ವಿಮೋಚನೆ/ಮಂಗಳವಾರ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
. . . ಮಂಗಳವಾರ

ಜನ ಯಾಕೆ ಬರೆಯುತ್ತಾರೆ? ಈ ಪ್ರಪಂಚದಲ್ಲಿ ಪುಸ್ತಕ ಗಳನ್ನು ಯಾಕೆ ಅಚ್ಚು ಹಾಕಿಸುತ್ತಾರೆ? ತಾವು ಬರೆದುದು ಹತ್ತು ಜನರಿಗೆ ತಿಳಿಯಲಿ ಎಂದಲ್ಲವೆ? ಸಹಸ್ರ ಜನ ಓದಲಿ ಎಂದಲ್ಲವೆ?

ನಾನು ಬರೆಹಗಾರನಲ್ಲ.ಸಾಹಿತ್ಯ ಸೃಷ್ಟಿ ನನ್ನ ಉದ್ದೇಶವಲ್ಲ. ನನು ಹಿಂದೆಂದೂ ಬರೆದುದಿಲ್ಲ. ಆದರು ಲೇಖಣಿ ಎತ್ತಿ ಬರೆಯತೊಡಗಿದ್ದೇನೆ. ಹೇಳಬೇಕಾದ ಕೆಲವು ವಿಷಯಗಳಿವೆ ನನ್ನಲ್ಲಿ. ಆವುಗಳನ್ನು ನಾನು ಹೇಳಲೇಬೇಕು. ಮೂವತ್ತೆಂಟು ವರ್ಷಗಳ ಕಾಲ ನನಗೆ ನೀರು ಗಾಳಿ ಕೊಟ್ಟ ಈ ಲೋಕವನ್ನು ಬಿಟ್ಟು ಹೊರ ಡುವುದಕ್ಕೆ ಮುಂಚೆ, ಆ ವಿಷಯಗಳನ್ನು ನಾನು ಬರೆದಿಡಲೇಬೇಕು. ನನ್ನ ಈ ಒರೆಸಣೆಗೆ ಸಹಿತ್ಯನಾಗದೇ ಹೋಗಬಹುದು. ಆದರೂ ನಾನು ಬರೆಯಬೆಕು.

ಈ ದಿನ ಮಂಗಳವಾರ. ಶುಭ ಕೆಲಸಕ್ಕೆ ಇದು ಯೋಗ್ಯ ದಿನ ಆಲ್ಲವಂತೆ. ಇರಬಹುದು.ಜೀವಮಾನದಲ್ಲಿ ಒಂದು ಸಾರಿಯೂ ಘಳಿಗೆ ಮುಹೂರ್ತ ನೋಡದ ನಾನು ಈಗ ಶುಭ ಆಶುಭಗಳ ಯೋಚನೆ ಮಾಡಲೆ? ಹೆಸರು-ಮಂಗಳವಾರ. ಮಂಗಳ ಎಂದರೆ ಒಳಿತು ಎಂದು ಕೇಳಿದದೇನೆ. ಅಷ್ಟು ಸಾಕು!

