! ಸಣ್ಣದಾಗಿ ವೇಗವಾಗಿ ಓಡುತ್ತಿದ್ದ ವಾಹನಗಳನ್ನು
ಕಂಡೆ, ಅವುಗಳಿಗೆ ಬೆಳಕಿನ ಎರಡು ಕಣ್ಣುಗಳಿರುತ್ತಿದ್ದವು. ದೊಡ್ಡ
ದೊಡ್ಡ ಪಂ, ಪಂ, ಮೊಟಾರುಗಳನ್ನು ಕಂಡೆ. ಬೀದಿಯುದ್ದಕ್ಕೂ
ಎತ್ತರದಿಂದ, ಕಂಬಗಳಿಗೆ, ತಗಲಿ ಬತ್ತಿಯೇ ಇಲ್ಲದ ದೀಪಗಳು ಉರಿಯು
ತ್ತಿದ್ದವು. ಜನರೆಲ್ಲಾ ಬೇರೆ ರೀತಿಯಾಗಿ ಯಾವುದೋ ಬೇರೆ
ದೇಶದವರಾಗಿ ಕಾಣುತ್ತಿದ್ದರು. ನನ್ನ ಪಾಲಿಗೆ ಅದು ಹೊಸ
ಪ್ರಪಂಚ.

"ಇನ್ನು ಇಲ್ಲೇನಪ್ಪ ನಾವು ಇರೋದು. ಚಂದ್ರು, ಆ ಕಾರು ನೋಡ್ದಾ? ನೀನು ದೊಡ್ಡೊನಾದ್ಮೇಕೆ ಆಂಥದೇ ಕಾರು ಕೊಣ್ಕೋ ಬೇಕು. ಏನಂತಿಯಾ?"

ನಾನು 'ಊಂ' ಎಂದೆ. ಆದರೆ ತಾಯಿಯ ನೆನಪು ಬಂದು ನನ್ನ ಗಂಟಲು ಬಿಗಿದಿತ್ತು. ಬಲು ಉದಾರವಾಗಿ ಬರುತ್ತಿದ್ದ ಕಂಬನಿ ನನ್ನ ತಂದೆಯ ತಲೆಯ ಮೇಲೆ ತೊಟ್ಟಕ್ಕಿತೋ ಏನೋ. ನನ್ನ ಕಾಲು ಹಿಡಿದು ಜಗ್ಗಿಸಿ, ಮೇಲಕ್ಕೆ ತಲೆಯರತ್ತಿ ನನ್ನನ್ನೇ ನೋಡಿ, ಕೇಳಿದ.

ಯಾಕ್ಲ, ಯಾಕೆ ಅಳೋದು?"

ಹಾಗೆ ಆತ ಕೇಳದ್ದೇನೊ ನಿಜ. ಆದರೆ ಕಾರಣ ಅವನಿಗೆ ತಿಳಿದಿರಬೇಕು. ಯಾಕೆಂದರೆ ಅವನ ಸ್ವರದಲ್ಲಿ ನಡುಕವಿತ್ತು. ನಾನು
"ಅಮ್ಮಾ ಅಮ್ಮಾ" ಎಂದೆ. ತಂದೆ ನನ್ನ ಬಲಗಾಲಿಗೆ ತನ್ನ ಮುಖ
ವನ್ನೊತ್ತಿ ಬಿಗಿಹಿಡಿದ. ನನ್ನ ಕಾಲು ತೇವದಿಂದ ಒದ್ದೆಯಾಯಿತು.
ಆ ಅನುಭವ ನನಗೆ ಹೊಸತಲ್ಲ.ಅವನು ಅಳುತ್ತಿದ್ದ.

ಆ ರಾತ್ರೆ ನಾವು ಯಾವುದೋ ಪೇಟೆಯಲ್ಲಿ ದೊಡ್ಡದೊಂದು
ಕಟ್ಟಡದ ಮಗ್ಗುಲಲ್ಲಿ ಮಲಗಿಕೊಂಡೆವು. ಇಲ್ಲಿ ಮಳೆಯಿರಲಿಲ್ಲ.
ಆದರೆ ಶೀತಗಾಳಿ ಮೈ ಕೊರೆಯುತ್ತಿತ್ತು. ನಾನು ಮುದುಡಿಕೊಂಡು
ತಂದೆಯ ಎದೆಯನ್ನಪ್ಪಿ ಮಲಗಿದ್ದೆ. ಆತ ಬಲತೋಳನ್ನು ನನ್ನ
ಸುತ್ತೂ ಬಳಸಿ ನನ್ನನ್ನು ಬೆಚ್ಚಗಿಡಲು ಯತ್ನಿಸುತ್ತಿದ್ದ. ಬಹಳ
ಹೊತ್ತು ನಮಗೆ ನಿದ್ದೆ ಬರಲೇ ಇಲ್ಲ. ರಾತ್ರಿಯೆಲ್ಲಾ ಬೀದಿಯಲ್ಲಿ
ಸಾವಿರ ಸದ್ದುಗಳಾಗುತ್ತಿದ್ದವು. ಯಾರೊ ಜಗಳಾಡುತ್ತಿದ್ದರು.
ಯಾರೋ ಆಳುತ್ತಿದ್ದರು. ಯಾರೋ ನಗುತ್ತಿದ್ದರು. ಇದರಿಂದ
ತಮ್ಮ ನೆಮ್ಮದಿಗೆ ಭಂಗ ಬಂತೇನೋ ಎಂಬಂತೆ ಬಡಕಲು ಬೀದಿ
ನಾಯಿಗಳು ಬೊಗಳುತ್ತಿದ್ದವು. ಸಾಲದುದಕ್ಕೆ ಹಸಿದ ಹೊಟ್ಟೆಬೇರೆ.
ನಿದ್ದೆ ಬಂದರೆ ಹಸಿವನ್ನು ಮರೆಯಬಹುದು. ಆದು ಗೊತ್ತಿದ್ದೊ
ಏನೋ ನಿದ್ದೆ ಸಮಿಪಕ್ಕೆ ಸುಳಿಯದಂತೆ, ಹಸಿವು ಹೋರಾಡುತ್ತಿತ್ತು.

ಬೆಳಗು ಮುಂಜಾನೆ ನಾವು ಎದ್ದೆವು. ಯಾರೋ ಬೀದಿಯ
ಬಳಿ ಬಾವಿ ಕಟ್ಟೆಯ ಸುತ್ತಲೂ ನಿಂತು ಮುಖ ತೊಳೆಯುತ್ತಿದ್ದರು,
ಸ್ನಾನ ಮಾಡುತ್ತಿದ್ದರು, ಬಟ್ಟೆ ಒಗೆಯುತ್ತಿದ್ದರು. ನಾವು ಆತ್ತ
ಹೋಗಿ ನೀರು ಕೇಳಿ ಪಡೆದು ಬರೀ ಬೆರಳಿಂದ ಹಲ್ಲುಜ್ಜಿದೆವು.
ಆಲ್ಲಿಂದ ಮುಂದೆ, ತಂದೆಗೆ ಪರಿಚಿತರಾಗಿದ್ದ ಯಾರನ್ನೋ ಹುಡುಕಿ
ಪ್ರಯಾಣ. ಹಳ್ಳಿಯಲ್ಲಿದ್ದಾಗ ನನ್ನ ತಂದೆ
ಗೆ ಅಕ್ಷರಾಭ್ಯಾಸ ಹೇಳಿ ಕೊಡುವ ಕೆಲಸವೂ ಇತ್ತು-ಎಂದಿದ್ದೆ. ವಿದ್ಯಾವಂತನಾದ ತಂದೆ
ಕಂಠ ಪಾಟಮಾಡಿದ್ದ ವಿಳಾಸವನ್ನು ಹುಡುಕುತ್ತ ನನ್ನನ್ನು ಬೆನ್ನಿಗೆ
ಅಂಟಿಸಿಕೊಂಡು ಊರು ಅಲೆದ.

ಆ ಸಂಜೆ ಆ ಮನೆ ದೊರೆಯಿತು. ಹೊಲಸು ನಾರುತಿದ್ದ ಗಲ್ಲಿ
ಯಲ್ಲಿ, ಗಾಳಿ ಬೆಳಕು ಆಡದಿದ್ದ ಮನೆಯಲ್ಲಿ,ಅವರು ವಾಸವಾಗಿದ್ದರು.
ನಮ್ಮ ಹಳ್ಳಿಯಲ್ಲಿದ್ದಂತಹ ಗುಬ್ಬಚ್ಚಿ ಗೂಡುಗಳು ಇಷ್ಟು ದೊಡ್ಡ
ನಗರದಲ್ಲಿಯೂ ಇರಬಹುದೆಂದು ನಾನು ಭಾವಿಸಿಯೇ ಇರಲಿಲ್ಲ. ಆ
ಮನೆಯೊಳಗೆ ಇಬ್ಬರೊ ಮೂವರೊ ಪುಟ್ಟ ಹುಡುಗರಿದ್ದರು ಅವರು
ಬಂದು ನನ್ನನ್ನು ಸುತ್ತುವರಿದು ನಿಂತಾಗ, ಅಲ್ಲಿಂದ ಓಡಿಹೋಗ
ಬೇಕು ಎನಿಸಿತು ನನಗೆ. ಅವರಲ್ಲೊಬ್ಬ ನನ್ನ ಕೂದಲ ಜುಟ್ಟನ್ನು
ಹಿಡಿದೆಳೆದ. ನಾನು "ಅಪ್ಪಾ" ಎಂದು ಕೂಗಿದೆ. ಹಿಂದೆಯಾಗಿ
ದ್ದರೆ "ಅಮ್ಮಾ" ಎನ್ನುತಿದ್ದೆ. ಆದರೆ ಈಗ ಅಪ್ಪನೇ ನನ್ನ ಸರ್ವಸ್ವ
ಅಲ್ಲವೆ? ತಂದೆ "ಸುಮ್ನಿರು" ಎಂದು ನನ್ನನ್ನೇ ಗದರಿಸಿದ.
ನನಗೆ ಅಳು ಬಂತು. ಕೀಟಲೆಮಾಡಿದ ಆ ಹುಡುಗರನ್ನು ದಂಡಿಸು
ವುದರ ಬದಲು ನನ್ನನ್ನು ಅಪರಾಧಿಯಾಗಿ ಮಾಡುವುದು ಸರಿಯೆ?
ಏನೆ ಆಗಲಿ, ಈ ಮನೆಯಲ್ಲಿ ವಾಸವಾಗಿರಬಾರದು, ಎಂದು ತೀರ್ಮಾ
ನಿಸಿದೆ.

ಆ ತೀರ್ಮಾನಕ್ಕೆ ಚ್ಯುತಿ ಬರಲೇ ಇಲ್ಲ. ಇಲ್ಲೇ ವಾಸವಾಗಿರಿ
ಎಂದು ಯಾರಾದರೂ ಹೇಳಿದರಲ್ಲನೆ ಆ ಮಾತು? ಬಂದಿದ್ದ
ನಮ್ಮನ್ನು ಆದಷ್ಟು ಬೇಗನೆ ಹೊರಹಾಕುವುದಕ್ಕೇ ಆ ಮನೆಯವರು
ಪ್ರಯತ್ನಪಟ್ಟರು. ನಮ್ಮ ಹಳ್ಳಿಯಲ್ಲೊ ಒರಟುತನವಿತ್ತು ನಿಜ.
ಆದರೆ ಒರಟುತನವನ್ನು ಬಚ್ಚಿಡುವ ಸೋಗನ್ನು ಮಾತ್ರ ಯಾರೂ
ಹಾಕಿಕೊಳ್ಳುತ್ತಿರಲ್ಲಿಲ್ಲ. ಆದರೆ ಇಲ್ಲಿ ಸೋಗಿತ್ತು--ಬರಿಯ ನಟನೆ.
ತೊಲಗಿಹೋಗು ಎಂದು ಹೇಳುವ ಇಚ್ಛೆ ಇದ್ದರೂ ಬಾಯಿಬಿಟ್ಟು
ಯಾರೂ ಹಾಗೆ ಹೇಳುತ್ತಿರಲಲಿಲ್ಲ. ನಯವಾಗಿ ನಾಜೂಕಾಗಿ ಬೇರೆ
ಮಾತನ್ನಾಡುತ್ತಿದ್ದರು. ನೂರು ಮಾತುಗಳಾದಮೇಲೆ ಅವರ ಮನಸ್ಸಿ
ನಲ್ಲಿದ್ದುದು ಎಂತಹ ದಡ್ಡನಿಗಾದರೂ ಅರ್ಥವಾಗಲೇಬೇಕು.

ಆಂತೂ ಆ ಮನೆಯಿಂದ ಹೊರಬಿದ್ದೆವು. ತಂದೆ ಕಟುವಾಗಿ
ಆಡಿದ ಕೆಲವು ಮಾತುಗಳಿಂದ ವಿಷಯ ಸ್ವಲ್ಪಸ್ವಲ್ಪವಾಗಿ ನನಗೆ ಅರ್ಥ
ವಾಯಿತು. ಆ ಮನೆಯಾತ ಎಂದೊ ಒಂದು ಕಾಲದಲ್ಲಿ ತಂದೆಯ
ಬಾಲ್ಯ ಸ್ನೇಹಿತನಾಗಿದ್ದ. ಆಗ ಆವರಿಬ್ಬರೂ ಹಳ್ಳಿಯ ಬಡವರು. ಈಗ
ಲಾದರೋ ಆ ಸ್ನೇಹಿತ, ತಿಂಗಳಿಗೆ ಹದಿನೈದು ರೂಪಾಯಿ ಸಂಬಳ
ಸಂಪಾದಿಸುತ್ತಿದ್ದ ಗುಮಾಸ್ತೆ-ದೊಡ್ಡ ಮನುಷ್ಯ. ಆ ಗೋಡೆಯ ಮೇಲೆ ಅವನ ಚಿತ್ರಪಟ ಬೇರೆ ತೂಗುತ್ತಿತ್ತಲ್ಲವೆ? ಅಮ್ಮ ನದಿಯ ಪಾಲಾದ ಕತೆ ಕೇಳಿ,"ಆಯ್ಯೋ ಪಾಪ, ಹಿಂಗೂ ಆಯ್ತೆ? ಎಲ್ಲಾ ಪ್ರಾರಬ್ಧ ಕರ್ಮ!" ಎಂದು ಹೇಳಿ, ಆತ ಸಹಾನುಭೂತಿ ತೋರಿಸ ಲಿಲ್ಲವೆ? ಹಳ್ಳಿಯಲ್ಲಿದ್ದಾಗ ಆತ ಮತ್ತು ತಂದೆ ಇಬ್ಬರೂ ಜತೆಯಾಗಿಯೇ ಮಾವಿನಕಾಯಿ ಕೀಳಲು ಹೋಗುತ್ತಿದ್ದರಂತೆ."ನನ್ನೈಲಾಗಾಕ್ಕಿಲ್ಲ. ನಂಗೂ ನೀನೆ ತಕ್ಕೊಡೊ” ಎಂದು ಆತ ಗೋಗರೆಯುತ್ತಿದ್ದನಂತೆ. ಆದರೆ ಈ ದಿನ, “ಊಟಕ್ಕಿದ್ದು ಹೋಗಿ" ಎಂಬ ಇಂದು ಒಳ್ಳೆಯ ಮಾತೂ ಅವನ ಬಾಯಿಂದ ಹೊರಬೀಳಲಿಲ್ಲ... ಥೂ' ಎಂದು ನನ್ನ ತಂದೆ ಉಗುಳಿದುದನ್ನು ಕಂಡೆ. ಹಾಗೆ ಉಗುಳಿದಾಗ ಕೋಪ ಮತ್ತು ತುಚ್ಚಿಕಾರದಿಂದ ಆತ ಕನಲಿ ಕೆಂಡವಾಗಿದ್ದನೆಂದು ನನಗೆ ತಿಳಿದಿತ್ತು.

ಯಾರೋ ಕಡಲೆಕಾಯಿಯ ದಾನ ಮಾಡಿದರು. ಅದನ್ನುತಿಂದು, ತೊಗಟೆಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡಿ ಬದಿಗೆ ಸರಿಸಿ, ನೀರು ಕುಡಿದುನಾವು ಮಲಗಿದೆವು. ಅಲ್ಲಿಯೇ – ಹಿಂದಿನ ರಾತ್ರೆ ಮಲಗಿದ್ದಲ್ಲಿಯೇ, ತಂದೆ ತೇಗಿನ ಸ್ವರ ಹೊರಡಿಸಿದ ಆ ಸ್ವರ ಹೊರಡಿಸಿ "ಖೋ, ಖೋ” ಎಂದು ನಕ್ಕ, ನನಗೆ ಹೆದರಿಕೆಯಾಗಿ “ ಅಪಾ, ಅಪ್ಪಾ” ಎಂದೆ. ಆತ ನಗು ನಿಲ್ಲಿಸಲೇ ಇಲ್ಲ, ಹಳ್ಳಿ ಬಿಟ್ಟು ತಾಯಿ ಯನ್ನು ಕಳೆದುಕೊಂಡು ನಗರ ಸೇರಿದ ಇಷ್ಟುದಿನಗಳ ವರೆಗೂ ಆತ ನಕ್ಕಿರಲಿಲ್ಲ, ಆದರೆ, ಈ ನಗು? ನಗುವಿನಲ್ಲಿ ವಿವಿಧ ರೀತಿಗಳಿರುತ್ತವೆ, ನಿಮಗೆ ಗೊತ್ತೆ ? ಆಗ ನನಗೆ ತಿಳಿದಿರಲಿಲ್ಲ, ಈಗ ಬಲ್ಲೆ.

ನಮ್ಮ ಜೀವನದಲ್ಲಿ ಮತ್ತೊಂದು ರಾತ್ರೆ ಮುಕ್ತಾಯವಾಗಿ ಬೆಳಕು ಹರಿಯಿತು. ಅದು ಭಾನುವಾರ, ಮತ್ತೆ ಅದೇ ಬಾವಿಕಟ್ಟೆ. ಮುಖ ಮಾರ್ಜನ... -

ಆತ ನಮ್ಮನ್ನು ಕಂಡು ಆಗ ಮಾತನಾಡಿಸದೇ ಇದ್ದಿದ್ದರೆ ನಮ್ಮ ಜೀವನ ಪ್ರವಾಹ ಹೇಗೆ ಹರಿಯುತ್ತಿತ್ತೋ ಹೇಳಲಾರೆ. ಆತ ನಿಂದಾಗಿ, ಹಳ್ಳಿಯ ನಂಬಿಗಸ್ಥ ಎನಿಸಿಕೊಂಡಿದ್ದ ನನ್ನ ತಂದೆ ಪೇಟೆಯ ಕೂಲಿಗಾರನಾದ.

ಅವನು ಹಲವು ಪ್ರಶ್ನೆಗಳನ್ನು ಕೇಳಿದ. ನನ್ನ ತಂದೆ ತನಗಿಂತ ಹೆಚ್ಚು ಓದು ಬಲ್ಲವನೆಂಬುದೂ ಆತನಿಗೆ ತಿಳಿಯಿತು. ಆದರೆ, ಅವನೇನು ಮಾಡಬಲ್ಲ? ಆತನೆ ಸ್ವತಃ ನಗರಕ್ಕೆ ಬಂದು ಒಂದು ವರ್ಷ ವಾಗಿತ್ತು ಆಷ್ಟೆ.

"ನೀವು ಒಪ್ಪೋ ಹಂಗಿದ್ದರೆ ನನ್ನ ಜೊತೇಲಿ ಬನ್ನಿ. ಹೊಸ ರೋಡು ಮಾಡಿಸ್ತಾಯವರೆ. ಜಲ್ಲಿಕಲ್ಲು, ಮಣ್ಣು ಹೊತ್ತಾಕೊ ಕೆಲಸ. ದಿನಕ್ಕೆ ನಾಲ್ಕಾಣೆ ಕೂಲಿ. ಏನೇಳಿ ಬತ್ತೀರಾ?"

ತಂದೆ ನನ್ನ ಮುಖ ನೋಡಿದ. ಅಮ್ಮ ಇರುತ್ತಿದ್ದರೆ, " ಏನ್ಮಾಡೋಣಾಂತಿಯಾ ರುಕ್ಕೂ?" ಎಂದ ಕೇಳುತ್ತಿದ್ದನೇನೊ. ಆದರೆ, ಅಮ್ಮ ಇರಲಿಲ್ಲ. ನಾನು ಸುಮ್ಮನಿದ್ದೆ. ನನ್ನ ಮುಖ ನೋಡುತ್ತಾ ತಂದೆ ಹೇಳಿದ: "ಆಗ್ಲೇಳಿ. ಇವತ್ನಿಂದಾನೆ ಬತ್ತೀನಿ ನಡೀರಿ.

"ಇವತ್ತು ಭಾನುವಾರ. ರಜ ಐತೆ. ನಾಳೆಯಿಂದ ಹೋಗಾನ.

" ಆತ ನಮ್ಮ ಮತ ಕೇಳಿದ. ಮತ್ತೆ ಅಳುಕದೆ ನಮ್ಮನ್ನು ಮುದುಕಿಯಯೊಬ್ಬಳು ವಾಸವಾಗಿದ್ದ ಮನೆಗೆ ಕರೆದೊಯ್ದ.

ಆ ಮುದುಕಿ ಅದೇ ಪ್ರಶ್ನೆ ಕೇಳಿದರು:

"ಯಾವ ಜನ ನೀವು ?"

ತಂದೆ ಉತ್ತರ ಕೊಟ್ಟ. ಆ ಸ್ವರದಲ್ಲಿ ಅಭಿಮಾನವೂ ಇರಲಿಲ್ಲ, ವಿಷಾದವೂ ಇರಲಿಲ್ಲ.

ಮುದುಕಿ ನಾಲ್ಕು ನಿಮಿಷ ಯೋಚಿಸಿದಂತೆ ತೋರಿತು. ಆಕೆ ತೀರ್ಮಾನಕ್ಕೆ ಬರಲು ಸಹಾಯವಾಗುವಂತೆ, ನಮ್ಮನ್ನು ಅಲ್ಲಿಗೆ ಕರೆದುತಂದಾತ ಹೇಳಿದ:

"ಒಳ್ಳೇಯವರು ಕಣಜ್ಜಿ. ಹಳ್ಳಿಯೊಳಗೆ ಆಸ್ತಿಪಾಸ್ತಿ ಮಸ್ತಾಗಿತ್ತು. ಪರಮಾತ್ಮ ಹೆಂಗ್ಬರ್ದಿದ್ನೋ. ಎಲ್ಲಾ ಕಳ್ಕೊಂಡ್ ಬಿಟ್ರು."

ಎಲ್ಲವನ್ನೂ--ತಾಯಿಯನ್ನೂ ಕೂಡ--ಕಳೆದುಕೊಂಡ ಕತೆಯನ್ನು ತಂದೆ ಚುಟುಕಾಗಿ ಹೇಳಿದ. ಹೇಳುವಾಗ, ತನ್ನ ಹೆಂಡತಿ ರುಕ್ಕೂ ಎಂದೇ ಹೇಳುತ್ತಿದ್ದ. ನನಗೆ ದುಃಖವಾಗುತ್ತಿತ್ತು. ತೇಲಿಹೋದ ಜೀವ ನನ್ನ ತಾಯಿ ಎಂದುಕೂಡಾ ಹೇಳಬಾರದೆ?

ವಿಮೋಚನೆ

೩೩

ನನ್ನ ಯೋಚನೆಗಳನ್ನು ತಿಳಿದುಕೊಂಡವನ ಹಾಗೊ ಏನೋ
ತಂದೆ ಸ್ವರ ಕೂಡಿಸಿದ:

"ಇವನೊಬ್ಬನೇ ಚಂದ್ರು ಈಗ ಉಳಿದಿರೋದು. ರುಕ್ಕು
ಹೆತ್ತಿದ್ದು ಇವನೊಬ್ಬನನ್ನೇ.ಇವನ್ಗಾಗಿಯೇ ನಾನು ಬದುಕಿದೀನಿ."

ಆ ಮಾತಿನ ಅರ್ಥ ನನಗೆ ಚೆನ್ನಾಗಿ ಆಗಲಿಲ್ಲ; ಆಗ ಚೆನ್ನಾಗಿ
ಆಗಲಿಲ್ಲ. ಒಬ್ಬನಿಗಾಗಿ ಇನ್ನೊಬ್ಬರು ಬದುಕುವುದೆಂದರೇನು?

...ಆ ಮುದುಕಿ ಒಳ್ಳೆಯವರ ಹಾಗೆ ಕಂಡರು. ಬೇರೆ ಜಾತಿ
ಯವರೆಂದು ನಮ್ಮನ್ನು ಕೀಳಾಗಿ ಕಾಣಲಿಲ್ಲ. ಆಕೆಯ ಬೋಡುತಲೆ
ಮುಂಜಾವದ ಸೂರ್ಯನ ಹೊಂಬೆಳಕಿಗೆ ಚಕಚಕಿಸಿತು. ಊರಿನ
ಹೊರಗೂ ಅಲ್ಲ ಒಳಗೂ ಅಲ್ಲ ಎನ್ನುವ ಹಾಗಿದ್ದ ಒಂದು ಜಾಗದಲ್ಲಿ
ಅವರ ಮನೆಯಿತ್ತು. ಆಕೆಯ ಯಜಮಾನರಿದ್ದಾಗ ಸ್ವಂತದ್ದಾಗಿ
ಉದಿಸಿಬಂದ ಬಡಕಲು ಮನೆ.ಆಕೆಗೆ ಮಕ್ಕಳಿರಲಿಲ್ಲ. ಆ ಬಳಿಕ,
ಜೀವನದ ಮಧ್ಯಾಹ್ನ ಬರುವುದಕ್ಕೆ ಮುಂಚೆಯೇ, ಪ್ರಾಪ್ತವಾದ
ವೈಧವ್ಯ. ಆ ಮನೆಯ ಮುಂಭಾಗದಲ್ಲಿ ಎರಡು ಎಮ್ಮೆಗಳನ್ನು ಕಟ್ಟ
ದ್ದರು. ಒಂದು ಎಮ್ಮೆಯ ಕರುವಿತ್ತು. ನನ್ನನ್ನೇ ನೋಡುತ್ತ ಆ
ಮುದುಕಿ ಮಾತನಾಡಿದರು.

"ಈ ಎಮ್ಮೆಗಳ ಸೆಗಣಿ ಎತ್ತೋದು ನಿನ್ಕೆಲಸ. ಏನಪ್ಪ ಮರಿ?
ಹೊರಕ್ಕೆ ಹೋಗಿ ಒಂದಿಷ್ಟು ಮೇವೂನೂ ತಂದ್ಹಾಕ್ಬೇಕು. ಏನು
ಅಷ್ಟು ಮಾಡ್ತೀಯಾ?"

ನಾನೇನು ಉತ್ತರಕೊಟ್ಟೆನೋ ನೆನಪಿಲ್ಲ. ಆದರೆ ನಮ್ಮ
ಹಳ್ಳಿಯ ಮನೆಯಲ್ಲಿದ್ದ ಗೋಪಿ ಹಸುವಿನ ನೆನಪಾಯಿತು ನನಗೆ.
ಅದರ ಪುಟ್ಟ ಕಂದ ಕಿವಿ ನಿಗುರಿಸಿ ಕುಣಿದಾಗ ನನಗೆ ಲೋಕವೆಲ್ಲಾ
ಸುಂದರವಾಗಿ ತೋರುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಯಾರೋ
ಬಂದು ಅವುಗಳೆರಡನ್ನೊ ಹೊಡೆದುಕೊಂಡುಹೋದರು. ನಾನು
ಗೋಳೋ ಎಂದು ಅತ್ತೆ. ಆ ಜನ ನಮ್ಮ ತಂದೆಗೆ ಸಾಲಕೊಟ್ಟಿದ್ದರು.
ಆ ಹಣದ ಎರಡರಷ್ಟು ಬಡ್ಡಿಯನ್ನು ತಂದೆ ತೆತ್ತಿದ್ದರೂ ಮೂಲ ಸಾಲ
ಸಂದಾಯವಾಗದೇ ಉಳಿದಿತ್ತು. ಮನೆಗೆ ಬಂದು ಒರಟುಮಾತುಗಳ.

8

೩೪

ವಿಮೋಚನೆ

ನ್ನಾಡಿ ಹಸು ಗೋಪಿಯನ್ನೂ ಅದರ ಕಂದನನ್ನೂ ಹೊಡೆದೊಯ್ದವರು
ಆ ಸಾಲಗಾರರು. ಆಗ ನನಗೆ ಅದು ತಿಳಿದಿರಲಿಲ್ಲ. ಹಣದ ಮಹಿಮೆ
ನನಗೆ ತಿಳಿದಿರಲಿಲ್ಲ.................

ನನ್ನ ಕಣ್ಣು ತೇವವಾಗುತ್ತಿತ್ತು. ನಮ್ಮ ಹಸು ಮತ್ತು ಅದರ
ಕರುವಿನ ಬದಲು ಈ ಎಮ್ಮೆಗಳ ಸಂಸಾರವನ್ನು ಪ್ರೀತಿಸುವುದು ಸಾಧ್ಯ
ವಾದೀತೆ ? ಅದಕ್ಕೆ ಉತ್ತರವನ್ನು ಹುಡುಕುತ್ತಾ ನಾನು ತಂದೆಯ
ಮುಖ ನೋಡಿದೆ. ಅವನೂ ನನ್ನನ್ನೇ ನೋಡುತ್ತಿದ್ದ. ಆದರೆ ಆತ
ನನ್ನು ಬಾಧಿಸುತ್ತಿದ್ದುದು ಬೇರೆಯೆ ಚಿಂತೆ.

" ಮಾಡ್ತಾನೆ. ಅಷ್ಟ್ ಕೆಲಸ ಮಾಡದೆ ಏನು? ಆದರೆ ಅವನ್ನ
ಸ್ಕೂಲಿಗೆ ಕಳಿಸ್ಬೇಕೂ ಆಂತ ಇದೀನಿ" ಎಂದ ತಂದೆ.
ನನಗೆ ಆಶ್ಚರ್ಯವಾಯಿತು. ಅದು ಆವರೆಗೂ ನನ್ನ ಪ್ರಪಂಚಕ್ಕೆ
ಬರದೇ ಇದ್ದ ವಿಷಯ. ನಾನು ಇನ್ನು ಸ್ಕೂಲಿಗೆ ಹೋಗಬೇಕು.
ಅಲ್ಲೇನು ಹೊಸ ಅಪಾಯ ಕಾದಿದೆಯೊ ಎನ್ನುವಂತೆ ನಾನು, ಮುಖ
ಬಾಡಿಸಿ ಕುಳಿತೆ.

"ಅಲ್ವೇನೊ" ಎಂದರು ತಂದೆ.

ನಾನು ಹೌದೆನ್ನುವಂತೆ ತಲೆಯಲ್ಲಾಡಿಸಿದೆ.

ನಮ್ಮನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದವನು ಎದ್ದುಹೋಗಿ
ಉಗುಳು ತುಂಬಿದ್ದ ಬಾಯಿಯನ್ನು ಬರಿದುಮಾಡಿ ಬಂದ. ಏನೊ
ಮಾತನಾಡಲು ಇಚ್ಛಿಸಿದವನಂತೆ ಸ್ವರ ಹೊರಡಿಸಿ ಗಂಟಲು ಸರಿಪಡಿ
ಸಿದ. ಆದರೆ ಮಾತನಾಡಲಿಲ್ಲ. ಅಜ್ಜಿ ಏನನ್ನೊ ಯೋಚಿಸುತ್ತಿದ್ದರು.
ಮೌನ ನೆಲೆಸಿತು....... ಎಮ್ಮೆಯೊಂದು ಮುಸುಡು ಬೀಸುತ್ತಾ
'ಆಂಯ್' ಎಂದು ಕೂಗಿತು.

ಆ ಕೂಗು ನಿಂತೊಡನೆ ಅಜ್ಜಿ ಹೇಳಿದರು:

"ಅದಕ್ಕೇನಂತ? ಹೊತ್ತಾರೇನೂ ಸಂಜೇನೂ ಕೆಲಸಮಾಡ್ಲಿ.
ಹಗಲೊತ್ತು ಸ್ಕೂಲಿಗೆ ಹೋಗ್ಲಿ."

ತಂದೆ ಸಮಾಧಾನದ ಉಸಿರು ಬಿಟ್ಟುದನ್ನು ಕಂಡೆ. ಆ ಬಳಿಕ
ಊಟದ ವಸತಿಯ ಲೆಕ್ಕಾಚಾರವಾಯಿತು. ಸಂಪಾದಿಸಿದ್ದನ್ನೆಲ್ಲಾ

ವಿಮೋಚನೆ

೩೫

ತಂದು ಒಪ್ಪಸುವುದಗಿ ಅಪ್ಪ ಹೇಳಿದ. ನಮ್ಮನ್ನು ಆಲ್ಲಿಗೆ ಕರೆದು
ತಂದಿದ್ದವನು, "ಅಧ್ಯಕಾದೀತು? ದಿನವು ಒಂದಾಣೆ ಮುರ್ಕ್ಕೊಂಡು
ಮಿಕ್ಕಿದ್ದು ಅಜ್ಜಮ್ಮನ ಕೈಗೆ ಹಾಕಿ," ಎಂದ. ಅಜ್ಜಿಗೆ ಸಮ್ಮತಿಯಾಯಿತು.

ಅದೇ ಮನೆಯ ಹಿಂಭಾಗದಲ್ಲಿ, ಸೌದೆಯೊಟ್ದತ್ತಿದ್ದ ಜಾಗದ
ಈಚೆಗೆ, ನಮ್ಮ ಸಂಸಾರ ಹೂಡಿದೆವು.

ಹಾಗೆ ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಯಿತು.