ಕರುಳು ಬಿರಿದು ಬರುತ್ತಿದೆ. ಯಾವುದೂ ಸೈತಾನ ಹೊಟ್ಟಿಯ ಒಳಹೊಕ್ಕು ಒರಟು ಬೆರಳುಗಳಿಂದ ಕೈಗೆ ಸಿಕ್ಕಿದುದೆಲ್ಲವನ್ನೂ ಹಿಚುಕು ತ್ತಿದ್ದಾನೆ.ನನ್ನ ದೀಹ ಸೊರಗಿದೆ. ಎತ್ತರದ ದೃಢಕಾಯನೆಂದು ಪೋಲೀಸರ ದಖಲೆಯಲ್ಲಿ ನನ್ನ ಬಗ್ಗೆ ಬರೆದಿದ್ದಾರೆ ಎಂಬುದು ನಿಜ. ಆದರೆ ಅದು ಹಳೆಯ ದಾಖಲೆ. ನಾನೀಗ ಎತ್ತರವಿದ್ದರೂ ಸ್ವಲ್ಪ ಕುಗ್ಗಿ ಹೋಗಿರುವ ಬಡಕಲು ಜೀವಿ. ಹಿಂದೆ ನನ್ನನ್ನು ಸ್ಫುರದ್ರೂಪಿ ಎಂದು ಕರೆಯತ್ತಿದ್ದರು. ಈಗಲೂ ನಾನು ಸುಂದರನೆ. ಆದರೆ ನೆತ್ತಿಯ ನಡುವಿನಲ್ಲೇ ಹಣೆಯ ಆಂಚಿನಿಂದ ಮೊದಲಾಗಿ ತಲೆ ಕೂದಲು ಬೆಳ್ಳಿಯಾಗಿದೆ. ದವಡೆಯ ಎಲುಬುಗಳು ಆಸ್ಪಷ್ಟವಾಗಿ ಎದ್ದುನಿಂತಿವೆ. ಕಣ್ಣುಗಳು ಗುಳಿಬಿದ್ದಿವೆ. ಕಣ್ಣುರೆಪ್ಪೆಯ ಸುತ್ತಲೂ ಬಣ್ಣ ಕರಿದಾಗಿದೆ. ಯಾಕೆ ಹೀಗಾಯಿತು? ನ್ಯಾಯಾಸ್ಥಾನದಲ್ಲಿ ನನ್ನನ್ನೇ ನೋಡುತ್ತಾ ನ್ಯಾಯಾಧೀಕರು ತಿಳಿವಳಿಕೆಯ ಮುಗುಳುನಗಂ ನಗುತ್ತಾರೆ. ಕೆಂಪುಕೆಂಪನೆ ಹೊಳೆಯುವ ತುಂಬುಮುಖದ ಕೋಮಲ ಕಾಯ ಅವರದು. ಅವರು ನ್ಯಾಯಮೂರ್ತಿಗಳು!ಹೀಗೆ ಬಡಕಲು ಬಡಕಲಾಗಿರುವ ನಾನು? ಯಾಕೆ ಸಂದೇಹ ಉಂಟೆ? ನಾನು ಕೊಲೆ ಪಾತಕಿ-ಕೊಲೆ ಪಾತಕಿ.

ಅದರೆ ನನ್ನನ್ನು ಇಲ್ಲಿ ಗೌರವಿಸುತ್ತಾರೆ. ಸೆರೆಮನೆಯ ಆವರಣ ದೊಳಗೆ ಕಬ್ಬಿಣದ ಸರಸುಗಳ ಹಿಂದೆ ಬಂಧಿತನಾಗಿರುವ ನನ್ನ ಬಗ್ಗೆ ಅವರಿಗೆ ಗೌರವವಿದೆ. ಕಾರಣ-ನಾನು ವಿಧ್ಯಾವಂತ. ಅಧಿಕಾರಿ ಗಳನ್ನು ನಾಚಿಸುವ ಹಾಗೆ ಆಂಗ್ಲರ ಭಾಷೆ ಮಾತಾಡಬಲ್ಲೆ. ಉಡುಗೆ ತೊಡುಗೆಯ ಸರಳ ಠೀವಿಯಲಿ ಆಗರ್ಭ ಶ್ರೀಮಂತರನ್ನೂ ಮೀರಿಸ ಬಲ್ಲೆ. ಅವರ ದೃಷ್ಟಿಯಲ್ಲಿ ನಾನು ಸಾಮಾನ್ಯ ಪಾತಕಿಯಲ್ಲ. ಎಲ್ಲರಿಗೂ ವಿಸ್ಮಯವನ್ನುಂಟುಮಾಡಿರುವ ಮಹಾ ರಹಸ್ಯ ವ್ಯಕ್ತಿ.ಎರಡು ವಿಚಾರ ಣೆಗಳ ನಡುವೆ ನಾನಿಲ್ಲಿ ಕುಳಿಕತಿದ್ದರೆ, ಈ ಜೈಲಿನ ಅಧಿಕಾರಿಗಳು ಒಂದು ರೀತಿಯಲ್ಲಿ ಹೆಮ್ಮೆಪಡುತ್ತಾರೆ. ತಮ್ಮ ಬಿಡುವಿನ ಅವದಿಯಲ್ಲಿ ನನ್ನೊಡನೆ ಹರಟಿಗಾಗಿ ಅವರು ಬರುತ್ತಾರೆ. ಆ ಮಾತು ಈ ಮಾತು ಆಡುತ್ತಾರೆ. ನಿಯಮಗಳನ್ನು ಮೀರಿ ಹೆಚ್ಚು ಸಲಿಗೆಯಿಂದ ವರ್ತಿಸು ತ್ತಾರೆ; ಸೌಕರ್ಯ ಒದಗಿಸುತ್ತಾರೆ. ಬರೆಯಲು ಬೇಕಾದ ಈ ಅನು ಕೂಲತೆ ನನಗೆ ದೊರೆತಿರುವುದೂ ಅವರ ಔದಾರ್ಯದಿಂದಲೇ........