ಆ ಆರಂಭಕ್ಕ ಕಾರಣನಾದ ಕೆಲಸಗಾರ ಮರುದಿನ ಹೊತ್ತಾರೆ
ಬಂದು ತಂದೆಯನು ಕರೆದೊಯ್ದ. ನಾನು ಸಗೆಣಿ ಎತ್ತಿದೆ. ಅಜ್ಜಿ
ನನಗೆ ಹಿಂದಿನ ದಿನದ ತಂಗಳು ಕೊಟ್ಟರು. ಬಿಸಿಲು ಬಂದಮೇಲೆ
ಬೀದಿಗಿಳಿದು ಅತ್ತಿತ್ತ ನೋಡಿ ಬಂದೆ. ನಗರದ ಹುಡುಗರನ್ನು ನಾನು
ಅಗಲೆ ದ್ವೇಷಿಸತೊಡಗಿದ್ದೆ. ಅವರಲ್ಲಿ ಜುಟ್ಟು ಹಿಡಿಯುವರೊ ಎಂಬ
ಭಯ ನನಗೆ, ಆದರೆ ಅಜ್ಜಿಯ ಮನೆ, ಬೇರೆ ಮನೆಗಳಿಗಿಂತ ದೂರ
ಎಷ್ಟೋ ವಾಗಿಯೇ ಇತ್ತು_ಎಂದೆನಲ್ಲ? ಅದರಿಂದ ನನಗೆ ಎಷ್ಟೋ ಸಮಾ
ಧಾನವಾಗಿತ್ತು.

ಹೇಗೆ ಹಲವು ದಿನಗಳು ಕಳೆದವು. ಅವು ಒಂದಕ್ಕಿಂತ
ಇನ್ನೊಂದು ಭಿನ್ನವಾಗದೇ ಇದ್ದ ದಿನಗಳು. ಬಿದುವಿದ್ದಾಗಲೆಲ್ಲಾ
ಚಾಪೆಯಮೇಲೆ ಮಲಗಿ ಛಾವಣಿಯ ಸೂರಿನೆಡೆಯಿಂದ ನಾನು ಆಕಾಶ
ನೋಡುತ್ತಿದ್ದೆ. ಇಲ್ಲವೇ ಅಂಗಳದ ಅಂಚಿನಲ್ಲಿದ್ದ ಬೇಲಿಗೆ ಮುಖ
ತಗುಲಿಸಿ ದೂರದೂರದವರೆಗೂ ದೃಷ್ಟ ಹಾಯಿಸುತ್ತಿದ್ದೆ.

ಎಲ್ಲವೂ ಬರಡಾಗಿ ತೋರುತ್ತಿದ್ದ ನನ್ನ ಬಾಳ್ವೆ ಸ್ವಲ್ಪವಾದರೂ
ಹಸರಾಗುವಂತೆ ಮಾಡಿದವರು ಆ ಅಜ್ಜಿ. ಅನ್ಯ ಜಾತಿಯ ನನ್ನನ್ನು
ಅವರು ಪ್ರೀತಿಸಿದರು. ವರ್ತನಯ ಮನೆಗಳಿಗೆ ಹಾಲ್ಲು ಕೂಟ್ಟು
ಬಂದಮೇಲೆ ಆಕೆ, ನನಗೋಸ್ಕರವಾಗಿಯೆ ಒಂದು ಲೋಟ ಹಾಲು
ಕೊಡುತ್ತಿದ್ದರು. ಅಮ್ಮನನ್ನು ಮರೆತಿರಿಲಿಲ. ಅವಳ ನೆನ
ಪಾಗುತ್ತಲೇ ಇತ್ತು. ಆ ಹೆಮಾವತಿಯ ಪ್ರವಾಹ........ ಧುಮು
ಧುಮಿಸಿ ಬಂದ ಕೆಂಪು ಕೊಳಚೆ ನೀರು......ಕಣ್ನುಮುಚ್ಚಿ ತೆರೆಯುವು
ದರೊಳಗಾಗಿ ನಡೆದುಹೋಗಿದ್ದ ಆ ಅನ್ಯಾಯ..... ಆದರೂ ದಿನಕಳೆದಂತೆ
ಆ ನೋವು ಕಡಿಮೆಯಾಗುತ್ತಿತ್ತು. ಅಮ್ಮನ ಬದಲು ಪ್ರೀತಿಯ ನಾಲ್ಕು ಮಾತನ್ನಾಡತೊಡಗಿದ್ದ ಅಜ್ಜಿ ನನ್ನನ್ನು ಮನುಷ್ಯನಾಗಿ ಮಾಡಿದರು. ಕಾಲಕಳೆದಂತೆ ಎಂಥ ನೋವೂ ವಾಸಿಯಾಗುವುದೆಂಬ ಪಾಠವನ್ನು ನಾನು ಮೆಲ್ಲಮೆಲ್ಲನೆ ಕಲಿತೆ.

ಆದರೆ ನಾನು ಕಲಿಯಬೇಕಾಗಿದ್ದ ಬೇರೆ ಪಾಠಗಳಿದ್ದುವು_ಶಾಲೆಯ ಪಾಠಗಳು. ನನ್ನನ್ನು ಸ್ಕೂಲಿಗೆ ಸೇರಿಸಿದರು. ತೀರ ಹೊಸತಾಗಿದ್ದ ವಿಚಿತ್ರ ವಾತಾವರಣದಲ್ಲಿ ಬೆದರಿಕೆ ಗದರಿಕೆಯ ಬಿರುನುಡಿಗಳ ಬ‌ಯ್ಗಳ ಮಂತ್ರಪಠನದ ನಡುವೆ, ನಾನು ವಿದ್ಯಾಸರಸ್ವತಿಯ ದರ್ಶನ ಪಡೆದೆ. ಮೊದಲ ದಿನ ನಾನು ಮನೆಗೆ ಮರಳಿದಾಗ, ನಮ್ಮ ಕೊಠಡಿಗೆ ಹೋಗಿ, ಮುಖಮುಚ್ಚಿಕೊಂಡು ಅತ್ತೆ.

ನಾನು ಬರುತ್ತಿದ್ದುದನ್ನು ದೂರದಿಂದಲೆ ಅಜ್ಜಿ ನೋಡಿದ್ದರೋ ಏನೋ. ಹೊರಗಿನಿಂದಲೇ ಇಣಿಕಿನೋಡುತ್ತಾ, "ಏನಪ್ಪಾ ಚಂದ್ರು? ಹೊಡೆದ್ರೇನೋ ಮರಿ?" ಎಂದರು.

ನನಗೆ ಯಾರೂ ಹೊಡೆದಿರಲಿಲ್ಲ. ಆದರೆ ಯಾಕೊ ಆ ಹೊಸ ಅನುಭವ ನನ್ನ ಹೃದಯದ ಅಣೆಕಟ್ಟೆಗೆ ಸುರಂಗಹೊಡೆದಿತ್ತು.

ಕೆಲಸದಿಂದ ವಾಪಸು ಬಂದ ತಂದೆ, ಬಲು ಆತುರದಿಂದ ನನ್ನ ಮೈದಡವಿದ.

"ಎಂಗಿತ್ತಪ್ಪಾ? ಸ್ಕೂಲು ಹೆಂಗಿತ್ತು ಚಂದ್ರೂ?"

ನಾನು ಮತ್ತೊಮ್ಮೆ ಗಟ್ಟಿಯಾಗಿ ಅತ್ತೆ. ಮತ್ತೆ ಶಾಲೆಗೆ ಹೋಗುವುದೇ ಇಲ್ಲವೆಂದು ಗೋಳಾಡಿದೆ. ಆ ಬಣ್ಣಬಣ್ಣದ ಷರಟು ಲಂಗಗಳು, ನುಣ್ಣನೆಯ ಕೂದಲು ಬೈತಲೆ, ಕೆಂಪು ಕೆಂಪನೆಯ ಕೋಮಲ ಮುಖಗಳು- ಇವೆಲ್ಲವೂ, "ಇದು ನಿನ್ನ ಲೋಕವಲ್ಲ"ಎಂದು ನನಗೆ ಗದರಿ ಹೇಳಿದ್ದುವು. ನನ್ನ ಹಾಗೆಯೇ ಬಡವರಂತೆ ಕಂಡ ಬೇರೆ ಕೆಲವರಿದ್ದರು ನಿಜ. ಆದರೆ ಅವರೊಬ್ಬರೂ ಮಾತನಾಡುತ್ತಿರಲಿಲ್ಲ. ಸ್ವರ ಹೊರಡಿಸುತ್ತಿರಲಿಲ್ಲ. ನಗುತ್ತಿರಲಿಲ್ಲ. ದೊಡ್ಡವರ ಮಕ್ಕಳೆದುರಲ್ಲಿ ಅವರು ಹಿಂಜರಿದು ಹಿಂಜರಿದು ಮೂಲೆ ಗುಂಪಾಗಿದ್ದರು.

ನನ್ನ ರೋದನ, ತಂದೆಯನ್ನು ಸಂಕತಟಕ್ಕೆ ಗುರಿಮಾಡಿರಬೇಕು. ಆತ ದೀರ್ಘ ಕಾಲ ಯೋಚನೆಯಲ್ಲೇ ಮುಳುಗಿ ಕುಳಿತ. ಅವನ ಮಡಿಲಲ್ಲಿ ನಾನು ಮುಖವನ್ನು ಮುಚ್ಚಿಟ್ಟೆ.

"ಸ್ಕೂಲಿಗೆ ಹೋಗಲ್ಲ ಆನ್ಬಾರದು ಮಗೂ. ಯಾರಾದರೂ ಹಿಂಗೆ ಆನ್‌ಬವ್ದಾ? ಸ್ಕೂಲಿಗೆ ಹೋಗ್ದಿದ್ರೆ ವಿದ್ಯೆ ಹೆಂಗ್ಬಂದೀತು? ನೀನು ದೊಡ್ಡಮನುಷ್ಯ ಹೆಂಗಾದೀಯ?"

"ಇಲ್ಲಪ್ಪ, ನಾನು ದೊಡ್ಡಮನುಷ್ಯ ಆಗೋದಿಲ್ಲ."

"ಅಯ್ಯೋ ಹುಚ್ಚುಪ್ಪ, ಹಂಗಂತಾರೇನೋ ಯಾರಾದರೂ?"

ನಾನು ಆಳು ನಿಲ್ಲಿಸಿದೆ. ಆದರೆ ಅಪ್ಪನ ಬಾಡಿದ ಮುಖ ಅರಳಲೇ ಇಲ್ಲ. ನನಗೆ ಅದು ಅಸಹನೀಯವಾಯಿತು. ನನ್ನ ಅಪ್ಪನಿಗೆ ತೃಪ್ತಿಯನ್ನುಂಟುಮಾಡುವ ಏನಾದರೊಂದು ಕೆಲಸ ಮಾಡಬೇಕೆನ್ನಿಸಿತು. ಏನು ಮಾಡಿದರೆ ಆತನಿಗೆ ತೃಪ್ತಿಯುಂಟಾದೀತು?

ಒಮ್ಮೆಲೆ ಉತ್ತರ ಹೊಳೆದು ನನಗೆ ಸಂತೋಷವಾಯಿತು.

"ಅಪ್ಪಾ ಅಪ್ಪಾ, ನಾನು ಸ್ಕೂಲಿಗೆ ಹೋಗ್ತೀನಿ, ದೊಡ್ಡಮನುಷ್ಯ ಆಗ್ತೀನಿ" ಎಂದೆ.

ತಂದೆ ನನ್ನನ್ನು ತಬ್ಬಿಕೊಂಡ. ಬೆಚ್ಚನೆಯ ಎರಡು ಹನಿ ಕಣ್ಣೀರು ನನ್ನ ಬೆನ್ನಮೇಲೆ ಉರುಳಿ ಹರಿಯಿತು.

ಹಾಗೆ ನಾನು, ದೊಡ್ಡಮನುಷ್ಯ ನಾಗಲೆಂದು, ಶಾಲೆಗೆ ಹೋದೆ. ದಿನಗಳು ಉರುಳಿದುವೂ ಒಂದು ರೀತಿಯ ಯಾಂತ್ರಿಕ ಜೀವನ. ಬಿಸಿಲು, ಮಳೆ, ಚಳಿ. ಬೆಳಗು ಮುಂಜಾನೆ, ಸಂಚೆ, ರಾತ್ರೆ. ಎಂದಾದರೊಮ್ಮೆ ಕಾಹಿಲೆ ಕಸಾಲೆ. ಹೀಗೆಯೆ ಕ‍ಳೆಯಿತುದಿನ.

.... ಆ ದಿನ ನನ್ನ ಎಳೆಯ ಜೀವನದಲ್ಲೆ ಮಹತ್ತರವಾದೊಂದು ಘಟನೆ ನಡೆಯಿತು. ಆ ಹುಡುಗನಿಗೆ ಯಾವ ಮದವೊ ಯಾರಿಗೆ ಗೊತ್ತು? ನಾಲ್ಕು ದಿನಗಳಿಂದ ಅವನು ನನ್ನನ್ನು ಪೀಡಿಸುತ್ತಿದ್ದ. ಕಾರಣವಿಷ್ಟೆ: ತರಗತಿಯಲ್ಲಿ ನಾನು ಮೊದಲಿಗನಾಗಿದ್ದೆ. ಶುಭ್ರವಾದ ಅಂಗಿ ಚಡ್ದಿಯಿಲ್ಲದ, ಕ್ರಾಪಿನ ಬದಲು ಜುಟ್ಟುಬಿಟ್ಟದ್ದ, ಒಬ್ಬ ಬಡ ಹುಡುಗ ಮೊದಲಿಗನಾಗುವುದೆಂದರೇನು? ನನ್ನನ್ನೂ ಹಲವು ಹುಡುಗರು ಗೌರವಿಸುತ್ತಿದ್ದರು. ಆದರೆ ಹೀನೈಸುತ್ತಿದ್ದರ ಸಂಖ್ಯೆಯೇ ಹೆಚ್ಚು. ಆ ಸಂಜೆ ತರಗತಿ ಮುಗಿದು ನಾವೆಲ್ಲ ಶಾಲೆಯ ಮೆಟ್ಟಲಿಳಿಯುತ್ತಿದ್ದೆವು. ಆತ ಬೇಕುಬೇಕೆಂದೇ ನನ್ನನ್ನು ಮೊಣಗೈಯಿಂದ ತಿವಿದು ರೇಗಿಸಿದ.

"ಏನೂ ಅಹಂಕಾರ ನೋಡು. ಹಳ್ಳಿ ಗಮಾರ ದೊಡ್ಡಮನು ಷ್ಯಾಂತ ತಿಳಕೊಂಡಿದಾನೆ. ಗತಿ ಕೆಟ್ಟ ಮುಂಡೇದು!"

ನಾನು ಸ್ಲೇಟು ಪುಸ್ತಕವನ್ನು ಕೆಳಕ್ಕಿರಿಸಿದೆ. ಅವನನ್ನು ಹಿಡಿದು ನಿಲ್ಲಿಸಿ, "ಏನೆಂದೆ"? ಎಂದೆ. ಆವನು ಅಂತಹ ಪ್ರಶ್ನೆಯನ್ನು ನಿರೀಕ್ಷಿಸಿಯೇ ಇರಲ್ಲಿಲ.

ಶಹಭಾಷ್! ಮಾತಾಡೋಕೂ ಬರತ್ತ ಇವನ್ಗೆ !" ನಾನು ಉತ್ತರಕೊಡಲಿಲ್ಲ. ಅವನ ಬಣ್ಣದ ಆಂಗಿಯ ಕಾಲರ್‌ಗೆ ಕೈಹಾಕಿ ನನ್ನೆಡೆಗೆ ಎಳೆದೆ. ಆತ ಉರುಳಿಹೋದ. ದೂರಸರಿದು,"ಇಷ್ಟೇನೆ?" ಎಂದೆ.

ಅವನ ಮನೆತನದ ಅಭಿಮಾನವೆಲ್ಲಾ ಕೆರಳಿ ನಿಂತಿರಬೇಕು.ಎದ್ದು ಬಂದು ದಬದಬನೆ ನನಗೆ ಹೊಡೆದ. ಎಲ್ಲಿ ನನ್ನ ಜುಟ್ಟು ಹಿಡಿ ಯುವನೋ ಎಂಬ ಭಯವಿತ್ತು ನನಗೆ. ಅದಕ್ಕೆ ನಾನು ಆವಕಾಶ ಕೊಡಲಿಲ್ಲಿ. ಅವನ ಕ್ರಾಪಿಗೆ ಕೈ ಹಾಕಿ ಒಂದು ಹಿಡಿ ಕೂದಲು ಕಿತ್ತು ಬರುವಹಾಗೆ ಎಳೆದು ನೋಯಿಸಿದೆ. ಅವನು ಕೂಗಿಕೊಂಡು. ಮನೆ ಯಲ್ಲಿ ಅವನ ಹಾದಿ ನೋಡುತ್ತಿದ್ಧ ಕಾಫಿ ಬಿಸ್ಕತ್ತಿನ ನೆನಪಾಯಿತೇನೊ.ನಾನು ಹಿಂದೆಂದೂ ಯಾರೊಡನೆಯೂ ಜಗಳವಾಡಿರಲಿಲ್ಲ. ಆದರೆ ಅಂಗಳದಲ್ಲಿ ನಿಂತು, ಬೀದಿಯ ಹುಡುಗರು ರಕ್ತ ಸೋರುವತನಕ ಕುಸ್ತಿ ಹಿಡಿಯುವುದನ್ನು ನಾನು ಕಂಡಿದ್ದೆ. ಹಾಗೆ ಕಂಡು ಕಲಿತುವನ್ನು ಇಲ್ಲಿ ಪ್ರಯೋಗಿಸಿದೆ. ಏಟು ತಿಂದು ಅವನು ಬೋರಲುಬಿದ್ದ. ಅಂಗಿ ಹರಿದಿತ್ತು. ಅವನ ಕೆಂಪು ದವಡೆಯಮೇಲೆ ನಾನು ಎಳೆದಿದ್ದ ಉಗುರಿನ ಎರಡು ಗೆರೆಗಳು ಮತ್ತಷ್ಟು ಕೆಂಪಗಾಗಿ ಸಿಡಿಯುತ್ತಿದ್ದವು. ಎಲ್ಲ ಹುಡುಗರೂ ನಮ್ಮನ್ನೆ ನೋಡುತ್ತಿದ್ದರು .ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ ನಿಜ. ಆದರೆ ಅವನ ಸಹಾಯಕ್ಕೂ ಯಾರೂ ಬರಲಿಲ್ಲ. ಆ ಹುಡುಗನಿಗೆ ಅವಮಾನವಾದುದನ್ನು ಕಂಡು ಹಲವರಿಗೆ ಸಂತೋಷವಾಗಿರಬೇಕು. ಆದರೆ ಒಬ್ಬಿಬ್ಬರು, ಉಪಾಧ್ಯಾಯರಿಗೆ ದೂರುಕೊಡಲು ಓಡಿಹೋಗಿದ್ದರು. ಉಪಾಧ್ಯಾಯರು ಧಾವಿಸಿ ಬಂದರು.ಅಪರಾಧಿ ಯಾರು? ನಮ್ಮಿಬ್ಬರೊಳಗೆ ತಪ್ಪುಮಾಡಿದವರು ಯಾರು? ಆ ಉಪಾಧ್ಯಾಯರು ಮೊದಲು ನನ್ನ ಕೆನ್ನೆಗೆ ಏಟು ಬಿಗಿದರು.

"ಇಷ್ಟು ಶಕ್ತಿಬಂತೇನೋ ಭಡವಾ?" ಎಂದು ಪ್ರಶ್ನೆ ಬಂತು. ಹೌದು ನನಗೇ ಗೊತ್ತಿರಲಿಲ್ಲ. ಬಡವನಾದ ನನಗೆ ಅಷ್ಟು ಶಕ್ತಿ ಬಂದಿತ್ತು.

ಆ ಶ್ರೀಮಂತರ ಹುಡುಗ ಅಳುತ್ತಿದ್ದ. ಇಲ್ಲದ ನೋವನ್ನು ಹತ್ತುಪಾಲು ಹೆಚ್ಚಿಸಿಕೊಂಡು ಆಳುತ್ತಿದ್ದ. ನಾನು ಸ್ಲೇಟು ಪುಸ್ತಕ ವನ್ನೆತ್ತಿಕೊಂಡೆ.

ಉಪಾಧ್ಯಾಯರ ಗುಡುಗು ಧ್ವನಿ ಸಿಡಿನುಡಿಯಿತು.

"ನಾಳೆಯಿಂದ ಸ್ಕೂಲಿಗೆ ಬರಬೇಡ. ಕೇಳಿಸ್ತೋನೋ ಚಂದ್ರ ಶೇಖರಾ, ನಾಳೆಯಿಂದ ಸ್ಕೂಲಿಗೆ ಬರಬೇಡ."

.......ತಲೆ ಬಾಗಿಸಿಕೊಂಡು ನಾನು ಮನೆಗೆ ಬಂದೆ. ಕಾಲುಗಳು ಜಡವಾಗಿದ್ದವು. ಹೃದಯ ಭಾರವಾಗಿತ್ತು. ಸುರಿಯಲು ನಿರಾಕರಿಸಿದ್ದ ಕಣ್ಣೀರು ಕಣ್ಣೀನ ಅಂಚಿನಲ್ಲಿ ತುಂಬಿ ತುಳುಕುತ್ತಿತ್ತು.ಇದು ನ್ಯಾಯವೆ? ತರಗತಿಗೆ ಮೊದಲಿಗನಾದಾಗ ನನ್ನನ್ನು ಪ್ರೀತಿಸಿದ ಉಪಾಧ್ಯಾಯರು, ಈಗ ಹೀಗೆ ಮಾಡುವುದು ನ್ಯಾಯವೆ? ತಪ್ಪುಯಾರದು? ಆ ಶ್ರೀಮಂತರ ಹುಡುಗ ಏನೂ ತಪ್ಪು ಮಾಡಲಿಲ್ಲವೆ ಹಾಗಾದರೆ? ಅವರು ಬೇರೆ ಯಾವ ಶಿಕ್ಷೆ ಬೇಕಾದರೂ ಕೊಡಬಹುದಾಗಿತ್ತು. ಆದರೆ ಸ್ಕೂಲಿಗೇ ಬರಬಾರದು, ಎಂದು ತೀರ್ಮಾನ ಕೊಡುವುದೆ? ತಂದೆಗೆ ಹೇಗೆ ಮುಖ ತೋರಿಸಬೇಕು? ಇನ್ನು ದೊಡ್ಡ ಮನುಷ್ಯನಾಗುವುದು ಹೇಗೆ ಸಾಧ್ಯ? ಅಜ್ಜಿಗೆ ಏನು ಉತ್ತರಕೊಡಬೇಕು? ಸಾವಿರ ಸವಾಲುಗಳು ನನ್ನ ಕಣ್ಣೆದುರು ಕುಣಿಯುತ್ತಿ ದ್ದುವು. ಎಲ್ಲ ಸವಾಲುಗಳೂ ಒಂದರಲ್ಲೊಂದು ಬೆರೆತು,ಮುಂದೇನು? ಎಂಬ ದೊಡ್ಡ ಪ್ರಶ್ನೆ ನನ್ನನ್ನು ಅಣಕಿಸುತ್ತಿತ್ತು.

ನಾನು ಮನೆಗೆ ಹೋಗಲಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲೆ ಒಂದು ಮರದ ಕೆಳಗೆ ಒಬ್ಬಂಟಿಗನಾಗಿ ಕುಳಿತೆ. ಬೀದಿಯಲ್ಲಿ ಬರಿಯ ಲಂಗೋಟಿಯುಟ್ಟಿದ್ದ ಹುಡುಗರು 'ಉತ್ತುತ್ತೂ' ಆಡುತ್ತಿದ್ದರು. ಅವರೇ ಸುಖಿಗಳು. ಆವರು ಶಾಲೆಗೆ ಹೋಗಬೇಕಾದುದಿಲ್ಲ. ದೊಡ್ಡ ಮನುಷ್ಯರಾಗಬೇಕಾದುದಿಲ್ಲ. ಅವರಲ್ಲಿ ಯಾರೂ ತರಗತಿಗೆ ಮೊದಲಿ ಗರೆನ್ನಿಸಿಕೊಂಡು ಶ್ರೀಮಂತ ಹುಡುಗರ ದುರಾಗ್ರಹಕ್ಕೆ ತುತ್ತಾಗ ಬೇಕಾದುದಿಲ್ಲ. ಅವರು ಏನು ಇಲ್ಲದ ಕಡುಬಡವರು. ನಾನೂ ಬಡವ ನಿಜ. ಆದರೆ ಶಾಲೆಗೆ ಹೋಗುತ್ತಿರುವವನು-ವಿದ್ಯಾರ್ಥಿ.

ಮೆಲ್ಲಮೆಲ್ಲನೆ ಕತ್ತಲಾಯಿತು. ಹಾಲು ಕರೆಯಲು ಅಜ್ಜಿಗೆ ನೆರವಾಗುವ ಹೊತ್ತು. ಆದರೆ ನಾನಿನ್ನೂ ಮನೆಗೇ ಹೋಗಿಲ್ಲ. ಇನ್ನು ಸ್ವಲ್ಪ ಸಮಯದಲ್ಲಿ ತಂದೆ ಕೆಲಸದಿಂದ ಹಿಂತಿರುಗಿಬರುವನು. ಬಂದೊಡನೆಯೆ "ಇವತ್ತು ಏನು ಹೇಳ್ಕೊಟ್ರು ಚಂದ್ರು?" ಎಂದು ಕೇಳುವುದು ಪದ್ಧತಿ. ಈ ದಿನ ಆತ ಏನು ಮಾಡಬಹುದು?

ಮತ್ತೂ ಕತ್ತಲಾಯಿತು. ಉತ್ತುತ್ತೂ ಹುಡುಗರು ಮನೆಗೆ ಹೋದರು. ಪ್ರದೇಶ ನಿರ್ಜನವಾಯಿತು. ಒಬ್ಬನೇ ಅಲ್ಲಿರಲು ಹೆದರಿಕೆ ಎನಿಸಿತು. ಆದರೆ ಹಾಗೆ ಯಾರಾದರೂ ಹೇಳಿದ್ದರೆ ನಾನು ಒಪ್ಪು ತ್ತಿರಲಿಲ್ಲ. ಕತ್ತಲಾದ ಮಾತ್ರಕ್ಕೆ ಹೆದರಿಕೊಳ್ಳುವುದುಂಟೆ? ಅದು ಹೊರ ಜಗತ್ತಿಗೆ ನಾವು ತೋರಿಸುವ ಮುಖ. ಆದರೆ ಅಂತರ್ಯದೊಳಗೆ ಮಾತ್ರ ಮುಖ ಮುದುಡಿತ್ತು....ನಾನು ಮೆಲ್ಲನೆ ಮನೆಯತ್ತ ನಡೆದೆ.

"ಎಲ್ಗೋಗಿದ್ದೆ ಮರಿ?ಯಾಕೋ ತಡ?"ಎಂದರು ಅಜ್ಜಿ.ತಂದೆ ನಾನು ಬಂದ ಸದ್ದು ಕೇಳಿ ಓಡಿಯೋಡಿ ಹೊರಗೆ ಬಂದ.

"ಏನಾಯ್ತು ಚಂದ್ರು? ಏನಾಯ್ತು ಮಗ?"

ನನಗೇನಾಗಿತ್ತು? ಅದನ್ನು ಹೇಗೆ ಹೇಳಬೇಕು? ನಾನು ಬಹಳ ಹೊತ್ತು ಮಾತನಾಡಲೇ ಇಲ್ಲ. ತಂದೆ ತಿರುತಿರುಗಿ ಅದೇ ಪ್ರಶ್ನೆ ಕೇಳಿದ. ನಾನು ಉತ್ತರ ಕೊಡಲೇ ಇಲ್ಲ.

ನನಗೆ ಎಂದು ಹೊಡೆದವನಲ ಅಪ್ಪ. ಆ ರಾತ್ರೆ ಆತ ನನ್ನ ಮೈ ಮೇಲೆ ಏರಿ ಬಂದ. ಹೊಡೆತಕ್ಕಿಂತಲೂ, ಹೊಡೆಯಲು ಬಂದನೆಂಬ ವಿಷಯವೇ ನನಗೆ ನೋವನುಂಟೂಮಾಡಿತು. ಆಗಲೂ ನಾನು ಮಾತನಾಡಲಿಲ್ಲ. ನಮ್ಮ ಗೂಡಿನ ಹೊರಗೆ ನಿಂತು ಅಜ್ಜಿಯೂ ಬಲು ಹೊತ್ತು ಹೇಳಿ ನೋಡಿದರು.........

ಕೊನಗೆ ಬಲು ರಾತ್ರೆಯಾದ ಮೇಲೆ ನಾನು ನಡೆದುದನ್ನು ತಂದೆಗೆ ವಿವರಿಸಿದೆ. ಉಪ್ಪು ಖಾರ ಹಚ್ಚದೆ, ಇದ್ದುದನ್ನು ಇದ್ದಂತೆ ತಿಳಿಸಿದೆ. ತಂದೆ ತಲೆ ಬಗ್ಗಿಸಿ ಕುಳಿತ. ಅಸಹಾಯತೆಯ ದುಃಖ ಆ ಮುಖದ ಮೇಲೆ ಚಿತ್ರಬರೆದಂತೆ ಮೂಡಿತ್ತು.

"ಹಿಂಗ್ಯಾಕ್ಮಾಡ್ದೆ ಚಂದ್ರು ? ದುಡ್ನೋರ್ ಸಂಗಡ ಜಗಳ ಕಾಯ್ಸೋದಾ?"

ನಾನು ನಿರುತ್ತರನಾಗಿದ್ದೆ. ಬಹಳ ಹೊತ್ತು ತಂದೆಯೂ ಸುಮ್ಮನಿದ್ದ. ಕೊನೆಗೆ ಆತನೆ ಮೌನವನ್ನು ಮುರಿದ.

"ನಾಳೆ ದಿವಸ ಸ್ಕೂಲಿಗೆ ಬರ್ತೀನಿ, ನಿಮ್ಮಷ್ಟರನ್ನು ಕೇಳಿ ನೋಡಾಣ."

"ಹೂನಪ್ಪ"

"ಅಲ್ಲಿ ನೀನು ತಪ್ಪೊಪ್ಕ್ಕೋಬೇಕು ಚಂದ್ರು."

ನಾನು ತಂದೆ ಮುಖವನ್ನೆ ನೋಡುತ್ತಿದ್ದ. ಮಾಡದ ತಪ್ಪನ್ನು ಏದೆಂದು ಒಪ್ಪಿಕೊಳ್ಳಲಿ? ನಾನು ಹೊಡೆದುದು ನಿಜ, ಆದರೆ ಅದ್ದಕ್ಕೆ ಮೂಲಕಾರಣವೇನ್ನು ? ನನ್ನ ತಂದೆಗೆ ಅಷ್ತು ತಿಳಿಯ ಬಾರದೆ ?

ನನ್ನನ್ನೆ ನೋಡುತ್ತ ಅಪ್ಪ ಹೇಳಿದ.

"ನಿಂಗ್ತಿಳೀದು ಚಂದ್ರು. ಈ ಲೋಕದಲ್ಲಿ ಬಡವರ ಕೋಪದವಡೆಗೆ ಮೂಲ. ತಾಳಿ ನಡೆದವನೇ ಬಾಳೋದು ಸಾಧ್ಯ."

ನನಗೆ ಆ ಮಾತುಗಳು ಅರ್ಥವಾಗಲಿಲ್ಲ. ಸದಾಕಾಲವೂ ಎದೆ ಎತ್ತಿ ನಡೆಯುತ್ತಲಿದ್ದ ಖಡಾಖಂಡಿತವಾದಿಯಾಗಿದ್ದ ಸತ್ಯನಿಷ್ಟುರ ನಾಗಿದ್ದ ನನ್ನ ತಂದೆಯೇ ಅಲ್ಲವೆ ಅಂಥ ಮಾತುಗಳನ್ನು ಹೇಳುತ್ತಿ ದ್ದುದು?

ನಾನು ಕ್ಷಮೆ ಕೇಳಬೇಕಾದ ಅನಿವಾರ್ಯತೆಯಿಂದ ನನಗೆ ದುಃಖವಾಗಲಿಲ್ಲ. ಆದರೆ ತಂದೆ ಅಂತಹ ಹಿತೋಪದೇಶ ಮಾಡ ಬೇಕಾತಯ್ತಲ್ಲಾ ಎಂದು ದುಃಖನೆನಿಸಿತು.

ಮರುದಿನ ಬೆಳಿಗ್ಗೆ ತಂದೆ ಕೆಲಸಕ್ಕೆ ಹೋಗಲಿಲ್ಲ. ನನ್ನೊಡನೆ ಶಾಲೆಗೆ ಬಂದ. ಉಪಾಧ್ಯಾಯರಿನ್ನೂ ಬಂದಿರಲಿಲ್ಲ. ಹುಡುಗರ ದೃಷ್ಟಿ ತಪ್ಪಿಸಿ ನಾವಿಬ್ಬರೂ ದೂರ ನಿಂತೆವು. ಅಂತೂ ಕೊನೆಗೊಮ್ಮೆ ಉಪಾಧ್ಯಾಯರು ಬಂದರು. ತಂದೆ ಹಾದಿಯಲ್ಲಿ ಅವರೆದುರು ನಿನೀತ ನಾಗಿ ಬಾಗಿ ನಮಸ್ಕರಿಸಿದ.

" ಏನು ?" ಎಂದರು ಉಪಾಧ್ಯಾಯರು, ದರ್ಪಯುಕ್ತವಾಣಿ ಯಿಂದ.

" ನಮ್ಚಂದ್ರು-"

" ಅವನು ಶುದ್ಧ ಪೋಲಿ. ಚೆನ್ನಾಗಿ ಓದ್ಕೋತಾನೆ ಅಂತಿದ್ರೆ ನನೈಲಸಕ್ಕೇ ಸಂಚ್ಚಾರ ತರೋಹಾಗೆ ಮಾಡ್ತನೆ. ಯಾರು ಎತ್ತ ಅಂತ ನೋಡ್ದೆ ಆಡ್ತನೆ. ನಾಯಿನ ತಂಗೊಂಡೋಗಿ ಸಿಂಹಾಸನದ ಮೇಲೆ....."

ಅವರು ಅದೇನೇನೊ ಹೇಳುತ್ತಿದ್ದರು. ನಾಯಿ ಮತ್ತು ಸಿಂಹಾ ಸನ. ಮಹಾರಾಜರ ಸಿಂಹಸನವನ್ನು ನಾನು ನೋಡಿರಲಿಲ್ಲ. ಆದರೆ ನಾಯಿಯನ್ನು ಕಂಡಿದ್ದೆ- ಬೀದಿಯ ಬಡಕಲು ನಾಯಿಯನ್ನು. ನಾನು ಮತ್ತು ನಾಯಿ.