ನಾನು ಯಾರೆಂಬುದನ್ನು, ಏನೆಂಬುದನ್ನು, ಯಾಕೆ ಹೀಗೆ ಎಂಬುದನ್ನು, ಯಾರಾದರೂ ಬಲ್ಲರೆ?ನನ್ನ ಬಾಳ್ವೆಯ ಹಲವು ಅಧ್ಯಾಯಗಳನ್ನು ಎತ್ತಿ ತೋರಿಸಿ ನನ್ನ ಬಗ್ಗೆ ಯಾರಾದರೂ ಅಧಿಕಾರ ವಾಣಿಯಲ್ಲಿ ಮಾತಾಡಬಲ್ಲರೆ?...... ನಾನು ಈ ಸಮಾಜದೊಳಗೇ ಒಬ್ಬ ಸದಸ್ಯನಾಗಿದ್ದೆ ನಿಜ. ಆದರೆ ನಾನು ಜೀವಿಸಿದ್ದು ಈ ಸಮಾಜದ ಹೊರಗಿನ ಒಬ್ಬ ವ್ಯಕ್ತಿಯಾಗಿ. ಈ ಸಮಾಜಕ್ಕೂ ನನಗೂ ಇದ್ದ ಸಂಬಂಧವೇನು ಹಾಗಾದರೆ? ಹುಟ್ಟಿ, ಬೆಳದು, ಸತ್ತು ಮಣ್ಣಾಗುವ ಕೋಟಿ ಜನರಲ್ಲಿ ನಾನೊಬ್ಬ ನಿಜ. ಆದರೆ ಸತ್ತ ಬಳಿಕ ನನ್ನ ಬಗ್ಗೆ, ಉಳಿದವರು ಕ್ಷಣಕಾಲವೂ ಯೋಚನೆಮಾಡುವಂತೆ ಇಲ್ಲವೆ? ಅವರ ಪಾಲಿಗೆ ನಾನು ಮುರಿದುಹೋದ ಮುಳ್ಳುಕಡ್ಡಿಯೆ?

ಎಂಟು ವರ್ಷಗಳಿಗೆ ಹಿಂದೆ ನಾನು ಆ ಬರೆಹಗಾರರನ್ನು ಕಂಡೆ. ಎಲ್ಲಿಯೋ ನಾನು ಓದಿದ್ದ ಆತನ ಕೃತಿಗಳು ನನ್ನ ಗಮನವನ್ನು ಸೆಳೆದಿದ್ದುವು. ಅವನಿಗೆ ಮರಣಪ್ರಾಯನಾಗಬೇಕಾಗಿದ್ದ ನಾನು, ಅವನ ಪ್ರಭಾವಕ್ಕೆ ಒಳಗಾಗಿ ನನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವ ಗಂಡಾಂತರದಲ್ಲಿ ಸಿಲುಕಿದೆ. ನಾನು ಆಯ್ದುಕೊಂಡಿದ್ದ ಹಾದಿಯಿಂದ ನನ್ನನ್ನು ಬೇರೆಡೆಗೆ ಒಯ್ಯಲು ಯತ್ನಿಸಿದ ಆತನಿಂದ, ನಾನು ಬೇಗನೆ ದೂರವಾದೆ. ಆದರೆ ಈ ದಿನ ಇದನ್ನು ಬರೆಯಲು ನಾನು ಸಮರ್ಥ ನಾದುದ್ದಕ್ಕೆ ಯಾರಾದರೂ ಕಾರಣರಿದ್ದರೆ, ಆ ವ್ಯಕ್ತಿ ಆತನೊಬ್ಬನೇ. ಆತ ಹೇಳುತ್ತಿದ್ದ: "ಚಂದ್ರಶೇಖರ, ನೀವು ಯಾರೋ ನನಗೆ ತಿಳೀದು.ನಿಮ್ಮ ವಿಚಿತ್ರ ವ್ಯಕ್ತಿತ್ವವನ್ನ ನಿಮ್ಮ ಇಚ್ಛೆಗೆ ವಿರುದ್ದವಾಗಿ ತಿಳಿಯೋ ಬಯಕೆಯೂ ನನಗಿಲ್ಲ. ಆದರೆ ಇಷ್ಟು ಹೇಳಬಲ್ಲೆ. ಈ ಜೀವನ ಪ್ರವಾಹದಲ್ಲಿ ನೀವು ಹುಲ್ಲುಕಡ್ಡಿಯೋ, ಕಲ್ಲುಬಂಡೆಯೋ, ಒಡೆದ ದೋಣಿಯೋ, ಯುದ್ದದ ಹಡಗೋ ಆಗಿರೋದು ನಿಜ. ನೀವೇನೇ ಇರಿ,ನಿಮ್ಮ ಅನುಭವಗಳನ್ನ ನೀವು ಬರೆದಿಡಬೇಕು.ಅದು ಒಳ್ಳೇ ಸಾಹಿತ್ಯ ಆಗೋದರಲ್ಲಿ ಯಾವ ಸಂಶಯವೂ ಇಲ್ಲ."ಹಾಗೆ ಆತ ಹೇಳಿದಾಗ ನನಗೆ ನಗು ಬಂದಿತ್ತು.ಸ್ವಲ್ಪ ಹೆಮ್ಮೆಯೂ ಅನಿ ಸಿತ್ತು.ಆದರೆ, ನನ್ನ ಪೂರ್ಣಕತೆ ತಿಳಿದರೆ ಈತ ನನ್ನನ್ನು ದೂರವಿಡ ಬಹುದೆಂಬ ಭೀತಿಯೂ ನನ್ನನ್ನು ಆವರಿಸಿತ್ತು.

ಅಂತೂ ಈಗ ನಾನು ಬರೆಯತೊಡಗಿದ್ದೇನೆ. ಬರೆದುದನ್ನು ಆ ಸಾಹಿತಿಗೇ ತಲುಪಿಸಿದರಾಯಿತು.ಆತ ಈ ಕೆಲಸಕ್ಕೆ ಒಪ್ಪ ಕೊಡಲಿ.ಹೊಸದಾಗಿ ಬರೆಯುವವರ ಪುಸ್ತಕಗಳಿಗೆ ಸ್ವಲ್ಪ ಹಳಬರು ಮುನ್ನುಡಿ ಬರೆಯುತ್ತಾರಂತೆ. ನನ್ನ ಪುಸ್ತಕಕ್ಕೆ ಆತನೇ ಮುನ್ನುಡಿ ಬರೆಯಲಿ. ಈ ಆತ್ಮಕತೆ ಇನ್ನೆಷ್ಟೋ ಜನಕ್ಕೆ ದೊರೆಯುವಂತಾಗಲಿ.