ನಮ್ಮಪ್ಪ ಹೇಳುತ್ತಿದ್ದರು.

" ಇದೊಂಸಾರೆ ಕ್ಷಮಿಸಿ ಮೇಷ್ಟ್ರೆ,ನಮ್ಚಂದ್ರು ಇನ್ಯಾವತ್ತೂ ಹೀಗ್ಮಾಡೋಕಿಲ್ಲ."

ದೊಡ್ಡ ಮನುಷ್ಯನಾಗುವುದು ಎಷ್ಟು ಕಷ್ಟದ ಕೆಲಸ! ಇನ್ನು ಯಾವತ್ತೂ ನಾನು ಏನನ್ನೂ ಮಾಡಬರದು. ದುಂಡ ದುಂಡನೆಯ ಕೆಂಪು ಕೆಂಪನೆಯ ನಯ ನಾಜುಕಿನ ಆ ಹುಡುಗರು ನನಗೆ ಅವಮಾನ ಮಾಡಿದರೆ, ನಾನು ಏನನ್ನೂ ಮಾಡಬಾರದು.

ನಮ್ಮ ಉಪಾಧ್ಯಾಯರ ಸ್ವರ ಕೇಳಿಸಿತು.

"ಸಂಜೆ ಹೊತ್ಗೆ ಬಾ.ಮಾತೋಡೋಣ."

"ಇಲ್ಗೇಬರ್ಲಾ ಸ್ವಾಮಿ?"

"ನಮ್ಮನೆ ಗೊತ್ತೇನು ನಿಂಗೆ?"

"ಇಲ್ಲ ಸ್ವಾಮಿ."

"ಹೂಂ ಸರಿ,ಇಲ್ಗೇ ಬಾ."

ಮತ್ತೆ ನಾವು ಸ೦ಜೆ ಅಲ್ಲಿಗೇ ಹೋದೆವು,ಮನೆಗೆ ಹೊರಟಿದ್ದ ಹುಡುಗ ಹುಡುಗಿಯರೆಲ್ಲಾ ನಮ್ಮನ್ನೇ ನೊಡುತ್ತ ಹೋದರು. ನಾವು ಆಷ್ಟು ಅಲ್ವರಾಗಬೇಕಾಗಿ ಬಂದ ಆ ದುರವಸ್ಥೆಗೆ ಕಾರಣನಾದ ನನ್ನ ಸರಮ ಸ್ನೀಹಿತನನ್ನು ಹುಡುಕಿದೆ. ಆತಾಆಲ್ಲಿರಲಿಲ್ಲ. ಬಂದೇ ಇರಲಿಲ್ಲವೇನೂ. ಒಮ್ಮೆಲೆ ನನಗೆ ಸತ್ಯಾಂಶ ಹೊಳಿದು ಸಂತೋಷ ವಾಯಿತು: ನನ್ನ ಏಟು ಬಲವಾಗಿ ಬಿದ್ದು ಈಗ ಆ ಪೈಲ್ವಾನ ವಿಶ್ರಾಂತಿ ಪಡೆಯುತ್ತಿರಬಹುದು!

ಉಪಾಧ್ಯಾಯರು, ಅವರ ಹಿಂದೆ ನಮ್ಮ ತಂದೆ, ಅವರ ಹಿಂದೆ ನಾನು-ಹೀಗೆ ಮೆರವಣಿಗೆ ಹೊರಟೆವು.

ಉಪಾಧ್ಯಾಯರ ರುಮಾಲು ಅವರ ಹಿರಿತನವನ್ನು ಎತ್ತಿ ತೋರಿಸುತ್ತಿತ್ತು. ನಗರದ ಒಂದು ಮೂಲೆಯಲ್ಲಿ ಒಬ್ಬರೇ ಉಪಾಧ್ಯಾಯರಿದ್ದ ಸಣ್ಣ ಶಾಲೆ ನಿಜ. ಆದರೇನಂತೆ? ಅವರು ಉಪಾಧ್ಯಾಯರು. ಅವನ ಕೈಯಯಲ್ಲಿ ಛತ್ರಿಯಿತ್ತು. ಹರಿದುಹೋಗಿದ್ದ ಆದರ ಕರಿಯ ಬಟ್ಟೆಗೆ ಬಿಳಿಯ ಹೊದಿಕೆ ಹೊದಿಸಿದ್ದರು. ಮಳೆಯೋ ಬಿಸಿಲೋ ಆ ಛತ್ರಿ ಅವರ ಜೊತೆಗಿರಬೇಕು. ಬಡಕಲಗಿದ್ದ್ ಅವರ ನೀಳವಾದ ಕಲುಗಲಲ್ಲಿ ಚರಚರನೆ ಸದ್ದುಮಡುವ ಚಪ್ಪಲಿಗಳಿದ್ದವು. ಆ ಪಂಚೆ ಮತ್ತು ಕೋತಟು. ಅದರೊಳಗೆ ಷರಟು ಇತ್ತೋ ಇಲ್ಲವೊ ನನಗೆ ತಿಳಿಯದು, ಇದ್ದಿರಬೇಕು. ಬರಿಯ ಕೋಟನ್ನು ಯಾರದರೂ ತೊಡುವುದುಂಟೆ? ಅಂತೂ ಆಗ ನನಗೆ ಕೋಟು ಷರಟುಗಳ ತಾರ ತಮ್ಯದ ಪರಿಜ್ನ್ಜಾನವಿರಲಿಲ್ಲ.

ಅವರ ಹಿಂದೆ ನಮ್ಮಪ್ಪ, ಕರಿದಾಗಿದ್ದ ಜುಬ್ಬ-ಅಡ್ಡಪಂಚೆಗಳನ್ನು ಮರೆಸಿ ಮೈ ಬಣ್ಣವೇ ಎದು ಕಾಣಿಸುತ್ತಿತ್ತು. ಹಗಲೆಲ್ಲಾ ದುಡಿದು ಒರಟಾಗಿದ್ದ ಮಾಂಸಖಂಡಗಳು, ಬರಿಗಾಲು. ಮುಖದ ತುಂಬಾ ಕುರುಚಲು ಗಡ್ಡ ಇದ್ದಿರಬೇಕು. ನನಗೆ ನೆನಪಿಲ್ಲ. ನುಣುಪಿನ ಮುಖ ಮತ್ತು ಗಡ್ಡಗಳ ನಡುವಿನ ವ್ಯತ್ಯಾಸ ಆಗ ನನಗೆ ತಿಳಿದಿರಲಿಲ್ಲ.

ಇನ್ನು ನಾನು, ಸಂಜೆ ಶಾಲೆಬಿಡುವ ಹೊತ್ತಾದರೂ ಸ್ಲೇಟು ಪುಸ್ತಕಗಳನ್ನು ಹಿಡಿದುಕೊಂಡೇ ಬಂದಿದ್ದೆ. ಆರಂಭದ ದಿನದಿಂದಲೂ ನನ್ನ ಸಂಗಾತಿಯಾಗಿದ್ದ ಆ ಪೋಷಾಕು. ಹರಕು ಚಡ್ಡಿ ಮತ್ತು ಹರಿದ ಅಂಗಿ. ಪ್ರತಿ ಭಾನುವಾರ ನಮ್ಮಪ್ಪ ಅದಕ್ಕೆ ನೀನು ಕಾಣಿಸುತ್ತಿದ್ದ. ನಮ್ಮಜ್ಜಿ ಯಾವುದೋ ಸಾಬೂನಿನ ತುಣುಕು ಕೊಡುತ್ತಿದ್ದರು. ನನ್ನ ತಲೆಯ ಮೇಲೆ, ನನ್ನನ್ನು ಹಲವಾರು ಸಾರಿ ಅವಮಾನಕ್ಕೆ ಗುರಿಮಾಡಿದ್ದ ಜುಟ್ಟು ಕುಳಿತ್ತಿತ್ತು.........

ನನ್ನ ಜುಟ್ಟು ಮತ್ತು ನಮ್ಮ ತಂದೆಯ ಜುಟ್ಟು. ಅಜ್ಜಿಗಾದರೋ ಆ ತೊಂದರೆಯೆ ಇರಲಿಲ್ಲ. ಆಕೆಯೇ ಭಾಗ್ಯವಂತೆ.

"ಹೊ ಏನಂತಿಯಾ ?"

ನನ್ನ ತಂದೆ ಮೌನವಾಗಿದ್ದ.

"ಇವತ್ನೋಡು, ಆ ಹುಡುಗ ಸ್ಕೂಲ್ಗೇ ಬಂದಿಲ್ಲ. ಅವನ್ಮನೇಯವರು ಬೇರೆ ಚೀಟಿ ಕಳಿಸಿದಾರೆ. ಅಲ್ಗೋಗಿ ಅವರ ತಂದೇನ ನೋಡ್ಕೊಂಡು ಬರಬೇಕು......"

"ನಮ್ಮ ಹುಡುಗ ದೊಡ್ಡ ತಪ್ಪು ಮಾಡ್ದ ಸ್ವಾಮಿ."

ನಾನು ಅಲ್ಲವೆನಲಿಲ್ಲ. ಉಪಾಧ್ಯಾಯರು ಹಿಂತಿರುಗಿ ನೋಡಿ ನನ್ನನ್ನು ಕೇಳಿದರು:

"ಯಾಕೋ ಆವನಿಗೆ ಹೊಡೆಯೋಕೆ ಹೋದೆ?"

ನಿಜ ಹೇಳಿಬಿಡೋಣವೆನ್ನಿಸಿತ್ತು. ಯಾಕೆ ಹೇಳಬಾರದು?

"ಅವನು ನಂಗೆ--"

ಮಾತನಾಡತೊಡಗಿದ್ದ ನನ್ನನ್ನು ತಂದೆ ಹಿಡಿದು ನಿಲ್ಲಿಸಿದ. ಅವನೆಂದ:

"ಹೋಗಲಿ ಬಿಡಿ ಸ್ವಾಮಿ,ಏನೂ ತಿಳೀದ ಹುಡುಗ. ಇನ್ನೊಂದ್ಸಲ ಹೀಗ್ಮಾಡಲ್ಲ."

ಮಾತಿಲ್ಲದೆ ಮತ್ತೂ ದೂರ ನಡೆದೆವು. ಉಪಾಧ್ಯಾಯರ ಮನೆಸಮಾಪಿಸುತ್ತಿತ್ತು.

"ನಾಳೆ ಸ್ಕೂಲ್ಗೆ ಬರಲಿ. ಇನ್ಮುಂದೆ ಹೀಗಾಗ್ಬಾರ್ದು. ಇನ್ನೂ ನಾಲ್ಕು ಜನ ಹುಡುಗರಿಗೆ ಹೊಡೆದಾಂತಂದರೆ ನನ್ನನ್ನೇ ಡಿಸ್ ಮಿಸ್ಮಾಡ್ತಾರೆ ಅಷ್ಟೆ. ಏನಪ್ಪ ಚಂದ್ರು? ಒಳ್ಳೆಯವನಾಗಿ ಇರ್ತಿಯೋ ಹ್ಯಾಗೆ?"

"ಇರ್ತಿನಿ ಸಾರ್."

ಉಪಾದ್ಯಾಯರು ತಮ್ಮ ಮನೆಯ ಗೇಟು ತೆರೆಯುತ್ತಾ ಅಂಗಳದಲ್ಲಿ ಒಡಯದೇ ಬಿದ್ದಿದ್ದ ಒಂದು ಗಾಡಿಯಷ್ಟು ಸೌದೆ ರಾಶಿಯನ್ನು ನೋಡಿದರು.

"ಏನಪ್ಪ ಸೌದೆ ಒಡೆಯೋಕೆ ಬರುತ್ತೇನು ನಿಂಗೆ?"

"ಒಡೀತೀನಿ ಸ್ವಾಮಿ," ಎಂದರು ತಂದೆ. ಆ ಸ್ವರದಲ್ಲಿ ಕೃತಜ್ಞತೆ ಇತ್ತು.

ಉಪಾದ್ಯಾಯರು ಏನು ಕೆಲಸ ಹೇಳಿದರೂ ಪ್ರಾಯಶಃ ತಂದೆ ಮಾಡುತ್ತಿದ್ದನೋ ಏನೊ. ಆ ದಿನ ಕೆಲಸವಿರಲಿಲ್ಲ ಅವನಿಗೆ, ಆ ಕೆಲಸ ಈಗ ಸಿಕ್ಕಿತು ಆದರೆ ಸಂಬಳವಿಲ್ಲದ ಕೆಲಸ. ಉಪಾಧ್ಯಾಯರು ಹಿಡಿ ಅಲುಗಾಡುತ್ತಿದ್ದ ಒಂದು ಕೊಡಲಿಯನ್ನು ತಂದು ಹಾಕಿದರು.

"ಚಂದ್ರು, ನೀನು ಮನೆಗೆ ಹೋಗು, ನಾನು ಬೇಗನೆ ಬಂದ್ಬಿಡ್ತೀನಿ, ಎಂದ ನಮ್ಮಪ್ಪ.

ತಾನು ಬೆವರಿಳಿಸಿ ದುಡಿಯುವಾಗ, ಮುಂದೆ ದೊಡ್ಡಮನುಷ್ಯ ನಾಗಲಿದ್ದ ತನ್ನ ಮಗ ನೋಡಬಾರದೆಂಬ ಉದ್ದೇಶವಿತ್ತೋ ಏನೋ. ಉಪಾಧ್ಯಾಯರು ಮನೆಯ ಒಳ ಹೋಗುತ್ತಿದ್ದಂತೆ ನಾನು ಗೇಟಿನಿಂದ ಹೊರಬಿದ್ದು ಮನೆಗೆ ಓಡಿದೆ.

ಅಜ್ಜಿ ಕೇಳಿದರು.

"ಏನಾಯ್ತಪ್ಪ ಚಂದ್ರು? ಏನೆಂದರು ನಿಮ್ಮೇಷ್ಟ್ರು?"

"ನಾಳೆ ಸ್ಕೂಲಿಗೆ ಬಾ ಅಂತಂದ್ರು."

"ಎಲ್ಲಿ ನಿನ್ನಪ್ಪ?"

"ಮೇಷ್ಹ್ರು ಮನೇಲಿ ಕಟ್ಟಿಗೆ ಒಡಿತವ್ನೆ"

"ಆಹಾ ಮುಂಡೇಗಂಡ!" ಎಂದು ಅಜ್ಜಿ ಉದ್ಗರಿಸಿದರು. ಈ ಬಿರುದು ಯಾರಿಗೆ ದೊರೆಯಿತೆಂದು ತಿಳಿಯದೆ ನಾನು ಅವರ ಮುಖವನ್ನೆ ನೋಡಿದೆ."ಅಂತೂ ಬಿಟ್ಟೀ ಸೌದೆ ಒಡೆಸ್ಕೊಂಡುಬಿಟ್ಟ ಪರವಾಗಿಲ್ಲ ಕಣೋ ನಿನ್ಮೇಷ್ಟ್ರು!"

ನನಗೆ ಆ ವಿಷಯ ಹೊಳೆದೇ ಇರಲಿಲ್ಲ.ಆ ಸೌದೆಯ ನೆನಪಾಗಿ ಸ್ವತಃ ಉಪಾಧ್ಯಾಯರೇ ಸಂಜೆಯ ಹೊತ್ತಿಗೆ ನಮ್ಮನ್ನು ಬರಲು ಹೇಳಿದ್ದರೇನೊ!

"ಕೈ ತೊಳ್ಕೋಪ್ಪಾ ಚಂದ್ರು. ಒಂದಿಷ್ಟು ದೋಸೆ ಇದೆ. ತಿಂದ್ದಿಟ್ಟು ಹಾಲು ಕೊಟ್ಟು ಬಾ."

ನಾನು ಲವಲವಿಕೆಯಿಂದ ಆ ಕೆಲಸಮಾಡಿದೆ.

ಮರುದಿನ ಮತ್ತೆ ಶಾಲೆ.ಅ ಮಹಾನುಭಾವನೂ ಬಂದಿದ್ದ. ಈ ದಿನ, ಕೋಟು ಹ್ಯಾಟುಗಳನ್ನು ಹೆಚ್ಚಾಗಿ ಧರಿಸಿದ್ದ. ನೋಡಿದರೆ ಯಾರ ಹೆದರಿಕೆಯೂ ಇಲ್ಲದ ಹಾಗೆ,ನನ್ನ ಬಗ್ಗೆ ತುಚ್ಚೀಕಾರವಿದ್ದ ಹಾಗೆ,ನಟನೆ.ಆದರೆ ವಾಸ್ತವವಾಗಿ ಅವನ ಪುಕ್ಕಲು ಕಣ್ಣುಗಳು ಹ್ಯಾಟಿನ ಮೂಂಭಾಗದ ಮರೆಯಿಂದ ಅತ್ತಿತ್ತ ಕದ್ದು ಕದ್ದು ಯಾರನ್ನೋ ಹುಡುಕುತ್ತಿದ್ದುವು.ನಾನು ಅವುಗಳ ದೃ‍‍‍‍‍‍ಷ್ಟಿಗೆ ಬಿದ್ದೊಡನೆ ಮತ್ತೆ ಸ್ವಸ್ಥಾನಕ್ಕೆ ತಿರುಗಿ ಎವೆಗಳ ಎಡೆಯಲ್ಲಿ ಅವಿತುಕೊಂಡವು.

ಉಪಾದ್ಯಾಯರು ಬಂದರು ಘಂಟೆ ಬಾರಿಸಿತು ಛಾವಣಿ ಹಾರಿಹೋಗುವ ಹಾಗೆ ನೂರು ಕಂಠಗಳಲ್ಲಿ ಕಿರಿಚಿಕೊಳ್ಳುತ್ತ ನಾವು ದೇವಪ್ರಾ‍‍‍ರ್ಥನೆ ಮಾಡಿದೆವು. ಉಪಾದ್ಯಾಯರು ಎಲ್ಲವನ್ನು ಇ‌ಷ್ಟರಲ್ಲೆ ಮರೆತಿರಬಹುದು ಎಂದಿದ್ದೆ. ಆದರೆ ಅವರು ಮರೆತಿರಲಿಲ್ಲ, ಅವರು ಎದ್ದು ನಿಲ್ಲುವಂತೆ ನನಗೆ ಆಘ್ನಾಪಿಸಿದರು. ಒಳ್ಳೆಯ ನಡತೆಯ ಬಗ್ಗೆ ಐದು ನಿಮಿಷಗಳ ಕಾಲ ಭಾಷಣವಿತ್ತರು. ಒಂದು ವಾರದವರೆಗೆ ನಾನು ಬೆಂಚಿನಮೇಲೆ ನಿಂತಿರಬೇಕೆಂದರು, ನಾನು ಮಾತನಡಲೆ ಇಲ್ಲ ತರಗತಿಗೆ ಮೊದಲಿಗನಾಗಿದ್ದರೂ ನನ್ನ ಸ್ಥಾನವಿದ್ದುದು ಕೊನೆಯ ಬೆಂಚಿನಲ್ಲಿ. ಅಲ್ಲಿಯೇ ನಾನು ನಿಂತುಕೊಂಡೆ. ಇಷ್ಟಾದರೂ ಮೊದಲ ಬೆಂಚಿನಲ್ಲಿದ್ದ ನನ್ನ ಎದುರಾಳಿ ತಿರುಗಿನೋಡಲಿಲ್ಲ. ನೋಡುವ ಧೈರ್ಯ ಅವನಿಗೆ ಇರಲಿಲ್ಲ. ಅವಮಾನದಿಂದ ನನ್ನ ಮೈ ಉರಿ ಯುತಿತ್ತು. ನಾನು ಬಿಸಿಯುಸಿರು ಬಿಡುತ್ತಿದ್ದೆ. ಕಂಬನಿ ಈಗಲೋ ಮತ್ತೆಯೋ ಕೆಳಕ್ಕೆ ಧುಮುಕಲು ಸಿದ್ಧವಾಗಿತ್ತು.

ಆ ರಾತ್ರೆ ತಂದೆ ಎಂದಿನಂತೆ ಕೇಳಿದ:

"ಈ ದಿನ ಏನು ಓದ್ದೆ ಚಂದ್ರು?".

ನಾನು ಯಾವುದೋ ಪಾಠದಹೆಸರು ಹೇಳಿದೆ. ನನಗೆ ದೊರತ ಹೊಸ ಶಿಕ್ಷೆಯ ವಿಷಯವೆತ್ತಲಿಲ್ಲ. ಅದನ್ನು ಹೇಳಿದ್ದರೆ ಅವನಿಗೆ ಖಂಡಿತವಾಗಿಯೂ ತುಂಬ ನೋವಾಗುತಿತ್ತು ಅಂಥ ಸಂಕಟಕ್ಕೆ ಕಾರಣನಾಗಲು ನಾನು ಇಷ್ಟಪಡಲಿಲ್ಲ. ಮೊದಲ ಬಾರಿಗೆ ತಂದೆಯಿಂದ ಸತ್ಯಸಂಗತಿಯನ್ನು ನಾನು ಬಚ್ಚಿಟ್ಟೆ.

ಹಾಗೆ ದಿನಗಳು ಉರುಳಿದವು. ಹಳ್ಳಿಯ, ತಾಯಿಯ, ಗೋಪಿ ಹಸುವಿನ ನೆನಪೆಲ್ಲಾ, ಹೊಸ ಅನುಭವಗಳ ಎಡೆಯಲ್ಲಿ ಮೆಲ್ಲ ಮೆಲ್ಲನೆ ಮರೆಯಾಗುತ್ತಿತ್ತು. ನಾನು ತಾಯಿಯಿಲ್ಲದ ಏಕಾಕಿ ಎಂಬ ವಿಷಯ ನನ್ನ ಪಾಲಿಗೆ ಸರ್ವೆ ಸಾಮಾನ್ಯವಾಯಿತು.

ಅದೊಂದು ಭಾನುವಾರ, ತಂದೆ ನನ್ನನ್ನು ಕ್ಷೌರದಂಗಡಿಗೆ ಕರೆದೊಯ್ದು.

ಹಾದಿಯಲ್ಲಿ "ಚಂದ್ರೂ ನಾವೀಗ ಪ್ಯಾಟೆಯವರು. ಜುಟ್ಟಿನ ಬದಲು ಕ್ರಾಪು ಬಿಟ್ಕೊಬೇಕು. ಅಲ್ಲವಾ?"ಎಂದ.

ನನಗೆ ಆಶ್ಚರ್ಯವೆನಿಸಿತು ದೀರ್ಘ ಕಾಲದಿಂದ ಹಗಲೂ ರಾತ್ರೆಯೂ ನನ್ನ ನೂರಾರು ಭಯಭೀತಿಗಳಿಗೆ ಕಾರಣವಾಗಿದ್ದ ಜಟ್ಟನ್ನು ಕತ್ತರಿಸುವ ಮಾತನ್ನಾಡುತ್ತಿದ್ದಾನೆ ತಂದೆ! ಇದು ನಿಜವಿರ ಬಹುದೆ? ಇದು ಸಾಧ್ಯವೆ? ಕ್ರಾಪಿನ ಹಲವಾರು ಹುಡುಗರು ಮುಂದೆ ಯಾವ ಹೆದರಿಕೆಯೂ ಇಲ್ಲದೆ ನಾನು ಇನ್ನು ನಡೆಯುವುದು ಸಾಧ್ಯವೆ?

ಕ್ಷೌರಿಕನ ಅಂಗಡಿಯಲ್ಲಿ ಅಸಾಧ್ಯವಾದ್ದೆನ್ನುವುದೇ ಇರಲಿಲ್ಲ. ಆತನ ಕತ್ತರಿ ಕರಕ್ ಕರಕ್ ಎಂದು ನನ್ನ ಜುಟ್ಟನ್ನು ಬಲಿತೆಗೆದು ಕೊಂಡಿತು.ತ ಲೆಯಿಂದ ದೊಡ್ಡದೊಂದು ಭಾರ ಇಳಿದ ಹಾಗಾಯಿತು. ಆ ಕ್ಷೌರಿಕ ಕ್ರಾಪು ಬಿಡಿಸಿದ.

"ಇಸ್ಕೂಲಿಗೆ ಓಯ್ತವ್ನಾ?" ಎಂದು ಅವನು, ಜುಟ್ಟಿನ ಬಲಿದಾನಕ್ಕೆ ಅದೇ ಕಾರಣವೆಂಬಂತೆ, ನನ್ನ ತಂದೆಯನ್ನು ಕೇಳಿದ. ತಂದೆ ಹೌದೆಂದ. ನಾವು ಹೊರಬಿದ್ದೆವು. ಆತ ಗಡ್ಚ ಮಾಡಿಸಿಕೊಂಡಿರಲಿಲ್ಲ. ಆತನ ಸಣ್ಣ ಜುಟ್ಟಂತೂ ಹಾಗೆಯೇ ಇತ್ತು. ಆಗ ನನಗೆ ತಿಳಿದಿರಲಿಲ್ಲ.ಆದರೆ ಈಗ ಅರ್ಥವಾಗುತ್ತಿದೆ. ಅ ದಿನ ಕೌರಿಕನಿಗಾಗಿ ತಾನು ಮಾಡಬೇ ಕಾಗಿದ್ದ ಖರ್ಚನ್ನು,- ನನ್ನ ಕ್ರಾಪಿಗೋಸ್ಕರ ಆತ ಮಾಡಿದ್ದ.

ಮರುದಿನ ಶಾಲೆಗೆ ಹೋದಾಗ, ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನನ್ನನ್ನಲ್ಲ, ನನ್ನ ತಲೆಯನ್ನು. ತರಗತಿಯೊಳಗೆ ಹುಡುಗರು ನನ್ನ ಸುತ್ತಲೂ ಕೈ ಕಟ್ಟಿಕುಣಿದರು. ಆದರೆ ನಾನು ನೊಂದುಕೊಳ್ಳಲಿಲ್ಲ. ಮುಂದೆ ಸದಾಕಾಲವೂ ಜುಟ್ಟಿನ ತೊಂದರೆಯೇ ಇಲ್ಲದಿರಬೇಕಾದರೆ, ಈಗ ಹೊಸ ಕ್ರಾಪು ತಂದೊಡ್ಡಿದ ತಮಾ‍‍‍‍‍‍‍‍‍‌‌‌‌‌‌‌ಷೆಯನ್ನು ಅನುಭವಿಸದೆ ಅನ್ಯಗತಿ ಇರಲಿಲ್ಲ.

ಒಂದು ದಿನ ರಾತ್ರಿ ಅಜ್ಜಿ ನನ್ನ ತಂದೆಯೊಡನೆ ಆತ್ಮೀಯವಾಗಿ ಮಾತಾಡಿದರು. ಆ ಮಾತು ನನಗೆ ಹಿತವೆನಿಸಲಿಲ್ಲ. ಆದರೆ ಅಜ್ಜಿಯ ದಯಾಪೂರ್ಣ ಮುಖವನ್ನು ನೋಡುತ್ತಾ ಆ ಮಾತುಗಳನ್ನೇ ನಾನು ಮರೆತೆ. ತಂದೆ ತಲೆಬಾಗಿಸಿ ಬಲು ನಿಧಾನವಾಗಿ ಉತ್ತರ ಕೊಡುತ್ತಿದ್ದ.

"ನಲವತ್ತೆರಡು ವರ್ಷಕ್ಕೆ ಯಾರೂ ಮುದುಕರಾಗೋದಿಲ್ಲನಿಜ. ಆದರೆ ಇನ್ನೊಮ್ಮೆ ಸಂಸಾರ ಹೊಡೋ ಇಷ್ಟ ನನಗಿಲ್ಲ. ನನ್ಮಗೂಗೆ ಆದರಿಂದ ಸುಖ ಸಿಗತ್ತೆ ಅಂತ ಯಾವ ನಂಬಿಕೆ? ನಾನ್ನೋ ಡ್ಕೊಳ್ಳೋವಷ್ಟು ಚೆನ್ನಾಗಿ ಇನ್ಯಾರಾದರೂ ಅವನ್ನ ನೋಡ್ಕೊಂಡಾರ?"

ಅಜ್ಜಿ ಮೌನವಾಗಿದ್ದರು.

"ನಿನ್ನ ಇಷ್ಟ ಕಣಪ್ಪ, ಬಲವಂತ ಮಾಡೋ ವಿಷಯಾನೆ ಇದಲ್ಲ."

ಸದ್ಯಃ ನಮ್ಮ ಮನೆಗೆ ಹೊಸಬರು ಯಾರೂ ಬರುವುದಿಲ್ಲವೆಂದು ನನಗೆ ಸಮಾಧಾನವಾಯಿತು. ಅದರೆ ತಂದೆ ಸಷ್ಟಗಿದ್ದ. ಆಮೇಲೆ ಬಹಳ ದಿನ ಗೆಲುವಾಗಿಯೇ ಇರಲಿಲ್ಲ. ಆದರಿಂದ ನನಗೆ ದು‌‌‍:ಖವಾಯಿತು. ಅವನು ಊಟವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಒಂದು ರಾತ್ರೆ ಕಂಬಳಿಯೊಳಗೆ ನಾನು ಮೆಲ್ಲನೆ, "ಅಪ್ಪಾ" ಎಂದೆ.

"ಹೂಂ" ಎಂದನಾತ. ಇನ್ನೂ ನಿದ್ದೆ ಬಂದಿರಲಿಲ್ಲ.

"ಅಪ್ಪಾ, ನೀನು ಯಾಕಪ್ಪ ಸರಿಯಾಗಿ ಉಣ್ಣೋದಿಲ್ಲ ?"

ತಂದೆ ಉತ್ತರ ಕೊಡಲಿಲ್ಲ. ನಾನು ಮತ್ತೆ ಅದೇಪ್ರಶ್ನೆ ಕೇಳಿದೆ.

"ಯಾರೊ ಹೇಳಿದೋರು ನಿಂಗೆ ? ದಿನಾ ಉಣ್ತ ಇದಿನಲ್ಲೊ ?"

ಆ ಮಾತಿನಿಂದ ನನಗೆ ಸಮಾಧಾನವಾಗಲಿಲ್ಲ.

ಬಲು ಹೊತ್ತಾದ ಬಳಿಕ ತಂದೆ ಹೇಳಿದ.

"ಈ ವಾರಕ್ಕೆ ಮೂರು ವರ್ಷ ಆಯಿತು. ನೆಪ್ಪಯ್ತೇನೊ ನಿಂಗೆ ?

"ನನಗೆ ನೆನಪಿತ್ತು. ಅದೀಗ ಆತನನ್ನು ಬಾಧಿಸುತ್ತಿದ್ದ ಚಿಂತೆ

.

.....ಅವನ ಮಾತಿನ ಬಳಿಕ ಅಂಟುಜಾಡ್ಯದ ಹಾಗೆ ಆ ಚಿಂತೆ ನನಗೆ ತಗಲಿ ಕೊಂಡಿತು.

"ಹೂನಪ್ಪ ,"ಎಂದೆ.

.....ಮೂರು ವರ್ಷಗಳಷ್ಟೇ ಅಲ್ಲ; ನಾಲ್ಕು ವರ್ಷಗಳಾದವು. ತಂದೆ ಪ್ರತಿ ತಿಂಗಳೂ ತಪ್ಪದೆ ಸೌದೆ ಒಡೆದುಕೊಡುತ್ತಿದ್ದ ನನ್ನ ಮೊದಲು ವಿದ್ಯಾಗುರುವಿನ ಶಾಲೆಯ ಬದಲು, ಇನ್ನೊಂದಕ್ಕೆ ನಾನು ಹೋದೆ. ಅಲ್ಲಿ ಹೆಚ್ಚು ಜನ ಉಪಾಧ್ಯಾಯರು; ಹೆಚ್ಚು ಹುಡುಗರು. ಈಗ ನನ್ನ ತಲೆಯ ಮೇಲೆ ಕ್ರಾಪಿತ್ತು-ದಿನವೂ ಬಾಚದೆ ಇರುತ್ತಿದ್ದ ಕೆದರಿದ ಕ್ರಾಪು. ಅಷ್ಟೇ ಅಲ್ಲ; ನನಗೆ ಹೊಸ ಅಂಗಿ ಚಡ್ಡಿ ಗಳಿದ್ದುವು.....

ಆದರೆ ಹೊಸ ಅಂಗಿ ಚಡ್ಡಿಗಳು ಸುಲಭವಾಗಿ ನನಗೆ ಬಂದಿರಲಿಲ್ಲ. ತಂದೆ ದೇಹವನ್ನು ತೇದು ತೇದು, ತನ್ನ ಸುಖವನ್ನು ಬಲಿ ಗೊಟ್ಟು, ನನಗೆ ಅಂತಹ ಶ್ರೀಮಂತಿಕೆಯನ್ನು ಒದಗಿಸಿಕೊಡುತ್ತಿದ್ದ. ತನ್ನನ್ನು ಸಣ್ಣ ಸಣ್ಣವನಾಗಿ ಮಾಡಿಕೊಂಡು, ನನ್ನನ್ನು ದೊಡ್ಡ ಮನುಷ್ಯನಾಗಿ ಮಾರ್ಪಡಿಸಲು ಆತ ಯತ್ನಿಸುತ್ತಿದ್ದ. ಅದು ನನಗೆ ತಿಳಿದಿತ್ತು. ಆ ತಿಳಿವಳಿಕೆಯಿಂದ ನನಗೆ ದುಃಖವಾಗುತ್ತಿತ್ತು.

ನಾಲ್ಕಾರು ದಿನ ತಂದೆ ಕೆಲಸಕ್ಕೇ ಹೋಗಿರಲಿಲ್ಲ. ಪ್ರತಿ ಮಧ್ಯಾಹ್ನವೂ ಸಂಜೆಯೂ " ಯಾಕಪ್ಪ ? ಯಾಕೆ ?" ಎಂದು ಕೇಳುತ್ತಲಿದ್ದೆ.

"ಹೀಗೇ ಚಂದ್ರು, ಯಾಕೊ ಹೋಗಿಲ್ಲ ಅಷ್ಟೆ."