ಯಾಕೆ ಈ ಹಂಬಲ? ನಾನು ಪ್ರಸಿದ್ದ ಪುರುಷನಾಗಬೇಕೆಂದೆ? ಪತ್ರಿಕೆಗಳಲ್ಲಿ ನನ್ನ ಹೆಸರು ಬರಬೇಕೆಂದೆ? ಇಲ್ಲ, ಅಂಥ ಪ್ರಸಿದ್ದಿ ನನಗೆ ಬೇಕಾಗಿಲ್ಲ. ಮಹಾ ಅಪಯಕಾರಿಯಾದ ವ್ಯಕ್ತಿ ಎಂದೂ ಸಮಾಜಕಂಟಕನೆಂದೂ ನಾನು ಈಗಾಗಲೇ ಸಾಕಷ್ಟು ಪ್ರಸಿದ್ದನಾಗಿ ದೇನೆ. ಯಾರು ಎಲ್ಲಿ ಕೊಲೆಮಾಡಿದರೂ ನಾನೇ ಜವಾಬ್ಧಾರ ಎನ್ನು ವಷ್ಟರ ಮಟ್ಟಿಗೆ ಪ್ರಖ್ಯಾತನಾಗಿದ್ದೇನೆ. ದಿನಪತ್ರಿಕೆಗಳು ಮೊದಲ ಪುಟದಲ್ಲಿ ದಪ್ಪ ಅಕ್ಷರಗಳಲ್ಲಿ ನನ್ನ ಮೇಲಿನ ಆರೋಪಗಳನ್ನು ಮುದ್ರಿಸಿವೆ. ಇನ್ನು ಆಗಬೇಕಾಗಿರುವುದು ನನ್ನ ವಿಚಾರಣೆ. ಆಮೇಲೆ ಶಿಕ್ಷೆ-ಮರಣ ದಂಡನೆ ಇಲ್ಲವೆ ಬದುಕಿರುವವರೆಗೂ ಕಾರಾಗ್ರಹ.

ನನಗೇಕೋ ನಗು ಬರುತ್ತಿದೆ. ಇವರು ಮೂರ್ಖರು. ಇಂಥವ ರಿಂದಲೇ ತುಂಬಿರುವ ಈ ಸಮಾಜದ ಸಹವಾಸ ಸಾಕುಸಾಕಾಗಿ ನಾನು ಹೊರಟುಹೋಗುತ್ತಿದ್ದೇನೆ. ಕರುಳಿನ ಬಾಧೆಯನ್ನೂ ಸಹಿಸಿ ನನ್ನ ಹೃದಯದಲ್ಲಿ ನೆಲೆಸಿರುವ ನೆಮ್ಮದಿಯನ್ನು ಇವರು ಕಾಣರೇ? ನಾನು ಅಪೇಕ್ಷೆಪಟ್ಟರೆ ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು ದೊಡ್ಡ ಮಾತಲ್ಲ ಆದರೆ, ನನಗೆ ಬೇಕಾಗಿರುವುದು ಅಂಥ ವಿಮೋಚನೆಯಲ್ಲ. ಸಣ್ಣ ಸೆರೆಮನೆಯಿಂದ ದೊಡ್ಡ ಸೆರೆಮನೆಗೂ,ದೊಡ್ಡವರಿಂದ ಸಣ್ಣದಕ್ಕೂ ಹೋಗಿ ಬಂದು ನಾನು ಬೇಸತ್ತು ಹೋಗಿದ್ದೇನೆ ನನಗೀಗ ಬಿಡು ಗಡೆ ಬೇಕು -ನಿಶ್ರುರ್ತವಾದ ಬಿಡುಗಡೆ. ನ್ಯಾಯದ ದೀರ್ಘ ಹಸ್ತ ವಾಗಲೀ, ಪೋಲೀಸರ ಕೊರಕಲು ಕೈಯಾಗಲೀ, ನಾಗರಿಕರೆಂಬುವರ ಸಂಸ್ಕಾರವಾಗಲೀ ಎಂದೆಂದಿಗೂ ನನ್ನನ್ನು ಬಾಧಿಸದಂತಹ ಬಿಡುಗಡೆ ನನಗೆ ಬೇಕು. ಅದು ಸುಲಭಸಾಧ್ಯವಲ್ಲವೆಂಬುದನ್ನು ನಾನು ಬಲ್ಲೆ. ಅದಕ್ಕೆ ಅಪಾರ ಬೆಲೆ ತೆರಬೇಕಾದೀತು. ಅದು ದೊಡ್ಡ ಮಾತಲ್ಲ. ಆಂಥ ಬೆಲೆಯನ್ನೇ ನಾನು ತೆತ್ತು ಬಿಡುಗಡೆ ಹೊಂದಬೇಕು.

ನನ್ನ ಪಕ್ಕದ ಕೊಠಡಿಯಲ್ಲಿ ಸುಪ್ರಸಿದ್ಧ ಕೇಡಿಯಾದ ಕರಿಯ ನಿದ್ದಾನೆ, ಅವನಿಗೆ ಓದು ಬಾರದು. ಆದರೆ, ಆತನಿಗೆ ಇರುವ ಪ್ರಪಂಚ ಜ್ಞಾನ ಸಾಮಾನ್ಯವಾದುದಲ್ಲ. ಆರನೆಯ ಬಾರಿ ಸೆರೆಮನೆ ಸೇರಿದಮೇಲೆ ಆತನಿಗೆ ಇದೊಂದು ವಿಶ್ರಾಂತಿ ಗೃಹವಾಗಿದೆ. ಕಳೆದ ಸಲ ಬಿಡುಗಡೆ ಹೊಂದಿದವನು ಬೀದಿಬೀದಿ ಅಲೆದನಂತೆ. ಸಂಭಾವಿತನಾಗಿ ಕೂಲಿಯಾಗಿ ಬಾಳುವ ಇಚ್ಚೆ ಹಿಂದೆ ಅವನಿಗಿತ್ತು. ಆದರೆ, ಅಂತಹ ಆವಕಾಶವನ್ನು ಸಮಾಜ ನೀಡಲಿಲ್ಲ. ಆತನನ್ನು ಕಳ್ಳ ಕಳ್ಳ ಎಂದಿತು. ಕರಿಯ ತನ್ನನ್ನು ಹಿಂಬಾಲಿಸುತ್ತಿದ್ದ ಪೋಲೀಸರಿಂದಲೂ ಪೋಕರಿ ಹುಡುಗರಿಂದಲೂ ತಪ್ಪಿಸಿಕೊಳ್ಳಲು ಕಂಡುಕೊಂಡ ಹಾದಿ ಒಂದೇ ಒಂದು. ಮತ್ತೆ ಕಳ್ಳತನ. ಹಿಡಿಯಲು ಪೋಲೀಸರು ಬಂದಾಗ ಓಡದೆ ಇರುವುದು. ಅವರೊಡನೆ ಸೆರೆಮನೆಗೆ ಮರಳಿ ಬರು ವುದು! 'ವಿದ್ಯಾವಂತ'ನಾದ 'ದೊಡ್ಡಮನುಷ್ಯ'ನಾದ ನಾನು ಸೆರೆಮನೆ ಯಲ್ಲಿ ಇರುವುದನ್ನು ಕಂಡು ಆತ ಆಶ್ಚರ್ಯಪಡುತ್ತಾನೆ. ಅವನಿನ್ನೂ ಪೂರ್ತಿ ಪಶುವಾಗಿಲ್ಲ. ನಮ್ಮ ವಿಭಾಗದಾಚೆ ಸ್ತ್ರೀ ಕೈದಿಗಳತ್ತ ಆತ ಹೋಗಲು ಯತ್ನಿಸುತ್ತಾನೆ. ಗಂಡು ಪಶುವಾಗಿ ಹಾಗೆ ಹೋಗುವು ದಿಲ್ಲ. ಅಲ್ಲೊಬ್ಬಳು ಕೈದಿ ಇದ್ದಾಳೆ- ಎಲ್ಲವ್ವ. ನಾಲ್ಕು ತಿಂಗಳ ಹಿಂದೆ ಕಳ್ಳತನ ಮಾಡಿ ಆಕೆ ಜೈಲಿಗೆ ಬಂದಾಗ ತುಂಬು ಗರ್ಭಿಣಿಯಾಗಿದ್ದಳು. ಒಂದೇ ದಿನ ಅವರಿಬ್ಬರಿಗೂ ಒಂದೇ ನ್ಯಾಯಾಸ್ಥಾನದಲ್ಲಿ ಶಿಕ್ಷೆ ಆಯಿತು- ಅವಳಿಗೆ ಮೊದಲ ಬಾರಿ; ಆತನಿಗೆ ಆರನೆಯ ಬಾರಿ. ಅಲ್ಲಿಯೆ ಅವರಿಗೆ ಪರಸ್ಪರ ಪರಿಚಯವದದ್ದು. ಆ ಪರಿಚಯದ ಅನಂತರ ಈಗ? ಎಲ್ಲವ್ವ ಗಂಡುಕೂಸನ್ನು ಹಡೆದಿದ್ದಳೆ. ಬಂದೀ ಖಾನೆಯಲ್ಲಿ ಹುಟ್ಟಿದ ಆ ಮಗುವಿಗೆ ಕ್ರಿಸ್ನ ಎಂದು ಹೆಸರಿಟ್ಟಿರುವ ರಸಿಕಳು ಆಕೆ. ಹಾದರಕ್ಕೆ ಹುಟ್ಟಿರುವ ಗಂಡು ಮಗುವಿಗೆ ಕೃಷ್ಣ ಎಂಬ ಹೆಸರು! ಕರಿಯ ಆ ತಾಯಿ-ಮಗುವನ್ನು ಪ್ರೀತಿಸುತ್ತಾನೆ. ಗಂಡು ಹೆಣ್ಣಿನ ಸಂಬಂಧದಲ್ಲಿ ಪ್ರೀತಿ ಎಂದರೆ ಎನೆಂಬುದನ್ನು ನೀವು ಬಲ್ಲಿರಾ? ಕೇಡಿ ಯಾಗಿ ಸಮಾಜ ಬಾಹಿರನಾಗಿ ಅನಾಗರಿಕನೆಂದು ಕರೆಯ ಲ್ಪಟ್ಟ ಬಿದ್ದ ಎಲ್ಲವ್ವಳನ್ನ ಪ್ರೀತಿಸುತ್ತಾನೆ. ಹೆಸರು ಹೇಳಲು ತಂದೆಯೂ ಇಲ್ಲದ ಆ ಮಗುವನ್ನು ಕೂಡಾ. ಇದು ಆಶ್ಚರ್ಯದ ಸಂಗತಿ. ಕರಿಯ ಕೊಠಡಿಯ ಸರಳುಗಳ ಎಡೆಯಿಂದ ನನ್ನೂಡನೆ ಮಾತನಾಡೂತ್ತಾ ತನ್ನ ರುದಯದೂಳಗಿನ ನೂವನ್ನು, ಹೂರಕ್ಕೆ ಹರಿಯಬಿಡುತ್ತಾನೆ. ಅವಕಾಶ ದೊರೆತರೆ, ಹೊರ ಹೋದಮೇಲೆ ಎಲ್ಲವ್ವನೊಡನೆ ಸಂಸಾರ ಹೂಡಬೇಕೆಂಬ ಆಸೆ ಅವನಿಗೆ-ಮನುಷ್ಯ ನಾಗುವ ಆಸೆ. ಕೇಡಿಯ ಹಗಲುಗನಸಿಗೆ ಒಂದು ಮಿತಿ ಮೇರೆ ಬೇಡವೆ- ಎಂದು ಕೇಳಬಹುದು ಯಾರಾದರೂ!

ಪಕ್ಕದ ಇನ್ನೂಂದು ಕೊಠಡಿಯಲ್ಲಿ ಎಳೆ ಹರೆಯದ ಯುವಕ ನೊಬ್ಬನಿದ್ದಾನೆ. ಕರಿಯನಿಗಿಂತ ಐದಾರು ವರ್ಷ ಚಿಕ್ಕವನು ಈತ. ಇನ್ನೂ ವಿಚಾರಣೆ ಮುಗಿದಿಲ್ಲ. ಈತನ ಮನಸ್ಸು ಆಸ್ತವ್ಯಸ್ತವಾಗಿದೆ. "ನಾನು ಹೊಡೆದೆ. ಅವಳು ಸತ್ತೋದ್ಲು. ಆದರೆ ಸತ್ತೋಗ್ಲಿ ಅಂತ ನಾನು ಹೊಡೀಲಿಲ್ಲ. ನಾನು ತಪ್ಪುಮಾಡಿಲ್ಲ. ಎನು ಸಾರ್? ನನ್ನ ಬಿಟ್ಬಡಬಹುದೇ ಸಾರ್?" ಎಂದು ಆತ ಕೇಳುತ್ತಿದ್ದಾನೆ. ಎಲ್ಲರೂ ಹೀಗೆಯೇ .ಆರಂಭದಲ್ಲಿ ಎಲ್ಲರೂ ಹೀಗೆಯೇ ನಾನದನ್ನೂ ಚೆನ್ನಾಗಿ ಬಲ್ಲೆ. ನಾಳೆ ಆತನ ಮುಖದ ಚರ್ಯೆ ಬದಲಾಗುವುದು. ಮುಖದ ಮೇಲೆ ಕಾಠಿನ್ಯದ ರೇಖೆಗಳು ಮೂಡುವುವು. ಎಲ್ಲರನ್ನೂ ನೆಟ್ಟದೃಷ್ಟಿಯಿಂದ ನೋಡುವ ಸಾಮರ್ಥ್ಯ ಆ ಕಣ್ನುಗಳಿಗೆ ಬರುವುದು ಆಮೇಲೆ ತುಚ್ಛೀಕಾರದ ನೋಟ. ಇದು ಯಾವಾಗಲೂ ಹೀಗೆಯೇ.