ಕೊನೆಗೆ ಆತ ನಿಜ ಸಂಗತಿಯನ್ನು ಹೇಳಿದ. ರಸ್ತೆಗಳ ಕೆಲಸ ಮುಗಿದಿತ್ತು. ಅವರೊಡನೆ ಸಂಪಾದನೆಗೂ ವಿರಾಮ ಒದಗಿತ್ತು. ಮುಂದೇನಾಗುವುದೋ ಎಂದು ನಾನು ಅಳುತಿದ್ದೆ. ಹತ್ತು ಹನ್ನೊಂದನೆಯ ವಯಸ್ಸಿನಲ್ಲಿ ಈಗಿನ ಎಷ್ಟು ಹುಡುಗರಿಗೆ ಮನೆತನದ ಜವಾಬ್ದಾರಿ ಅರ್ಥವಾಗುವುದೋ ಏನೋ, ಆದರೆ ನನಗೆ ಆಗ ಅರ್ಥವಾಗ ತೊಡಗಿತ್ತು.

ಅಜ್ಜಿ ಎಲ್ಲವನ್ನೂ ಗ್ರಹಿಸಿಕೊಂಡರು. ಆದರೆ ಪರಕೀಯನಾದ ನನ್ನನ್ನು ತನ್ನ ಮಗುವಿನಂತೆ ಪ್ರೀತಿಸತೊಡಗಿದ್ದ ಆಕೆ, ನಮ್ಮನ್ನು ದೂರವಿಡಲಿಲ್ಲ.

" ಫ್ಯಾಕ್ಟ್ರೀಲಿ ಕೆಲಸ ಸಿಗುತ್ತೇನೊ ನೋಡ್ಬಾರ್ದ್ದೆ ? ಹೊಸದಾಗಿ ಯಾವುದೊ ಫ್ಯಾಕ್ಟ್ರೀ ಕಟ್ಟಸ್ತ ಇದಾರಂತಲ್ಲಾ ?"

ಕಟ್ಟಿಸುತ್ತಾ ಇದ್ದರೆಂಬುದು ನಿಜ. ಊರಿಗೆ ಊರೇ ಆ ಮಾತನ್ನಾಡುತ್ತಿತ್ತು. ತಂದೆಯ ಜೊತೆಯಲ್ಲಿ ಅದೇ ರಸ್ತೆಯಮೇಲೆದುಡಿಯುತ್ತಿದ್ದವರೆಲ್ಲಾ ಅಲ್ಲಿಗೆ ಆಗಲೆ ಹೋಗಿದ್ದರು. ಆದರೆ ತಂದೆ ಯೊಬ್ಬನೇ, ಅರ್ಥವಿಲ್ಲದ ಮೂಕವೇದನೆಗೆ ಬಲಿಯಾಗಿ ವಿಶ್ರಾಂತಿ ಪಡೆಯುತ್ತಿದ್ದ.

" ಹೂ, ಹೋಗಿ ನೋಡ್ತೀನಿ."

ಉಣ್ಣಲು ತಿನ್ನಲು ಬೇಕಷ್ಟು ಇದ್ದರೆ, ಆಗಾಗ್ಗೆ ವಿಶ್ರಾಂತಿ ಪಡೆಯಬಹುದು. ಆದರೆ ನನ್ನ ತಂದೆಯಂತಹ ಶ್ರಮಜೀವಿ ಸೋಮಾರಿಯಾಗುವಿದು ಯಾವ ನ್ಯಾಯ? ಆದರೆ ಸೋಮಾರಿ ಯಾಗಲು ಅವನು ಇಷ್ಟಪಟ್ಟಿರಲಿಲ್ಲ. ಊರು ಅವನನ್ನು ಕರೆಯು ತ್ತಿತ್ತು. ಬೇರೆಯವರ ಪಾಲಾಗಿದ್ದ ಹೆಸುರು ಹೊಲ, ಹಸು, ಗುಡಿಸಲು......ಹೇಮಾವತಿ ನದಿಯಾಚೆಗಿನ ಹಳ್ಳಿ....

ಮತ್ತೆ ಎರಡು ದಿನಗಳಾದ ಮೇಲೆ, ಕಾಹಿಲೆಯಿಂದ ಎದ್ದವ ನಂತೆ ತಂದೆ, ಕೆಲಸ ಹುಡುಕಿಕೊಂಡು ಹೋದ.

ಬಟ್ಟೆ ತಯಾರಿಯ ಹೊಸ ಕಾರ್ಖಾನೆಯಲ್ಲಿ ಅರಳೆ ಹಿಂಜುವ ಕೆಲಸ ಅವನಿಗೆ ದೊರೆಯಿತು. ದಿನಕ್ಕೆ ಒಂಭತ್ತು ಘಂಟೆಗಳ ದುಡಿತ. ಆರಾಣೆ ಕೂಲಿ.

ವರ್ಷ ವರ್ಷವೂ ಉತ್ತೀರ್ಣನಾಗುತ್ತ ನಾನು ಶಾಲೆಯಲ್ಲಿ ಓದುತ್ತಿದ್ದೆ. ವರ್ಷ ವರ್ಷವೂ ಕ್ಷೀಣನಾಗುತ್ತ ತಂದೆ ದುಡಿಯುತ್ತಿದ್ದ. ಅವನ ಹಳ್ಳಿಯ ದೇಹ ನಗರದ ಗಾಣದಲ್ಲಿ ಸಿಲುಕಿ ನಜ್ಜು ಗುಜ್ಜಾಗಿತ್ತು. ಆದರೂ ಮಗನು ದೊಡ್ಡವನಾಗುವ ದೊಡ್ಡ ಮನುಷ್ಯನಾಗುವ ಅವನ ಹಂಬಲ, ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಆದರೆ ಒಂದು ಜೀವ ಇನ್ನೊಂದು ಜೀವಕ್ಕಾಗಿ ಆ ರೀತಿ ತ್ಯಾಗ ಮಾಡುವುದು ಅವಶ್ಯ ವಿತ್ತೆ? ಮಳೆಯಲ್ಲಿ ಮೈ ತೋಯಿಸಿಕೊಂಡು, ಚಳಿಯಲ್ಲಿ ದೇಹ ಕೊರೆಸಿಕೊಂಡು, ಬಿಸಿಲಲ್ಲಿ ಬೆವರಿ ನೀರಾಗಿ, ಮನುಷ್ಯ ಹಾಗೆ ದುಡಿಯಲೇ ಬೇಕೆ?

ನಾನು ಯೋಚಿಸುತ್ತಿದ್ದೆ. ಆದರೆ ತಂದೆ ಯೋಚಿಸುತ್ತಿರಲಿಲ್ಲ. ಆತ ನನ್ನ ಸಹಪಾಠಿಗಳು ಕೆಲವರ ಗುರುತುಮಾಡಿಕೊಂಡು ನನ್ನ ಬಗೆಗೆ ಆತುರದಿಂದ ವಿಚಾರಿಸುತ್ತಿದ್ದ. ನನ್ನನ್ನು ಕುರಿತು ಹೊಗಳಿಕೆಯ ಮಾತು ಕೇಳಿದ ರಾತ್ರೆ ಆತನ ಮುಖ ಅರಳಿರುತ್ತಿತ್ತು.

ನನ್ನನ್ನು ತೆಗಳಿ ಯಾರೂ ಮಾತನಾಡುತ್ತಿರಲಿಲ್ಲ. ನಾನೀಗ ದುಡ್ಡಿನವರೊಡನೆ ಜಗಳ ಕಾಯುತ್ತಿರಲಿಲ್ಲ. ಅವರನ್ನು ದೂರವಿಡುತ್ತಿದ್ದೆ. ನನಗೇನಾದರೂ ಅವಮಾನವಾದರೆ, ಸದ್ಯಕ್ಕೆ ಅದರ ಯೋಚನೆ ಬೇಡವೆಂದು ತಣ್ಣಗಿರುತ್ತಿದ್ದೆ. ಮಾತಿಗೆ ಪ್ರತಿಮಾತು ಹೇಳಿ, ಆ ತಪ್ಪಿಗೆ ದುಃಖವನ್ನು ತಂದೊಡ್ಡಲು ನನ್ನು ಸಿದ್ದನಿರಲಿಲ್ಲ.

ಅದೊಂದು ಮಳೆಗಾಲ. ನನ್ನ ತಂದೆ ಮೈ ಕಾವೇರಿ ಮಲಗಿದ್ದ. ಅಜ್ಜಿ ಯಾವುದೋ ಕಷಾಯ ಕುಡಿಸಿದರು. ನಾನೇ ಫ್ಯಾಕ್ಟರಿಗೆ ಹೋಗಿ ಗೇಟಿನ ಬಳಿ ಕಾದು ನಿಂತು ರಜೆಯರ್ಜಿ ಸಲ್ಲಿಸಿ ಬಂದೆ. ಆ ದಿನ ಶಾಲೆಗೆ ಹೋಗಲು ನನಗೆ ಮನಸ್ಸಿರಲಿಲ್ಲ. ಆದರೆ ತಂದೆ ಒಪ್ಪಲಿಲ್ಲ.

"ಇದೆಲ್ಲಾ ಒಂದಿವಸದ ಜ್ವರ, ನಾಳೆ ಸರಿಹೋಗಬಹುದು, ನೀನು ಸ್ಕೂಲಿಗೆ ಹೋಗು ಚಂದ್ರು"

ನಾನು ಸ್ಕೂಲಿಗೆ ಹೋದೆ. ಆದರೆ ಮನಸ್ಸೆಲ್ಲಾ ಮನೆಯತ್ತ ಹಣಿಕಿ ನೋಡುತ್ತಿತ್ತು.

ಜ್ವರ ನಿಲ್ಲಲೇ ಇಲ್ಲ; ಬದಲು ಏರುತ್ತಾ ಹೋಯಿತು. ಮರು ದಿನವೂ-ಮಾರನೆ ದಿನವೂ. ಅಜ್ಜಿ ಔಷಧೋಪಚಾರ ನಡೆಸಿದರು. ನಾನು ರಜ ಪಡೆದು ಆರೈಕೆಗೆ ನಿಂತೆ. ಜ್ವರ ವಿಷಮಜ್ಜರವಾಯಿತು.

ನಾನು ಇಷ್ಟರವರೆಗೆ ಎಷ್ಟೋ ಜನ ಜ್ವರಪೀಡಿತರನ್ನು ಕಂಡಿದ್ದೇನೆ. ಬಾಲ್ಯದಲ್ಲೆ ಆ ಜ್ವರದ ಮಹಾ ಪ್ರಕೋಪವನ್ನು ಕಣ್ಣಾರೆ ಕಂಡ ಅನುಭವವಿದ್ದ ನನಗೆ, ಅಂತಹ ರೋಗಿಗಳ ಬಗ್ಗೆ ಕನಿಕರ ವಾದುದೇ ಇಲ್ಲ. ಯಾಕೆ ಕನಿಕರಿಸಬೇಕು? ಹೃದಯ ಕಲ್ಲಾಗಿರ ಬಹುದೆಂದು ಯಾರಾದರೂ ಹೇಳಬಹುದು. ಇದ್ದೀತು. ಅದು ಚರ್ಚಾಸ್ಪದವಾದ ಬೇರೆ ಮಾತು. ಆದರೆ ತಂದೆಯ ಜ್ವರವೇ ನಾನು ಮೊದಲು ನೋಡಿದ ದೊಡ್ಡ ಕಾಹಿಲೆ. ಅದನ್ನೂ ಮೀರಿಸುವ ಜ್ವರ ಇನ್ನೊಂದು ಇದ್ದೀತೆಂದು ನಾನು ಎಂದೂ ನಂಬಲಿಲ್ಲ.

ಕಣ್ಣಲ್ಲಿ ಎಣ್ಣೆ ಇಟ್ಟು ನಾನೂ ಅಜ್ಜಿಯೂ ಆರೈಕೆ ಮಾಡಿದೆವು. ಆತ ಪ್ರಜ್ನೆ ತಪ್ಪಿ ಬಡಬಡಿಸುತ್ತಿದ್ದ. ಅಜ್ಜಿ ನನಗೆ ಧೈರ್ಯದ ಮಾತು ಹೇಳುತ್ತಿದ್ದರು. ಆದರೆ ನನಗೆ ಆದರೆ ಅವಶ್ಯತೆಯೇ ಇರಲಿಲ್ಲ. ತಂದೆ ಬಡಬಡಿಸುತ್ತಿದ್ದ ಒಂದೊಂದು ಮಾತೂ ನನ್ನ ವ್ಯಕ್ತಿತ್ವವನ್ನೇ ಹಿಡಿದು ಕುಲುಕುತ್ತಿತ್ತು. ರುಕ್ಕೂ-ಚಂದ್ರು--ಅದೆಷ್ಟು ಬಾರಿ ಆ ಹೆಸರುಗಳನ್ನು ಆತ ಉಚ್ಚರಿಸಲಿಲ್ಲ!

......ಮೂರು ವಾರಗಳ ಮೇಲೆ ಜ್ವರ ಇಳಿಯಿತು. ಸೊರಗಿ ಕಡ್ಡಿಯಾಗಿದ್ದ ಮೂಳೆಯ ಹಂದರವೊಂದು, ಮತ್ತೆ ಸ್ವಲ್ಪ ಮಾಂಸ ತುಂಬಿಸಿಕೊಂಡು, ದುಡಿಮೆಯ ಗಾಣದ ಬಡಕಲು ಎತ್ತಾಗಲು ಸಿದ್ಧ ವಾಯಿತು. ನನ್ನ ತಂದೆ ಬದುಕಿಕೊಂಡ- ನನಗಾಗಿ ಬದುಕಿಕೊಂಡ.

ಅಜ್ಜಿ ಗುಡಿಯ ದೇವರಿಗೆ ಹರಕೆ ಹೊತ್ತಿದ್ದರು. ತಂದೆ ಅದನ್ನು ಸಲ್ಲಿಸಿ ಬಂದ. ನಾನು ಪ್ರಸಾದವಾಗಿದ್ದ ಹಣ್ಣನ್ನೂ ಕೊಬರಿಯನ್ನು ತಿಂದೆ.

ಆದರೆ, ಆ ಫ್ಯಾಕ್ಟರಿಯ ಗಾಣಕ್ಕೆ ನಮ್ಮ ಎತ್ತಿನ ಅವಶ್ಯತೆ ಇರಲಿಲ್ಲ. ಆ ಜಾಗ ಭರ್ತಿಯಾಗಿತ್ತು. ಅಜ್ಜಿ ಹಾಕಿದ ಅನ್ನ ತಿಂದು, ತಂದೆ ಊರೆಲ್ಲಾ ಅಲೆದ. ಸೌದೆ ಒಡೆಯುವ ಉದ್ಯೊಗದಲ್ಲಿ ಆತ ಮಹಾ ಚತುರನಾದ. ಒಡೆಯುವ ಕೆಲಸ ದೊರೆತಾಗ ಒಂದು ರೂಪಾಯಿ ಸಂಪಾದನೆಯಾದರೂ ಆಯಿತೆ. ಇಲ್ಲದೆ ಹೋದಾಗ ಬರಿಗೈ.

ಆದರೆ ಊರು ಬೆಳೆಯುತ್ತಿತ್ತು. ಹೊಸ ಘ್ಯಾಕ್ಟರಿಯ ಹೊಸ ಚಿಮಿಣಿಗಳು ಆಕಾಶಕ್ಕೆ ಹೊಗೆಯುಗುಳುತ್ತಿದ್ದುವು. ಹೊಸದೊಂದು ಕಾರ್ಖಾನೆಯಲ್ಲಿ ನನ್ನ ತಂದೆ ಕೆಲಸ ಸಂಪಾದಿಸಿದ.

ನಾನು ಹೈ ಸ್ಕೂಲು ಸೇರಿದೆ. ಕಲಿತವರೆಲ್ಲಾ ದೊಡ್ದಮನುಷ್ಯ ರಾಗುವುದಿಲ್ಲವೆಂದು ಈಗೀಗ ನನಗೆ ಅರಿವಾಗುತ್ತಿತ್ತು. ಹೈ ಸ್ಕೂಲಿನ ದ್ದೊಡ್ಡ ಕಟ್ಟಡವನ್ನು ದಾಟಿದಮೇಲೆ ಕಾಲೇಜಿನ ಇನ್ನೊಂದು ದೊಡ್ಡ ಕಟ್ಟಡ ಇದೆ ಎಂಬುದನ್ನು ತಿಳಿದೆ. ಈ ಹಾದಿಗೆ ಕೊನೆಯೇ ಇಲ್ಲ ವೇನೋ ಎನ್ನಿಸುತ್ತಿತ್ತು. ಬೌದ್ಧಿಕ ಹಸಿವು ಮೆಲ್ಲಮೆಲ್ಲನೆ ನನ್ನನ್ನು ಕಾಡತೊಡಗಿತ್ತು. ಅದೇ ಆಗ ಬರುತ್ತಿದ್ದ ಕನ್ನಡ ಪುಸ್ತಕಗಳನ್ನೆಲ್ಲಾ ಓದಿದೆ. ಇಂಗ್ಲಿಷ್ ಭಾಷೆಯ ಬೇಲಿಯನ್ನು ದಾಟಿ, ಅದರ ಕಥೆಗಳನ್ನು ತಿಳಿದುಕೊಳ್ಳಲ್ಲು ಯತ್ನಿಸಿದೆ ಚಿಕ್ಕ ಹುಡುಗನಾಗಿದ್ದ ನಾನು ಎತ್ತರವಾಗಿ ಬೆಳೆಯುತ್ತಲಿದ್ದೆ. ಕಾಲ್ ಚೆಂಡಿನ ಕಣ, ನನ್ನ ಸಂಜೆಯ ಸ್ನೇಹಿತ ನಾಗಿತ್ತು. ಚೆಂಡನ್ನ ತುಳಿದು ದೂರಕ್ಕೆ ತಳ್ಳಿದಾಗ ಅಮಿತ ಆನಂದವಾತ್ತಿತ್ತು. ನನ್ನ ಹೋಡೆತದಿಂದ ಸೋಲಾದಾಗ ತಲೆಯ ಕ್ರಾಪನ್ನು ಬದಿಗೆ ಹಾರಿಸಿ, ಎಲ್ಲರನ್ನೂ ಕಂಡು ನಗುವ ದಿಟ್ಟತನ ತೋರುತ್ತಿದ್ದೆ.

ಆದರೆ ಮನೆಗೆ ಬಂದಾಗ ನಾನು ನಗುತ್ತಿರಲಿಲ್ಲ. ಈಗಲೂ ಅಜ್ಜಿಯ ಎಮ್ಮೆಗಳ ಹಾಲೆತ್ತಿಕೊಂಡು ವರ್ತನೆ ಮನೆಗಳಿಗೆ ಹೋಗಿ ಬರುತ್ತಿದ್ದೆ. ಅಜ್ಜಿಗೆ ವಯಸ್ಸಾಗುತ್ತಲಿತ್ತು. ಆದರೂ ಆಕೆ ನನ್ನ ಬದಲು ತಾನೇ ಸೆಗಣಿ ಎತ್ತತೊಡಗಿದರು. ಆಕೆ ಮಡಿಯಲ್ಲಿದ್ದಾಗ ನಾನು ಸಮೀಪ ಹೋಗುತ್ತಿರಲ್ಲಿಲ್ಲ. ಆದರೆ ಒಮ್ಮೊಮ್ಮೆ ಮಡಿಯನ್ನೂ ಮರೆತು ದೊಡ್ಡ ಮನುಷ್ಯನಾಗಲಿದ್ದ ನನ್ನನ್ನು ಗೇಲಿಮಾಡುತ್ತಾ ಮಾಡುತ್ತಾ ಮೈ ಮುಟ್ಟುತ್ತಿದ್ದರು. ಆಮೇಲೆ, "ಅಯ್ಯೊ ಪಾಪಿ ಮುಂಡೇಗಂಡ!" ಎಂದು ಪ್ರೀತಿಯಿಂದ ಶಪಿಸುತ್ತಾ, ಬಾವಿಯಿಂದ‌ ನೀರು ಸೇದಿ ತಲೆಗೆ ತಣ್ಣೀರು ಸುರಿದುಕೊಳ್ಳುತ್ತಿದ್ದರು.

ತಂದೆಯ ವಿದ್ಯಾಪಾಂಡಿತ್ಯದ ಮಟ್ಟವನ್ನು ಮೀರಿ ನಾನು ಹೋಗಿದ್ದೆ. ಆತನ ಪಾಲಿಗೆ. ನಾನು ಹೆಚ್ಚು ವಿದ್ಯಾವಂತ. ಈ ಪ್ರಪಂಚದಲ್ಲಿ ಆತನಿಗೆ ಮುಖ್ಯವಾಗಿ ತೋರುತ್ತಿದ್ದುದು-ಎರಡೇ ವಸ್ತುಗಳು. ಒಂದು ವಿದ್ಯೆ; ಇನ್ನೊಂದು ಹಣ. ವಿದ್ಯೆಗೆ 'ಅವನು ಗೌರವಕೊಡುತ್ತಿದ್ದ. ಹಣಕ್ಕೆ ಹೆದರುತ್ತಿದ್ದ. ಆತನನ್ನು ಕಂಡಾಗ ನನ್ನ ಮುಖ ಬಾಡುತ್ತಿತ್ತು. ಆತನ ಯಾತನೆಗೆಲ್ಲಾ ನಾನೇ ಕಾರಣ ನೆಂಬ ಗ್ರಹಿಕೆ ನನ್ನನ್ನು ಬಾಧಿಸುತ್ತಿತ್ತು. ಅವನು ಯಾವಾಗಲೂ ಒಳ್ಳೆಯವನೇ ಆಗಿದ್ದ, ಸತ್ಯವಾದಿಯಾಗಿದ್ದ. ಯಾರಿಗೂ ಬಾಗಿ ನಡೆಯುತ್ತಿರಲಿಲ್ಲ. ಆದರೆ ಅದು ಹಿಂದಿನ ಮಾತು. ಈಗಲೂ ಆತ ಒಳ್ಳೆಯವನಾಗಿದ್ದ ನಿಜ. ಆದರೆ ದಿನ ನಿತ್ಯದ ಕೆಲಸದ ನಡುವೆ ಸತ್ಯ ಹೇಳಿದರೆ ನಷ್ಟ ಉಂಟೆಂಬುದನ್ನು ಅವನು ಕಲಿತಿದ್ದ. ಅವನ ಬಡತನವನ್ನು ಕಂಡು ಅಣಕಿಸುತ್ತಿದ್ದ ಶಕ್ತಿಗಳಿಗೆ, ಅವನು ಬಾಗಿ ನಡೆ ಯಲೇಬೇಕಾಗಿತ್ತು. ಮಗನನ್ನು ವಿದ್ಯಾವಂತನಾಗಿ ಮಾಡುವ ಮಹಾ ಯಾಗದ ಅಗ್ನಿಕುಂಡದಲ್ಲಿ ಆತನ ಜೀವ ಸ್ವಲ್ಪ ಸ್ವಲ್ಪವಾಗಿ ಸುಟ್ಟು ಸುಣ್ಣವಾಗುತ್ತಿತ್ತು.

ಒಂದು ದಿನ ಸ್ವಲ್ಪ ಬೇಗನೆ ಶಾಲೆಗೆ ಹೋಗಿದ್ದೆ. ಹುಡುಗರು ಅದೇ ಆಗ ಒಬ್ಬೊಬ್ಬರಾಗಿ ಬರುತ್ತಿದ್ದರು. ನಾನು ಹೆಬ್ಬಾಗಿಲನ್ನು ಸಮೀಪಿಸುತ್ತಿದ್ದಂತೆ ದೊಡ್ಡಡೊಂದು ಕಾರು ಹಾರನ್ ಮಾಡುತ್ತಾ ಬಂತು. ಬೆಲೆ ಬಾಳುವ ಉಣ್ಣೆಯ ಪೋಷಾಕು ಧರಿಸಿ ಜರಿಯ ರುಮಾಲು ಸುತ್ತಿದ್ದ ದೊಡ್ಡಮನುಷ್ಯರೊಬ್ಬರು ಒಳಗೆ ಕುಳಿತಿದ್ದರು. ಡ್ರೈವರ್ ಕಾರು ನಿಲ್ಲಿಸಿದ. ಒಳಗಿದ್ದ ವ್ಯಕ್ತಿ ಮುಖ ಹೊರಹಾಕಿ, ಇಂಗ್ಲೀಷಿನಲ್ಲಿ "ಸ್ವಲ್ಪ ಇತ್ತ ಬಾರಪ್ಪಾ" ಎಂದರು.

ನಾನು ತಿರುಗಿ ನೋಡಿದೆ. ಮತ್ತೆ ಅವರನ್ನು ಸಮೀಪಿಸುತ್ತಾ ಇಂಗ್ಲೀಷಿನಲ್ಲೇ, "ನಾನು ನಿಮಗೇನು ಸಹಾಯಮಾಡಬಲ್ಲೇ?"ಎಂದೆ.

"ಹೆಡ್ ಮೇಷ್ಟ್ರು ರಂಗನಾಥನ್ ಬಂದಿದಾರೇನು ? "

"ಇನ್ನೂ ಬಾಗಿಲು ತೆರೆದೇ ಇಲ್ಲ. ಅವರು ಬರೋದು ಇನ್ನೂ ತಡವಾಗಬಹುದು ಸಾರ್."

"ನಿನಗೆ ಅವರ ಮನೆ ಗೊತ್ತೇನು? "

ಇಂಗ್ಲೀಷ್ ಭಾಷೆಯಲ್ಲಿ ಇದೊಂದು ಅನುಕೂಲ. ಯೂ ಎಂದರೆ ನೀವು ಎಂದೂ ಆಗಬಹುದು, ನೀನು ಎಂದೂ ಆಗಬಹುದು. ಗೌರವದ ಸಂಬೋಧನೆಯಾಗಲಿ, ಏಕವಚನದ ಕರೆಯಾಗಲಿ ಎರಡೂ ಒಂದೇ. ಅದರ ಉಪಯೋಗ ಆಗ ನನಗೆ ತಿಳಿದಿರಲಿಲ್ಲ.... ನನ್ನಂಥ ಹುಡುಗನನ್ನು ನೀವು ಎಂದು ಯಾರಾದರೂ ಯಾಕೆ ಸಂಬೋಧಿಸುತ್ತಾರೆ ?

"ಗೊತ್ತು ಸಾರ್"

"ಅಲ್ಲಿತನಕ ಬರ್ತೀಯಾ ? ಸ್ಕೂಲ್ ಟೈಮ್ ಗೆ ಸರಿಯಾಗಿ ನಿನ್ನ ಇಲ್ಲಿಗೆ ತಲಿಪಿಸ್ತೀನಿ"

"ಆಗ್ಬಹುದು ಸಾರ್"

ಡ್ರೈವರ್ ತನ್ನ ಪಕ್ಕದ ಬಾಗಿಲು ತೆರೆದ. ಕಾರಿನವರು ತಮ್ಮ ಪಕ್ಕದ ಬಾಗಿಲು ತೆರೆದರು. ಅವರ ಸ್ವರ ಕೇಳಿಸಿತು.

"ಇಲ್ಲೇ ಬಾಪ್ಪ."

ಡ್ರೈವರ್ ತನ್ನ ಬದಿಯ ಬಾಗಿಲು ಮುಚ್ಚಿದ. ಮುಚ್ಚುತ್ತಾ ನನ್ನನ್ನ ನೋಡಿದ. ನಾನು ಒಳಹೊಕ್ಕು ವಿನಯದಿಂದ ಸೀಟಿನ ಇನ್ನೊಂದು ಮೂಲೆಯಲ್ಲಿ ಕುಳಿತೆ. ಒಂಭತ್ತು ವರ್ಷಗಳಿಗೆ ಹಿಂದೆ ಈ ನಗರಕ್ಕೆ ಬಂದ ಮೊದಲ ಸಂಜೆ ಬೆಳಕನ್ನುಗುಳುತ್ತಿದ್ದ ಎರಡು ಕಣ್ಣುಗಳ ಪುಟ್ಟ ವಾಹನಗಳನ್ನು ನಾನು ಕಂಡಿದ್ದೇನಲ್ಲವೆ ? ಈಗ ಹಗಲು ಹೊತ್ತು. ಆ ಕಣ್ಣುಗಳಲ್ಲಿ ಬೆಳಕಿರಲಿಲ್ಲ. ಆದರೆ ಅಂತಹದೊಂದು ವಾಹನದೊಳಗೆ ನಾನು ಕುಳಿತಿದ್ದೆ-ನನ್ನ ಜೀವಮಾನದಲ್ಲೇ ಮೊದಲ ಬಾರಿ ಕಾರಿನೊಳಗೆ ಕುಳಿತಿದ್ದೆ.

ನಾನು ಹಾದಿಯ ನಿರ್ದೇಶಗಳನ್ನು ತೊಡುತ್ತಾಬಂದೆ. ನನಗೆ ನನ್ನ ಆತ್ಮ ವಿಶ್ವಾಸದ ಬಗ್ಗೆ ಹೆಮ್ಮೆ ಎನಿಸಿತು. ಆ ಹೊಸ ಪರಿಚಯ, ಶ್ರೀಮಂತಿಕೆಯ ಆವರಣ, ನನ್ನನ್ನು ಆಧೀರನಾಗಿ ಮಾಡಿರಲಿಲ್ಲ.ನೇರವಾದ ರಸ್ತೆಯಲ್ಲಿ ಕಾರು ಓಡುತ್ತಿದ್ದಾಗ ಅವರು ಕೇಳಿದರು.

"ಯಾವ ಕ್ಲಾಸ್ ನಲ್ಲಿ ಓದ್ತಾ ಇದ್ದೀಯ ಮಗು?"

"ಫೋರ್ತ್ ಫಾರಂ ಸಾರ್."

ಅವರು, ನನ್ನ ಕ್ರಾಪಿನಿಂದ ಹಿಡಿದು ಪಾದದ ತನಕ ದೃಷ್ಟಿ ಹಾಯಿಸಿದವರು. ಅಂತಹ ಪರೀಕ್ಷೆಯಿಂದ ಯಾವಾಗಲೂ ನನಗೆ ಕಸಿವಿಸಿಯಾಗುತ್ತಿತ್ತು. ನನ್ನ ಬಟ್ಟಿಬರೆ ಯಾವಾಗಲೂ ನಾನು ಹುಟ್ಟದ ವರ್ಗವನ್ನೂ ನನ್ನ ಆರ್ಥಿಕ ಇರುವಿಕೆಯನ್ನೂ ಬಯಲು ಮಾಡುತ್ತಿತ್ತು.

ನಾವು ಹೆಡ್ ಮಾಸ್ಟರವರ ಮನೆ ಸೇರಿದೆವು. ಆ ದೊಡ್ಡ ಮನುಷ್ಯರು ಕೆಳಕ್ಕಿಳಿದು, "ಹಲೋ ರಂಗ" ಎನ್ನುತ್ತಾ ಬಲು ಸಲಿಗೆಯಿಂದ ಮಾತನಾಡಿದರು. ಪಕ್ಕಕ್ಕೆ ತಿರುಗಿ, "ಡ್ರ್ಯೆವರ್ ಇವರ್ನವ್ ಸ್ಕೂಲಿಗೆ ಬಿಟ್ಬಟ್ಟು ಬಾ" ಎಂದರು. ನನ್ನನ್ನು ನೋಡಿದ ನನ್ನ ವಿದ್ಯಾ ಗುರುವಿಗೆ ನಾನು ವಂದಿಸಿದೆ.

"ಯಾರು ಚಂದ್ರಶೇಖರನಾ?" ಪರವಾಗಿಲ್ಲ, ನಡಕೊಂಡು ಹೋಗ್ತಾನೆ" ಎಂದು ಅವರು ರಾಗವೆಳೆದರು.

ಛೆ! ಛೆ! ಕಾರ್ ನಲ್ಲೆ ಹೋಗ್ಲಿ. ತುಂಬ ಒಳ್ಳೇ ಹುದುಗ."

ಆಗ ನನ್ನ್ ವಿದ್ಯಾಗುರುವಿನ ಚರೆಯಲ್ಲಿ ಸ್ವಲ್ಪ ಬದಲಾವಣೆ ಯಾಯಿತು.

"ಹೌದು, ಹೌದು. ಅವನು ನನ್ನ್ ಒಳ್ಳೇ ವಿದ್ಯಾರ್ಥಿ."

ನಾನಾಗಿಯೇ ನಡುವೆ ಬಾಯಿಹಾಕಿ, "ಪರವಾಗಿಲ್ಲಾ ಸಾರ್ ನಡಕೊಂಡೇ ಹೋಗ್ತೀನಿ." ಎಂದೆ. "ಇನ್ನೊ ಟೈಮ್ ಇದೆ,"

ಎಂದು ಸ್ವರ ಸೇರಿಸಿದೆ.

ಹಾಗೆ ಹೇಳಿದಾಗ ನನಗೆ ಆಶ್ಚರ್ಯವೆನಿಸಿತು. ಸಮಯದ ಮಹತ್ವ ಬಲು ಚೆನ್ನಾಗಿ ತಿಒಳಿದವರ ಹಾಗೆ ನಾನು ಮಾತನಾಡಿದೆ ನಲ್ಲವೆ? ಆದರೆ ಮುಖ್ಯೋಪಾಧ್ಯಾಯರು ದಿನ ನಿತ್ಯವೇನೂ ಕಾರಿನಲ್ಲಿ ಶಾಲೆಗೆ ಬರುತ್ತಿರಲಿಲ್ಲ. ತಮಗಿಲ್ಲದ ಸಿರಿವಂತಿಕೆ ಬಡ ವಿದ್ಯಾರ್ಥಿಗೆ ಯಾಕೆ ಬೇಕು ?-ಎಂದು ಅವರು ಯೋಚಿಸುವುದು ಸ್ವಾಭಾವಿಕವಾಗಿತ್ತು, ಹೀಗೆ ಅವರ ಸ್ವಭಾವದ ಆಭಾಸ ಮಾಡುತ್ತಾ ಕ್ಷಣಕಾಲ ಅಲ್ಲಿ ನಿಂತೆ. ಜರಿ ಪೇಟದವರು ಮತ್ತೂ ಒಂದು ಮಾತು ಹೇಳಿದರು.

"ಬಹಳ ಚೆನ್ನಾಗಿ ಇಂಗ್ಲಿಷ್ ಮಾತಾಡ್ತಾನೆ. ಫೋರ್ತ ಫಾರಂ ಹುಡುಗ ಹೀಗೆ ಮಾತಾಡೋದು ಸಾಮಾನ್ಯವಲ್ಲ. ಯಾರ ಮನೆತನದವನು ಈತ ?”

ನಾನು ಅಲ್ಲಿ ನಿಲ್ಲಲಿಲ್ಲ. "ಬರ್ತೀನಿ ಸಾರ್ ” ಎನ್ನುತ್ತಾ ಬೇಗ ಬೇಗನೆ ಹೆಜ್ಜೆ ಇಟ್ಟೆ. ನನ್ನ ಕೊನೆಯ ಮಾತುಗಳು ಕ್ಷೀಣ ಸ್ವರದಲ್ಲೇ ಹೊರಬಿದ್ದಿದ್ದುವು. ಹೃದಯದ ಅಣೆಕಟ್ಟು ಬಿರಿಯುವ ಚಿಹ್ನೆ ತೋರಿತು. ನಾನು ವೇಗ ವೇಗವಾಗಿ ನಡೆದೆ . . ನಾನು ಚೆನಾಗಿ ಇಂಗ್ಲಿಷ್ ಮಾತಾಡುತ್ತೇನೆ. ಇದರೆ ನಾನು ಯಾವ ಮನೆತನದವನು ? ಮನೆತನಕ್ಕೂ ಇಂಗ್ಲಿಷ್ ಗೂ ಇರುವ ಬಾಂಧವ್ಯ....

ಆಮೇಲೆ ಒಂದು ಸಂಜೆ ಮುಖ್ಯೆಯ್ಯೋ ಪಾಧ್ಯಾಯರು ನನ್ನನ್ನು ಕರೆದರು.

"ಆ ದಿನ ನೀನು ಕರೊಂಡು ಬಂದಿದ್ದೋರು ನನ್ನ ಬಾಲ್ಯ ಸ್ನೇಹಿತ, ಜತೇಲೆ ಓದ್ದೋರು. ಈಗ ದೊಡ್ಡ ಶ್ರೀಮಂತ, ಉತ್ತರ. ಹಿಂದೂಸ್ಥಾನದಲ್ಲಿದ್ದೋರು ಇಲ್ಲಿಗೇ ಬಂದಿದ್ದಾರೆ. ನಿನ್ನ ನೋಡಿ ತುಂಬ ಮೆಚ್ಕೊಂಡ್ರು, ಯಾವತ್ತಾದರೂ ನಿಂಗೆ ಏನಾದರೂ ಸಹಾಯಬೇಕಾದರೆ ಅವರ್ನ ಕಾಣಬೇಕಂತೆ ನಿನ್ನ ವಿಷಯ ತಿಳಿದು ತುಂಬ ದುಃಖವಾಯಿತು ಅವರಿಗೆ."

"ಆಗಲಿ ಸಾರ್."

೫೮

ವಿಮೋಚನೆ

ಅಂತಹ ಸಹಾಯ ಕೇಳುವ ಒಂದು ಅವಕಾಶ ನನಗೆ ದೊರೆ
ಯದೇ ಹೋಗಲಿಲ್ಲ.

ತಂದೆ,ದೊಡ್ಡ ಮನು‍‍‍‍‍‍‍‍‍‍‍‍‍‍‍‍‍‍‍‍ಷ್ಯರೊಬ್ಬರು ನನ್ನ ಬಗ್ಗೆ ಮಾಡಿದ ಪ್ರಶಂಸೆ
ಯನ್ನು ಕೇಳಿದಾಗ ಬಹಳ ಸಂತೋಷಪಟ್ಟ. "ನೋಡ್ದಾ ಚಂದ್ರು?
ವಿದ್ಯೆ ಅಂದರೆ ಹಿಂಗೇನೆ. ನೀನು ಅವರ ನೆಪ್ನಲ್ಲಿ ಇಟ್ಕೊಬೇಕು.
ಒಂದಲ್ಲ ಒಂದಿವ್ಸ ಅವರಿಂದ ಎನಾರ ಪ್ರಯೋಜನ ಆದೀತು".

ಅ ಪ್ರಯೋಜನವನ್ನು ಪಡೆದುಕೊಳ್ಳುವ ಯತ್ನ ಮಾತ್ರ ಈ
ರೀತಿ ಆಗುವುದೆಂದು ನನಗೆ ತಿಳಿದಿರಲಿಲ್ಲ. ಬಡಕಲು ಬಡಕಲಾಗಿದ್ದ
ನನ್ನ ಆ ಬೇಸಗೆಯಲ್ಲಿ ಮತ್ತೆ ಹಾಸಿಗೆ ಹಿಡಿದ. ಪರೀಷೆಮಾಡಿದ
ನಚಕ್ಷಣ ವೈದ್ಯರು "ಇದು ಕ್ಷಯದ ಚಿಹ್ನೆ " ಎಂದರು. ಆಜ್ಜಿಗೆ ದಿಗಿ
ಲಾಯಿತು. ನಾನು ದಿಗ್ಮೊಢನಾದೆ. ಕೆಲಸಕ್ಕೆ ಹೋಗುವುದನ್ನು
ನಿಲ್ಲಿಸಿದ ತಂದೆ, ಭವಿತವ್ಯದ ಬಗ್ಗೆ ನಿರಾಶೆತಳೆದೆ. ತನ್ನ ಕನಸುಗಳೆಲ್ಲಾ
ಮಣ್ಣುಗೂಡುವವೆಂದು ಅವನಿಗೆ ತೋರಿತು.

ನೂರಾರು ರೂಪಾಯಿಗಳಿದ್ದರೆ ಆ ಕಾಹಿಲೆಯಿಂದ ಪ್ರಾಣಕ್ಕೆ
ಅಪಾಯವಾಗದಂತೆ ಮಾಡುವುದು ಸಾದ್ಯವಿತ್ತಂತೆ. ನೂರಾರು
ರೂಪಾಯಿ ! ನಮ್ಮದೆನ್ನುವ ಇಪ್ಪತು ಮೂವತ್ತು ರೂಪಾಯಿಗಳೂ
ಇರಲಲ್ಲ. ಈ ನಡುವೆ ಉತ್ತಿ ನಾದ ನಾನು ಮೇಲಿನ ತರಗತಿಗೆ
ಹೋಗಬೇಕು. ಹೊಸ ಪುಸ್ತಕಗಳು, ಫೀಸು, ಮತ್ತಿತರ ಖರ್ಚು.....

ಯೋಚಿಸಿ ಯೋಚಿಸಿ ನಾನು ನಮ್ಮ ಮುಖ್ಯೊಪಾಧ್ಯಾಯರ ಮನೆಗೆಹೋದೆ. ಅವರು ಯಾವುದೋ ಪರೀಕ್ಷಯ ಉತ್ತರ ಪತ್ರಿಕೆಗಳನ್ನು ತಮ್ಮ ನಿದ್ವತ್ತಿನ ತಕ್ಕಡಿಯಲ್ಲಿ ತೂಗುತ್ತಿದ್ದರು, ಎದ್ದುನಿಂತು ನಾಲ್ಕು ಹೆಜ್ಜೆ ಹೊರಬಂದು,'ಎನಪ್ಪಾ ಚಂದ್ರು , ಎನ್ಸಮಾಚಾರ? ಎಂದು ಕೇಳಿದರು.

ನಾನು ಅಲ್ಲೆ ನಿಂತು ಸೂಕ್ಷ್ಮವಾಗಿ ನನ್ನ ತೊಂದರೆಗಳ ಬಗ್ಗೆ ಅವರಿಗೆ ವರದಿಯನ್ನಿತ್ತೆ. ತನ್ನಿಂದಲ್ಲೆ ಸಹಾಯ ಕೇಳಲು ಬಂದಿರುವ ನೇನೋ ಎಂಬ ಸಂದೇಹ ಆವರಲ್ಲಿ ಮೂಡಿದಂತೆ ತೋರಿತು.

"ಆ ದಿನ ಬಂದಿದ್ರಲ್ಲಾ ಸಾರ್, ಆವರ ಅಡ್ರೆಸ್ ಸ್ವಲ್ಪ ಕೊಡ್ತಿರಾ ಸಾರ್ ? "

ಯಾವುದೋ ಗಂಡಾಂತರ ಕಳೆದವರಂತೆ ಅವರು ಪ್ರಸನ್ನ ರಾದರು. ಅವರು ಹಣೆಯ ಉದ್ದಕ್ಕೂ ಇದ್ದ ಮೂರು ನೆರಿಗೆಗಳು ಮಾಯವಾದುವು. ಆದರೆ ಯಾರ ಅಡ್ರೆಸೆಂಬುದು ಅವರಿಗೆ ಹೊಳೆಯಲೇ ಇಲ್ಲ.

" ಯಾರೂ ಚಂದ್ರಶೇಖರ?"

" ಅವರೇ ಸಾರ್, ನಿಮ್ಮ ಕ್ಲಸ್ಮಮೇಟು ಅಂದರಲ್ಲಾ ಸಾರ್, ಅವರೇನೆ."

" ಓ ಸ್ವಾಮೀನಾ? ಸರಿಸರಿ,ಜ್ಞಪಕ ಬಂತು.

" ನೀವೇನಾದರೂ ಒಂದು ಚೀಟಿ ಕೂಟ್ರೆ ಅವರತ್ತರ ಹೋಗ್ಬರ್ತಿನಿ."

" ಬೇಡ. ಬೇಡ...,ಚೀಟಿ ಒಂದೂ ಬೇಡ, ಅಡ್ರೆಸ್ ಕೊಟ್ಟಿರ್ತೀನಿ ನೊಡ್ಕೊಂಡು ಬಾ."ಅವರು ವಿಳಸ ಕೊಟ್ಟರು. ಸಂಜೆ ಆ ಮನೆ ಹುಡುಕಿಕೊಂಡು ನಾನು ಹೋದೆ. ಹೆಚ್ಚು ಜನ ವಸತಿಯಿಲ್ಲದ ಶಾಂತ ಆವರಣದಲ್ಲಿ ಆ ಮಹಡಿಯ ಮನೆ ಗಂಭೀರವಾಗಿ ನಿಂತಿತ್ತು. ಅದರ ಸುತ್ತಲೂ ಉದ್ಯಾನ. ಬಣ್ಣ ಬಣ್ಣದ ಹೊಗಳು. ಬಣ್ಣ ಬಣ್ಣದ ಎಲೆಗಲು. ಅದರ ಸುತ್ತಲೂ ಸಿಮೆಂಟಿನ ಅಡ್ಡಗೋಡೆ. ಅದರಮೇಲೆ ಕಬ್ಬಿನದ ಮುಳ್ಳುಬೇಲಿ. ನಾನು ಆ ಮನೆಯನ್ನು ಸಮೀಪಿಸುತ್ತಿದ್ದಂತೆ ದೀಪ ಹಚಿದರು. ಆ ಮನೆಯ ಕೊಠಡಿಗಳು ಬೆಳಗಿದುವು.ರೇಡಿಯೋ ಸಂಗೀತ ಅಲೆಯಲೆಯಾಗಿ ಹೋರಬೀಳುತ್ತಿತ್ತು.ಹದಿನಾರು ಹದಿನೆಂಟರ ಹುಡುಗಿಯೊಬ್ಬಳು ಸರಪಳಿಹಾಕಿ ಹಿಡಿದಿದ್ದ ದೊಡ್ಡ ಸೀಮೆನಾಯಿ ಯಾಡನೆ ಗೇಟಿನ ಬಳಿ ಬಂದು ನಿಂತಿದ್ದಳು. ಆಕೆ ಲಾವಣ್ಯವತಿಯೇ ಇದ್ದಿರಬೇಕು. ಆಗ ನನಗೆ ಎಲ್ಲ ಹುಡುಗಿಯರೂ ಒಂದೇ ರೀತಿಯಗಿ ತೋರುತ್ತಿದ್ದರು. ಅವರ ಬಣ್ಣ ಬಣ್ಣದ ಸೀರೆಗಳೂ ಜಡೆರಿಬ್ಬನ್ಗಳೂ ಹಾರ ಬಳೆಗಳೂ ಎಲ್ಲಾವೂ ಒಂದೇ ರೀತಿ. ಬೀದಿಯಲ್ಲಿ ಧೈರ್ಯವಾಗಿ ನಡೆಯಬಲ್ಲ ಹುದುಗಿಯರೆಲ್ಲಾ ಶ್ರೀಮಂತರೆಂಬುದು ನನಗೆ ಗೊತ್ತಿತ್ತು.

೬೦

ವಿಮೋಚನೆ

ಮೈತುಂಬ ಸಾದಾ ಸೀರೆಯ ಸೆರಗು ಹೊದ್ದುಕೊಂಡು ಬರಿ ಕಾಲಲ್ಲೆ
ಬಾಗಿದ ತಲೆಯೊಡನೆ ನಡೆದುಹೋಗುತ್ತಿದ್ದವರೆಲ್ಲಾ ಬಡಹುಡುಗಿ
ಯರು....... ಆಕೆಯ ಬಗ್ಗೆ ಹೆಚ್ಚು ಯೋಚಿಸುವ ತಾಳ್ಮೆ ನನಗಿರಲಿಲ್ಲ.

ನಾನು ಗೇಟಿನ ಬಳಿ, ಹೊರಗೆ ನಿಂತೆ, ನನಗೆ ಸಾಮಾನ್ಯವಾಗಿ
ಯಾವ ಅಂಜಿಕೆಯೂ ಇರಲಿಲ್ಲ, ಆದರೆ ಈಗ ಹೃದಯದಲ್ಲಿ ಅಳುಕು
ಗರಿಗೆದರುತ್ತಿತು, ಯಾವುದೋ ನನ್ನದಲ್ಲದ ಹೊಸ ಲೋಕದ
ಹೊಸ್ತಿಲಲ್ಲಿ ನಿಂತು ನಾನು, ಅನಿರೀಕ್ಷಿತವಾಗಿ ಒದಗಬಹುದಾದ
ಅಪಾಯಗಳೇನಾದರೂ ಇವೆಯೆ ಎಂದು ಚಿಂತಿಸುತ್ತಿದ್ದೆ. ಆ ನಾಯಿಯ
ಒಡತಿ ನನ್ನನ್ನೆ ನೋಡಿದಳು. ಸಂಶಯಗ್ರಸ್ತ ದೃಷ್ಟಿಯಿಂದಲೇ
ನನ್ನನ್ನು ನೋಡುತ್ತಿದ್ದಹಾಗೆ ತೋರಿತು. ಮಾತನಾಡಬೇಕೆಂದು ಅವಳ ಬಾಯಿ ತೆರೆಯುತ್ತಿದ್ದಳು. ನಾನೆ ಮುಂದಾಗಿ, ಅವಳ ಪಾಲಿನ ಕಷ್ಟವನ್ನು ತಪ್ಪಿಸಿದೆ. ಸ್ವರ ಎತ್ತುವುದಕ್ಕೆ ಮುಂಚೆಯೇ,
ಹೊರಟುಹೋಗು ಎಂದು ಅವಳಿಂದ ಹೇಳಿಸಿಕೊಳ್ಳಲು ನಾನು ಸಿದ್ಧ
ನಿರಲಿಲ್ಲ.

"ರಾಮಸ್ವಾಮಿಯವರ ಮನೆ ಇದೇನಾ?”


ಆಕೆಯ ಹುಬ್ಬು ಗಂಟಕ್ಕಿತು:

"ಏನೆಂದರೆ?"

"ಲೋಕಪರಾಯಣ ರಾಮಸ್ವಾಮಿಯವರ ಮನೆ ಇದೇನಾ?
" ನನ್ನ ತಪ್ಪು ಆಗಲೆ ನನಗರ್ಥವಾಗಿತ್ತು. ತಡವರಿಸಿಕೊಳ್ಳುತ್ತ್ವ
ಅದನ್ನು ತಿದ್ದಲೆತ್ನಿಸಿದೆ. ಆಕೆಯು ಹುಬ್ಬಗಳು ಮತ್ತೆ ಮೊದಲಿನ
ಸ್ಥಾನಕ್ಕೆ ಬಂದವು. "ಹಾಗೆ ಬೊಗಳು ಎಂದು ಅವಳು ಹೇಳಿದ
ಹಾಗೆ ನನಗೆ ಭಾಸವಾಯಿತು.

"ಪಪ್ಪ ಇಲ್ಲ. ಅವರು ಕ್ಲಬ್ಬಿಂದ ಬರೋದು ಎಂಟು ಘಂಟೆಗೆ

.....ಏನಾಗಬೇಕು ನಿಂಗೆ?"

ಆಗಿನ್ನೂ ಏಳು ಹೊಡೆದಿತ್ತು ಅಷ್ಟೆ, ಒಂದು ಘಂಟೆಯ ಹೊತ್ತು ನಾನು ಅಲ್ಲೆ ಕಾದಿರಬೇಕು. ಆ ಯೋಚನೆಯಲ್ಲಿ ರಾಮಸ್ವಾಮಿ. ಯವರ ಮಗಳು ಶಹೇಳಿದ ಕೊನೆಯ ಮಾತು ನನಗೆ ಕೇಳಿಸಲಿಲ್ಲ.

" ಏನೆ೦ದಿರಿ? " ಎ೦ದೆ.

ಮತ್ತೆ ಅವಳ ಹುಬ್ಬುಗಳು ಮೇಲಕ್ಕೆ ಹೋಗಿ ವಕ್ರವಾಗಿ ಗ೦ಟಕ್ಕಿದವು. ಆಗ ನೋಡಲು ಅಸಹ್ಯವೆನಿಸುತ್ತಿತ್ತು. ಸು೦ದರವಾಗಿ ಕಾಣಿಸಿಕೊಳ್ಳುವುದರ ಬದಲು ಇ೦ತಹ ಮುಖನಿಕಾರಗಳಿ೦ದ ಅವರೆಲ್ಲಾ ಯಾಕೆ ಹೀಗಾಗುತ್ತಾರೆ ಎ೦ಬ ಪ್ರಶ್ನೆ ನನ್ನನ್ನು ಕಾಡಿತು.

"ಇಲ್ಲೇನು ಕೆಲಸ ಅ೦ದೆ?"

"ರಾಮಸ್ವಾಮಿಯವರನ್ನು_ಲೋಕಪರಾಯಣ ರಾಮಸ್ವಾ ಮಿಯವರನ್ನು_ನೋಡಬೇಕಾಗಿತ್ತು.

ಅವರ ದೊಡ್ಡನಾಯಿ ನಾಲಿಗೆಯನ್ನು ಹೊರಚಾಚಿ ಉಸಿರಾ ಡುತ್ತಾ ಒಡತಿಯ ಮುಖವನ್ನೇ ನೋಡುತ್ತಿತ್ತು. ಆಕೆ ಹುಬ್ಬುಗ೦ಟಕ್ಕಿದಾಗ ಅದು ನನ್ನಡೆಗೆ ದೃಷ್ಟಿ ಹೊರಳಿಸುತ್ತಿತ್ತು.

"ಸರಿ ಹಾಗಾದರೆ. ಈಗ ಹೊರಟುಹೋಗು." ನಾನು ಅಲ್ಲಿ೦ದ ಮೆಲ್ಲನೆ ಸ್ವಲ್ಪ ದೊರ ನಡೆದು ಹೋದೆ. ಅಲ್ಲೊ೦ದು ದೀಪದ ಕ೦ಬವಿತ್ತು. ಅದಕ್ಕೆ ಒರಗಿ ನಿ೦ತೆ. ಸಾಧ್ಯವಿದ್ದಿದ್ದರೆ ಅ ಜ೦ಭದ ಹೇಟೆಗೆ ತಕ್ಕ ಪ್ರತ್ಯುತ್ತರ ಕೊಡಾಬಹುದಾಗಿತ್ತು. ಆದರೆ ನನಗೆ ಆ ಸ್ವಾತ೦ತ್ರ್ಯವಿಲ್ಲ. ಹಾಗೆ ಮಾಡಿದರೆ ದೊಡ್ಡಮನು ಷ್ಯರಾದ ಲೋಕಪರಾಯಣ ರಾಮಸ್ವಮಿಯವರನ್ನು ಕಾಣುವುದೇ ದುಸ್ಸಾಧ್ಯವಾಗುತ್ತಿತ್ತು. ನನ್ನ ಷರಟು ಚಡ್ಡಿಯನ್ನು ನೋಡಿಕೊ೦ಡೆ. ನಾನು ಒಳ್ಳೆಯ ಬಟ್ಟೆ ಬರೆ ಹಾಕಿ ಬೊಟ್ಸು ಮೆಟ್ಟಿಕೊ೦ಡು ಬ೦ದಿದ್ದರೆ, ಆ ಹುಡುಗಿ ಖ೦ಡಿತವಾಗಿಯೊ ಗೌರವದಿ೦ದ ಮಾತಾಡುತ್ತಿದ್ದಳು. ಹಿ೦ದೆ ಆಕೆಯ ತ೦ದೆಯನ್ನು ಮರುಳುಗೊಳಿಸಿದ್ದ ಇ೦ಗ್ಲಿಷ್‌ನಲ್ಲೇ ಮಾತನಾಡಿದ್ದರೆ, ಅಕೆ ಹಲೋ ಎನ್ನುತ್ತಿದ್ದಳು. ಆ ಮುಖದಮೇಲೆ ಮುಗುಳ್ನಗು ಕಾಣುವುದು ಸಾಧ್ಯವಿತ್ತು. ಆದರೆ ನಾನು ಬಡವ; ನನ್ನ ಲೋಕ ಬೇರೆ........ತ೦ದೆ ಆ ಬೆಳಿಗ್ಗೆ ಕೆಮ್ಮಿದಾಗ, ನನ್ನ ಕರುಳು ಕತ್ತರಿಸಿದ ಹಾಗೆ ನನಗೆ ನೋವಾಗಿತ್ತು. ತ೦ದೆಗೆ ಸರಿಯಾದ ಚಿಕಿತ್ಸೆ ಮಾಡಲೇಬೇಕು. ತ೦ದೆ ಗುಣಮುಖವಾಗಲೇಬೇಕು. ಆಗ ಮಾತ್ರ ನನ್ನ ವಿದ್ಯೆ ಮು೦ದುವರಿಯುವುದು ಸಾಧ್ಯ. ತ೦ದೆಯ ಮನಸ್ಸಿಗೆ. ನಾನು ಸಮಾಧಾನ ಉಂಟುಮಾಡುವುದು ಸಾಧ್ಯ...... ಇಲ್ಲಿ ಈ ನಾಯಿ ಮತ್ತದರ ಯಜಮಾನಿತಿಯೊಡನೆ ನಾನು ಜಗಳವಾಡಿದರೆ ನನ್ನ ಕಾಲಿಗೆ ನಾನೇ ಕಲ್ಲು ಹೇರಿಕೊಂಡ ಹಾಗಾಗುವುದು......

ಹಾಗೆಯೇ ಸ್ವಲ್ಪ ದೂರ ನಡೆದುಹೋದೆ. ಬೀದಿಯಲ್ಲಿ ಯಾರು ಬಂದರು ಹೋದರು ಎಂಬುದರ ಅರಿವೇ ನನಗಿರಲಿಲ್ಲ. ನಾನು ಸುಮ್ಮನೆ ನಡೆದುಹೋದೆ. ತಲೆ ಕೆಳಗೆಹಾಕಿ ಅಸಹಾಯತೆಯ ಕಣ್ಣೀರಿನ ಪ್ರವಾಹವನ್ನು ಹರಿಯಗೊಡುತ್ತಾ ಬೀದಿಯುದ್ದಕ್ಕೂ ನಡೆದೆ. ಕತ್ತಲೆ ಹೊತ್ತು ನನ್ನ ಕಣ್ಣೀರು ಯಾರಿಗೂ ಕಾಣಿಸುತ್ತಿರಲಿಲ್ಲ ಎಂಬುದೇ ನನ್ನ ಪಾಲಿಗೊಂದು ಸಮಾಧಾನವಾಗಿತ್ತು. ನನ್ನಲ್ಲಿ ಬೆಳೆದುಬಂದ ಅಭ್ಯಾಸ ಅದು. ಭಾವನೆಗಳು ತುಂಬಿಕೊಂಡಾಗ ನಾನು ಅವುಗಳನ್ನು ಮುಚ್ಚಿಡುತ್ತಿರಲಿಲ್ಲ. ಬಹಿರಂಗವಾಗಿ ಆ ಭಾವನೆಗಳನ್ನು ಜಾಹೀರುಮಾಡುತಿದ್ದೆ......ಆದರೆ ಅದು ಹಿಂದೆ--ನಾನು ಎಳೆಯವನಾಗಿದ್ದಾಗ.

ಎಂಟು ಹೊಡೆದ ಹೊತ್ತಿಗೇ ನಾನು ಆ ಮನೆಯನ್ನು ಮತ್ತೊ ಮ್ಮೆ ಸಮೀಪಿಸಿದೆ. ಬೆಳಕು ಉಗುಳುವ ಕಣ್ಣುಗಳ ಆ ಕಾರಿನಲ್ಲಿ ದೊಡ್ಡಮನುಷ್ಯರ ಬಂದಿರಬಹುದು.... ಅಂಗಣದ ಹೊರಗಿನಿಂದ ಮೂರು ನಾಲ್ಕು ಸ್ವರಗಳು "ಕವಳಾ ತಾಯೀ","ಕವಳಾ ಅಮ್ಮಾ" ಎನ್ತುತ್ತಿದ್ದವು. ಲೋಕಪರಾಯಣರ ಜವಾನನೊ ಏನೊ--ಧಾಂಡಿಗ ವ್ಯಕ್ತಿಯೊಬ್ಬ ಅವರನ್ನು ಓಡಿಸುತ್ತಿದ್ದ. ಅವರ ನಾಯಿ ಗದರಿಕೆಯ ನಟನೆ ಮಾಡುತ್ತಿತ್ತು. ಆ ಬಡ ಭಿಕ್ಷುಕರನ್ನು, ಬಗುಳಿ ಓಡಿಸುವುದು ತನ್ನ ಅಂತಸ್ತಿಗೆ ಸರಿಹೋಗದ ಕೆಲಸ ಎಂದು ಅದು ಭಾವಿಸಿತ್ತೇನೋ.

ನಾನು ಗೇಟನ್ನು ಸಮೀಪಿಸಿದಾಗ ಅಲ್ಲೇ ಇದ್ದ ಜವಾನ, "ಏನಪ್ಪ? ನಿಂದೇನು ಇನ್ನು?" ಎಂದ.

ಸುಮ್ಮನೆ ಭೇಟಗೆ ಬಂದವನೆಂದು ಹೇಳಿದರೆ, ಬಂದ ಹಾದಿಗೆ ಸುಂಕವಿಲ್ಲವೆಂಬಂತೆ ವಾಪಸ್ಸು ಹೋಗಬೇಕಾದೀತು ಎಂದು ಭಾವಿಸಿ, ನಾನು ಮಾತಿನ ಸರಣಿಯನ್ನು ತೀರ್ಮಾನಿಸಿಕೊಂಡೆ.

"ಹೆಡ್‌ಮೇಷ್ಟ್ರು ರಂಗನಾಥನ್ ಕಳಿಸಿದಾರೆ. ಲೋಕಪರಾ

ಯಣ ರಾಮಸ್ವಾಮಿಯವರನ್ನು ತುರುತ್ತಾಗಿ ನೋಡಬೇಕಾಗಿದೆ, ಎಂದೆ."

ರಂಗನಾಥನ್ ಹೆಸರು ಆತನಿಗೆ ಪರಿಚಿತವಾಗಿದ್ದಂತೆ ತೋರಲಿಲ್ಲ. ಆದರೆ ಹೆಡ್ ಮೇಷ್ಟ್ರು ಎಂಬ ಪದ ಅವನ ಮೇಲೆ ಪರಿಣಾಮಮಾಡುತ್ತಿದ್ದಂತೆ ಕಂಡಿತು. ಆದರೂ ಅವನು ಪರೀಕ್ಷಕನ ದೃ‌‌‌‌‌‌‌‌‌‌‌‌‌‌‌‌‌‌‌ಷ್ಟಿಯಿಂದ ನನ್ನನ್ನು ದಿಟ್ಟಿಸಿನೋಡಿದ.ಕೊನೆಗೆ, "ಇಲ್ಲೆ ನಿಂತಿರು, " ಎಂದ. ಐದು ನಿಮಿಷಗಳಲ್ಲಿ ಗೇಟಿನ ಬಾಗಿಲು ಕಿರ್ ಎಂದಿತು. ನಾನು ಆ ದೊಡ್ಡ ಮಹಡಿಮನೆಯ ಕೆಳ ಹಜಾರದಲ್ಲಿ, ಆ ದೊಡ್ಡ ಮನುಷ್ಯರ ಆಗಮನವನ್ನು ಇದಿರುನೋಡುತ್ತಾ ನಿಂತೆ. ಆ ಎತ್ತರ ವಿಶಾಲತೆ ಭವ್ಯತೆಗಳ ನಡುವೆ ನಾನು, ಬಾಲು ನಿಕೃಷ್ಟನಾದ ಸಣ್ಣ ವ್ಯಕ್ತಿಯಾಗಿ ತೋರುತ್ತಿದ್ದೆ.

ಒಮ್ಮೆಲೆ ಪಕ್ಕದ ಬಾಗಿಲು ತೆರೆಯಿತು. ಹಿಂದೊಮ್ಮೆ ಕಾರಿನಲ್ಲಿ ನಾನು ಸಮೀಪವಾಗಿ ಕುಳಿತಿದ್ದ ಹಿರಿಯ ವ್ಯಕ್ತಿ ಬಂದರೆಂದು ಕೈ ಜೋಡಿಸಿನಿಂತೆ. ಆದರೆ ಬಂದುದು ಮತ್ತೆ ಅದೇ ಹುಡುಗಿ. ನನ್ನನ್ನು ನೋಡಿ ಆ ಮೂಗನ್ನು ಮೇಲಕ್ಕೆ ಏರಿಸಿ, ಜಡೆಯನ್ನು ಕೊರಳ ಇನ್ನೊಂದು ಭಾಗಕ್ಕೆ ಸೇರಿಸಿ, ಅವಳು ಮತ್ತೆ ಒಳ ಹೋದಳು. ಮೂಗು ತೀರ ಚಿಕ್ಕದಾಗಿದ್ದರೆ ಸೌಂದರ್ಯಕ್ಕೆ ಕೊರತೆ ಇರುತ್ತ ದೆಂಬುದನ್ನು ಆಗ ತಿಳಿದೆ. ನನಗೆ ತಿಳಿಯದೆಯೇ ಕೈ ಬೆರಳು ನನ್ನ ಮೂಗಿನತ್ತ ಹೋಯಿತು........

ಮತ್ತೆಷ್ಟೊ ನಿಮಿಷಗಳು ಕಳೆದುವು.

ಆ ಹೊತ್ತಿನಲ್ಲಿ ನಾನು ಏನನ್ನೂ ಯೋಚಿಸುತ್ತಿರಲಿಲ್ಲ. ಆವರ ಣದ ವಿಸ್ತಾರದಲ್ಲಿ ತನ್ನ ಇರುವಿಕೆಯನ್ನೆ ಮರೆಯುವುದು ಸಾಧ್ಯಾಅಲ್ಲವೆ? ಎಲ್ಲವೂ ಬರಿದು ಬರಿದು ಎಂದು ತೋರುತ್ತಿದ್ದ್ ಆ ವಿಶಾಲತೆಯಲ್ಲಿ ನಾನು ಮೆಲ್ಲಮೆಲ್ಲನೆ ಲೀನನಾಗುತ್ತಿದ್ದೆ.ನಾನು ಜಾಗೃತನಾಗಿದ್ದೆನೊ ಇಲ್ಲವೊ ಎಂಬುದು ತಿಳಿಯದೆಹೋಗುವ ಪರಿಸ್ಥಿತಿ..........

ನನ್ನನ್ನು ಎಚ್ಚರಿಸುವಂತೆ ಲೋಕಪರಾಯಣ ರಾಮಸ್ವಾಮಿ ಯವರು ಬಂದು ಪ್ರತ್ಯಕ್ಷರಾದರು. ಕ್ಷಣಕಾಲ ನನಗೆ ಅವರ ಗುರುತು ಸಿಗಲಿಲ್ಲ. ಇಲ್ಲಿ ಅವರು ಪೋಷಾಕು ಧರಿಸದ ದೊಡ್ಡ ಮನುಷ್ಯರು. ಮೀಸೆ ಕಪ್ಪಗಿತ್ತು. ತಲೆಕೂದಲು ಬೆಳ್ಳಗೆ. ಎದೆ ಹೊಟ್ಟೆಗಳು ಪರಸ್ಪರ ಲೀನವಾಗಿ ಆ ಭವನದ ವಿಸ್ತಾರಕ್ಕೆ ಅನುಗುಣವಗಿ ವಿಶಾಲವಾಗಿ ಹರಡಿದ್ದುವು. ತೆಳ್ಳನೆಯ ಬಿಳಿಯ ಬಟ್ಟೆಯನ್ನು ಅವರು ಉಟ್ವದ್ವರು. ಮೇಲೊಂದು ಅಂತಹದೇ ಬನಿಯನ್ನು. ಕೈ ಬೆರಳಲ್ಲಿ ಮೂರು ಉ೦ಗುರಗಳಿದ್ದುವು. ಕಾಲಲ್ಲಿ ಬೂಟ್ಸುಗಳಿರಲಿಲ್ಲವೆ೦ದೋ ಏನೋ ಆವರು ಸ್ವಲ್ಪ ಕುಳ್ಳಗೆ ಕಾಣಿಸುತ್ತಿದ್ದರು........

ಅವರಿಗೆ ನನ್ನ ಗುರುತು ಸಿಕ್ಕಿದಹಾಗೆ ತೋರಲಿಲ್ಲ.

ಆದಷ್ಟುಮಟ್ಟಿಗೆ ತಡವರಿಸದಂತೆ, ನನ್ನ ಆಳುಕನ್ನು ಮುಚ್ಚುವುದಕ್ಕೋಸ್ಕರ ಸ್ವಲ್ಪ ಗಟ್ಟಿಯಾದ ಸ್ವರದಲ್ಲೆ, ನನ್ನ ಪರಿಚಯ ಮಾಡಿಕೊಟ್ಟೆ.

"ಸಾರ್, ನಾನು ಚಂದ್ರಶೇಖರ ಫೋರ್ತ್‍ ಫಾರಂನಲ್ಲಿದ್ದೆ. ಆ ದಿವಸ ಹೆಡ್ ಮಾಸ್ಟರ್ ರಂಗನಾಥನ್ ರವರ ಮನೆಗೆ ದಾರಿ ತೋರಿ ಸ್ಕೊಟ್ಟೆ. ಕಾರಿನಲ್ಲಿ-"

ಅವರ ತುಟ ಚಲಿಸಿದುದನ್ನು ಕಂಡು ನಾನು ಮಾತುನಿಲ್ಲಿಸಿದೆ. ಅವರು ಗಂಟಲು ಸರಿಪಡಿಸಿಕೊಂಡರು. ಅದೇನೊ ಸ್ವರ ಹೊರಬಿತ್ತು. ಆದರೆ ಯಾವುದೂ ನನಗೆ ಸ್ಪಷ್ಟವಾಗಲಿಲ್ಲ. ಮತ್ತೊಮ್ಮೆ ನಾನೇ ಮಾತು ಮುಂದುವರಿಸಿದೆ.

"ನಾನು ಸಾರ್, ಚಂದ್ರಶೇಖರ. ಆ ದಿವಸ-ಹೋದ ವರ್ಷ ಸಾರ್-ನನ್ನ ಇಂಗ್ಲಿಷ್ ಚೆನ್ನಾಗಿದೆ ಆಂದಿದ್ರೀ ಸಾರ್. It was last year"

ಅದೇನು ತೋರಿತೊ ಏನೊ. ಅಥವಾ ಮಸಕು ಮಸಕಾಗಿ ಗುರುತೊ ಸಿಕ್ಕಿತೇನೋ. ಅವರು ಆರಾಮ ಕುರ್ಚಿಯಮೇಲೆ ಕುಳಿತು ಕೊಳ್ಳುತ್ತಾ,"ಓ,ಹೌದು ಹೌದು,ರಂಗನಾಥನ್ ಮನೇಲಿ. ಹೌದು. ಏನಪ್ಪ?ಈಗೇನ್ ಬಂದೆ-ಈ ರಾತ್ರಿ ಹೊತ್ತು?" ಎಂದು ಕೇಳಿದರು.

ದೊಡ್ಡ ಮನುಷ್ಯರ ಸಮಯ ಅಮೂಲ್ಯವಾದುದೆಂದು ಕೇಳಿದ್ದೆ. ಹೊತ್ತು ಕಳೆಯುವ ಹಾಗಿರಲಿಲ್ಲ.

" ನಂಗೆ ಪಾಸಾಯ್ತು ಸಾರ್."

" Good, Good."

ನಾನು ಪಾಸಾದಾಗ ನನ್ನ ತಂದೆಗೆ ಆಗಿದ್ದ ಸಂತೋಷದ ನೂರರಲ್ಲಿ ಒಂದು ಪಾಲೂ ಲೋಕಪರಾಯಣ ರಾಮಸ್ವಾಮಿಯವರ ಮುಖದಮೇಲೆ ಕಾಣಿಸಲಿಲ್ಲ. ಆದರೂ ಅವರು ಪ್ರೋತ್ಸಾಹದ ಮಾತನ್ನಾಡಲಿಲ್ಲವೆ? ಎರಡು ಸಾರಿ ಗುಡ್ ಗುಡ್ ಎನ್ನಲಿಲ್ಲನವೆ? ನಾನು ಉತ್ತೇಜಿತನಾಗಿ ಮಾತು ಮುಂದುವರಿಸಿದೆ.

"ಆದರೆ ನಮ್ಮ ತಂದೆಗೆ ಕಾಯಿಲೆನಂತೆ ಸಾರ್. ಟಿ. ಬಿ. ನಂತೆ ಸಾರ್. ಔಷಧಿಗೆ ನೂರಾರು ರೂಫಾಯಿ ಬೇಕಂತೆ ಸಾರ್......"

ನೂರಾರೂ ಎಂದರೆ ನಿಜವಾಗಿ ಎಷ್ಟೆಂಬುದು ನನಗಿಂತಲೂ ಹೆಚ್ಚಾಗಿ ಅವರಿಗೆ ತಿಳಿದಿತ್ತೇನೊ. ನನ್ನ ತಂದೆಯಾದರೆ ಅಷ್ಟು ಹಣದ ಸಂಪಾದನೆಗಾಗಿ ಅದೆಷ್ಟೊ ವರ್ಷ ದುಡಿಯಬೇಕು. ದೊಡ್ಡಮನು ಷ್ಯರು ಕೆಲವೊಮ್ಮೆ ಕಣ್ಣುಮುಚ್ಚಿ ತೆರೆಯುವುದರೊಳಗಗಿ ಸಹ ಸಹಸ್ರ ಸಂಪಾದನೆ ಮಾಡುವರೆಂದು ನಾನು ಕೇಳಿದ್ದೆ. ನಾನು ಹಣದ ಮಾತನ್ನೆತ್ತಿ ಒಂದು ಕ್ಷಣವಾಗಿತ್ತಷ್ಟೆ - ಕಣ್ಣು ಮುಚ್ಚಿ ತೆರೆಯುವ ಹೋತ್ತು. ಅವರು ಕುಳಿತಲ್ಲಿಂದ ಎದ್ದರು.

"ಬಡವರನ್ನು ಕಂಡರೆ,ಅದರಲ್ಲೂ ಬುದ್ದಿ ವಿದ್ಯೆಯಿರೋರನ್ನ ಕಂಡರೆ ಫ್ರೀತಿ ನನಗೆ. ಆದರೆ ನೊಡಪ್ಪ, ಪೂರ್ತಿ ಸಹಾಯ ನಾನು ಮಾಡೋದು ಸರಿಯಲ್ಲ. ಬೇರೆಯವರಿಗೂ ಫುಣ್ಯದ ಅವಕಾಶ ಸಿಗ ಬೇಕು. ನಾನೂ ಒಂದಿಷ್ಟು ಕೊಡ್ತೀನಿ."

ಅವರು ಒಳಹೋದರು. ನನ್ನ ಹೃದಯ ಸಂತೋಷದಿಂದ ಬಿರಿಯುತ್ತಿತ್ತು. ನೂರಾರು ರುಪಾಯಿ ಅವರು ಕೊಡಲಾರರು ನಿಜ. ಆದರೆ ಸದ್ಯಃ ದೊರೆಯುವ ಹಣದಲ್ಲಿ ಚಿಕಿತ್ಸೆ ಆರಂಭಿಸಬಹುದಲ್ಲಾ? ಇಂಚೆಕ್ಷನ್ ಕೊಡಿಸಬಹುದಲ್ಲಾ? ಆ ಕಿರಿದುಮೂಗಿನ ವಕ್ರ ಹುಬ್ಬಿನ ಹುಡುಗಿಯನ್ನು ನಾನು ಮರೆತೆ- ನಾಲಿಗೆಯಲ್ಲಿ ನೀರು ತೊಟ್ಟಕ್ಕು, ತ್ತಿದ್ದ ಆ ನಾಯಿಯನ್ನೂ ಕೂಡ. ಜೀವನವೆಲ್ಲಾ ಕಹಿಯಲ್ಲ, ಕತ್ತಲೆಯಲ್ಲ. ಸೀಮೇಎಣ್ಣೆಯ ಮಿಣುಕು ದೀಪದ ಕರಿ ಹೊಗೆಯೇ ನಮ್ಮ ಬಾಳ್ವೆಯನ್ನು ಮುಚ್ಚಿಲ್ಲ. ವಿದ್ಯುತ್ ದೀಪಗಳೂ ಆಗೋಮ್ಮೆ ಈ ಗೊಮ್ಮೆಯೇ ಜೀವನದ ಆಮೃತಘಳಿಗೆಯೊ ಏನೋ.....

ಘಳಿಗೆಯ ಅವಕಾಶಕ್ಕೆ ಆಸ್ಪದವಿಲ್ಲದ ಹಾಗೆ ಮತ್ತೆ ಯಾರೊ ಬರುತ್ತಿದ್ದ ಸದ್ದಾಯಿತು. ನನ್ನ ಹಿರಿತನವನ್ನು ಕಂಡುಹಿಡಿದ ಆ ಮಾಹಾನುಭಾವರೇ ಬರುತ್ತಿದ್ದರೆಂದು ಭಾವಿಸಿದೆ ಆದರೆ ಬಂದ ವ್ಯಕ್ತಿ, ಆ ಪಪ್ಪನ ಮಗಳು--ಅದೇ ಹುಡುಗಿ.

ಆಕೆ ಮುಷ್ಟಿ ಸಡಿಲಿಸಿ, "ತಗೋ," ಎಂದಳು. ನಾನು ಕೈ ಚಾಚಿದೆ. ರೂಪಾಯಿ ನಾಣ್ಯಗಳೆರಡು ಸದ್ದುಮಾಡಿದುವು.

ನನ್ನನ್ನು ನಾನೇ ನಂಬಲಿಲ್ಲ ನನ್ನ ಸುತ್ತೆಲ್ಲವೂ ಗಾಡವಾದ ಕತ್ತಲು ಕವಿದಹಾಗಾಯಿತು. ಏನು ಇದರ ಅರ್ಥ? ಇದರ ಅರ್ಥ ವೇನು?......

ನಾನು ಚೇತರಿಸಿಕೊಂಡೆ, ಆದರೆ ಆಕೆ ಅಲ್ಲಿರಲ್ಲಿಲ್ಲ.

ಸ್ವಲ್ಪ ಹೊತ್ತು ಮೂಕನಾಗಿ ಅಲ್ಲಿ ನಿಂತೆ. ಆ ದೊಡಮನು ಷ್ಯರು ಹೊರಗೆ ಬರಬಹುದು; ಎಲ್ಲೋ ಏನೊ ತಪ್ಪಾಗಿರಬೇಕು--ಎಂದು ಕಾದುನಿಂತೆ.

ಕೊನೆಗೆ ಬಂದವನು ಜವಾನ ಅವನು ನನ್ನ ಸುಖದುಃಖ ವಿಚಾರಿಸಿದ. ಆ ವಿಚಾರಣೆಯ ವೈಖರಿ?.....

"ಯಾಕೊ? ಯಾಕ್ ನಿಂತಿದಿಯಾ ಇನ್ನೂ? ಭಿಕ್ಷ ಸಿಗ್ಸ್ಲಿಲ್ಲ ನವೇನೋ?ಹೋಗು. ಹೋರಟೋಗು?"

ನನ್ನು ಮೆಲ್ಲನೆ ಮುಂದೆ ಬಂದು, ಒಂದು ಹೂ ದಾನಿಯನ್ನು ಹೊತ್ತು ನಿಂತಿದ್ದ ಪುಟ್ಟ ಮೇಜಿನಮೇಲೆ ಆ ಎರಡು ನಾಣ್ಯಗಳನ್ನೂ ಇರಿಸಿದೆ. ಸರಕ್ಕನೆ ತಿರುಗಿ ದಡದಡನೆ ಮೆಟ್ಟಲಿಳಿದು ಉದ್ಯಾನವನ್ನು ಹಾದು ಬೀದಿಗೆ ಓಡಿದೆ.

ಜವಾನ ಹಿಂದಿನಿಂದ ಕೂಗಿ ಕರೆಯುತ್ತಿದ್ದ......

"ಏ. ಬಾರೊ ಇಲ್ಲಿ ಎಂತಾ ಹುಚ್ಚನೋ ನೀನು........ ತಗೊಂಡು ಹೋಗು, ಬಾ....ಬಾ"

ನಾನು ಹಿಂತಿರುಗಿ ನೊಡಲೇ ಇಲ್ಲ. ಬೀದಿಯುದ್ದಕ್ಕೂ ನಡೆದು ಹೋದೆ. ಅಲ್ಲಿಂದ ಮೂರು ಮೈಲುಗಳಾಚೆ ನಮ್ಮ ಮನೆಯಿತ್ತು. ಅದು ಬಲು ದೀರ್ಘವಾದ ನಡಿಗೆ ನನ್ನ ಜತೆಗೆ ನೂರು ಯೋಚನೆಗಳಿದ್ದವು.‍ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು. ಅದನ್ನು ತಡೆಯಲು ನಾನು ಯತ್ನಿಸಲಿಲ್ಲ. ಅದು ನನ್ನದಲ್ಲದ ಕಣ್ಣೀರು. ಅವನ್ನು ಸುರಿದುಹೋದರೇ ನನಗೆ ಹಿತ. ಆ ದೊಡ್ಡಮನು‍‍ಷ್ಯರ ಒಳ್ಳೆಯ ಗುಣಗಳ ಬಗ್ಗೆ ನನಗೆದ್ದ ನಂಬಿಕೆ ಸುಳ್ಳಾಗಿತ್ತು. ಭ್ರಮೆ ತೊಲಗಿತ್ತು. ಇಷ್ತ್ಟರವರೆಗೆ ತಿಳಿಯದೆ ಮೋಸಹೋದೆನಲ್ಲಾ ಎಂದು ದುಃಖಿಸಿದೆ. ನಾನು ಮೋಸಹೋದುದರಿಂದ ನನಗೆ ಅವಮಾನವಾಗಿತ್ತು. ಆ ಅವಮಾನ ತೊಳೆದುಹೋಗೆಲೆಂದು ನಾನು ಕಣ್ಣೇರು ಸುರಿಸಿದೆ.

ಆ ಸಂಜೆ ಸಹಾಯದ ಯಾಚನೆಗಾಗಿ ದೊಡ್ಡವರ ಮನೆಗೆ ನಾನು ಹೋಗಲಿದ ವಿಷಯವನ್ನು ತಂದೆಗೆ ಹೇಳಿರಲಿಲ್ಲ. ಸಹಾಯ ತಂದು ಒಮ್ಮೆಲೆ ಅವನನ್ನು ಆಶ್ಚರ್ಯಕ್ಕೂ ಸಂತೋಷಕ್ಕೂ ಗುರಿ ಮಾಡೆಬೇಕೆಂಬುದು ನನ್ನ ಉದ್ದೇಶವಾಗಿತ್ತು. ಈಗ ಏನೂ ಉಳಿದಿರ ಲಿಲ್ಲ.

ಕಂಬಳಿ ಹೊದ್ದು ತಂದೆ ಮಲಗಿದ್ದ. ನಾನು ಮೆಲ್ಲನೆ ಸದ್ದಾಗ ದಂತೆ ಒಳೆಹೋದ ಅದರೆ ಅವನಿಗೆ ನಿದ್ದೆ ಬಂದಿರಲಿಲ್ಲ ಮುಸುಕಿ ನೊಳಗಿಂದಲೆ ಕ್ಷೀಣಸ್ವರದಲ್ಲಿ ಅತ ಕೇಳಿದ.

"ಚಂದ್ರು, ಎಲ್ಗೋಗಿದೆ ಮಗ ? ಟೈಂ ಎಷ್ಟು?"

ನಾನು ಸತ್ಯವನ್ನು ಹೇಳುವಹಾಗಿರಲಿಲ್ಲ. ಸುಳ್ಳು ಬಲು ಸುಲ ಭವಾಗಿ ನನ್ನ ಬಯಿಂದ ಹೊರಡುತ್ತಿತ್ತು.

"ಇಲ್ಲೆ ಇದ್ನಪ್ಪ. ಮೇಷ್ಟ್ರು ಸಿಕ್ಕಿದ್ದರು. ಅವರತಾವ ಮಾತಾಡ್ತಾ ನಿಂತಿದ್ದೆ.

ಆಗ ಘಂಟೆ ಹಾತ್ತಾಗಿತ್ತು. ಅದರೂ,"ಈಗೇನು ಇನ್ನೂ ಎಂಟು ಘಂಟೆ, ಅಷ್ಟೆ,"ಎಂದೆ. ನನ್ನ ತಂದೆಗೆ ಆ ಆಸಾರೋಗ್ಯದ ಸ್ಥಿತಿಯಲ್ಲಿ ಘಂಟೆ ನಿಮಿಷಗಳ ಪರಿಜ್ಞಾನ ಬೇಕಷ್ಟು ಇರಲಿಲ್ಲವೆಂದು ನನಗೆ ಗೊತ್ತಿತ್ತು.

ಅಜ್ಜಿ ತಂದು ಇರಿಸಿದ್ದ ಅನ್ನ ಹುಳಿ ಅಲ್ಲಿದ್ದುವು. ಊಟಕ್ಕೆಂದು ತಂದೆಯನ್ನು ನಾನು ಎಬ್ಬಿಸಿದೆ.

ಕೆಲವು ದಿನಗಳ ಮೇಲೊಮ್ಮೆ ತಂದೆ ಆ ದೊಡ್ಡ ಮನುಷ್ಯರ ವಿಷಯ ಕೇಳಿದ.

"ಅವರ್ನಾದರೂ ಹೋಗಿ ಕೇಳ್ನೋಡ್ಬಾರ್ದ? ನಿನ್ನ ಸ್ಕೂಲ್ ಖರ್ಚಿಗಾದರೂ ಕೊಡ್ಬಹುದು. ನೀನು ಎಲ್ಲಾರು ಒಂದಿಷ್ಟು ಕೆಲಸಾನೂ ನೋಡ್ಕೊಂಡು ಅಜ್ಜಿಗೆ ನಾಲ್ಕು ಬಿಡಿಕಾಸು ತಂದ್ಕೊಟ್ಟೀಯಂತೆ.ನನ್ನ ಯೋಚನೆಬಿಟ್ಬುಡು ಮಗ."

ತನ್ನ ಮನಸಿನಲ್ಲಿದ್ದುದನ್ನೆಲ್ಲಾ ತಂದೆ ಮೆಲ್ಲಮೆಲ್ಲನೆ ಹೊರ ಹಾಕುತ್ತಿದ್ದ. ತಾನು ಬಹಳ ಕಾಲ ಬದುಕುವೆನೆಂಬ ನಂಬಿಕೆಯೇ ಆತನಿಗೆ ಇರಲಿಲ್ಲವೇನೂ. ಆದರೆ ಆತ ವಾಸ್ತವನಾದಿಯಾಗಿದ್ದ. ನನಗೆ ಪರಿಚಿತರಾಗಿದ್ದ ಆ ದೊಡ್ಡ ಮನುಷ್ಯರಿಂದ ನೂರಾರು ರೂಪಾಯಿ ತರುವ ಯೋಚನೆ ಅವನಿಗಿರಲಿಲ್ಲ . ಅವನು ಅಪೇಕ್ಷೆಪಟ್ಟುದು ನನ್ನ ಶಾಲೆಯ ಖರ್ಚಿಗಾಗಿ ಹತ್ತಾರು ರೂಪಾಯಿ.

ನನ್ನ ಅನುಭವವನ್ನು ನಾನು ವಿವರಿಸಿ ಹೇಳಲಿಲ್ಲ. ತಂದೆಗೆ ಸ್ವಲ್ಪವಾದರೂ ನೆಮ್ಮದಿ ಉಳಿಯಲೆಂದು,"ಅವರು ಊರಲ್ಲೆ ಇಲ್ಲ. ಬೊಂಬಾಯಿಗೆ ಹೊರಟುಹೋದರಂತ್ತಪ್ಪಾ" ಎಂದೆ. ಬೊಂಬಾಯಲ್ಲಿ ಏನಿರುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ.ಆದರೆ ದೊಡ್ಡ ಮನುಷ್ಯರು ಹಲವರು ಆ ಊರಿಗೆ ಹೋಗುತ್ತಿರಬಹುದೆಂದು ಊಹಿಸಿದ್ದೆ.

ನನ್ನ ಮಾತು ಕೇಳಿ ತಂದೆ ತಣ್ಣಗಾದೆ.

ನಾನು ಕೆಲಸ ಹುಡುಕಿದೆ. ಹಿಂದಿನ ವರ್ಷ ನನ್ನ ಸಹಪಾಠಿಯಾಗಿದ್ದ ಬಡಹುಡುಗನೊಬ್ಬ ಪತ್ರಿಕೆ ಮಾರುತ್ತಿದ್ದ. ಆದರಿಂದ ಒಮ್ಮೊಮ್ಮೆ ದಿನಕ್ಕೆ ನಾಲ್ಕು ಆರು ಆಣೆಗಳಷ್ಟು ಅವನಿಗೆ ಸಂಪಾದನೆ ಯಾಗುತ್ತಿತ್ತು.<

ಒಂದು ದಿನ ಅವನೊಡನೆ ನನ್ನ ದಾರುಣ ಕಥೆಯನ್ನು ಹೇಳಿ ಕೊಂಡೆ.

"ಸ್ಕೂಲು ಬಿಟ್ಬುಟ್ನಪ್ಪಾ "ಎಂದೆ.

ವಾಸ್ತವವಾಗಿ ಓದು ಬಿಟ್ಟುಬಿಡುವ ತೀಮಾರ್ನಕ್ಕೆ ನಾನು ಬಂ ದಿರಲಿಲ್ಲ. ಇಂದಲ್ಲ ನಾಳೆ ಮತ್ತೆ ಶಾಲೆಗೆ ಹೋಗುವುದು ಸಾಧ್ಯವಾ ಗುವುದೆಂದೇ ಭಾವಿಸಿದ್ದೆ. ಆದರೂ ಮಾತು ಹಾಗೆ ಬಂದಿತು......ಆ ಮಾತು ಮಾತ್ರ ಸುಳ್ಳಾಗಲಿಲ್ಲ.

ಆ ಸಹಪಾಠಿ ತುಂಬ ಯೋಚಿಸಿದ. ನಾನೂ ಪತ್ರಿಕೆ ಮಾರಲು ಬಂದರೆ ಅವನ ಸಂಪಾದನೆಗೆ ತಡೆ ಒದಗುವುದು . ಮಾರಾಟದ ಕ್ಷೇತ್ರದಲ್ಲಿ ಇನ್ನೊಬ್ಬ ಸ್ಪರ್ಧಿ ಬಂದು ಅವನಪಾಲಿನ ತುತ್ತಿನಲ್ಲಿ ಒಂದಂಶ ಕಡಿಮೆಯಾಗುವುದು. ಅವನು ದೀರ್ಘ ಕಾಲ ಯೋಚಿಸಿದ.

ಎರಡು ಮೂರು ದಿನಗಳಾದ ಮೇಲೆ ಅವನು ನನ್ನನ್ನು ಎರಡು ಪತ್ರಿಕೆಗಳ ಏಜೆಂಟರಲ್ಲಿಗೆ ಕರೆದೊಯ್ದ. ನಾನು ಆ ದಿನದಿಂದ ಪತ್ರಿಕೆ ಮಾರುವ ಹುಡುಗನಾದೆ. ನನ್ನ ಸಹಪಾಠಿಯ ಹೆಸರು ಶೇಷಗಿರಿ. ಶೇಷನಿದ್ದ ಜಾಗದಲ್ಲಿ ನಾನು ಪತ್ರಿಕೆ ಮಾರಬಾರದು ಎಂಬುದು ನಮ್ಮೊಳಗಿನ ಒಪ್ಪಂದವಾಗಿತ್ತು. ಹಾಗೆ ಕೊಟ್ಟ ಮಾತಿಗೆ ನಾನೆಂದೂ ಮಿರಿ ನಡೆಯಲಿಲ್ಲ.

ಮನೆಗೆ ಧಾವಿಸಿ ಬಂದು ತಂದೆಗೆ ಈ ವಿಷಯ ತಿಳಿಸಿದೆ.

"ಇನ್ನು ಸರಿಹೋಗುತ್ತಪ್ಪ, ಕೆಲಸ ಸಿಕ್ತು. ಸಂಪಾದಿಸ್ತೀನಿ. ಅಜ್ಜಿಗೂ ಕೊಡ್ತೀನಿ. ನಿಂಗೂ ಔಷಧಿ ತರ್ತೀನಿ ......"

ತಂದೆ ಸಂತೋಷದಿಂದ ಮುಗುಳ್ನಕ್ಕ . ಆ ನಗುವನ್ನು ಕಂಡು ನನ್ನ ಮುಖ ಅರಳಿತು.

"ಬೆಳಿಗ್ಗೆ ಮತ್ತು ಸಂಜೆ ಪೇಪರ್ ಮಾರೋ ಕೆಲಸ" ಎಂದು ವಿವರಿಸಿದೆ.

"ಸ್ಕೂಲು ಮಾತ್ರ ತಪ್ಪಿಸ್ಕೋಬಾರದು ಚಂದ್ರು. ಇನ್ನು ಎರಡೇ ವರ್ಷ. ಆಮೇಲೆ ಯಾರದ್ದಾದರು ಸಹಾಯ ತಗೊಂಡು ಕಾಲೇಜಿಗೆ ಕಳಿಸ್ತೀನಿ.

ಅವನ ಬಯಕೆಗಳನ್ನು ಕಂಡು ನನ್ನ ಹೃದಯ ಭಾರವಾಯಿತು.

ಹತ್ತು ವರ್ಷಗಳ ಕಾಲ ಮಣ್ಣುಹೊತ್ತಿದ್ದ ವಿದ್ಯಾಸರಸ್ವತಿಯ ಗುಡಿಗೆ ಉದ್ದಂಡ ನಮಸ್ಕಾರ ಹಾಕಿದ್ದಾಯಿತೆಂದು ಹೇಳಿಬಿಡಲೆ? ಎಂದು ಯೋಚಿಸಿದೆ.ಹಾಗೆ ಹೇಳಿದ್ದರೆ ತಂದೆಗೆ ಕಳವಳವಾಗುತ್ತಿತ್ತು.ಅವನ ಕಾಹಿಲೆಗೆ ಅದು ಪ್ರತಿಕೂಲವಾಗುತ್ತಿತ್ತು. ನಾನು ಸತ್ಯವನು ಮರೆಮಾಚಿದೆ.

"ಹೂನಪ್ಪಾ,ಹಾಗೇ ಮಾಡ್ತೀನಿ. ಸಂಜೆ ಬೆಳಿಗ್ಗೆ ಸಂಪಾದನೆ. ಹಗಲೊತ್ತು ಸ್ಕೂಲು.ಹಾಗೇ ಮಾಡ್ತೀನಪ್ಪ."ನನ್ನ ದುಡಿತದ ದಿನಗಳ ಆರಂಭವಾದುವು. ಶೇಷಗಿರಿ ನನಗೆ ನೆರವಾಗಿದ್ದ ನಿಜ ಆದರೆ ಊರಲ್ಲಿ ಬೇರೆಯೂ ಕೆಲವರು ಹುಡುಗರಿದ್ದರು.ಆವರು ತಮ್ಮ ಕ್ಷೇತ್ರಕ್ಕೆ ಬಂದ ಹೊಸಬನಾದ ನನ್ನನ್ನು ಮನಸಾರೆ ದ್ವೇಷಿಸಿದರು.

"ಕಲ್ತನ್ನೆ ಬೇರೆ. ಹೈ ಸ್ಕೂಲೆಗೆ ಹೋಗ್ಬಂದನ್ನೆ. ದೊಡ್ದ ಮನುಷ್ಯ."

ಆ ಮಾತುಗಳು ನನ್ನನ್ನು ಕುಟುಕುತ್ತಿದ್ದವು ಒಂದು ದಿನ ಅವರಲ್ಲೊಬ್ಬ ಪ್ರತ್ಯೇಕವಾಗಿದ್ದಾಗ ಅವನ ಬಳಿ ಹೋಗಿ,"ಏನಾದರೂ ಅಂದ್ಗಿಂದೀಯಾ ಜೋಕೆ," ಎಂದೆ. ಆ ದಿನ ಅವನು ಮಾತನಾಡಲಿಲ್ಲ. ಅದರೆ ಮರುದಿನ ಮದ್ಯಾಹ್ನದ ಹೊತ್ತು ಬಳಗದೊಡನೆ ಅವನು ಬಂದು ನನ್ನ ಪಕ್ಷದಲ್ಲಿ ಯಾರೂ ಇರಲಿಲ್ಲ ಒಬ್ಬನಾದ ನಾನು ಆ ನಾಲ್ವರನ್ನು ಇದಿರಿಸಿದೆ. ನನ್ನಲ್ಲಿ ಉಳಿದಿದ್ದ ಬೆಳಗ್ಗಿನ ಮೂರು ಪತ್ರಿಕೆಗಳನ್ನು ಅವರು ಕಿತ್ತುಕೊಂಡರು.ದುಡ್ಡು ಚೆಲ್ಲಾಪಿಲ್ಲಿಯಾಯಿತು. ಒಂದೇ ಒಂದಾಗಿದ್ದ ನನ್ನ ಷರಟು ಸ್ವಲ್ಪ ಹರಿಯಿತು ನಾನು ಆತ್ಮರಕ್ಷಣೆಗಾಗಿ ಅವರಮೇಲೆ ಕೈ ಮಾಡಿದೆ ಹಿಂದೆ ಶ್ರೀಮಂತ ಪುತ್ರನೊಬ್ಬನನ್ನು ಹಾಸಿಗೆ ಹಿಡಿಸಿದ್ದ ವೀರ ನಾನೆಂಬುದು ನಿಜ. ಆದರೆ ಈ ಹುಡುಗರು ಶ್ರೀಮಂತ ಪುತ್ರರಾಗಿರಲಿಲ್ಲ. ಇವರೂ ನನ್ನಂತೆಯೇ ಬಡವರು. ಆದರೆ ಅಸೂಯೆಯ ಹಸಿವಿನ ಸೈತಾನ ಅವರ ಒಳಹೊಕ್ಕಿದ್ದ. ನಾಲ್ಕು ಕಾಸು ದೊರೆಯಲೆಂದು ಅವರು ಜಗಳ ಆಡುತ್ತಿದ್ದರು.ಅಥವಾ ತಮ್ಮ ದುಃಖ ನಿರಾಶೆಯನ್ನು ಮರೆಸ ಲೆಂದು ಒಬ್ಬರನ್ನೊಬ್ಬರು ಹರಿದು ತಿನ್ನುತ್ತಿದ್ದರು.

ಆ ಜಗಳದಲ್ಲಿ ನಾನು ಸೋಲಲೂ ಇಲ್ಲ,ಗೆಲ್ಲಲೂ ಇಲ್ಲ. ಅವರು ನಾಲ್ವರು, ನಾನು ಒಬ್ಬ. ಆ ದೃಷ್ಟಿಯಲ್ಲಿ ಅದು ನನ್ನ ವಿಜಯವೇ ಎನ್ನಬಹುದು.

ಅವರು ನನಗೆ ಇನ್ನೊಂದು ಅವಕಾಶ ಒದಗಿಸಿಕೊಟ್ಟರು. ಈ ಸಾರೆ ಹೆಚ್ಚು ಅನುಭವಿಯಾಗಿ ನಾನು ಬಂದಿದ್ದೆ. ಪತ್ರಿಕೆ ಹರಿಯಲಿಲ್ಲ. ದುಡ್ಡು ಚೆಲ್ಲಿಹೋಗಲಿಲ್ಲ ಷರಟು ಅವರ ಕೈಗೆ ಸಿಗಲಿಲ್ಲ. ಆದರೆ ನನ್ನ ಮುಷ್ಟಿಯ ರುಚಿಯನ್ನು ಅವರು ಕಂಡರು.

ನೀವು ನಂಬುವಿರೋ ಇಲ್ಲವೋ. ಆ ದಿನದಿಂದ ನಾನು ಆ ಬಳಗದ ಸದಸ್ಯನಾದೆ.ಅದಕ್ಕೆ ಕಾರಣ ಹುಡುಕಬೇಕೆ? ನಾವೆಲ್ಲಾ ಬಡವರಾಗಿದ್ದೆವು.ನಾವೆಲ್ಲಾ ಒಂದು ಗುಣದಿಂದ ಸ್ವಭಾವದಿಂದ ರೂಪುಗೊಂಡಿದ್ದೆವು. ನಾವು ಒಗ್ಗಟ್ಟಾಗಿ ಇರುವುದು ಸಹಜವಾಗಿತ್ತು.

.......ಹಾಗೆ ಐದು ತಿಂಗಳುಗಳು ಕಳೆದುವು. ದೀಪಾವಳಿಯ ಹಬ್ಬ ಬಂದು ಮುಗಿಯಿತು.

"ರಜಾದಲ್ಲೂ ಓದು ಚಂದ್ರು. ಚೆನ್ನಾಗಿ ಓದಿ ಜಾಸ್ತಿ ಮಾರ್ಕು ಪಡೀಬೇಕು,"ಎನ್ನುತ್ತಿದ್ದ ತಂದೆ.

ನಾನು ಯಾವುದೊ ಪುಸ್ತಕಗಳನ್ನು ಕೈಗೆತ್ತಿಕೊಂಡು ಕುಳಿತಿರು ತ್ತಿದ್ದೆ.ಪರಿಚಯದ ಒಬ್ಬಿಬ್ಬರಿಂದ ಇಂಗ್ಲಿಷ್ ಕತೆಕಾದಂಬರಿಗಳನ್ನು ಕೇಳಿ ತರುತ್ತಿದ್ದೆ. ಈ ಪುಸ್ತಕಗಳೆಲ್ಲಾ ಶಾಲೆಯ ಓದಿಗೆ ಸಂಬಂಧಿ ಸಿದ್ದಿರಬೇಕೆಂದು ತಂದೆ ಭಾವಿಸುತ್ತಿದ್ದ. ಬೆಳ್ಳಿಗೆ ಮತ್ತು ಸಂಜೆಯ ಆಂತರದೊಳಗೆ ಮಾರಾಟಕ್ಕೋಸ್ಕರ ಪಡೆಯುತ್ತಿದ್ದ ಪತ್ರಿಕೆಗಳನ್ನೂ ನಾನು ಓದುತ್ತಿದ್ದೆ. ಹೀಗಾಗಿ ಮೆದುಳಿಗೆ ತುಕ್ಕು ಹಿಡಿಯಲಿಲ್ಲ.ಆದರೆ ನಾನು ಪರೀಕ್ಷೆ ಕಟ್ಟ ಉತ್ತೀರ್ಣನಾಗುವುದು ಸಾಧ್ಯವಿರಲಿಲ್ಲ

ಆ ಸಂಜೆ, ನಾನು ಎಂದೆಂದಿಗೂ ಮರೆಯಲಾಗದ ಕ್ರೂರ ವಿಷ ಗಳಿಗೆಯಾಗೆತ್ತು. ನಾನು ಪತ್ರಿಕೆಗಳ ಮಾರಾಟ ಮುಗಿಸಿ, ತಂದೆಗಾಗಿ ಸೇಬು ಹಣ್ಣುಗಳನ್ನು ಕೊಂಡುಕೊಂಡು ಅದೇ ಆಗ ಮನೆಗೆ ಹಿಂತಿರುಗಿದ್ದೆ. ತಂದೆ ಮಲಗಿರಲಿಲ್ಲ. ಕಂಬಳಿ ಹೊದ್ದುಕೊಂಡು ಎದ್ದು ಕುಳಿ ತಿದ್ದ,-ನನ್ನ ಆಗಮನವನ್ನೇ ಇದಿರುನೋಡುತ್ತಿದ್ದನೇನೊ ಎನ್ನುವ ಹಾಗೆ. ನಾನು ಕೆಳಕ್ಕೆ ಇರಿಸಿದ ಸೇಬು ಹಣ್ಣುಗಳನ್ನು ಆತ ನೋಡಿದ.ಆತ ಓದಲೆಂದು ಮನೆಗೆ ತಂದಿದ್ದ ಒಂದು ಕನ್ನಡ ಪತ್ರಿಕೆಯನ್ನೂ ನೋಡಿದ. ಆದರೆ ಮಾತನಾಡಲಿಲ್ಲ.

"ಹೊರಕ್ಕೆ ಚಳಿ ಗಾಳಿ ಬೀಸ್ತಾ ಅದೇ. ಕದ ತೆರೆದಿಟ್ಟು ಯಾಕೆ ಕೂತ್ಕೂಂಡಿದೀಯಾ? ಬೆಚ್ಚಗಿರ್ಬೇಕೂಂತಲ್ವಾ ಡಾಕ್ಟರು ಹೇಳಿದ್ದು?"

"ಹೂಂ" ಎಂದು ತಂದೆ ನಿಟ್ಟುಸಿರು ಬಿಟ್ಟ. ಅಸಮಾಧಾನದ ಛಾಯೆ ಇತ್ತು ಆ ಸ್ವರದಲ್ಲಿ.

"ಯಾಕಪ್ಪಾ ಏನಾಯ್ತು?"

ತಂದೆ ಸುಮ್ಮನಿದ್ದ, ಸ್ವಲ್ಪ ಹೊತ್ತಿನ ಬಳಿಕ ಅವನ ಗಡಸು ಸ್ವರ ಕಂಪಿಸುತ್ತ ಕಂಪಿಸುತ್ತ ಹೊರಬಿತ್ತು.

"ಚಂದ್ರು, ಸತ್ಯ ಹೇಳ್ಬಿಡು. ನೀನು ಯಾಕೆ ಸ್ಕೂಲು ಬಿಟ್ಬುಟ್ಟೆ? ನಿಂಗೆ ಓದೋಕೆ ಇಷ್ಟ ಇರ್ಲಿಲ್ವ?"

'ಸ್ಕೂಲು ಬಿಟ್ಟುದು' ಸುಳ್ಳೆಂದು ಆಲ್ಲಗಳೆಯುವುದರಲ್ಲಿ ಅರ್ಥ ವಿರಲಿಲ್ಲ.ಆದರೆ ನಾನು ಓದುತ್ತಿಲ್ಲವೆಂದು ತಂದೆಗೆ ಹೇಳಿದವರು ಯಾರು-ಯಾರು?

"ಯಾರಪ್ಪಾ ಹಾಗೆ ನಿಂಗೆ ಹೇಳ್ದೋರು?"

"ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡು."

"ಯಾಕೆ? ಯಾಕೆ ಸುಮ್ಮಗಿದ್ದೀಯಾ?"

"ಅಪ್ಪಾ,ಅಪ್ಪಾ"

"ಏನು ಹೇಳ್ಬಾರ್ದೇನು? ಎಲ್ಲರಂಗೇನೆ ನಾನೂ ಪೋಲಿಯಾ ದೇಂತ ಹೇಳ್ಬಾರ್ದೇನು?"

"ಇಲ್ವಪ್ಪ ಇಲ್ಲ............."

ನನಗೆ ಅಳು ಬಂತು. ನಾನು ಮೆಲ್ಲೆನೆ ತಂದೆಯ ಬಳಿ ಸಾರಿ ಕುಳಿತೆ. ಆತ ಕಂಬಳಿಯಿಂದ ಕೈ ಹೊರತೆಗೆದು ನನ್ನ ತಲೆಗೊದಲು ನೇವರಿಸಿದ. ಆದರೆ ಮಾತನಾಡಲಿಲ್ಲ.

ಅಳುತ್ತಳುತ್ತಾ ನಾನು ಹೇಳಿದೆ. ದೊಡ್ಡ ಮನುಷ್ಯ ರಾಮ ಸ್ವಾಮಿಯವರಲ್ಲಿಗೆ ಹೋದುದರಿಂದ ಮೊದಲಾಗಿ, ಶಾಲೆಯನ್ನು ಬಿಟ್ಟುಬಿಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿ ಬಂದ ವಿಷಯ ವನ್ನೆಲ್ಲಾ ಹೇಳಿದೆ. ದಿನವೂ ಎಂಟು ಹತ್ತಾಣೆ ಸಂಪದನೆಯಾಗು ತ್ತಿತ್ತೆಂದು ನಾನು ಹೇಳಿದ್ದುದು ಸುಳ್ಳೆಂಬುದನ್ನು ತಂದೆ ತಿಳಿದ.

"ನನ್ತಾವ ಸುಳ್ಳು ಹೇಳ್ದೆ ಅಲ್ವ? ತಂದೆ ಎದುರಲ್ಲಿ ಸುಳ್ಳು ಹೇಳ್ದೆ, ಅಲ್ವ ಚಂದ್ರು"ನಾನೇನು ಹೇಳಬೇಕು?

"ಸಿಗೋ ದುಡ್ದು ಅಜ್ಜಿಗೆ ಕೊಡೋಕು ಸಾಲ್ತಿರಲಿಲ್ಲ. ಅಪ್ಪ ಇಂಜ‍ಕ್ಷನ್ನೂ ತರೋಕಾಗಲಿಲ್ಲ. ಸ್ಕೂಲಿಗೆ ಬೇರೆ ಎಲ್ಲಿಂದ ಕೊಡೊದು?ಅದಕ್ಕೆ ಬಿಟ್ಬಿಟ್ಟೆ. ನಂಗೆ ಓದ್ಬೇಕೂಂತ ಆಸೆ ಇತ್ತಪ್ಪ.ಆದರೆ ಏನ್ಮಾಡೋದು? ಬಿಡದೆ ಬೇರೆ ಹಾದಿಯಿತ್ತಾ?"

ಆ ಮಾತಿನಿಂದ ಅವನಿಗೆ ಸಮಾಧಾನವಾಗಲಿಲ್ಲ.

ತಂದೆ ಬಹುವಾಗಿ ನೊಂದುಕೊಂಡಿದ್ದನೆಂಬುದು ಸ್ಪ‍‍‍‌‌‌‌‌‌‌‌‌ಷ್ಟವಾಗಿತ್ತು. ಆ ನೋವಿನಿಂದ ಆತ ಚೇತರಿಸಿಕೊಳ್ಳಲು ದೀರ್ಘಕಾಲ ಬೇಕೆಂಬುದು ನನಗೆ ತಿಳಿದಿತ್ತು. ಆತ ಆ ಹಗಲು ಬೀದಿಗಿಳಿದು ಸ್ವಲ್ಪ ದೂರ ನಡೆದು ಹೋಗಿದ್ದನಂತೆ. ನಮ್ಮ ಶಾಲೆಯ ಕನ್ನಡ ಪಂಡಿತರು ಅವನ ಕಣ್ಣಿಗೆ ಬಿದ್ದರಂತೆ.......

ತಂದೆ ಅವರನ್ನು ನಿಲ್ಲಿಸಿ, "ನಮಸ್ಕಾರ ಸ್ವಾಮಿ," ಎಂದ.

ಅವರು ಪ್ರತಿ ನಮಸ್ಕಾರ ಕೊಟ್ಟರು. ಆದರೆ ಎಂದೋ ನೋಡಿದ್ದ ನನ್ನ ತಂದೆ ಗುರುತು ಅವರಿಗೆ ಸಿಗಲಿಲ್ಲ.

'ಯಾರು-ಯಾರು?" ಎಂದರು ಅವರು.

"ನಾನು. ಚಂದ್ರೂ ತಂದೆ. ನಿಮ್ಮ ಸ್ಕೂಲಿಗೆ ಬರ್ತಾನಲ್ಲ ಚಂದ್ರಶೇಖರ--ಅವನ ತಂದೆ."

" ಯಾವ ಚಂದ್ರು, ಯಾವ ಚಂದ್ರಶೇಖರ ? "

ತಂದೆಗೆ ತುಂಬ ದಿಗಿಲಾಯಿತು. ಆಶ್ಚರ್ಯವೂ ಆಯಿತು. ಚಂದ್ರಶೇಖರನ ಹೆಸರು ಕನ್ನಡ ಉಪಾಧ್ಯಾಯರಿಗೆ ತಿಳಿಯದೆಂದರೇನು ? ಆದರೆ ಸ್ವಲ್ಪ ಹೊತ್ತು ಯೋಚಿಸಿದ ಮೇಲೆ ಆ ಉಪಾಧ್ಯಾ ಯರು ನೆನಪಾದವರ ಹಾಗೆ ಬಾಯಿ ತೆರೆದರು.

" ಓ ಚಂದ್ರಶೇಖರನಾ?" ಎಂದರು.

ಹಾಗೆಯೇ ಸ್ವರವೇರಿಸಿ, " ಏನಯ್ಯ ಸ್ಕೂಲು ಬಿಡಿಸ್ಬುಟ್ಟೆ ಯಲ್ಲಯ್ಯ-ಹೀಗ್ಮಾಡಬಹುದಾ ? " ಎಂದನು.

" ಸ್ವಾಮಿ ಸ್ವಾಮಿ, ಯಾಕೆ ಯಾಕೆ ? .... ....ನಮ್ಮ ಚಂದ್ರು. ಸ್ಕೂಲಿಗೆ ಬರ್ತಾ ಇಲ್ವ ? ಸ್ಕೂಲು ಬಿಟ್ಟುಟ್ನ ? "

ಈಗ ದಿಗಿಲು ಆಶ್ಚರ್ಯಗಳ ಅನುಭವವಾದುದು ಕನ್ನಡ ಪಂಡಿತರಿಗೆ.

"ಎಲ್ಲಿ? ಈ ವರ್ಷ ಒಂದು ಹತ್ತು ದಿವಸ ಬಂದ್ನೊ ಇಲ್ವೊ. ಆಮೇಲೆ ಶಾಲೆ ಬಿಟ್ಬಿಟ್ಟ. ಅನ್ಯಾಯ! ಅನ್ಯಾಯ ! "

ಯಾರಿಗೆ ಯಾರು ಅನ್ಯಾಯ ಮಾಡಿದ್ದರು ? ಯಾರಿಗೆ ಅನ್ಯಾಯವಾಗಿತ್ತು ? ಹಾಗೆ ಯೋಚಿಸುವುದರಲ್ಲಿ ಅರ್ಥವಿರಲಿಲ್ಲ.

ನನ್ನೆದುರಿಗಾದರೋ ಕಾಣುತ್ತಲಿದ್ದುದೊಂದೋ---ಅದು ನನ್ನ ತಂದೆಗೆ ನಾನು ಬಗೆವ ಅನ್ಯಾಯ.

ಹಾಗೆ ನಡೆದುದನ್ನು ಆ ಬಳಿಕ ಮನೆಯಲ್ಲಿ ತಂದೆ ನನಗೆ ವಿವರಿಸಿದಾಗ, ನನ್ನ ಪ್ರೀತಿಯ ಉಪಾಧ್ಯಾಯರಾಗಿದ್ದ ಆ ಪಂಡಿತರನ್ನೂ ತುಂಬ ನೋವು ಉಂಟಾಗುವ ಸುದ್ದಿ ಕೇಳಿ ಸಹಿಸಿಕೊಂಡಿದ್ದ ತಂದೆಯನ್ನೂ ನಾನು ಮನಸ್ಸಿನಲ್ಲೇ ಚಿತ್ರಿಸಿಕೊಂಡೆ. ಒಂದಲ್ಲ ಒಂದು ದಿನ ನನ್ನ ರಹಸ್ಯ ಬಯಲಾಗುವುದೆಂದು ನನಗೆ ಗೊತ್ತಿತ್ತು. ಆದರೆ ಇಷ್ತು ಬೇಗನೆ ಹಾಗಾಗುವುದೆಂದು ಯಾರು ಭಾವಿಸಿದ್ದರು ?

ತಂದೆಯ ಕಣ್ಣುಗಳು ತೋಯ್ದಿದ್ದುವು. ಬಹಳ ದಿನಗಳ ಮೇಲೆ ಆತನ ಕಂಬನಿಯನ್ನು ಕಂಡೆ. ಹಿಂದೆಯಾಗಿದ್ದರೆ ಅವನು ಮತ್ತೂ ಒಂದಷ್ಟು ಮಾತನಾಡುತ್ತಿದ್ದ. ಆರಂಭದಿಂದಲೂ ತನ. ಮೇಲೆ ವಕ್ರಿಸಿಕೊಂಡೇ ಇದ್ದ ವಿಧಿಯನ್ನು ಆತ ಹಳಿದರೂ ಹಳಿದನೇ. ಹಾಗೆ ಮಾತನಾಡಿದಾಗ ಯಾವಾಗಲೂ ಅವನಿಗೆ ಸಮಾಧಾನವೆನಿ ಸುತ್ತಿತ್ತು. ಆದರೆ ಈ ದಿನ ತಂದೆ,ತುಟಿಗಳನ್ನು ಬಿಮ್ಮನೆ ಬಿಗಿದು ಕುಳಿತ.

ಅವನ ಮೌನ ಅಸಹನೀಯವಾಗಿತ್ತು. ಮಾತು ನಿಲ್ಲಿಸಿ ಆತ ಮೌನ ಸಮಾಧಿಯಲ್ಲಿ ಮುಳುಗಿದನೆಂದರೆ, ತಡೆಯಲಾಗದ ನೋವಿನಿಂದ ಆ ಹೃದಯ ಜರ್ಜರಿತವಾಗಿತ್ತೆಂದು ನಾನು ತಿಳಿದು ಕೋಳ್ಳುತ್ತಿದ್ದೆ.

ನಾನು ಸದ್ದಿಲ್ಲದೆ ಎದ್ದು ದೀಪ ಹಚ್ಚಿದೆ. ಅದರ ಸೊಡರು ಗಾಳಿಯಲ್ಲಿ ತೊರಾಡುತ್ತಿತ್ತು. ಕ್ಯಾಲೆಂಡರಿನ,ಇನೋಂದು ಚಿತ್ರದ,ತೂಗುಹಾಕಿದ್ದ ಬಟ್ಟೆ ಬರೆಯ, ನೆರಳುಗಳೆಲ್ಲ ಗೋಡೆಯಮೇಲೆ ನರ್ತಿಸುತ್ತಿದ್ದುವು.ವರ್ತನೆಯ ಹಾಲು ಒಯ್ದು ಕೋಡಲು ತಡವಾಯಿ ತೆಂದು ನಾನು ಲಗುಬಗೆಯಿಂದ ಹೊರಕ್ಕಿಳಿದೆ.ಅದ್ದಕ್ಕೆ ಸರಿಯಾಗಿ ಅಜ್ಜಿ ನನ್ನನ್ನು ಕರೆಯುತ್ತಿದ್ದರು.

"ಚಂದ್ರೂ........ಬಂದೈನೋ ಮರಿ........?"

ನಮ್ಮ ಗುಡಿಸಿಲಿನಲ್ಲಿ ದೀಪ ಹಚ್ಚಿದ್ದರೆ ನಾನು ಬಂದಿದ್ದೆ ಎಂದರ್ಥ. ಆಗ ಅಜ್ಜಿ ಮರಿಯನ್ನು ಕೂಗುವರು. ಅವರ ಪಾಲಿಗೆ ನಾನು ಯಾವಗಲೂ ಮರಿಯೇ.ವರ್ಷ ಆರಾದರೇನು, ಹದಿನಾ ರಾದರೇನು?ನಾನು ಯಾವಗಲೂ ಅಜ್ಜಿಯ ದೃಷ್ಟಿಯಲ್ಲಿ ಮರಿಯೇ.

ಮುಂದೆಯೂ ಅಷ್ಟೆ.ನಾನು ಕೆಟ್ಟುಹೋದೆನೆಂದು ನಾಲ್ಕು ಜನ ಬಂದು ಅಜ್ಜಿಗೆ ಹೇಳಿದಾಗಲೂ ಅವರು ಮರಿಯಬಗ್ಗೆ ಅವಿಶ್ವಾಸ ತಳೆಯಲಿಲ್ಲ.ಪೋಲೀಸರು ಬಂದು ವಿಚಾರಿಸಿದಾಗ, ಮರಿಯಮೇಲೆ ಆರೋಪಹೊರಿಸಿದ ಆ ಜನರನ್ನು ಅವರು ಶಪಿಸಿದರು.

ಪೋಲೀಸರು-

......ರಾತ್ರಿ ಹನ್ನೊಂದು ಹೊಡೆಯಲು ಇನ್ನು ಸ್ವಲ್ಪ ಹೊತ್ತಿದೆ. ಈ ದಿನ ಬೆಳಗು ಮುಂಜಾನೆಯಿಂದ ನಾನು ಬರೆಯುತ್ತ ಬಂದಿದ್ದೇನೆ. ಎಂದೂ ಇಷ್ಟು ಬರೆದವನಲ್ಲ. ಕೈ ಬೆರಳುಗಳು ನೋಯುತ್ತಿವೆ. ಮಧ್ಯಾಹ್ನದ ನಿದ್ದೆಯನ್ನೂ ಬಿಟ್ಟುಕೊಟ್ಟು, ಹರಟೆಗೂ ಹೋಗದೆ,ದಿನದ ಪತ್ರಿಕೆಯನ್ನೂ ಓದದೆ, ನಾನು ಈ ಆತ್ಮವೃತ್ತವನ್ನು ಬರೆಯುತ್ತಿದ್ದೇನೆ.

ಇನ್ನೊಂದು ವಿಷಯ ಬರೆದು ನಾನು ವಿರಮಿಸಬೇಕು. ಮನು ಷ್ಯನಿಗೆ ನಿದ್ದೆ ಅಗತ್ಯ. ಮುಂದಿನ ವಾರದ ಮಾತು ಮುಂದೆ. ಆದರೆ ಸದ್ಯಃ ಆತ್ಮವೃತ್ತ ವನ್ನು ಬರೆಯುತ್ತಿದ್ದೇನೆ. ಆ ಬರವಣಿಗೆ ಸಾಧ್ಯವಾಗುವಂತೆ , ಇನ್ನು ಆರು ದಿನಗಳಲ್ಲಿ ಮುಕ್ತಾಯವಾಗುವಂತೆ, ನಾನು ಕೈಗೂ ಮೆದುಳಿಗೂ ವಿಶ್ರಾಂತಿ ಕೊಡಲೇಬೇಕು.

ಆದರೆ,ಈ ದಿನ ಹೇಳಲು ಉಳಿದಿರುವ ಈ ವಿಷಯವನ್ನು ಹೇಗೆ ಬರೆಯಲಿ__ಹೇಗೆ ಬರೆಯಲಿ?

ನನ್ನ ತಂದೆ ಮತ್ತು ನನ್ನ ಅಜ್ಜಿ.... ....

ಆ ಪೋಲೀಸರು.... .... ....

__ಆ ಘಟನೆ ನಡೆದುದು ಹೀಗೆ. ನಾನು ಶಾಲೆಬಿಟ್ಟ ಸಂಗತಿ ತಂದೆಗೆ ತಿಳಿದು ಕೆಲವು ತಿಂಗಳುಗಳಾಗಿದ್ದುವು. ಆತ ಸೊರಗುತ್ತಲೇ ಇದ್ದ. ಗುರುತು ಸಿಗದ ಹಾಗೆ ಬರಬರುತ್ತ ಬರಿಯಕಡ್ಡಿಯಾಗುತ್ತಿದ್ದ.

ಆ ಸಂಜೆ ಬೀದಿಯ ದೀಪಗಳು ಹತ್ತಿಕೊಂಡ ಹೊತ್ತಿಗೇ ನನ್ನ ಕೈಯಲ್ಲಿ ಇನ್ನೂ ಉಳಿದಿದ್ದ ಕೆಲವು ಪತ್ರಿಕೆಗಳನ್ನು ಮಾರಿ ಮುಗಿಸುವು ದಕ್ಕೋಸ್ಕರ ಬಸ್ ನಿಲ್ದಾಣದ ಆ ಚೌಕದಲ್ಲಿ ನಾನು ನಿಂತಿದ್ದೆ. ನನ್ನ ಪಕ್ಕದಲ್ಲೆ ಸೊಟು ಧರಿಸಿ, ರುಮಾಲು ಹೊತ್ತು, ಕೈಲಿ ನಡೆಗೋಲು ಹಿಡಿದಿದ್ದ ದೊಡ್ಡಮನುಷ್ಯರೊಬ್ಬರು ನಿಂತಿದ್ದರು

"ಪೇಪರ್ ಬೇಕೆ ಸಾರ್ ?" ಎಂದು ಕೇಳಿದ.

ಅವರು ನನ್ನನ್ನು ಕ್ಷಣಕಾಲ ದುರುಗುಟ್ಟಿ ನೋಡಿದರು. ಪೇಪರು ಬೇಡವೆನ್ನುವುದೇ ಆ ನೋಟದ ಅರ್ಥವಾಗಿತ್ತು.

ನಾನು ಅಲ್ಲಿದ್ದುದು ಎರಡೇ ನಿಮಿಷ. ಅಷ್ಟರಲ್ಲಿ ಆ ಕಳ್ಳತನ ವಾಗಿತ್ತು, ಆ ಹುಡುಗ ನಮ್ಮಿಬ್ಬರಿಗೂ ನಡುವೆ ಹಿಂಬದಿಯಿಂದ ಬಂದು, ಅವರ ಷರಾಯಿಯ ಜೇಬಿಗೆ ಕೈಹಾಕಿ ಹಣದ ಪಾಕೀಟು ಹೊಡೆದಿದ್ದ, ಸಾಮಾನ್ಯವಾಗಿ ಕೋಟಿನ ಬಳಿಗೆ ಹೃದಯಕ್ಕೆ ತಾಗಿಯೇ ಬೆಚ್ಚಗೆ ಇಡಬೇಕಾಗಿದ್ದ ಆ ಚೀಲವನ್ನು ಅದೇಕೆ ಆ ಮಹಾನುಭಾವರು ಷರಾಯಿಯ ಜೇಬಿನಲ್ಲಿ ಇಟ್ಟಿದ್ದರೋ! ನನಗೆ ಆ ಹುಡುಗನ ಪರಿ ಚಯವಿತ್ತು, ಆತ ಹಿಂದೆ ಪತ್ರಿಕೆ ಮಾರುತ್ತಿದ್ದನಂತೆ. ಆದರೆ ವೃದ್ಧೆಯಾದ ತಾಯಿಯನ್ನೂ ತಂಗಿಯನ್ನೂ ಸಾಕಬೇಕಾದ ಅವಶ್ಯತೆ ಹೆಚ್ಚು ಸಂಪಾದನೆಯ ಆ ಕೆಲಸಕ್ಕೆ ಅವನನ್ನು ನೂಕಿತ್ತು.

ಆ ದೊಡ್ಡಮನುಷ್ಯರು, ಮನೆಗೆ ಬೆಂಕಿಹತ್ತಿಕೊಂಡವರು ಕಿರು ಚುವಹಾಗೆ, ಬೊಬ್ಬಿಟ್ಟರು. ಅವರ ನಡೆಗೋಲು ಎತ್ತರಕ್ಕೆ ಆಕಾಶದಲ್ಲಿ ಅತ್ತಿತ್ತ ಬೀಸತೊಡಗಿತು. ಇನ್ನು ದೂರ ಸರಿಯುವುದೇ ಮೇಲೆಂದು ನಾನು ಅಲ್ಲಿಂದ ಹೊರಟೆ. ಆಗ ಅವರು ನನ್ನನ್ನು ಹಿಡಿದರು. ತಪ್ಪಿಸಿಕೊಂಡು ಓಡಿಹೋಗಬಹುದಾಗಿತು, ಆದರೆ ನಿರಪರಾಧಿಯಾದ ನಾನು ಹಾಗೆ ಯಾಕೆ ಮಾಡಬೇಕು? ಎರಡು ನಿಮಿಷಗಳಲ್ಲೆ ಪೋಲೀಸರು ಬಂದು ನನ್ನನ್ನು ತಮ್ಮ ವಶಪಡಿಸಿ ಕೊಂಡರು. ನಿಜವಾಗಿಯೂ ಕದ್ದಿದ್ದ ಹುಡುಗನನ್ನು ನಾನು ತೋರಿಸಿ ಕೊಡಬಹುದಾಗಿತ್ತು, ಆತ ಓಡಿಹೋಗಿರಲಿಲ್ಲ, ಬೀದಿಯ ಆಚೆ ನಿಂತು ನನ್ನನ್ನೆ ನೋಡುತ್ತಿದ್ದ, ಆದರೆ ನಾನು ಹಾಗೆ ಮಾಡಲಿಲ್ಲ. ಆ ಘಟನೆಯಿಂದ ಚಕಿತನಾಗಿದ್ದ ನಾನು ಹುಡುಗ ಮಾಡಿದ್ದುದು ಅಪರಾಧವೆ ಅಲ್ಲವೆ ಎಂದು ಯೋಚಿಸುವ ಸ್ಥಿತಿಯಲ್ಲಿರಲಿಲ್ಲ,

ಪೋಲೀಸರು ಬೀದಿಯಲ್ಲೆ ನನ್ನ ಕೆನ್ನೆಗೆ ಏಟು ಬಿಗಿದರು. ಬೆನ್ನಿಗೆ ಗುದ್ದಿದರು. ಕಳೆದುಹೋದ ಪಾಕೀಟಿಗಾಗಿ ನನ್ನಮೇಲೆ ಕೈಯಾಡಿ ಸಿದರು. ಏನೂ ಸಿಗದೆಹೋದಾಗ ಹಿಡಿದು ಠಾಣೆಗೆ ಬಿಯ್ದರು. ಹಣ ಕಳೆದುಕೊಂಡು, ಹತ್ತಾರೂ ನೂರಾರು ರೂಪಾಯಿಗಳಮಟ್ಟಿಗೆ ಬಡವರಾಗಿದ್ದ ಆ ಶ್ರೀಮಂತರತ್ತ ನಾನು ನೋಡಲೇ ಇಲ್ಲ.

ಪೋಲೀಸು ಠಾಣೆಯಲ್ಲಿ ನನ್ನನ್ನು ಲಾಕಪ್ಪಿನಲ್ಲಿಟ್ಟರು.

ಪೋಲೀಸಿನ ಮಿಾಸೆ ಮುನಿಯಪ್ಪ ಬಹಳ ತಿಳಿದವನ ಹಾಗೆ ಇನ್ಸ್ ಪೆಕ್ಟರ್ ಗೆ ಹೇಳಿದ.

"ಈ ಪೇಪೆರ್ ಮಾರೊ ಹುಡುಗರು ಮಹಾ ಖಾದೀಮರು.........ಇವನ್ನ ನಂಬೊ ಹಂಗೇ ಇಲ್ಲ .ಇವನ ಮನೆ ಸರ್ಚ ಮಾಡ್ಪೇಕು. ಆಗ ಇವನೆಂಥವನು ಅಂಬೋದು ಗೊತ್ತಾಗತ್ತೆ."

ಇನ್ಸ್ ಪೆಕ್ಟರ್ ನಗುತಾ ಕೇಳಿದ.

"ಇವನಿನ್ನೂ ಮನೆಗೆ ಹೋಗಿಲ್ವಲ್ಲೊ ಮುನಿಯಪ್ಪಾ?"

ಮುನಿಯಪ್ಪ ತನ್ನ ಪೇಟವನ್ನು ಮುಂದಕ್ಕೆ ಬಾಗಿಸಿ ಅರ್ದ ಹಣೆ ಯನ್ನು ಮುಚಿಕೊಂಡ.ಅವನ ಹುಬ್ಬುಗಳು ಮೇಲಕ್ಕೆ ಹೋಗಿ ಆ ಪೀಟವನ್ನು ಮುಟ್ಟದುವು. ಬುದ್ಧಿವಂತನಾದ ಮುನಿಯಪ್ಪ ಯೋಚಿಸುತ್ತಿದ್ದ. ಉತ್ತರ ಅವನಿಗೆ ಹೊಳೆಯಿತೇನೊ!

"ಪಾಕೀಟು ಅಲ್ಲ ಸಾರ್. ಇವನು ಹಿಂದೇನೂ ಕಳ್ಳತನ ಮಾಡಿದ್ದರೆ ಮನೆಯೊಳಗೆ ಏನೊ ಸಿಗಾಕಿಲ್ವ?"

"ಮಾರಾಟಮಾಡದೆ ಮನೇಲಿ ಇಟ್ಟರತ್ತಾರೇನು ಕದ್ದ ಸಾಮಾನ್ನ?"

ಇದಕ್ಕೆ ಏನು ಉತ್ತರ ಕೊಡಬೇಕೆಂದು ಮುನೆಯಪ್ಪನಿಗೆ ತೋಚಲಿಲ್ಲ.ಆದರೂ ಇನ್ಸ್ ಪೆಕ್ಟರ್ ಸಾಹೇಬ, ನಮ್ಮ ಮನೆ ಶೋಧಿಸಬೇ ಕೆಂದು ನಿರ್ಧಾರಮಾಡಿದ. ನಮ್ಮ ಮನೆಯ ಶೋಧನೆ! ಮುಂದೇನಾಗುವುದು? ಮಗ ಸಂಭವೆತನಾಗುವನೆಂದು, ದೊಡ್ಡ ಮನುಷ್ಯನಾಗುವನೆಂದು, ಆಸೆ ಇರಿಸಿಕೊಂಡೀದ್ದ ತಂದೆ, ಪೋಲೀಸರ ಪ್ರಶ್ನೆಗಳಿಗೆ ಉತ್ತರ ಕೊಡಬೇಕು! ಅಜ್ಜಿ ತನ್ನ ಮರಿಯಿಂದ ತಮಗಾದ ಅವಮಾನವನ್ನು ಸಹಿಸಿಕೊಳ್ಳ ಬೇಕು! ನನಗೆ ದಿಕ್ಕು ತೋಚಲಿಲ್ಲ. ಗಲಿಬಿಲಿಯಾಯಿತು. ನಾನು ಇನ್ಸ್‌ಪೆಕ್ಟರನ ಮುಖ ನೋಡಿದೆ. ಆದುದಾಗಲೆಂದು ಇಂಗ್ಲಿಷ್ನಲ್ಲಿ ಆತನನ್ನು ಸಂಭೋಧಿಸಿದೆ.

"ಸಾರ್,ದಯವಿಟ್ಟು ನಮ್ಮ ಮನೆಗೆ ಹೋಗ್ಬಾರ್ದು ಸಾರ್ ನಾನು ಕಳ್ಳತನ ಮಾಡಿಲ್ಲ ಸಾರ್. ನನ್ನ ತಂದೆಗೆ ಟ.ಬಿ.ಕಾಯಿಲೆ -ದಯವಿಟ್ಟು ಮನೆಗೆ ಹೊಗ್ಬಾರ್ದು ಸಾರ್."

ಲಾಕಪ್ಪಿನಲ್ಲಿರುವ; ಹುಡಗ, ಪೋಲಿಸರು ತನ್ನ ಮನೆಗೆ ಹೋಗ ಬಾರದು ಎನ್ನುತಾನೆ. ತಂದೆಗೆ ಕಾಹಿಲೆ ಎನ್ನುತಾನೆ. ಆತನಿಗೆ ದುಡ್ದಿನ ಅವಶ್ಯತೆ ಇದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇಷ್ಟು ಸಾಕ್ಷ್ಯವಿದ್ದರೂ ತಾನು ಕಳ್ಳತನಮಾಡಿಲ್ಲವೆಂದೇ ಹಟ ಸಾಧಿಸುತ್ತಾನೆ.

....ಆ ಪೋಲೀಸ್ ಅಧಿಕಾರಿ ಹೀಗೆ ಯೋಚಿಸರಬೇಕು. ಆದರೆ ಆತ ತನ್ನ ಸಂದೇಹಗಳನ್ನು ವ್ಯಕ್ತಪಡಿಸಲಿಲ್ಲ.

"ಹಾಗೇ ಆಗಲಿ. ನಿನ್ನ ತಂದೆಗೆ ಕಾಹಿಲೆ ಹೌದೋ ಅಲ್ಲವೊ ತಿಳಿದುಬರಬೇಕು. ಮನೆಯ ಅಡ್ರೆಸ್ಕೊಡು... ಇಂಗ್ಲಿಷ್ ಬೇರೆ ಮಾತಾಡ್ತೀಯಾ, ನಿನ್ನ ಕಳ್ಳ ಅಂತ ಹೇಳೋದು ಹ್ಯಾಗೆ?".

ಆ ಮಾತಿನಲ್ಲಿ ಕೃತಕ ಏನಯವಿತ್ತು. ಆದರೆ ಆಗ ನನಗೆ ಸ್ಪಷ್ಟವಾಗಿ ಅದು ತಿಳಿಯಲಿಲ್ಲ.

"ವಿಚಾರಿಸಿ ತಿಲ್ಕೊಳ್ಳಿ ಸಾರ್. ಆದರೆ ನಮ್ಮನೇಗೆ ಪೋಲೀಸರು ಹೋಗ್ಬಾರದು. ನಮ್ಮ ತಂದೆ ನೊಂದ್ಕೋತಾನೆ ಸಾರ್."

"ಆಗಲಿ ಅಡ್ರಸ್ ಕೊಡು."

ನಾನು ನಮ್ಮ ಮನೆಯ ಅಡ್ರಸ್ ಕೊಟ್ಟ.