.....ನನ್ನ ಆತ್ಮಕತೆ ಹೇಳಲು ಹೊರಟವನು ಬೇರೆಯವರ ಬಗ್ಗೆ ಬರೆಯುತ್ತಿದ್ದೇನೆ ! ಇದು ಸರಿಯಲ್ಲ .ನನಗಿರುವ ಸ್ವಲ್ಪ ಅವ ಕಾಶದಲ್ಲಿ, ಹೇಳಬೇಕಾದ್ದೆಲ್ಲವನ್ನೂ ನಾನು ಹೇಳಿ ಮುಗಿಸಬೇಕು . ಆದರೆ ಈ ದಿನ ನಾನು ಹೆಚ್ಚು ಬರೆಯಲಾರ. ಗತಕಾಲದ ಸ್ಮರಣೆಗಳು ಧಾವಿಸಿಬರುತ್ತಿವೆ. ಏನನ್ನು ಬರೆಯಲಿ? ಏನನ್ನು ಬರೆಯಲಿ? ಏನನ್ನು ಬಿಡಲಿ? ಆದರೂ ನಾನು ಬರೆಯನಬೇಕು. ಯೋಚಿಸಿ ಯೋಚಿಸಿ, ನೂರು ಎಳೆಗಳನ್ನು ಒಂದೊಂದಾಗಿ ಎತ್ತಿ, ಜೀವನದ ಬಿಡಿಸಲಾಗದ ಸಿಕ್ಕನ್ನು ಮೆಲ್ಲಮೆಲ್ಲನೆ ಬಿಡಿಸಿ, ಒಂದು ನೇರವಾದ ದೀರ್ಘವಾದ ದಾರವನ್ನು ನಾನು ತಯಾರಿಸ ಬೇಕು. ಆ ದಾರದ ಕೊನೆ ಬಂದಾಗ ನನ್ನ ಕತೆಯ ಮುಕ್ತಾಯ ವಾಗುವುದು. ಆ ರಹಸ್ಯವನ್ನು ಇಲ್ಲಿ ಹೇಳಲೇ? ಆ ದಾರವೇ ನನ್ನ ಪಾಲಿಗೆ ಉರುಳಾಗಿ ಪರಿಣಮಿಸುವುದೆಂದರೆ ನೀವು ನಂಬುವಿರಾ? ದೇಹದ ಕಾಹಿಲೆ, ಮನಸ್ಸಿನ ಕಾಹಿಲೆಯನ್ನು ಮಿರಿಸಿದೆ. ಈಸಾರೆ ಈ ಆನಾರೋಗ್ಯದಿಂದ ನಾನು ತಪ್ಪಿಸಿಕೊಳ್ಳಲಾರೆ. ಈ ವಿಚಾರಣೆಯ ನಾಟಕದಲ್ಲಿ ನನಗೆ ಆಸಕ್ತಿಯಿಲ್ಲ. ಆದರೂ ನ್ಯಾಯದ ಸತ್ಯದ ದೊಡ್ದ ಹೆಸರಿನಲ್ಲಿ ಆ ವಿಚಾರಣೆ ಆಗಬೇಕು! ನನಗೆ ನಗು ಬರುತ್ತಿದೆ: ನನ್ನ ಬಿಡುಗಡೆಯನ್ನು ನಾನು ಪಡೆದಮೇಲೆ ಇವರನ್ನು ಮಾಡುವವರು? ಒಂದು ವಾರದ ಬಳಿಕ ಇವರೇನು ಮಾಡುವವರು?