ಅದು ಕೈಸೇರಿದೊಡನೆ ಆ ಅಧಿಕಾರಿ ನಕ್ಕ. ಘಾತವಾಯಿತೆಂದುಆಗ ನನಗೆ ತಿಳಿಯಿತು.

"ನಿನ್ನ ಹೊಡೆದುಮಾಡಿ ಅಡ್ರಸ್ ತಿಳಿಕೊಬೇಕಾದ ತೊಂದರೇನೆ ತಪ್ಪೊಯ್ತಲ್ಲೊ ಇಂಗ್ಲಿಷ್ ಸಾಹೇಬ!ಇಷ್ಟು ಸುಲಭವಾಗಿ ಸಿಕ್ಹಾ ಕ್ಕೊಳ್ಳೋನು ನೇನೆಂತಾ ಕಳ್ತನ ಮಾದ್ತೀಯಾ?"

ನನಗೆ ಅಳು ಬಂತು.ನ್ಯಾಯದ ರಕ್ಷಕರಾಗಿದ್ದ ಆ ವ್ಯಕ್ತಿಗಳನ್ನು ನಾನು ಮನಸಾರೆ ದ್ವೇಷಿಸಿದೆ.ಅಂತಹ ಕ್ಷುದ್ರ ಜಂತುಗಳ ಮುಂದೆ ನನ್ನ ಅಸಹಾಯತೆಯ ಕಣ್ಣನೀರು ಹರಿಯಬಾರದೆಂದು ಅದನ್ನು ಹತ್ತಿಕ್ಕಿದೆ.

ಆ ಅಧಿಕಾರಿ ಇಬ್ಬರು ಪೋಲೀಸರೂ ಹೊರಟುಹೋದರು ನಮ್ಮ ಮನೆಗೆ ಹೊರಟುಹೋದರು.ಲಾಕಪ್ಪಿನ ಮುಂದೆ ಕುಳಿತಿದ್ದ ವನು, ಸ್ಟೇಷ್ನನ್ ಡ್ಯೂಟಿಯ ಪೋಲಿಸಿನಾತ,ಜೇಬಿನಿಂದ ಬೀಡಿತೆಗೆದು ಕಡ್ಡಿ ಗೀರಿ ಹೊಗೆಯುಗುಳಿದ. ಗಾಢವಾದ ಯೋಚನೆ ಯಲ್ಲಿ ತಲ್ಲೀನನಾದ ಹಾಗಿತ್ತು, ಅವನ ಮೂಖಮುದ್ರೆ. ಅದೇನು ಯೋಚನೆಗಳು ಅವನನ್ನು ಕಾಡುತ್ತಿದ್ದವೊ. ನನ್ನನ್ನು ಮಾತ್ರ,ಇಂಥದೇ ಎಂದು ಹೇಳಲಾಗದ ಭೀತಿಯೊಂದು ಆವರಿಸಿತ್ತು ಮನೆಯಲ್ಲಿ ಏನಾಗುವುದು? ಏನಾಗುವುದು?... . . ..

......ನಾನು ಲಾಕಪ್ಪಿನೊಳಗೆ ಕುಳಿತಿದ್ದೆ. ಮನೆಯ ಶೋಧನೆಗೆ ಹೋದವರು ಹತ್ತು ಘಂಟೆಯ ಹೊತ್ತಿಗೆ ಮರಳಿ ಬಂದರು. ಬಂದ ಮೇಲೆ ನನ್ನತ್ತ ಮುಖ ಹೊರಳಿಸಿಯೂ ನೋಡಲಿಲ್ಲ. ನನ್ನ ಬಗ್ಗೆ ಯಾರಿಗೂ ಆಸಕ್ತಿಯೆ ಇದ್ದಂತೆ ತೋರಲಿಲ್ಲ. ನಾನು ಸೊಳ್ಳೆಗಳನ್ನು ತೀಡಿ ಕೊಲ್ಲುತ್ತಾ, ಡುರ್ಗಂಧವನ್ನು ಸಹಿಸಿಕೊಳ್ಳುತ್ತಾ ಹೊತ್ತು ಕಳೆದೆ.

ನಡುರಾತ್ರೆಯ ಹೊತ್ತಿರಬೇಕು. ಇನ್ಸ್‌ಪೆಕ್ಟರ್ ಇನ್ನೂ ಮನೆಗೆ ಹೋಗಿರಲಿಲ್ಲ. ಪೋಲೀಸರವನೊಬ್ಬ ಹೊರಗೆ ಜಗಲಿಯಮೇಲೆ ತೂಕಡಿಸುತ್ತಿದ್ದ.

"ಸ್ವಾಮಿ..............ಸ್ವಾಮಿ.............."

ನಾನು ಬೆಚ್ಚಿ ಬಿದ್ದೆ, ನನ್ನ ತಂದೆಯ ಸ್ವರ–ನನ್ನ ತಂದೆ.ನೆಲ ಎರಡು ಹೋಳಾಗಿ, ನಾನು ಕೆಳಕ್ಕೆ ಇಳಿದುಹೋಗಿ, ತಂದೆಯ ದೃಷ್ಟಿಯಿಂದ ಮರೆಯಾಗಬಾರದೇ ಎನ್ನಿಸಿತು. ಆದರೆ ಆತ ಜಗಲಿಯಮೇಲೆ ನಿಂತು ಬಾಗಿಲಿನ ಎಡೆಯಿಂದ ಲಾಕಪ್ಪಿನೊಳಕ್ಕೆ ನೋಡಿಯೇ ನೋಡಿದ. ನಮ್ಮ ಒಂದೇ ಒಂದಾದ ಹರಕು ಕಂಬಳಿ ಹೊದ್ದು ಆತ ಬಂದಿದ್ದ. ಕುರುಚಲಾಗಿ ಬೆಳೆದಿದ್ದ ಗಡ್ಡ, ಬತ್ತಿ ಹೋಗಿದ್ದ ಕೆನ್ನೆಗಳನ್ನು ಮುಚ್ಚಿತ್ತು, ಕಣ್ಣಗಳು ಆಳಕ್ಕೆ ಇಳಿದಿದ್ದುವು. ಅವು ಚಲಿಸಿದಾಗ ಆ ನೋಟದಲ್ಲಿ ಯಾವ ಭಾವನೆ ಇತ್ತೆಂಬುದನ್ನು ಆಗ ತಿಳಿಯುವುದು ಸಾಧ್ಯವಿರಲಿಲ್ಲ. ಸ್ಟೇಷನ್ನಿನ ಮಂದಪ್ರಕಾಶದಲ್ಲಿ ಅವನು ನನಗೆ ಕಾಣಿಸುತ್ತಿದ್ದ. ಆದರೆ ಲಾಕಪ್ಪಿನ ಕತ್ತಲೆ ನನ್ನನ್ನು ಮರೆಮಾಡಿತ್ತು.

ಹೀಗಿದ್ದರೂ ತಂದೆಯ ಆ ಕಣ್ಣುಗಳು ನನ್ನನ್ನು ಗುರುತಿಸಿದುವು.

ಅಧಿಕಾರಿ, "ಏನು? ಏನೀಗ?"ಎಂದ.

ಜಗಲಿಯ ಮೇಲೆ ತುಕಡಿಸುತ್ತಿದ್ದ ಪೋಲೀಸಿನವನು ಎದ್ದು ಬಂದು, "ನಡಿ, ಹೊರಕ್ಕೆ ನಡಿ!" ಎಂದ.

ತಂದೆ ಹೊರಕ್ಕೆ ನಡೆಯಲಿಲ್ಲ.ಆತ ಅಧಿಕಾರಿಯನ್ನೇ ದಿಟ್ಟಿಸಿ ನೋಡಿದ.ಆ ನೋಟದಲ್ಲಿ ದೈನ್ಯವಿತ್ತೋ ಧ್ವೀಷವಿತ್ತೋ ನನಗೆ ತಿಳಿಯದು.ಆ ಸ್ವರ ಮಾತ್ರ ಏಕರೂಪವಾಗಿ ಹೋರಬೀಳುತ್ತಿತ್ತು.

"ಸ್ವಾಮಿ, ನನ್ನ ಹುಡುಗ ಚ್ಂದ್ರಶೇಖರ........ಸ್ವಾಮಿ........ತಾವು-"

ಅಧಿಕಾರಿ ಸಿಟ್ಟಾಗಿ ಕೂಗಾಡಿದ.

"ಹೊರಟುಹೋಗು.ನಿನ್ನ ಮಗನ್ನ ಇಲ್ಲಿ ಯಾರೂ ತಿಂತಾಯಿಲ್ಲ. ತೆಪ್ಪಗೆ ಹೊರಟುಹೋಗು."

ಆದರು ತಂದೆ ಅಲ್ಲೇ ನಿಂತ.

"ಸ್ವಾಮಿ,ನಾನು ಜಾಮೀನು ಕೊಡ್ತೀನಿ. ಹುಡುಗನ್ನ ಬಿಟ್ಬಡಿ ಸ್ವಾಮಿ........"

ನನಗೆ ಸಹಿಸುವುದಕ್ಕಾಗಲಿಲ್ಲ. ಎಂತಹ ಆಸೆಗಳನ್ನಿಟ್ಟು ಕೂಂಡಿದ್ದ ಆ ತಂದೆ! ಕ್ರೂರಿಯಾದ ನಾನು ಎಂತೆಂತಹ ನೋವುಗಳಿಗೆ ಆ ಜೀವವನ್ನು ಗುರಿಮಾಡಿದ್ದೆ! ಅಧಿಕಾರಿ ಮತ್ತೆ ಗದರಿದ:

"ನಿನ್ನ ಜಾಮೀನೂ ಬೇಡ.ಏನೂ ಬೇಡ. ಬೆಳಗಾದ್ಮೇಲೆ ಬಿಟ್ಬಡ್ತೀವಿ ಈಗ ಹೊರಟ್ಹೋಗು.

" ನನ್ನ ಎದೆ ಡವಡನೆ ಬಡಿದುಕೂಳ್ಳುತ್ತಿತ್ತು. ನಾನು ಗಟ್ಟಯಾಗಿ ಹೇಳಿದೆ.

"ಅಪ್ಪಾ, ನೀನು ಮನೆಗೆ ಹೋಗಪ್ಪಾ. ಈ ಚಳೀಲಿ ಹೊರಗೆ ಹೋಗ್ಬಾರ್ರ್ದು ಅಂತಲ್ವಾ ಡಾಕ್ಟರು ಹೇಳಿದ್ದು? ಮನೆಗೆ ಹೋಗಪ್ಪಾ ಬೆಳಿಗ್ಗೆ ಬಂದ್ಬಿಡ್ತೀನಿ. ಮನೆಗೆ ಹೋಗಪ್ಪಾ."

ತಂದೆ ನನ್ನತ್ತ ನೋಡಲೇ ಇಲ್ಲ. ಹಾಗೆ ನೋಡದೆ ಇದ್ದಾಗ ನನ್ನ ದುಃಖ ಇಮ್ಮಡಿಸಿತು.......

ಆದರೆ ಸ್ವಲ್ಪ ಹೊತ್ತಾದಮೇಲೆ,ವಿನೀತನಾಗಿ ಅಧಿಕಾರಿಗೆ ಬಾಗಿ ವಂದಿಸಿ, ಅವನ್ನು ಮೆಲ್ಲನೆ ಹೊರಹೋದ.

ನನಗೆ ನಿದ್ದೆ ಬರಲಿಲ್ಲ. ದುಗುಡದಿಂದ ಹೃದಯ ಹೆಪ್ಪು ಕಟ್ಟಿತ್ತು. ಮುಖ ಬಿಗಿದುಕೊಂಡಿತ್ತು. ಕೈ ಕಾಲುಗಳು ಮರವಾಗಿದ್ದುವು. ದೀರ್ಘವಾದ-- ಬಲು ದೀರ್ಘವಾದ--ಕತ್ತಲೆಯ ದೊಡ್ದ ಗವಿಯೊಳಕ್ಕೆ ತಡವರಿಸುತ್ತ ತಡವರಿಸುತ್ತ ನಾನು, ಮುಂದಕ್ಕೂ ಹೋಗಲಾರದೆ ಹಿಂದಕ್ಕೂ ಹೋಗಲಾರದೆ, ನಿಂತ ಹಾಗಿತ್ತು.

ಒಂದು ಘಂಟೆಯ ಹೊತ್ತಾದ ಮೇಲೆ ಅಧಿಕಾರಿ ಇಬ್ಬರು ಪೋಲೀಸರಿಗೆ, ಅವರಲ್ಲಿ ಮುಖ್ಯಸ್ಥನಿಗೆ, ನಿರ್ದೇಶಗಳನ್ನು ಕೊಟ್ಟು ತಾನು ಮನೆಗೆ ಹೊರಟನು. ಆ ನಿರ್ದೇಶಗಳಲ್ಲಿ ನನಗೆ ಸಂಬಂಧಸಿದ್ದು ಏನೂ ಇರಲಿಲ್ಲ.

ಅಧಿಕಾರಿ ಬೀದಿಗಿಳಿಯುತ್ತಿದ್ದಂತೆ ಆತನ ಸ್ವರ ಕೇಳಿಸಿತು.

"ಇನ್ನೂ ಇಲ್ಲೇ ಇದ್ದೀಯೇನೋ? ನಡಿ ಆಚೆಗೆ, ರಾಸ್ಕಲ್‌! ಇಲ್ದಿದ್ರೆ ನಿನ್ನೂ ಲಾಕಪ್ಪಿಗೆ ಸೇರಿಸ್ತೀನಿ. "

ನನ್ನಪ್ಪ ಇನ್ನೂ ಅಲ್ಲೆನಿಂತಿದ್ದ. ಮನೆಗೆ ಹೋಗಿಯೇ ಇರಲಿಲ್ಲ. ಕ್ಷಯದ ಕಾಹಿಲೆಯ ಆ ಜೇವ ಹೊರಗೆ ಶೀತದಲ್ಲಿ ಚಳಿಯಲ್ಲಿ ತೋಯ್ದು ಕೊಳ್ಳುತ್ತಿತ್ತು......

ಆಮೇಲೆ ಯಾವ ಸದ್ದೂ ಕೇಳಿಸಲಿಲ್ಲ. ನಿಮಿಷಗಳು ಘಂಟೆಗಳಾದುವು. ಪ್ರತಿಯೊಂದು ಘಂಟೆಗೆ ಪೋಲೀಸಿನವನು ಗಂಟೆ ಬಾರಿ ಸುತ್ತಿದ್ದ. ಹಾಗೆ, ರಾತ್ರಿ ಮೆಲ್ಲಮೆಲ್ಲನೆ ಕರಗಿತು. ಬೆಳಗು ಮುಂಜಾವ ನನಗೆ ಜೊಂಪು ಹಿಡಿದಿರಬೇಕು. ಒರಗಿದಲ್ಲಿಯೆ ನಾನು ನಿದ್ದೆ ಹೋಗಿದ್ದೆ, ಎಚ್ಚರಾದಾಗ ಸ್ಟೇಷನಿನ ಗೋಡೆ ಗಡಿಯಾರದ ಮುಳ್ಳುಗಳು ಆರೂವರೆಯನ್ನು ಸೂಚಿಸುತ್ತಿದ್ದುವು.

ಬೆಳಗಾಗಿತ್ತು. ಇನ್ನು ಬಿಡುಗಡೆಯಾಗಬೇಕು, ತಂದೆ ಪ್ರಾಯಶಃ ರಾತ್ರಿಯೇ ಮನೆಗೆ ಹೋಗಿರಬಹುದೆಂದು ಭಾವಿಸಿದೆ. ಪೋಲೀಸರು ಶೋಧೆಗೆ ಹೋದಾಗ ಮನೆಯಲ್ಲಿ ಅಗಿರಬಹುದಾದ ಅವಾಂತರವನ್ನು ಊಹಿಸಿಕೊಳ್ಳುತ್ತ ಕುಳಿತೆ. ನಿನ್ನೆ ಸಂಜೆ ಆ ದೊಡ್ಡ ಮನುಷ್ಯರ ಪಾಕೀಟು ಕಳೆದುಹೋದುದರಿಂದ ಆರಂಭವಾಗಿ ಈ ವರೆಗಿನ ಎಲ್ಲ ಘಟನೆಗಳಲ್ಲಿ ನಮ್ಮ ಮನೆಯ ಶೋಧೆಯೊಂದೆ ನನಗೆ ತಿಳಿ ಯದ ಅಂಶವಾಗಿತ್ತು.......

ನನಗೆ ಎಚ್ಚರವಾಗಿತ್ತು. ಆದರೆ ಸ್ಟೇಷನ್ ಇನ್ನೂ ಎದ್ದಿರಲಿಲ್ಲ. ಆಗ-

"ಸ್ವಾಮಿ......ಪೋಲಿಸಪ್ಪನೋರೇ.....ಸ್ವಾಮಿ."ಅದು ನನ್ನ ತಂದೆಯ ಸ್ವರ. ಮನೆಯಿಂದ ಮತ್ತೆ ಬಂದಿದ್ದ ನೇನೋ ಹಾಗಾದರೆ?

"ಏನೋ ಅದು ಗಲಾಟೆ? ರಾತ್ರೆ ಸಹೇಬರು ಹೋದ್ಮೇಲೂ ಮರದ ಕೆಳಗೆ ಮುದುರುಕೊಂಡು ಬಿದ್ದಿದ್ಯಲ್ಲೊ. ನಿನ್ಮಗ ಹುಡುಗೀ ಅಂತ ತಿಳ್ಕೊಂಡ್ಯೇನೊ.ಯಾರು ಮೈಮುಟ್ತಾರೆ ಅವನ್ನ?"

ಹಾಗಾದರೆ ನನ್ನ ತಂದೆ ಮನೆಗೆ ಹೋಗಿಯೇ ಇರಲಿಲ್ಲ! ಮಗನ ಬಿಡುಗಡೆಯ ಹಾದಿ ನೋಡುತ್ತಾ ಆ ರಾತ್ರಿಯನ್ನೆಲ್ಲಾ ಆತ ಸ್ಟೇಷನ್ನಿನ ಎದುರಿಗಿದ್ದ ಮರದ ಕೆಳಗೇ ಕಳೆದಿದ್ದ!

ಮತ್ತೆ ಹೊತ್ತು ಬಲು ನಿಧಾನವಾಗಿ ಕಳೆಯಿತು. ಆ ಅಧಿಕಾರಿಯನ್ನು ನೋಡಿ, "ನನ್ನ ಪೇಪರು ಮತ್ತು ಹಣ" ಎಂದೆ.

"ಏನು?" ಎಂದು ಆತ ಬುಸುಗುಟ್ಟಿದ.

"ನಿನ್ನ್ವೆ ತಾವುಗಳು ನನ್ನನ್ನು ಅರೆಸ್ಟ್ ಮಾಡಿದಾಗ ನನ್ನ ಜೇಬಿನಲ್ಲಿದ್ದ ಒಂದೂವರೆ ರೂಪಾಯಿ ಚಿಲ್ಲರೆಯನ್ನೂ ಉಳಿದಿದ್ದ ಪೇಪರ್‌ಗಳನ್ನೂ ಭದ್ರತೆಗಾಗಿ ವಶಪಡಿಸ್ಕೊಂಡ್ರಲ್ಲ ಸಾರ್?"

ನನ್ನ ಮಾತಿನಲ್ಲಿ ನನಗರಿಯದ ಹಾಗೆಯೇ ವ್ಯಂಗ್ಯ ಬೆರೆಯುತ್ತಿತ್ತು.

ಅಧಿಕಾರಿಗೆ ಅದು ಸಹನೆಯಾಗಲಿಲ್ಲ. "ಗೆಟ್ ಔಟ್, ರಾಸ್ಕಲ್!"

ಅದು ಕೇಳಿಸದವನಂತೆ ನಟಿಸುತ್ತಾ, "ಏನೆಂದಿರಿ ಸಾರ್?"ಎಂದೆ.

ನನ್ನ ತಂದೆ ಮುಂದೆ ಹೆಜ್ಜೆಯಿಟ್ಟು ನನ್ನನ್ನು ತನ್ನೆಡೆಗೆ ಎಳೆದು ಕೊಂಡ. ನಾವಿಬ್ಬರೂ ಬೀದಿಗಿಳಿದೆವು. ಮನೆಯ ಹಾದಿ ಹಿಡಿದೆವು.ಅಜ್ಜಿ ನಮ್ಮ ಬರವನ್ನೇ ಇದಿರುನೋಡುತ್ತಿದ್ದ ಹಾಗಿತ್ತು. ತಂದೆ ಹಾದಿಯುದ್ದಕ್ಕೂ ಮಾತನಾಡಿಯೇ ಇರಲಿಲ್ಲ. ````ಆದರೆ ಅಜ್ಜಿ ನನ್ನನ್ನು ಕಂಡೊಡನೆ ಮುಂದಕ್ಕೆ ಓಡಿಬಂದರು. ಆಕೆ ಮಡಿಯಲ್ಲಿರಲಿಲ್ಲ. ಸ್ನಾನಮಾಡಿಯೇ ಇರಲಿಲ್ಲ. ಓಡುತ್ತ ಬಂದು ಆಕೆ ನನ್ನ ಮೈದಡಿವಿದರು.

"ಏನಪ್ಪಾ ಚಂದ್ರು........ಹೊಡೆದ್ರೇನೋ ನಿಂಗೆ?"ಹನ್ನೊಂದು ವರ್ಷಗಳ ಹಿಂದೆ, ನಾನು ಮೊದಲ ಬಾರಿ ಶಾಲೆಗೆ ಹೋಗಿ ಹಿಂತಿರುಗಿದ್ದಾಗ, ಆಗ ಹೊಸ ಪರಿಚಯದವರಾಗಿದ್ದ ಆ ಅಜ್ಜಿ, ಅದೇ ಪ್ರಶ್ನೆಯನ್ನು ನನಗೆ ಕೇಳಿದರು.

ನಾನೀಗ ದೊಡ್ಡವನಾಗಿದ್ದೆ. ಆದರೂ ಅಜ್ಜಿಯ ಮಡಿಲಲ್ಲಿ ಕ್ಷಣಕಾಲ ಮುಖವಿಟ್ಟೆ. ಆಕೆ ನನ್ನ ತಲೆಗೂದಲು ನೇವರಿಸಿದರು, ಬೆನ್ನ ಮೇಲೆ ಕೈಯಾಡಿಸಿದರು. ಹೊಡೆತದ ಗುರುತುಗಳನ್ನು ಅವರ ವಯಸ್ಸಾದ ಬೆರಳುಗಳು ಹುಡುಕಿ ಹಿಡಿದುವು.

"ಪಾಪಿ ಮುಂಡೇಗಂಡರು. ಅವರ ಮನೆ ಹಾಳಾಗ! ಅವರ ಸಂತಾನ ಮಣ್ಣುತಿಂದು ಹೋಗ! ಅವರ ವಂಶ ನಾಶವಾಗ! ನನ್ನ ಮರಿ ಮೈ ಮುಟ್ಟದ ಕೈ ಕತ್ತರಿಸಿ ಹೋಗ!..........."

ನೋವಿನಿಂದಲ್ಲ, ಆ ಅಜ್ಜಿ ನನಗಾಗಿ ತೋರುತ್ತಿದ್ದ ಮಮತೆಯಿಂದ, ನನ್ನ ಹೃದಯ ಬಿರಿಯಿತು. ನಾನು ದ್ವೇಷಿಸಿದ ಪೋಲೀಸ ರೆದುರಲ್ಲಿ ಅತ್ತಿರಲಿಲ್ಲ. ನಾನು ಪ್ರೀತಿಸಿದ ಅಜ್ಜಿಯ ಎದುರು ಕಣ್ಣೀರನ್ನು ಹರಿಯ ಗೊಟ್ಟೆ.- ಹಾಗೆ ಮಾಡಲು ನನಗೆ ನಾಚಿಕೆಯಾಗಲಿಲ್ಲ.

........ಅಜ್ಜಿ ಹೇಳಿದ ಮಾತುಗಳಿಂದ ಹಿಂದಿನ ರಾತ್ರೆ ನಡೆದು ದನ್ನು ನಾನು ಊಹಿಸಿಕೊಂಡೆ. ಚೆಲ್ಲಾಪಿಲ್ಲಿಯಾಗಿದ್ದ ನಮ್ಮ ಗುಡಿ ಸಲು! ಆ ಕತೆ ಹೇಳಿತು. ನ್ಯಾಯದ ರಕ್ಷಕರು ಆ ವೃದ್ದೆಯನ್ನು ಅವಮಾನಿಸಿದ್ದರು. ಆ ಮನೆಯ ಅಂಗಣದ ಒಂದೊಂದು ಕಂಬವೂ ಒಂದೊಂದು ಕಲ್ಲೂ ತಮಗಾದ ಅವಮಾನದ ಕತೆ ಹೇಳುತ್ತಿದ್ದುವು.

ಹನ್ನೆರಡು ಬಾರಿಸುತ್ತಿದೆ. ನಾನು ಬಳಲಿದ್ದೇನೆ ಜೈಲಿನ ಹನ್ನೆರಡು ಹೊಡೆದು ಮುಗಿದಮೇಲೆ ಮತ್ತೆ ತೂಕಡಿಸುವನು.........ಯಾರೋ ಓಬ್ಬರು ಆಳುತ್ತಿದ್ದಾರೆ. ನಾಳೆಯ ಕನಸು ಕಾಣುತ್ತಿರುವ ಕರಿಯ ಪಕ್ಕದ ಕೊಠಡಿಯಲ್ಲಿ ಗೊರಕೆ ಹೊಡೆಯುತ್ತಿದ್ದಾನೆ. ತಾನು ನಿರಾಪರಾಧಿಯೆಂದು ಸಾಧಿಸ ಹೊರಟಿರುವ ಯುವಕ ನವರಿಸುತ್ತಿದ್ದಾನೆ. ಯಾವುದೋ ನಾಯಿ ಬೋ ಬೋ ಬೋ ಎಂದು ಬಲು ದಿರ್ಘವಾಗಿ ಗೋಗರೆಯುತ್ತಿದೆ

..........ನಾಯಿ ಹೀಗೆ ಗೋಳಾಡಿದರೆ ಯಾರಿಗೋ ಸಾವು ಸನ್ನಿಹಿತವಾಯಿತೆಂದು ಅರ್ಥವಂತೆ ಅಜ್ಜಿ ಹಾಗೆ ಹೇಳುತ್ತಿದ್ದರು. ಸಾವಿನ ಮರಣದ ವಿಷಯಗಳೆಲ್ಲಾ ಮನುಷ್ಯನಿಗಿಂತ ಚೆನ್ನಾಗಿ ಆ ಮೂಕ ಪ್ರಾಣಿಗಳಿಗೆ ಅರ್ಥವಂತೆ. ನಿಜವೊ ಅಲ್ಲವೊ ನನಗೆ ತಿಳಿಯದು. ಸಾಂಸಾರವಂದಿಗನಲ್ಲದ ನಾನು ಆ ಬಗ್ಗೆ ಸಂಶೊಧನೆ ಮಾಡಿಲ್ಲ.

ಪೋಲೀಸರ ದಾಖಲೆಯಲ್ಲಿ ಹೆಸರು ಬರೆಸಿಕೊಂಡ ಆ ದಿನ ಕಳೆದು ನಾಲ್ಕು ತಿಂಗಳಾಗಿತ್ತು.ತಂದೆಯ ಕಾಹಿಲೆ ಹೆಚ್ಚುತ್ತಲೇ ಇದ್ದ ದಿನಗಳು-ತನ್ನ ಜೀವನದ ಬಯಕೆಗಳೆಲ್ಲಾ ಮುಣ್ಣು ಪಾಲಾದ ಮೇಲೆ ಆ ಮನೋರೋಗವೆ ಅವನಿಗೆ ಕಠಾರಪ್ರಾಯವಾಯಿತು.

ಆ ಸಂಜೆ ಅದೇ ಮನೆಗೆ, ಪತ್ರಿಕೆಯ ಮಾರಾಟ ಮುಗಿಸಿ, ಹಿಂತಿರುಗಿ ಬಂದಿದ್ದೇನಷ್ಟೆ. ಮನೆಗೆ ಅಂಗಳದಾಚೆ ನಾಯಿಯೊಂದು ಬೋ ಬೋ ಬೋ ಎಂದಿತು. ಅಜ್ಜಿ ಸೌದೆಯ ಕೊರಡನ್ನೆತ್ತಿಕೊಂಡು ಆ ನಾಯಿಯನ್ನು ಬಲು ದೂರದ ತನಕ ಓಡಿಸಿಕೊಂಡು ಹೋದರು. ನಾಯಿ ಓಡಿಹೋಯಿತು.

ಆಮೇಲೆ ನಾಲ್ಕು ದಿನ ಮಾತ್ರ ತಂದೆ ಬದುಕಿದ. ಹಗಲು ರಾತ್ರೆ, ಆತನ ಆರೈಕೆ ಮಾಡಿದೆ. ಒಮ್ಮೆ ನನ್ನನ್ನು ಬಳಿಯಲ್ಲೆ ಕುಳ್ಳರಿಸಿ ಕೊಂಡು ತಂದೆ ಆ ಪ್ರಶ್ನೆ ಕೇಳಿದ:

"ನೀನು ಆ ದಿವಸ ಪಾಕೀಟು ಕದ್ದಿರಲಿಲ್ಲ, ಅಲ್ವಾ ಚಂದ್ರು, ಅಲ್ವಾ?

"ನಾಲ್ಕು ತಿಂಗಳಾದ ಮೇಲೆ ತಂದೆ ಆ ಪ್ರಶ್ನೆ ಕೇಳಿದ್ದ. ನಾನು ನಿರಪರಾಧಿಯೆಂಬುದು ಆತನಿಗೆ ಗೊತ್ತಿತ್ತು. ಆದರೂ ಆ ಪ್ರಶ್ನೆ ಕೇಳಿದ್ದ.

"ಇಲ್ವಪ್ಪ. ನಾನು ಯಾವತ್ತಾದರೂ ಹಾಗ್ಮಾಡೇನಾ?

"ಆದು ಆ ದಿನ ನಾನು ಹೇಳಿದ ಮಾತು--ಮರಣಶಯ್ಯೆಯಲ್ಲಿದ್ದ ತಂದೆಗೆ ಹೇಳಿದ ಮಾತು.

ಈ ದಿನ ಅದನ್ನು ಸ್ಮರಿಸಿಕೊಂಡಾಗ ನನ್ನ ಬಗ್ಗೆ ನನಗೆ ಕನಿ ಕರವೆನಿಸುತ್ತಿದೆ.

ಕೊನೆಯ ದಿನ ಕೆಮ್ಮು ನರಳಾಟಗಳ ನಡುವೆ ಜೀವ ಗುಟುಕರಿ ಸುತ್ತಿದ್ದಾಗ ತಂದೆ ಹನ್ನೊಂದು ವರ್ಷ್ಗಗಳ ಹಿಂದಿನ ಆ ದಿನವನ್ನು ಬಾರಿ ಬಾರಿಗೂ ಸ್ಮರಿಸಿದ.

"ಚಂದ್ರೂ. ನಿಂಗೆ ನೆಪ್ಪಯ್ತ? ನೆಪ್ಪಯ್ತೇನೊ ಚಂದ್ರು? ನಾವು ಆ ದಿವಸ ಹಳ್ಳಿಯಿಂದ ಬಂದಿದ್ದು............ನಿನ್ನ ತಾಯಿ ಹೇಮಾವತಿ ಹೊಳೇಲಿ..........ರುಕ್ಕೂ........... ನಿಂತಾಯಿ ಕಣೋ ..........ನೆಪ್ಪಾಯ್ತಾ ನಿಂಗೆ?......ನೆಪ್ಪಯ್ತೇನೊ.............?"

ನಾನು ಧಾರಾಕಾರವಾಗಿ ಕಣ್ಣೀರನ್ನುಹರಿಯಗೊಟ್ಟೆ. ಮುಂದೆ ಜೀವನದಲ್ಲಿ, ಕಂಬನಿಯ ಅವಶ್ಯಕತೆ ಇಲ್ಲವೆಂಬ ಪೂರ್ವಗ್ರಹಿಕೆ ನನಗಿರಲ್ಲಿಲ್ಲ ನಿಜ. ಆದರೆ ನನ್ನ ಹೃದಯ ಆಳವಾಗಿತ್ತು, ವಿಶಾಲವಾಗಿತ್ತು. ಅಲ್ಲಿ ಒಂದೇಸಮನೆ ಸೋರಿಹೋದರೂ ಮುಗಿಯದಷ್ಟು ನೀರಿತ್ತು.

ರಾತ್ರೆ ನಡುವಿರುಳಲ್ಲಿ, "ರುಕ್ಕೂ ಚಂದ್ರೂ-ರಾಮ-ರಾಮ" ಎನ್ನುತ್ತಾ ತಂದೆ ಕೊನೆಯ ಉಸಿರನ್ನೆಳೆದ.

..........ಮರುದಿನ ಬೆಳಿಗ್ಗೆ ನನಗೆ ಜನ್ಮಕೊಟ್ಟಿದ್ದ ತಂದೆಯ ಶವವನ್ನು ಮಣ್ಣುಮಾಡಿ ಬಂದುದಾಯಿತು. ಆತ ದೀರ್ಘ ನಿದ್ದೆ ಯಲ್ಲಿ ಮೈ ಮರೆತಿದ್ದ .ಮುಂದೆಂದೂ ಏಳದ ಹಾಗೆ ಆತ ನಿದ್ದೆ ಹೋಗಿದ್ದ......

.......ಈಗ ಆ ನಿದ್ದೆಯನ್ನು ಸ್ಮರಿಸಿದಾಗ ನನಗೆ ಆಸೂಯೆ ಎನಿಸುತ್ತಿದ್ದೆ. ಅದು ಎಷ್ಟು ಹಿತಕರನಾದ ಆಪ್ಯಾಯನಕರವಾದ ನಿದ್ದೆ! ದೀರ್ಘ ಬಳಲಿಕೆಯ ದೇಹಕ್ಕೆ ಅಂದೆಂತಹ ವಿಶ್ರಾಂತಿ!

.....ಇನ್ನು ನಾನು ನಿದ್ದೆ ಹೋಗುವೆ. ನಾಳೆ ಮುಂಜಾವದವರೆಗಾದರೂ ನಿದ್ದೆಹೋಗುವೆ.